Asia cup 2022: ಏಷ್ಯಾ ಕಪ್ ಟೂರ್ನಿಯಲ್ಲಿ ಎಲ್ಲ ತಂಡಗಳ ಬಲಾಬಲ ಹೇಗಿದೆ? ಯಾರೆಲ್ಲ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಮಾಹಿತಿ..
Aug 20, 2022 10:22 AM IST
ಏಷ್ಯಾ ಕಪ್ ಟೂರ್ನಿಯಲ್ಲಿ ಎಲ್ಲ ತಂಡಗಳ ಬಲಾಬಲ ಹೇಗಿದೆ? ಯಾರೆಲ್ಲ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಮಾಹಿತಿ..
- ಯುಎಇಯಲ್ಲಿ ಆಗಸ್ಟ್ 27 ರಿಂದ ಈ ಸಲದ ಏಷ್ಯಾ ಕಪ್ 2022 ಶುರುವಾಗಲಿದೆ. ಈ ಟೂರ್ನಿಯಲ್ಲಿ ಆಡುವ ಎಲ್ಲ ತಂಡಗಳ ಆಟಗಾರರ ಮಾಹಿತಿ, ನೇರ ಪ್ರಸಾರ, ಸಮಯದ ವಿವರಣೆ ಇಲ್ಲಿದೆ.
ಯುಎಇಯಲ್ಲಿ ಆಗಸ್ಟ್ 27 ರಿಂದ ಈ ಸಲದ ಏಷ್ಯಾ ಕಪ್ 2022 ಶುರುವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಆಗಸ್ಟ್ 28 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಪಂದ್ಯ ದುಬೈನಲ್ಲಿ ನಡೆಯಲಿದೆ. ಇದರ ನಂತರ ಆಗಸ್ಟ್ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಎಂದಿನಂತೆ ಈ ಪಂದ್ಯ ವಿಶ್ವದ ಗಮನಸೆಳೆಯಲಿದ್ದು, ಬದ್ಧವೈರಿಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕಳೆದ ಬಾರಿ ನಡೆದ ವಿಶ್ವಕಪ್ ಟಿ20ಯಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು, ಇದಕ್ಕೆ ಸೇಡು ತೀರಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
ಒಟ್ಟು ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬಿ ಗುಂಪಿನಲ್ಲಿದೆ. ಪ್ರತಿ ತಂಡವು ತನ್ನ ಗುಂಪಿನ ತಂಡದೊಂದಿಗೆ ತಲಾ ಒಂದು ಪಂದ್ಯಗಳಲ್ಲಿ ಆಡಲಿದೆ. ಯುಎಇ, ಕುವೈತ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ದೇಶಗಳು ಅರ್ಹತಾ ಸುತ್ತನ್ನು ಆಡಲಿದೆ. ಇದರಲ್ಲಿ ಅಗ್ರಸ್ಥಾನಿಯಾದ ಎರಡು ತಂಡಗಳು, ಭಾರತ ಇರುವ ಮೊದಲ ಗುಂಪನ್ನು ಸೇರಿಕೊಳ್ಳಲಿವೆ.
ಎಲ್ಲ ತಂಡಗಳು ಆಟಗಾರರ ಮಾಹಿತಿ ಇಲ್ಲಿದೆ...
ಭಾರತ - ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.
ಪಾಕಿಸ್ತಾನ - ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಹನವಾಜ್ ದಹನ್ ಉಸ್ಮಾನ್ ಖಾದಿರ್.
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್ (ಉಪನಾಯಕ), ಅಫ್ಸರ್ ಝಜೈ (WK), ಅಜ್ಮತುಲ್ಲಾ ಒಮರ್ಜೈ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಮುಜೀಬ್ ನಜೀಬ್ ಝದ್ರಾನ್, ಇಬ್ರಾಹಿಂ ಜನಾಹ್ ಝದ್ರಾನ್, ಜದ್ ನೂರ್ ಅಹ್ಮದ್, ನಜೀಬುಲ್ಲಾ ಜದ್ರಾನ್, ನೂರ್ ಅಹ್ಮದ್ ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ.
ಮೀಸಲು ಆಟಗಾರರು: ನಿಜತ್ ಮಸೂದ್, ಖೈಸ್ ಅಹ್ಮದ್, ಶರಫುದ್ದೀನ್ ಅಶ್ರಫ್.
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹುಸೇನ್, ಮೊಸದ್ದೆಕ್ ಹೊಸೈನ್, ಮಹ್ಮದುಲ್ಲಾ ರಿಯಾದ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ನಸುಮ್ ಹುಸಾ ಪರ್ಸಾನ್, ಮಿರಾಜ್ ಮೊಹಮ್ಮದ್, ಮಿರಾಜ್ ಮೊಹಮ್ಮದ್, ಶಬ್ಬೀರ್ ಹಸ್ಮದ್. ಎಮಾನ್, ನೂರುಲ್ ಹಸನ್ ಸೋಹನ್, ತಸ್ಕಿನ್ ಅಹ್ಮದ್.
ಶ್ರೀಲಂಕಾ: ದಸುನ್ ಶನಕ (ನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸಂಕ, ಕುಸಲ್ ಮೆಂಡಿಸ್, ಚರಿತ್ ಅಸ್ಲಂಕಾ, ಬಾನುಕಾ ರಾಜಪಕ್ಸೆ, ಅಶೆನ್ ಬಂಡಾರ, ಧನಂಜಯ ಡಿ ಸಿಲ್ವಾ, ವನಿದು ಹಸರಂಗ, ಮಹೇಶ್ ಥಿಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಬಿಮಂತೂರ ಚಮಿರನ್, ಬಿಮಂತೂರ ಚಮಿನನ್, ಬಿ. ಫೆರ್ನಾಂಡೋ, , ಮಧುಶಂಕ, ಮತಿಶ ಪತಿರಾನ, ದಿನೇಶ್ ಚಂಡಿಮಲ್, ನುವಾನಿಂದು ಫೆರ್ನಾಂಡೋ ಮತ್ತು ಕಸುನ್ ರಜಿತಾ.
ಏಷ್ಯಾ ಕಪ್ 2022 ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ...
1 ನೇ ಪಂದ್ಯ - 27 ಆಗಸ್ಟ್ - ಶ್ರೀಲಂಕಾ v ಅಫ್ಘಾನಿಸ್ತಾನ - ದುಬೈ
2 ನೇ ಪಂದ್ಯ - ಆಗಸ್ಟ್ 28 - ಭಾರತ vs ಪಾಕಿಸ್ತಾನ - ದುಬೈ
3 ನೇ ಪಂದ್ಯ - 30 ಆಗಸ್ಟ್ - ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಶಾರ್ಜಾ
ನಾಲ್ಕನೇ ಪಂದ್ಯ - 31 ಆಗಸ್ಟ್ - ಕ್ವಾಲಿಫೈಯರ್ vs ಭಾರತ - ದುಬೈ
ಐದನೇ ಪಂದ್ಯ - 1 ಸೆಪ್ಟೆಂಬರ್ - ಶ್ರೀಲಂಕಾ vs ಬಾಂಗ್ಲಾದೇಶ - ದುಬೈ
6 ನೇ ಪಂದ್ಯ - 2 ನೇ ಸೆಪ್ಟೆಂಬರ್ - ಕ್ವಾಲಿಫೈಯರ್ vs ಪಾಕಿಸ್ತಾನ - ಶಾರ್ಜಾ
ಪಂದ್ಯ 7 - ಸೆಪ್ಟೆಂಬರ್ 3 - B1 vs B2 - ಶಾರ್ಜಾ
ಪಂದ್ಯ 8 - 4 ಸೆಪ್ಟೆಂಬರ್ - A1 ವಿರುದ್ಧ A2 - ದುಬೈ
ಪಂದ್ಯ 9 - 6 ಸೆಪ್ಟೆಂಬರ್ - A1 vs B1 - ದುಬೈ
ಪಂದ್ಯ 10 - ಸೆಪ್ಟೆಂಬರ್ 7 - A2 ವಿರುದ್ಧ B2 - ದುಬೈ
11 ನೇ ಪಂದ್ಯ - 8 ಸೆಪ್ಟೆಂಬರ್ - A1 ವಿರುದ್ಧ B2 - ದುಬೈ
ಪಂದ್ಯ 12 - ಸೆಪ್ಟೆಂಬರ್ 9 - B1 ವಿರುದ್ಧ A2 - ದುಬೈ
ಅಂತಿಮ ಪಂದ್ಯ - 11 ಸೆಪ್ಟೆಂಬರ್ - 1ನೇ ಸೂಪರ್ 4 ವಿರುದ್ಧ 2ನೇ ಸೂಪರ್ 4 ತಂಡ - ದುಬೈ
ಏಷ್ಯಾ ಕಪ್ 2022 ಲೈವ್ ಸ್ಟ್ರೀಮಿಂಗ್ ವಿವರ
ಏಷ್ಯಾ ಕಪ್ 2022 ರ ನೇರ ಪ್ರಸಾರವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿದ್ದರೆ, ಅಭಿಮಾನಿಗಳು ಈ ಪಂದ್ಯಗಳನ್ನು ಹಾಟ್‌ಸ್ಟಾರ್‌ನಲ್ಲಿ ಆನಂದಿಸಬಹುದು. ಭಾರತೀಯ ಕಾಲಮಾನದ ಪ್ರಕಾರ ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗಲಿವೆ.