Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಫುಟ್ಬಾಲ್ ತಂಡದ ವೇಳಾಪಟ್ಟಿ, ಸ್ಥಳ, ದಿನಾಂಕ, ಸಮಯ, ಲೈವ್ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ
Sep 20, 2023 12:25 PM IST
2023ರ ಜುಲೈ 1 ರಂದು SAFF ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಿದಾಗ ಸಂಭ್ರಮಿಸಿದ್ದು ಹೀಗೆ.
ಭಾರತದ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 19 ರಂದು ಚೀನಾ ವಿರುದ್ಧ ಆಡಿದೆ. ಟೀಂ ಇಂಡಿಯಾದ ಇತರೆ ಪಂದ್ಯಗಳು ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ನಡೆಯುತ್ತವೆ, ಲೈವ್ ಸ್ಟ್ರೀಮಿಂಗ್ ಎಲ್ಲಿ ಬರುತ್ತೆ ಎಂಬುದು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. ಚೀನಾ ವಿರುದ್ಧ ಪಂದ್ಯದಲ್ಲಿ ಭಾರತ 5-1 ಗೋಲುಗಳ ಸೋಲು ಕಂಡಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ 9 ವರ್ಷಗಳ ಬಳಿಕ ಭಾರತೀಯ ಫುಟ್‌ಬಾಲ್ ತಂಡ (Indian Mens Football Team) ಏಷ್ಯನ್ ಗೇಮ್ಸ್ 2023ರ ಕ್ರೀಡಾಕೂಟದಲ್ಲಿ ಭಾಗವಹಿಸಿದೆ. ಒಟ್ಟು 8 ಸ್ಥಗಳಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಪುರುಷರ ಫುಟ್ಬಾಲ್ ಪಂದ್ಯಗಳು ಸೆಪ್ಟೆಂಬರ್ 19 ರಿಂದಲೇ ಆರಂಭವಾಗಿವೆ. ಮಹಿಳಾ ತಂಡಗಳ ಪಂದ್ಯಗಳು ಸೆಪ್ಟೆಂಬರ್ 21 ರಿಂದ ಆರಂಭವಾಗಲಿವೆ.
ಏಷ್ಯನ್ ಗೇಮ್ಸ್‌ನಲ್ಲಿ ಅಂಡರ್-23 ಫುಟ್ಬಾಲ್ ತಂಡಗಳು ಮಾತ್ರ ಭಾಗವಹಿಸಲು ಅವಕಾಶ ಇದೆ. ಆದರೆ ತಂಡಗಳಲ್ಲಿ ಮೂರು ಹಿರಿಯ ಆಟಗಾರರ ಲಭ್ಯತೆಗೆ ಅವಕಾಶ ಇದೆ. ಆದರೆ ಮಹಿಳಾ ಫುಟ್ಬಾಲ್ ತಂಡಗಳಿಗೆ ಇಂತಹ ನಿಯಮಗಳು ಅನ್ವಯಿಸುವುದಿಲ್ಲ. ಹಿರಿಯ ಆಟಗಾರರಿಂದ ಕೂಡಿದ ತಂಡವೇ ಇಲ್ಲಿ ಭಾಗವಹಿಸುತ್ತದೆ. ಪುರುಷರ ಫುಟ್ಬಾಲ್ ಸ್ಪ್ರಧೆಗಳಲ್ಲಿ 23 ತಂಡಗಳನ್ನು ತಲಾ 4 ತಂಡಗಳು 5 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿ ಮೂರು ತಂಡಗಳು ಮಾತ್ರ ಇವೆ.
ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಫುಟ್ಬಾಲ್ ಗುಂಪುಗಳು
ಗುಂಪು ಎ: ಭಾರತ, ಚೀನಾ, ಬಾಂಗ್ಲಾದೇಶ, ಮ್ಯಾನ್ಮಾರ್
ಗುಂಪು ಬಿ: ವಿಯೆಟ್ನಾಂ, ಸೌದಿ ಅರೇಬಿಯಾ, ಮಂಗೋಲಿಯಾ, ಇರಾನ್
ಗುಂಪು ಸಿ: ಉಜ್ಬೇಕಿಸ್ತಾನ, ಹಾಂಗ್‌ಕಾಂಗ್, ಸಿರಿಯಾ, ಅಫ್ಘಾನಿಸ್ತಾನ
ಗುಂಪು ಡಿ: ಜಪಾನ್, ಪ್ಯಾಲೆಸ್ಟೈನ್, ಕತಾರ್
ಗುಂಪು ಇ: ದಕ್ಷಿಣ ಕೊರಿಯಾ, ಬಹ್ರೇನ್, ಥೈಲ್ಯಾಂಡ್, ಕುವೈತ್
ಗುಂಪು ಎಫ್: ಉತ್ತರ ಕೊರಿಯಾ, ಇಂಡೋನೇಷ್ಯಾ, ಕಿರ್ಗಿಸ್ತಾನ್, ಚೈನೀಸ್ ತೈಪೆ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಫುಟ್ಬಾಲ್ ತಂಡದ ಮೊದಲ ಪಂದ್ಯ
ಪಂದ್ಯ: ಭಾರತ vs ಚೀನಾ
ಯಾವಾಗ: ಪಂದ್ಯ ಸೆಪ್ಟೆಂಬರ್ 19, ಮಂಗಳವಾರ
ಸ್ಥಳ: ಚೀನಾದ ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಹ್ಯಾಂಗ್‌ಝೌ
ಸಮಯ: ಸಂಜೆ 5 ಗಂಟೆ (ಭಾರತೀಯ ಕಾಲಮಾನ)
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಫುಟ್ಬಾಲ್ ತಂಡದ 2ನೇ ಪಂದ್ಯ
ಪಂದ್ಯ: ಭಾರತ vs ಬಾಂಗ್ಲಾದೇಶ
ಯಾವಾಗ: ಪಂದ್ಯ ಸೆಪ್ಟೆಂಬರ್ 21, ಗುರುವಾರ
ಸ್ಥಳ: ಚೀನಾದ ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಹ್ಯಾಂಗ್‌ಝೌ
ಸಮಯ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ)
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಫುಟ್ಬಾಲ್ ತಂಡದ 3ನೇ ಪಂದ್ಯ
ಪಂದ್ಯ: ಭಾರತ vs ಮ್ಯಾನ್ಮಾರ್
ಯಾವಾಗ: ಪಂದ್ಯ ಸೆಪ್ಟೆಂಬರ್ 24, ಭಾನುವಾರ
ಸ್ಥಳ: ಚೀನಾದ ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ, ಹ್ಯಾಂಗ್‌ಝೌ
ಸಮಯ: ಸಂಜೆ 5 ಗಂಟೆ (ಭಾರತೀಯ ಕಾಲಮಾನ)
ಸೆಪ್ಟೆಂಬರ್ 27 ಅಥವಾ 28 ರಂದು ಪುರುಷರ ರೌಂಡ್ 16 (ಒಂದು ವೇಳೆ ಭಾರತ ಅರ್ಹತೆ ಪಡೆದರೆ)
ಅಕ್ಟೋಬರ್ 1: ಪುರುಷರ ಕ್ವಾರ್ಟರ್ ಫೈನಲ್ (ಭಾರತ ಅರ್ಹತೆ ಪಡೆದರೆ)
ಅಕ್ಟೋಬರ್ 4: ಪುರುಷರ ಸೆಮಿಫೈನಲ್ (ಭಾರತ ಅರ್ಹತೆ ಪಡೆದರೆ)
ಅಕ್ಟೋಬರ್ 7: ಫುರುಷರ ಫೈನಲ್ (ಚಿನ್ನ/ಕಂಚಿನ ಪದಕಕ್ಕಾಗಿ ಪಂದ್ಯ (ಭಾರತ ಅರ್ಹತೆ ಪಡೆದರೆ)
ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಪುರುಷರ ಫುಟ್ಬಾಲ್ ತಂಡ
ಗೋಲ್‌ಕೀಪರ್‌ಗಳು: ಗುರ್ಮೀತ್ ಸಿಂಗ್, ದೀರಜ್ ಸಿಂಗ್ ಮೊಯರಂಗ್ಥೆಮ್, ವಿಶಾಲ್ ಯಾದವ್
ಡಿಫೆಂಡರ್‌ಗಳು: ಸುಮಿತ್ ರಾಠಿ, ನರೇಂದರ್ ಗೆಹ್ಲೋಟ್, ದೀಪಕ್ ತಂಗ್ರಿ, ಸಂದೇಶ್ ಜಿಂಗನ್, ಚಿಂಗ್ಲೆನ್ಸನಾ ಸಿಂಗ್, ಲಾಲ್ಚುಂಗ್ನುಂಗಾ
ಮಿಡ್‌ಫೀಲ್ಡರ್: ಅಮರ್ಜಿತ್ ಸಿಂಗ್ ಕಿಯಾಮ್, ಸ್ಯಾಮ್ಯುಯೆಲ್ ಜೇಮ್ಸ್ ಲಿಂಗ್ಡೋಹ್, ರಾಹುಲ್ ಕೆಪಿ, ಅಬ್ದುಲ್ ರಬೀಹ್, ಆಯುಷ್ ದೇವ್ ಛೆಟ್ರಿ, ಬ್ರೈಸ್ ಮಿರಾಂಡಾ, ಅಜ್ಫರ್ ನೂರಾನಿ, ಮಿನ್ಸಿ ಬ್ಯಾರೆಟ್ಟೊ
ಫಾರ್ವರ್ಡ್: ಸುನಿಲ್ ಛೆಟ್ರಿ, ರಹೀಮ್ ಅಲಿ, ರೋಹಿತ್ ದಾನು, ಗುರುಕೀರತ್ ಸಿಂಗ್, ಅನಿಕೇತ್ ಜಾಧವ್
ಮುಖ್ಯ ತರಬೇತುದಾರ: ಇಗೊರ್ ಸ್ಟಿಮ್ಯಾಕ್
ಏಷ್ಯನ್ ಗೇಮ್ಸ್ 2023ರ ಭಾರತೀಯ ಫುಟ್ಬಾಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಏಷ್ಯನ್ ಆಟಗಳ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಎಲ್ಲಾ ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಏಷ್ಯನೇ ಗೇಮ್ಸ್ ಭಾರತೀಯ ಫುಟ್ಬಾಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಫುಟ್ಬಾಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸೋನಿ ಲೈವ್‌ನಲ್ಲಿ ಲಭ್ಯವಿದೆ.