ಕನ್ನಡ ಸುದ್ದಿ / ಕರ್ನಾಟಕ /
Shimoga Tour Plan: ಮಲೆನಾಡಿನ ಹೃದಯಭಾಗ ಶಿವಮೊಗ್ಗ ಜಿಲ್ಲೆಯಲ್ಲಿ 2 ದಿನದ ಶೈಕ್ಷಣಿಕ ಪ್ರವಾಸಕ್ಕೆ ಇದು ಬೆಸ್ಟ್ ಮಾರ್ಗ
ಶಿವಮೊಗ್ಗ ದಟ್ಟವಾದ ಕಾಡು, ಗುಡ್ಡಗಳಿಂದ ಮತ್ತು ವೈಭವದಿಂದ ಧುಮುಕುವ ಜಲಪಾತಗಳಿಂದ ಆವೃತ್ತಗೊಂಡಿದ್ದು ನೋಡುವ ಕಣ್ಣಿಗೆ ನಿಜವಾದ ಪ್ರಕೃತಿಯ ಚಿತ್ರವನ್ನಾಗಿ ಮೂಡಿಸುತ್ತದೆ. ಬಹುಪಾಲು ಪ್ರದೇಶವು ಹಚ್ಚ ಹಸಿರಿನ ತಾಣ. ಇಲ್ಲಿ 20 ಪ್ರಮುಖ ಪ್ರವಾಸಿ ತಾಣಗಳಿದ್ದು 2 ದಿನದಲ್ಲಿ ಆದಷ್ಟು ನೋಡಬಹುದು.
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಪ್ರವಾಸ ಕೈಗೊಳ್ಳಲು ಜೋಗ, ಸಕ್ರೆಬೈಲ್ ಆನೆ ಶಿಬಿರ ಜತೆಗೆ ಹಲವು ತಾಣಗಳಿವೆ.
Shimoga Educational Trip ಶಿವಮೊಗ್ಗ ಮಲೆನಾಡ ಕೇಂದ್ರ ಸ್ಥಾನ. ಹಚ್ಚ ಹಸಿರು ಕಾಡಿನಿಂದ ಆವೃತವಾಗಿರುವ ಜಿಲ್ಲೆ. ವಿಭಿನ್ನ ಪ್ರವಾಸಿ ತಾಣಗಳ ಆಗರ. ಇಲ್ಲಿ ಜಲಾಶಯ, ಜಲಪಾತ, ವನ್ಯಧಾಮ, ಪಕ್ಷಿಧಾಮ, ಐತಿಹಾಸಿಕ ತಾಣ, ಸಾಹಿತಿಗಳ ತವರು, ಬೆಟ್ಟಗಳ ಸೊಬಗು ಇದೆ. ಶೈಕ್ಷಣಿಕವಾಗಿ ಅರಿಯುವ ಹಲವಾರು ತಾಣಗಳಿವೆ. ಕಾಡಿನೊಂದಿಗೆ ಪ್ರವಾಸ ಮಾಡುವವರಿಗೆ ಶಿವಮೊಗ್ಗ ಜಿಲ್ಲೆ ಹೇಳಿ ಮಾಡಿಸಿದಂತಿದೆ. ಎರಡು ದಿನಗಳ ಶಿವಮೊಗ್ಗ ಪ್ರವಾಸಕ್ಕೆ ಇಲ್ಲಿದೆ ಟೂರ್ ಮ್ಯಾಪ್.
ಮೊದಲ ದಿನ
- ಶಿವಮೊಗ್ಗ ನಗರಕ್ಕೆ ಬಂದರೆ ಇಲ್ಲಿ ಶಿವಪ್ಪ ನಾಯಕನ ಅರಮನೆ ನೋಡಬಹುದು. ಶಿವಪ್ಪನಾಯಕನ ಆಡಳಿತದ ಕುರಿತಾಗಿ ಇಲ್ಲಿ ಮಾಹಿತಿ ಇದೆ. ಅಲ್ಲಿಂದ ಸಾಗರ ರಸ್ತೆಯಲ್ಲಿ ತ್ಯಾವರೆಕೊಪ್ಪ ಹುಲಿ ಹಾಗೂ ಸಿಂಹಧಾಮ ವಿಶೇಷ ಆಕರ್ಷಣೆಯಾಗಲಿದೆ. ಸಫಾರಿ ಮಕ್ಕಳಿಗೆ ಮುದ ನೀಡಲಿದೆ. ಹುಲಿ, ಸಿಂಹಗಳ ಸಹಿತ ಬಗೆಬಗೆಯ ಪ್ರಾಣಿ, ಪಕ್ಷಿಗಳ ಕುರಿತು ಇಲ್ಲಿ ತಿಳಿದುಕೊಳ್ಳಬಹುದು.
- ಶಿವಮೊಗ್ಗದಿಂದ ಅನತಿ ದೂರದಲ್ಲಿಯೇ ಗಾಜನೂರು ಜಲಾಶಯವಿದೆ. ಇದು ಕೂಡ ಪ್ರಮುಖ ಪ್ರವಾಸಿ ತಾಣವೇ. ಜಲರಾಶಿಯ ಸೊಬಗನ್ನು ಸವಿಯಬಹುದು.
ಇದನ್ನೂ ಓದಿರಿ: ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ, ಕಡಿಮೆ ಬಜೆಟ್ನಲ್ಲಿ ಹೋಗಿ ಬರಬಹುದಾದ ದೇಶಗಳಿವು, ಈ ಡಿಸೆಂಬರ್ನಲ್ಲಿ ಪ್ಲಾನ್ ಮಾಡಿ - ಗಾಜನೂರಿನ ಹಿನ್ನೀರಿಗೆ ಹೊಂದಿಕೊಂಡಂತೆ ಸಕ್ರೆಬೈಲ್ ಆನೆ ಶಿಬಿರವಿದೆ. ಇಲ್ಲಿ ಆನೆಗಳ ಸಾಕಣೆ, ಅವುಗಳ ಬದುಕು ದಿನಚರಿಯನ್ನು ಹತ್ತಿರದಿಂದ ನೋಡಬಹುದು. ತುಂಗಾ ನದಿಯನ್ನು ಆಟವಾಡುವ ವಾತಾರವಣ ಚೆನ್ನಾಗಿದೆ.
- ಶಿವಮೊಗ್ಗ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಇದು ಬೆಳಿಗ್ಗೆಯೇ ಬೇಗ ಆರಂಭಿಸಿ ಸಂಜೆ ಒಳಗೆ ಶಿವಮೊಗ್ಗ ಹಾಗೂ ನಗರದ ಸುತ್ತಮುತ್ತಲಲ್ಲಿ ನೋಡಿಕೊಳ್ಳಬಹುದಾದ ನಾಲ್ಕು ತಾಣಗಳು.
ಇದನ್ನೂ ಓದಿರಿ: ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಬನ್ನಿ; ಕಾವೇರಿ ನದಿ ತೀರದ ಜಲಾಶಯಗಳು, ಜಲಪಾತಗಳನ್ನುಕಲೆಯಲ್ಲಿ ಕಣ್ತುಂಬಿಕೊಳ್ಳಿ
ಎರಡನೇ ದಿನ
- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ, ಸೊರಬ ತಾಲ್ಲೂಕುಗಳು ವಿಭಿನ್ನ ಪ್ರವಾಸಿ ತಾಣಗಳನ್ನು ಹೊಂದಿವೆ
- ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮೊದಲು ಮಂಡಗದ್ದೆ ಪಕ್ಷಿಧಾಮವನ್ನು ನೋಡಬಹುದು. ಇಲ್ಲಿ ಬಗೆಬಗೆಯ ಸಹಸ್ರಾರು ಹಕ್ಕಿಗಳು ದೇಶ ವಿದೇಶದಿಂದ ಆಗಮಿಸಿ ಈಗಾಗಲೇ ಬೀಡು ಬಿಡತೊಡಗಿವೆ. ನವೆಂಬರ್‌ಗೆ ಶುರುವಾದರೆ ಮೇ ವರೆಗೂ ಹಕ್ಕಿಗಳು ಇಲ್ಲಿರಲಿವೆ.
- ತೀರ್ಥಹಳ್ಳಿ ಪಟ್ಟಣಕ್ಕೆ ತೆರಳಿ ಅಲ್ಲಿ ಶ್ರೀರಾಮದೇಗುಲ, ಸೊಪ್ಪುಗುಡ್ಡೆ ವೀಕ್ಷಿಸಬಹುದು. ಬಳಿಕ ಕುಪ್ಪಳ್ಳಿಗೆ ತೆರಳಬಹುದು. ಸಾಹಿತಿ ಕುವೆಂಪು ಅವರ ಹುಟ್ಟೂರು ಇದು. ಇಲ್ಲಿ ಅವರ ನೆನಪಿನ ಸ್ಮಾರಕ, ಅವರ ಕುರಿತಾದ ಸಂಗ್ರಹಾಲಯ ವೀಕ್ಷಿಸಬಹುದು. ಸಂಜೆ ಆಗುಂಬೆಗೆ ತೆರಳಿ ಸೂರ್ಯಾಸ್ತದ ಸವಿಯನ್ನು ಸವಿಯಬಹುದು. ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ನಗರಕ್ಕೆ ಬರುವ ಮಾರ್ಗದಲ್ಲಿ ಕವಲೆ ದುರ್ಗ ಬೆಟ್ಟವಿದೆ. ನಗರ ಕೋಟೆಯೂ ಆಕರ್ಷಕವಾಗಿದೆ.
ಇದನ್ನೂ ಓದಿರಿ: Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು - ಸಾಗರ ಕಡೆಗೆ ಹೊರಟರೆ ಸಾಗರದ ಸಮೀಪದಲ್ಲಿಯೇ ಐತಿಹಾಸಿಕ ತಾಣಗಳಾದ ಕೆಳದಿ ಹಾಗೂ ಇಕ್ಕೇರಿಗಳಿವೆ. ಕೆಳದಿಯಲ್ಲಿ ಚನ್ನಮ್ಮನ ಆಡಳಿತದ ನೆನಪುಗಳ ಗುಚ್ಛವೇ ಇದೆ. ಇಕ್ಕೇರಿಯಲ್ಲೂ ಪುರಾತನ ದೇಗುಲಗಳಿವೆ. ಬಳಿಕ ಸಿಗಂದೂರು ಚೌಡೇಶ್ವರಿ ದೇಗುಲದ ದರ್ಶನ ಚೆನ್ನಾಗಿದೆ. ಕಾಡಿನ ನಡುವೆ ಇರುವ ದೇಗುಲ. ಶರಾವತಿ ಹಿನ್ನೀರಿನ ಲಾಂಜ್‌ನಲ್ಲಿ ಹೋಗುವ ಖುಷಿಯೇ ಬೇರೆ. ಅಲ್ಲಿಂದ ಜೋಗಕ್ಕೆ ತೆರಳಬಹುದು. ಜೋಗ ಜಲಪಾತದ ಸೊಬಗು ಅವಿಸ್ಮರಣೀಯ.
- ಹೊಸನಗರ ಕಡೆಗೆ ಹೊರಟರೆ ತೀರ್ಥಹಳ್ಳಿ ತಾಲ್ಲೂಕಿನ ಕೋಮು ಸಾಮರಸ್ಯದ ತಾಣ ಹಣಗೆರೆ ಕಟ್ಟೆಯಿದೆ. ಸಮೀಪದ ಅರಸಾಳಿನಲ್ಲಿ ಶಂಕರ್‌ನಾಗ್ ಚಿತ್ರೀಕರಿಸಿದ ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣ ಈಗ ಪ್ರವಾಸಿ ತಾಣವಾಗಿದೆ. ಹೊಂಬುಜದಲ್ಲಿ ಜೈನಮಠವಿದೆ. ಅಲ್ಲಿಂದ ಕೊಡಚಾದ್ರಿ ಬೆಟ್ಟಕ್ಕೆ ಹೋಗಬಹುದು. ಕೊಡಚಾದ್ರಿ ಬೆಟ್ಟ ಹತ್ತುವ ಖುಷಿಯೇ ಬೇರೆ. ಬೆಟ್ಟದಿಂದ ವಿಶಾಲ ನೋಟ ಎಂತಹವರ ಮೈಮನಗಳನ್ನು ಪುಳಕಗೊಳಿಸುತ್ತದೆ. ಕುಂದಾದ್ರಿ ಬೆಟ್ಟವೂ ಸಮೀಪದಲ್ಲೇ ಇದ್ದು ಕೊಡಚಾದ್ರಿ ಬೆಟ್ಟ ಇಲ್ಲವೇ ಕುಂದಾದ್ರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿರಿ: Kodagu Tourism: ಕೊಡಗಿನಲ್ಲಿವೆ 4 ಸಾವಿರ ಹೋಂಸ್ಟೇ, 44 ಲಕ್ಷ ಪ್ರವಾಸಿಗರ ಭೇಟಿ; ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದ ಕೊಡಗು ಜಿಲ್ಲೆ - ಶಿಕಾರಿಪುರ ಕಡೆ ಪ್ರಯಾಣದ ಯೋಜನೆ ಮಾಡಿದರೆ ಅಂಜನಾಪುರ ಜಲಾಶಯ ವೀಕ್ಷಿಸಬಹುದು. ಅಕ್ಕಮಹಾದೇವಿಯ ಜನ್ಮ ಸ್ಥಳ ಉಡುತಡಿ ಆಕರ್ಷಕವಿದೆ. ಅಲ್ಲಿಂದ ಸೊರಬ ಕಡೆ ಹೊರಟರೆ ಗುಡವಿ ಪಕ್ಷಿಧಾಮವನ್ನು ನೋಡಿಕೊಂಡು ಬರಬಹುದು.
- ಭದ್ರಾವತಿ ತಾಲ್ಲೂಕಿನ ಗಡಿಗೆ ಹೊಂದಿಕೊಂಡಂತೆ ಇರುವ ಭದ್ರಾಜಲಾಶಯವನ್ನು ವೀಕ್ಷಿಸಲು ಅವಕಾಶವಿದೆ.