logo
ಕನ್ನಡ ಸುದ್ದಿ  /  ಕ್ರೀಡೆ  /  ಏಷ್ಯನ್ ಗೇಮ್ಸ್ 2023: ಸೆ.24 ಭಾನುವಾರ ಭಾರತದ ಕ್ರೀಡೆಗಳ ವಿವರ; ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಏಷ್ಯನ್ ಗೇಮ್ಸ್ 2023: ಸೆ.24 ಭಾನುವಾರ ಭಾರತದ ಕ್ರೀಡೆಗಳ ವಿವರ; ಸಂಪೂರ್ಣ ವೇಳಾಪಟ್ಟಿ ಹೀಗಿದೆ

HT Sports Desk HT Kannada

Sep 24, 2023 05:30 AM IST

ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯರು

    • Asian Games 2023: ಏಷ್ಯನ್ ಗೇಮ್ಸ್ 2023ರ ಎರಡನೇ ದಿನವಾದ ಸೆಪ್ಟೆಂಬರ್ 24ರ ಭಾನುವಾರ ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯರು
ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯರು

19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ (Asian Games 2023) ಶನಿವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತವು, ಭಾನುವಾರ (ಸೆಪ್ಟೆಂಬರ್ 24)ದಿಂದ ಪದಕ ಬೇಟೆ ಆರಂಭಿಸುವ ಇರಾದೆಯಲ್ಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಈಗಾಗಲೇ ವಿವಿಧ ಕ್ರೀಡೆಗಳು ಆರಂಭವಾಗಿದ್ದು, ಪದಕ ಸುತ್ತಿನ ಕ್ರೀಡೆಗಳು ಇಂದಿನಿಂದ ಮೊದಲ್ಗೊಳ್ಳಲಿವೆ.

ಟ್ರೆಂಡಿಂಗ್​ ಸುದ್ದಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

ಒಟ್ಟು 655 ಸದಸ್ಯರ ತಂಡವನ್ನು ಚೀನಾಕ್ಕೆ ಕಳುಹಿಸಿರುವ ಭಾರತ ಹಲವು ವಿಭಾಗಗಳಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇದೆ. ಭಾರತ ವನಿತೆಯರ ಕ್ರಿಕೆಟ್ ತಂಡವು ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಫೈನಲ್‌ ತಲುಪುವ ಭಾರತವು, ಚಿನ್ನ ಅಥವಾ ಬೆಳ್ಳಿ ಗೆಲ್ಲುವುದು ಖಚಿತ. ಇದೇ ವೇಳೆ ಭಾರತ ಪುರುಷರ ಹಾಗೂ ಮಹಿಳೆಯರ ಫುಟ್ಬಾಲ್ ತಂಡಗಳು ಕೂಡಾ ಸೆಣಸಲಿವೆ. ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಅಭಿಯಾನ ಪ್ರಾರಂಭಿಸಲಿದ್ದಾರೆ.

ಸೆಪ್ಟೆಂಬರ್ 24 ಭಾನುವಾರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಬಾಕ್ಸಿಂಗ್

  • ಮಹಿಳೆಯರ 54ಕೆಜಿ ವಿಭಾಗ (ರೌಂಡ್ ಆಫ್ 16): ಭಾರತದ ಪ್ರೀತಿ ಪವಾರ್; ಬೆಳಗ್ಗೆ 11:45
  • ಮಹಿಳೆಯರ 50ಕೆಜಿ (ರೌಂಡ್ ಆಫ್ 32): ನಿಖತ್ ಜರೀನ್; ಸಂಜೆ 4:30 PM IST

ಕ್ರಿಕೆಟ್

  • ಮಹಿಳೆಯರ ಸೆಮಿಫೈನಲ್ 1: ಭಾರತ vs ಬಾಂಗ್ಲಾದೇಶ -ಬೆಳಗ್ಗೆ 6:30

ಚೆಸ್‌

  • ಪುರುಷರ ವೈಯಕ್ತಿಕ (1 ಮತ್ತು 2ನೇ ಸುತ್ತು) : ವಿದಿತ್ ಗುಜರಾತಿ ಮತ್ತು ಅರ್ಜುನ್ ಎರಿಗೈಸಿ - ಮಧ್ಯಾಹ್ನ 12:30ರ ನಂತರ
  • ಮಹಿಳೆಯರ ವೈಕ್ತಿಕ (1 ಮತ್ತು 2ನೇ ಸುತ್ತು): ಕೊನೇರು ಹಂಪೀ ಮತ್ತು ಹರಿಕಾ ದ್ರೋಣವಲ್ಲಿ) : ಮಧ್ಯಾಹ್ನ 12:30ರ ನಂತರ

ಇಸ್ಪೋರ್ಟ್ಸ್

  • ಎಫ್‌ಸಿ ಆನ್‌ಲೈನ್ ರೌಂಡ್ ಆಫ್ 32 ಮತ್ತು ಬ್ರಾಕೆಟ್ ಪಂದ್ಯಗಳು: ಚರಣ್ಜೋತ್ ಸಿಂಗ್ ಮತ್ತು ಕರ್ಮನ್ ಸಿಂಗ್ ಟಿಕ್ಕಾ ಬೆಳಗ್ಗೆ 8:00ರಿಂದ

ಫುಟ್ಬಾಲ್

  • ಮಹಿಳೆಯರ ಮೊದಲ ಸುತ್ತು (ಗುಂಪು B): ಭಾರತ vs ಥೈಲ್ಯಾಂಡ್ - ಮಧ್ಯಾಹ್ನ 1:30
  • ಪುರುಷರ ಮೊದಲ ಸುತ್ತು (ಗುಂಪು A): ಭಾರತ vs ಮ್ಯಾನ್ಮಾರ್ - ಸಂಜೆ 5:00

ಫೆನ್ಸಿಂಗ್

  • ಪುರುಷರ ವಿಭಾಗ: ದೇವ್ ಮತ್ತು ಬಿಬಿಶ್ ಕತಿರೇಸನ್ -ಬೆಳಗ್ಗೆ 6:30
  • ಮಹಿಳೆಯರ ವಿಭಾಗ: ಎನಾ ಅರೋರಾ ಮತ್ತು ತಾನಿಕ್ಷಾ ಖತ್ರಿ - ಬೆಳಗ್ಗೆ 10:00

ಹಾಕಿ

  • ಪುರುಷರ ಪ್ರಿಲಿಮಿನರಿ (ಪೂಲ್ A): ಭಾರತ vs ಉಜ್ಬೇಕಿಸ್ತಾನ್ - ಬೆಳಗ್ಗೆ 8:45

ಮಾಡರ್ನ್ ಪೆಂಟಾಥ್ಲಾನ್

  • ಪುರುಷರ ತಂಡ: ಮಯಾಂಕ್ ವೈಭವ್ ಚಾಫೇಕರ್ - ಮಧ್ಯಾಹ್ನ 3:00 IST

ರಗ್ಬಿ ಸೆವೆನ್ಸ್

  • ಮಹಿಳೆಯರು (ಪೂಲ್ F): ಭಾರತ vs ಹಾಂಗ್ ಕಾಂಗ್ ಚೀನಾ - ಬೆಳಗ್ಗೆ 10:00
  • ಮಹಿಳೆಯರು (ಪೂಲ್ F): ಭಾರತ vs ಜಪಾನ್ - ಮಧ್ಯಾಹ್ನ 3:35

ರೋಯಿಂಗ್

  • ಮಹಿಳೆಯರ ಲೈಟ್‌ವೈಟ್ ಡಬಲ್ ಸ್ಕಲ್ಸ್ ಫೈನಲ್ ಬಿ: ಕಿರಣ್, ಅಂಶಿಕಾ ಭಾರತಿ - ಬೆಳಗ್ಗೆ 6:30
  • ಪದಕ ಸ್ಪರ್ಧೆ: ಪುರುಷರ ಲೈಟ್‌ವೈಟ್ ಡಬಲ್ ಸ್ಕಲ್ಸ್ ಫೈನಲ್ ಎ : ಅರ್ಜುನ್ ಲಾಲ್ ಜಾಟ್, ಅರವಿಂದ್ ಸಿಂಗ್ - ಬೆಳಗ್ಗೆ 7:10
  • ಪದಕ ಸ್ಪರ್ಧೆ: ಪುರುಷರ ಡಬಲ್ ಸ್ಕಲ್ಸ್ ಫೈನಲ್ ಎ : ಪರ್ಮಿಂದರ್ ಸಿಂಗ್, ಸತ್ನಾಮ್ ಸಿಂಗ್ - ಬೆಳಗ್ಗೆ 8:00
  • ಪದಕ ಸ್ಪರ್ಧೆ: ಮಹಿಳೆಯರ ಕಾಕ್ಸ್‌ಲೆಸ್ ಫೋರ್ ಫೈನಲ್ ಎ : ಅಶ್ವತಿ ಪಿಬಿ, ಮೃಣಾಮಯಿ ನೀಲೇಶ್ ಎಸ್, ತಂಗ್ಜಮ್ ಪ್ರಿಯಾ ದೇವಿ, ರುಕ್ಮಣಿ - ಬೆಳಗ್ಗೆ 8:20
  • ಪದಕ ಸ್ಪರ್ಧೆ: ಪುರುಷರ ಕಾಕ್ಸ್‌ಲೆಸ್ ಜೋಡಿ ಫೈನಲ್ ಎ : ಬಾಬು ಲಾಲ್ ಯಾದವ್, ಲೇಖ್ ರಾಮ್ -ಬೆಳಗ್ಗೆ 8:40
  • ಪದಕ ಸ್ಪರ್ಧೆ: ಪುರುಷರ ಕೋಕ್ಸ್ಡ್ ಎಂಟು ಫೈನಲ್ ಎ : ಚರಂಜೀತ್ ಸಿಂಗ್, ಡಿಯು ಪಾಂಡೆ, ನರೇಶ್ ಕಲ್ವಾನಿಯಾ, ನೀರಜ್, ನೀತೇಶ್ ಕುಮಾರ್, ಆಶಿಶ್, ಭೀಮ್ ಸಿಂಗ್, ಜಸ್ವಿಂದರ್ ಸಿಂಗ್, ಪುನಿತ್ ಕುಮಾರ್ - ಬೆಳಗ್ಗೆ 9:00

ಸೇಯ್ಲಿಂಗ್‌ (Sailing)

  • ಅರ್ಹತಾ ರೇಸ್‌ಗಳು - ಬೆಳಗ್ಗೆ 8:30ರಿಂದ

ಶೂಟಿಂಗ್

  • ಮಹಿಳೆಯರ 10 ಮೀ ಏರ್ ರೈಫಲ್ ಕ್ವಾಲಿಫಿಕೇಶನ್ (ವೈಯಕ್ತಿಕ ಫೈನಲ್ ಮತ್ತು ತಂಡದ ಫೈನಲ್) : ಆಶಿ ಚೌಕ್ಸೆ, ಮೆಹುಲಿ ಘೋಷ್, ರಮಿತಾ -ಬೆಳಗ್ಗೆ 6:00ರಿಂದ
  • ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಅರ್ಹತಾ ಹಂತ 1: ಅನಿಶ್, ವಿಜಯವೀರ್ ಸಿಧು, ಆದರ್ಶ್ ಸಿಂಗ್ -ಬೆಳಗ್ಗೆ 6:30ರಿಂದ

ಈಜು

  • ಪುರುಷರ 100 ಮೀ ಫ್ರೀಸ್ಟೈಲ್ ಹೀಟ್ಸ್ ಮತ್ತು ಫೈನಲ್: ಆನಂದ್ ಎಎಸ್, ತನಿಷ್ ಜಾರ್ಜ್ ಮ್ಯಾಥ್ಯೂ - ಬೆಳಗ್ಗೆ 7:30 ರಿಂದ
  • ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್ ಮತ್ತು ಫೈನಲ್: ಶ್ರೀಹರ್ಣಿ ನಟರಾಜ್, ಉತ್ಕರ್ಷ್ ಸಂತೋಷ್ ಪಾಟೀಲ್ -ಬೆಳಗ್ಗೆ 7:30ರಿಂದ
  • ಮಹಿಳೆಯರ 4x100 ಮೀ ಫ್ರೀಸ್ಟೈಲ್ ರಿಲೇ ಹೀಟ್ಸ್ ಮತ್ತು ಫೈನಲ್: ಜಾನ್ವಿ ಚೌಧರಿ, ಧಿನಿಧಿ ದೇಸಿಂಗು, ಮಾನ ಪಟೇಲ್, ಶಿವಾಂಗಿ ಶರ್ಮಾ -ಬೆಳಗ್ಗೆ 7:30ರಿಂದ

ಟೆನಿಸ್

  • ಪುರುಷರ ಡಬಲ್ಸ್ ಸುತ್ತು 1: ಭಾರತ 2 vs ನೇಪಾಳ 1 - ಬೆಳಗ್ಗೆ 9:30 ರಿಂದ
  • ಪುರುಷರ ಸಿಂಗಲ್ಸ್ ಸುತ್ತು 1: ಸುಮಿತ್ ನಾಗಲ್ -ಬೆಳಗ್ಗೆ 9:30ರಿಂದ

ಟೇಬಲ್ ಟೆನ್ನಿಸ್

  • ಮಹಿಳೆಯರ ತಂಡ (16 ರ ಸುತ್ತು): ಭಾರತ vs ಥೈಲ್ಯಾಂಡ್ - ಬೆಳಗ್ಗೆ 7:30
  • ಪುರುಷರ ತಂಡ (16 ರ ಸುತ್ತು): ಭಾರತ vs ಕಜಕಿಸ್ತಾನ -ಬೆಳಗ್ಗೆ 9:30ರಿಂದ
  • ಪುರುಷರ ವಾಲಿಬಾಲ್: ಭಾರತ vs ಜಪಾನ್ - ಮಧ್ಯಾಹ್ನ 12:00

ವುಶು

  • ಪುರುಷರ ಚಾಂಗ್‌ಕ್ವಾನ್ ಫೈನಲ್: ಅಂಜುಲ್ ನಾಮದೇವ್, ಸೂರಜ್ ಸಿಂಗ್ -ಬೆಳಗ್ಗೆ 6:30
  • ಪುರುಷರ 56kg 1/8 ಫೈನಲ್: ಸುನಿಲ್ ಸಿಂಗ್ -ಸಂಜೆ 5:00

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ