logo
ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಇತಿಹಾಸ ಸೃಷ್ಟಿಸಿದ ವಿನೇಶ್​ ಫೋಗಟ್​; ಕುಸ್ತಿಯಲ್ಲಿ ಚಿನ್ನ ಗೆದ್ದು ದಾಖಲೆ

CWG 2022: ಇತಿಹಾಸ ಸೃಷ್ಟಿಸಿದ ವಿನೇಶ್​ ಫೋಗಟ್​; ಕುಸ್ತಿಯಲ್ಲಿ ಚಿನ್ನ ಗೆದ್ದು ದಾಖಲೆ

HT Kannada Desk HT Kannada

Aug 06, 2022 11:49 PM IST

ಕಾಮನ್​ವೆಲ್ತ್ ಗೇಮ್​​ನ ಮಹಿಳಾ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ವಿನೇಶ್ ವಿನೇಶ್​​ ಫೋಗಟ್ (ಫೋಟೋ-ಸಂಗ್ರಹ)

  • ಕಾಮನ್​ವೆಲ್ತ್ ಗೇಮ್​​ನಲ್ಲಿ ಮಹಿಳಾ ಕುಸ್ತಿ ಪಟು ವಿನೇಶ್​​ ಫೋಗಟ್​​​ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹ್ಯಾಟ್ರಿಕ್​ ಚಿನ್ನದ ಸಾಧನೆ ಮಾಡಿದ್ದಾರೆ.

ಕಾಮನ್​ವೆಲ್ತ್ ಗೇಮ್​​ನ ಮಹಿಳಾ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ವಿನೇಶ್ ವಿನೇಶ್​​ ಫೋಗಟ್ (ಫೋಟೋ-ಸಂಗ್ರಹ)
ಕಾಮನ್​ವೆಲ್ತ್ ಗೇಮ್​​ನ ಮಹಿಳಾ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ವಿನೇಶ್ ವಿನೇಶ್​​ ಫೋಗಟ್ (ಫೋಟೋ-ಸಂಗ್ರಹ)

ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಮಹಿಳಾ ಕುಸ್ತಿಯಲ್ಲಿ ಭಾರತದ ಭರವಸೆಯ ಕ್ರೀಡಾಪಟು ವಿನೇಶ್ ಫೋಗಟ್​​​ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಕಾಮನ್​ವೆಲ್ತ್ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿರುವ ಇವರು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಸತತ ಮೂರನೇ ಸಲ ಸ್ವರ್ಣ ಪದಕ ಗಳಿಸಿರುವ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ.

ಉಳಿದಂತೆ ಕುಸ್ತಿಯಲ್ಲಿ ಭಾರತದ ಪೂಜಾ ಗೆಹ್ಲೋಟ್​ ಹಾಗೂ ಬಾಕ್ಸಿಂಗ್​ನಲ್ಲಿ ಜೈಸ್ಮಿನ್​ ಲಂಬೋರಿಯಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಸೆಮೀಸ್​ನಲ್ಲಿ ಸೋಲು ಕಂಡಿದ್ದ ಪೂಜಾ ಗೆಹ್ಲೋಟ್​ ಕಂಚಿಗೋಸ್ಕರ ಸ್ಕ್ಯಾಟ್​ಲ್ಯಾಂಡ್​ನ ಸ್ಪರ್ಧಾಳು ವಿರುದ್ಧ ಗೆಲುವು ದಾಖಲು ಮಾಡಿ ಪದಕ ಗೆದ್ದಿದ್ದಾರೆ.

ಮತ್ತೊಂದೆಡೆ ಬಾಕ್ಸರ್​​ ಜೈಸ್ಮಿನ್​​ 60 ಕೆಜಿ ವಿಭಾಗದ ಬಾಕ್ಸಿಂಗ್​ನಲ್ಲಿ ಕಂಚು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಇಲ್ಲಿಯವರೆಗೆ 11 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 33 ಪದಕ ಗೆದ್ದು, 5ನೇ ಸ್ಥಾನದಲ್ಲಿ ಮುಂದುವರೆದಿದೆ. ಕುಸ್ತಿಯಲ್ಲೇ ಭಾರತ ಇಲ್ಲಿಯವರೆಗೆ ಐದು ಪದಕ ಗೆದ್ದಿದೆ.

ಒಲಿಂಪಿಕ್​ ಬೆಳ್ಳಿ ಪದಕ ವಿಜೇತ ಕುಸ್ತಿ ಪಟು ರವಿ ದಹಿಯಾ ಅವರು ಕಾಮನ್​ವೆಲ್ತ್​ ಗೇಮ್ಸ್​​ನ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಬಾಕ್ಸಿಂಗ್ ವಿಭಾಗದಲ್ಲಿ ನಿಕಾಂತ್ ಜರೀನಾ ಫೈನಲ್​ಗೆ ಲಗ್ಗೆ ಹಾಕಿದ್ದು, ಕ್ರಿಕೆಟ್​ನಲ್ಲೂ ಭಾರತೀಯ ಮಹಿಳಾ ತಂಡ ಫೈನಲ್​ಗೆ ಲಗ್ಗೆ ಹಾಕಿದ್ದು, ಸೋಲು ಕಂಡರೂ ಬೆಳ್ಳಿಗೆ ಮುತ್ತಿಕ್ಕಲಿದೆ.

ಭಾರತದ ಖಡಕ್‌ ಕುಸ್ತಿಪಟು ಎಂದೇ ಖ್ಯಾತರಾದ ದವಿ ದಹಿಯಾ ಅವರು ಕಾಮನ್‌ವೆಲ್ತ್‌ ಗೇಮ್ಸ್‌-2022ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಶನಿವಾರ ನಡೆದ ಪಂದ್ಯದಲ್ಲಿ ರವಿ ದಹಿಯಾ(Ravi Kumar Dahiya) ಅವರು ನೈಜೀರಿಯಾದ ಕುಸ್ತಿಪಟುವನ್ನು ತಾಂತ್ರಿಕ ದಕ್ಷತೆ ಆಧಾರದಲ್ಲಿ ಗೆದ್ದು ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. ಎದುರಾಳಿಯ ದೌರ್ಬಲ್ಯಗಳನ್ನು ಅವಲೋಕಿಸಿಕೊಂಡು ಎಚ್ಚರಿಕೆಯ ಹೊಡೆತಗಳನ್ನು ನೀಡಿದ ರವಿ ಕುಮಾರ್‌ ದಹಿಯಾ ಅವರು ಪ್ರಬಲವಾಗಿ ತನ್ನ ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ರೆಫರಿಯಿಂದ ದಹಿಯಾ ಅವರಿಗೆ ಎಚ್ಚರಿಕೆಯ ಸೂಚನೆಗಳೂ ದೊರಕಿದವು.

ಬಳಿಕ ಇನ್ನಷ್ಟು ಎಚ್ಚರಿಕೆಯಿಂದ ಆಡಿ ಇವರು ಎದುರಾಳಿಯ ಪಾದವನ್ನು ಹಿಡಿದು ನೆಲಕ್ಕುರುಳಿಸಿ ಖಡಕ್‌ ನಡೆ ಪ್ರದರ್ಶಿಸಿದರು. ಆ ಸಂದರ್ಭದಲ್ಲಿ ಇವರು 8-0 ಅಂಕ ಪಡೆದರು. ಭಾರತಕ್ಕೆ ಈ ಬಾರಿ ಕುಸ್ತಿಯಲ್ಲಿ ಅತ್ಯಧಿಕ ಪದಕಗಳ ಸುರಿಮಳೆಯಾಗುತ್ತಿದ್ದು, ದೇಶದ ಕುಸ್ತಿಪಟುಗಳು ಭರವಸೆ ಹುಟ್ಟಿಸುತ್ತಿದ್ದಾರೆ.

ಕಳೆದ ವರ್ಷ ಇದೇ ತಿಂಗಳು ಕೂಡ ದಹಿಯಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ಪುರುಷರ 57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇವರು 2019ರ ವಿಶ್ವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 2020ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2021ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2018ರ ಅಂಡರ್ 23 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹೀಗಾಗಿ ಇವರು ದೇಶದ ಹೆಮ್ಮೆಯ ಖಡಕ್‌ ಕುಸ್ತಿಪಟು ಎನ್ನಬಹುದು.

ಭಾರತದ ಕುಸ್ತಿಪಟು ನವೀನ್ 74 ಕೆಜಿ ತೂಕದ ವಿಭಾಗದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್ ಶರೀಫ್ ತಾಹಿರ್ ಅವರನ್ನು 9-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ