logo
ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ 55+ ಪದಕ, ಇನ್ನಷ್ಟು ಚಿನ್ನ, ಬೆಳ್ಳಿ, ಕಂಚು ಪದಕಗಳತ್ತ ಕಣ್ಣು

CWG 2022: ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ 55+ ಪದಕ, ಇನ್ನಷ್ಟು ಚಿನ್ನ, ಬೆಳ್ಳಿ, ಕಂಚು ಪದಕಗಳತ್ತ ಕಣ್ಣು

Praveen Chandra B HT Kannada

Aug 08, 2022 07:56 AM IST

ಬಾಕ್ಸರ್‌ ಸಾಗರ್‌ ಅಹ್ಲಾವತ್‌ಗೆ ಪಂದ್ಯದ ಸಮಯದಲ್ಲಿ ಆದ ಗಾಯಗಳು REUTERS/Hannah Mckay

    • ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (Commonwealth games 2022) ಭಾರತದ ಪದಕ ಬೇಟೆ ಹೊಸ ಮೈಲುಗಲ್ಲು ತಲುಪಿದೆ. ಈಗಾಗಲೇ ಭಾರತವು ಅರ್ಧ ಶತಕಕ್ಕೂ ಹೆಚ್ಚು ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಇನ್ನಷ್ಟು ಪದಕಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.
ಬಾಕ್ಸರ್‌ ಸಾಗರ್‌ ಅಹ್ಲಾವತ್‌ಗೆ ಪಂದ್ಯದ ಸಮಯದಲ್ಲಿ ಆದ ಗಾಯಗಳು REUTERS/Hannah Mckay
ಬಾಕ್ಸರ್‌ ಸಾಗರ್‌ ಅಹ್ಲಾವತ್‌ಗೆ ಪಂದ್ಯದ ಸಮಯದಲ್ಲಿ ಆದ ಗಾಯಗಳು REUTERS/Hannah Mckay (REUTERS)

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (Commonwealth games 2022) ಭಾರತದ ಪದಕ ಬೇಟೆ ಹೊಸ ಮೈಲುಗಲ್ಲು ತಲುಪಿದೆ. ಈಗಾಗಲೇ ಭಾರತವು ಅರ್ಧ ಶತಕಕ್ಕೂ ಹೆಚ್ಚು ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಇನ್ನಷ್ಟು ಪದಕಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಭಾರತದ ಬಾಕ್ಸರ್‌ ಸಾಗರ್‌ ಅಹ್ಲಾವತ್‌ (sagar ahlavwat) ಅವರು ಪುರುಷರ 92 ಕೆ.ಜಿ. ವಿಭಾಗದಲ್ಲಿ ಸೋಲು ಕಂಡರೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಡೆಲೀಶಿಯಸ್‌ ಓರಿಯೊ ವಿರುದ್ಧ 0-5 ಅಂತರದಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ದೇಶದ ಟೇಬಲ್‌ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಮತ್ತೊಂದು ಚಿನ್ನದ ಪದಕವನ್ನು ಪಡೆದಿದ್ದಾರೆ. ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಹಿರಿಯ ಆಟಗಾರ ಅಚಂತಾ ಶರತ್‌ ಕಮಾಲ್‌ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. . ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ ಇಂಗ್ಲೆಂಡ್‌ನ ಪಾಲ್ ಡ್ರಿಂಖಾಲ್ ಮತ್ತು ಲಿಯಾಮ್ ಪಿಚ್‌ಫೋರ್ಡ್ ಜೋಡಿ ವಿರುದ್ಧ ಸೋತು ರನ್ನರ್‌ ಅಪ್ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿತು. ಇದು ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಶರತ್‌ಗೆ ಒಲಿದ 11ನೇ ಪದಕ. ಇದರಲ್ಲಿ ಐದು ಚಿನ್ನ, 3 ಬೆಳ್ಳಿ ಮತ್ತು ಮೂರು ಕಂಚು ಸೇರಿವೆ.

ಸ್ಟಾರ್‌ ಷಟ್ಲರ್‌ ಕಿಡಂಬಿ ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸಿಂಗಾಪುರದ ಜಿಯಾ ಹೆಂಗ್‌ ತೆಹ್‌ ಅವರನ್ನು ಕಿಡಿಂಬಿ ಸೋಲಿಸಿದ್ದಾರೆ. ಇವರಿಂದ ಚಿನ್ನದ ಪದಕ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷಿತ ಪ್ರದರ್ಶನ ದೊರಕದೆ ಇದ್ದುದ್ದರಿಂದ ಕಂಚಿನ ಪದಕಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಸದ್ಯ ಪದಕ ಪಟ್ಟಿಯಲ್ಲಿ (Commonwealth games 2022 medal tally) ಭಾರತ 18 ಚಿನ್ನ, 15 ಬೆಳ್ಳಿ, 22 ಕಂಚು ಸೇರಿದಂತೆ 55 ಪದಕಗಳನ್ನು ಪಡೆದಿದೆ. ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತವು ಅಗ್ರ ಐದನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ,, ಇಂಗ್ಲೆಂಡ್‌, ಕೆನಡಾ ಅಗ್ರ ಮೂರನೇ ಸ್ಥಾನದಲ್ಲಿವೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಅನ್ನು ಭಾರತದ ಸದ್ಯದಲ್ಲಿಯೇ ಹಿಂದುಕ್ಕುವುದೇ ಎಂದು ಕಾದು ನೋಡಬೇಕಿದೆ.

ಭಾನುವಾರ ಟ್ರಿಪಲ್‌ ಜಂಪ್‌ನಲ್ಲಿ ಭಾರತ ತಂಡವು ಹೊಸ ಚಾರಿತ್ರಿಕ ಸಾಧನೆ ಮಾಡಿತ್ತು. ಭಾನುವಾರ ಫೈನಲ್ ಸ್ಪರ್ಧೆಯಲ್ಲಿ ಎಲ್ಲೋಸ್ ಚಿನ್ನ ಗೆದ್ದರೆ, ಅಬ್ದುಲ್ ಅಬೂಬೇಕರ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. 3ನೇ ಯತ್ನದಲ್ಲಿ ಪಾಲ್ ಮೀ. ಜಿಗಿದು ಮೊದಲ ಸ್ಥಾನ ಅಲಂಕರಿಸಿದರೆ, ಅಬೂಬೇಕ‌ ಪ್ರಯತ್ನದಲ್ಲಿ 17,03 ಮೀ. ಜಿಗಿದು ಸ್ಥಾನ ಪಡೆದರು. ಬರ್ಮುಡಾದ ಜಹ್ ಸ್ಟಾಲ್ ಪೆರಿಂಚಿಫ್ (16.92 ಮೀ.) ಮೂರನೇ ಗಳಿಸಿದ್ದಾರೆ.

ಜಾವೆಲಿನ್ ಪಟು ಅನ್ನು ರಾಣಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ ಜಾವೆಲಿನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಗೌರವಕ್ಕೆ ಭಾಜನರಾದರು. ನಾಲ್ಕನೇ ಯತ್ನದಲ್ಲಿ 60 ಮೀ.ದೂರ ಜಾವೆಲಿನ್ ಎಸೆಯುವ ಮೂಲಕ ರಾಣಿ ಪೋಡಿಯಂ ಸ್ಥಾನ ಪಡೆದಿದ್ದಾರೆ.

ಭಾರತದ ಸಂದೀಪ್ ಕುಮಾರ್ ಪುರುಷರ 10,000 ಮೀ, ರೇಸ್‌ನಲ್ಲಿ ವೈಯಕ್ತಿಕ ಸಮಯದೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಕುಮಾರ್ 38 ನಿಮಿಷ ಸೆಕೆಂಡ್‌ಗಳಲ್ಲಿ 3ನೇ ಸ್ಥಾನ ಗಳಿಸಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ 'ಟೈಮರ್' ವಿವಾದದಿಂದ ಹೊರಬಂದು ಅಮೋಘ ಪ್ರದರ್ಶನ ನೀಡಿದ ಸವಿತಾ ಪೂನಿಯಾ ಸಾರಥ್ಯದ ಭಾರತ ತಂಡ, ಮಹಿಳೆಯರ ಹಾಕಿ ಟೂರ್ನಿಯಲ್ಲಿ ಭಾನುವಾರ ಕಂಚಿನ ಶೂಟೌಟ್ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮೂಲಕ 2-1 ಗೋಲ್ ಗಳ ಅಂತರದಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಕಂಚಿನ ಪದಕ ಪಡೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ