logo
ಕನ್ನಡ ಸುದ್ದಿ  /  ಕ್ರೀಡೆ  /  Us Open: 5ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ ಸೋಲಿಸಿ ಇತಿಹಾಸ ಸೃಷ್ಟಿಸಿದ ಜೀನಾದ ಜಾಂಗ್

US Open: 5ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ ಸೋಲಿಸಿ ಇತಿಹಾಸ ಸೃಷ್ಟಿಸಿದ ಜೀನಾದ ಜಾಂಗ್

Jayaraj HT Kannada

Dec 22, 2023 06:16 PM IST

google News

ಝಿಜೆನ್ ಜಾಂಗ್

    • US Open 2023: ಐದನೇ ಶ್ರೇಯಾಂಕದ ಆಟಗಾರನನ್ನು ಸೋಲಿಸಲು ಚೀನಾದ ಜಾಂಗ್ ಭಿನ್ನ ತಂತ್ರ ಅನುಸರಿಸಿದರು. ಸೆಟ್ ಪ್ರಾರಂಭವಾಗುವ ಮೊದಲು, ವಾಶ್‌ರೂಮ್‌ ಹೋಗಲು, ಬಟ್ಟೆ ಬದಲಾಯಿಸಲೆಂದು ಹಲವಾರು ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡರು. ಇದು ರುಡ್ ವೇಗಕ್ಕೆ ಅಡ್ಡಿಯಾಯ್ತು. 
ಝಿಜೆನ್ ಜಾಂಗ್
ಝಿಜೆನ್ ಜಾಂಗ್ (Getty Images via AFP)

ವಿಶ್ವದ 5ನೇ ಶ್ರೇಯಾಂಕದ ಬಲಿಷ್ಠ ಆಟಗಾರ ನಾರ್ವೆಯ ಕ್ಯಾಸ್ಪರ್ ರೂಡ್ (Casper Ruud), ಯುಎಸ್ ಓಪನ್‌ನಿಂದ (US Open) ಹೊರಬಿದ್ದಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಝಿಜೆನ್ ಜಾಂಗ್ (Zhizhen Zhang) ವಿರುದ್ಧ ಅಚ್ಚರಿಯ ಸೋಲು ಕಂಡ ರೂಡ್‌, ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬರೋಬ್ಬರಿ 3 ಗಂಟೆ 19 ನಿಮಿಷಗಳ ಕಾಲ ನಡೆದ ಐದು ಸುತ್ತಿನ ರೋಚಕ ಪಂದ್ಯದಲ್ಲಿ ಪಟ್ಟುಬಿಡದೆ ಹೋರಾಡಿದ ರೂಡ್, ಕೊನೆಗೂ ಗೆಲುವು ಸಾಧಿಸಲುವಲ್ಲಿ ವಿಫಲರಾದರು. ಅಂತಿಮವಾಗಿ 4-6, 7-5, 2-6, 6-0, 2-6 ಸೆಟ್‌ಗಳಿಂದ 67ನೇ ಶ್ರೇಯಾಂಕದ ಚೀನಾ ಆಟಗಾರನಿಗೆ ಶರಣಾಗಿದ್ದಾರೆ.

ಇತಿಹಾಸ ನಿರ್ಮಿಸಿದ ಜಾಂಗ್

ಈ ಗೆಲುವಿನೊಂದಿಗೆ ಚೀನಾದ ಝಿಜೆನ್ ಜಾಂಗ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅಗ್ರ ಐದು ಶ್ರೇಯಾಂಕದ ಆಟಗಾರರನ್ನು ಸೋಲಿಸಿದ ಚೀನಾದ ಮೊದಲ ಪುರುಷ ಟೆನಿಸ್ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

26 ವರ್ಷ ವಯಸ್ಸಿನ ಯುವ ಆಟಗಾರ ಆರಂಭದಲ್ಲೇ ಅಬ್ಬರಿಸಿದರು. ಮೊದಲ ಸೆಟ್ ಅನ್ನು 6-4ರಿಂದ ವಶಪಡಿಸಿ, ರೂಡ್ ಆತ್ಮವಿಶ್ವಾಸವನ್ನು ತಗ್ಗಿಸಿದರು. ಆದರೆ, ಕಠಿಣ ಹೋರಾಟದ ನಂತರ ರೂಡ್ ಎರಡನೇ ಸೆಟ್ ಅನ್ನು 7-5ರಲ್ಲಿ ಗೆದ್ದು ಕಂಬ್ಯಾಕ್‌ ಮಾಡಿದರು. ಆದರೆ ಮೂರನೇ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಜಾಂಗ್ 6-2ರಿಂದ ಮುನ್ನಡೆ ಸಾಧಿಸಿದರು. ನಾಲ್ಕನೇ ಸೆಟ್‌ನಲ್ಲಿ ಮತ್ತೆ ಉಗ್ರ ಆಟ ಪ್ರದರ್ಶಿಸಿದ ರೂಡ್ 6-0 ಅಂತರದ ಗೆಲುವಿನೊಂದಿಗೆ ಸಮಬಲ ಸಾಧಿಸಿದರು. ಹೀಗಾಗಿ ಪಂದ್ಯ ಸಮಬಲಗೊಂಡು ಐದನೇ ಸೆಟ್‌ ನಿರ್ಣಾಯಕವಾಯ್ತು. ಅಂತಿಮ ಸೆಟ್‌ನಲ್ಲಿ ಮತ್ತೆ ಅಬ್ಬರಿಸಿದ ಜಾಂಗ್‌ 6-2ರಿಂದ ಗೆದ್ದು ಇತಿಹಾಸ ನಿರ್ಮಿಸಿದರು.

ಜಾಂಗ್ ಗೇಮ್‌ಪ್ಲಾನ್‌; ಟಾಯ್ಲೆಟ್ ಬ್ರೇಕ್ ತೆಗೆದುಕೊಂಡು ಎದುರಾಳಿ ವೇಗಕ್ಕೆ ಅಡ್ಡಿ

ಐದನೇ ಶ್ರೇಯಾಂಕದ ಆಟಗಾರನನ್ನು ಸೋಲಿಸಲು ಚೀನಾದ ಜಾಂಗ್ ಭಿನ್ನ ತಂತ್ರ ಅನುಸರಿಸಿದರು. ಸೆಟ್ ಪ್ರಾರಂಭವಾಗುವ ಮೊದಲು, ವಾಶ್‌ರೂಮ್‌ ಹೋಗಲು, ಬಟ್ಟೆ ಬದಲಾಯಿಸಲೆಂದು ಹಲವಾರು ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡು ಮೈದಾನ ತೊರೆದರು. ಇದು ರುಡ್ ವೇಗಕ್ಕೆ ಅಡ್ಡಿಯಾಯ್ತು. ಜಾಂಗ್‌ ಪದೇ ಪದೆ ಬ್ರೇಕ್‌ ತೆಗೆದುಕೊಂಡಿದ್ದಕ್ಕೆ ರೂಡ್‌ ಅಂಪೈರ್‌ ವಿರುದ್ಧ ಆಕ್ರೋಶ ಹೊರಹಾಕಿದರು.

ಜೋಕೋವಿಕ್ ಶುಭಾರಂಭ; ಮತ್ತೆ ನಂಬರ್ 1 ಪಟ್ಟ ಅಲಂಕರಿಸಿದ ಟೆನಿಸ್ ದಿಗ್ಗಜ

23 ಗ್ರ್ಯಾಂಡ್​ ಸ್ಲಾಮ್​ಗಳ ಒಡೆಯ, ಟೆನಿಸ್ ಲೋಕದ ದಿಗ್ಗಜ ಸರ್ಬಿಯಾದ ನೋವಾಕ್‌ ಜೋಕೋವಿಕ್, ಯುಎಸ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಅದ್ಭುತ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಫ್ರಾನ್ಸ್​​ನ ಅಲೆಕ್ಸಾಂಡರ್​​ ಮುಲ್ಲರ್ ವಿರುದ್ಧ 6-0, 6-2, 6-3 ಸೆಟ್‌ಗಳಲ್ಲಿ ಗೆದ್ದಿದ್ದಾರೆ. ಅಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ಮತ್ತೆ ನಂಬರ್ 1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ