ಚೆಸ್ ವಿಶ್ವಕಪ್ ಫೈನಲ್; ಆರ್ ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್ಸೆನ್ ಪಂದ್ಯದ ಲೈವ್ ಇಲ್ಲಿ ವೀಕ್ಷಿಸಿ
Aug 23, 2023 04:43 PM IST
ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದಗೆಲುವುಗೆ ಭಾರತೀಯರ ಪ್ರಾರ್ಥನೆ
- ಚೆಸ್ ವಿಶ್ವಕಪ್ ಫೈನಲ್‌ನ ಎರಡನೇ ದಿನದ ಪಂದ್ಯವು ಬುಧವಾರ, ಆಗಸ್ಟ್ 23ರಂದು ಸಂಜೆ 4:30ಕ್ಕೆ ಪ್ರಾರಂಭವಾಗಿದೆ.
2023ರ ಚೆಸ್ ವಿಶ್ವಕಪ್‌ನ ಫೈನಲ್ (Chess World Cup 2023) ಪಂದ್ಯವನ್ನು ಭಾರತೀಯರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಭಾರತದ ಯುವ ಚಿಲುಮೆ ಆರ್ ಪ್ರಜ್ಞಾನಂದ (Ramesh babu Praggnanandhaa) ಫೈನಲ್‌ನಲ್ಲಿ ಆಡುತ್ತಿದ್ದು, ಗೆದ್ದರೆ ಇತಿಹಾಸ ಸೃಷಿಯಾಗಲಿದೆ. 18 ವರ್ಷದ ಚೆಸ್ ಪ್ರತಿಭೆಯ ಗೆಲುವಿಗೆ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.
ಫೈನಲ್ ಪಂದ್ಯವನ್ನು ಎರಡು ಹಂತಗಳಲ್ಲಿ ಆಡಲಾಗುತ್ತಿದೆ. ಮಂಗಳವಾರ (ಆಗಸ್ಟ್ 22) ನಡೆದ 1ನೇ ಪಂದ್ಯದಲ್ಲಿ ಪ್ಪ್ರಜ್ಞಾನಂದ ರೋಚಕ ಹೋರಾಟ ಪ್ರದರ್ಶಿಸಿ 35 ನಡೆಗಳ ನಂತರ ಪಂದ್ಯವನ್ನು ಡ್ರಾ ಮಾಡಿಕೊಂಡರು. ಇಂದು ಎರಡನೇ ಪಂದ್ಯ ನಡೆಯುತ್ತಿದೆ.
ನೇರ ಪ್ರಸಾರ ವೀಕ್ಷಿಸುವುದು ಹೇಗೆ?
ಚೆಸ್ ವಿಶ್ವಕಪ್ ಫೈನಲ್‌ನ ಎರಡನೇ ದಿನದ ಪಂದ್ಯವು ಬುಧವಾರ, ಆಗಸ್ಟ್ 23ರಂದು ಸಂಜೆ 4:30ಕ್ಕೆ ಪ್ರಾರಂಭವಾಗುತ್ತದೆ. ಚೆಸ್ ವಿಶ್ವಕಪ್ ಫೈನಲ್ ಪಂದ್ಯವು ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಈ ಪಂದ್ಯವನ್ನು Fide Chessನ ಯೂಟ್ಯೂಬ್ ಮತ್ತು Twitch ಚಾನೆಲ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆದ ಚೆಸ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರಮೇಶ್‌ಬಾಬು ಪ್ರಜ್ಞಾನಂದ ಅವರು ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಆ ಮೂಲಕ ಯುವ ಪ್ರತಿಭೆ ಆರ್ ಪ್ರಜ್ಞಾನಂದ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ (Viswanathan Anand) ಈ ಸಾಧನೆ ಮಾಡಿದ್ದರು.
ಒಂದು ವೇಳೆ ಫೈನಲ್‌ನಲ್ಲಿ ಕಾರ್ಲ್‌ಸೆನ್ ಅವರನ್ನು ಮಣಿಸಿದರೆ, ತಮಿಳುನಾಡು ಮೂಲದ ಪ್ರಜ್ಞಾನಂದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯನೆಂಬ ದಾಖಲೆ ಬರೆಯಲಿದ್ದಾರೆ.
ವಿಭಾಗ