logo
ಕನ್ನಡ ಸುದ್ದಿ  /  ಕ್ರೀಡೆ  /  ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್​; ಬ್ಯಾಟ್ ಹಿಡಿದು ಸಿಕ್ಸರ್ ಚಚ್ಚಿದ ಜೊಕೊವಿಕ್, ವಿಡಿಯೋ

ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್​; ಬ್ಯಾಟ್ ಹಿಡಿದು ಸಿಕ್ಸರ್ ಚಚ್ಚಿದ ಜೊಕೊವಿಕ್, ವಿಡಿಯೋ

Prasanna Kumar P N HT Kannada

Jan 12, 2024 01:27 PM IST

ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್ ಜೊಕೊವಿಕ್.

    • Novak Djokovic - Steve Smith: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​​ಮನ್​ ಸ್ಟೀವ್ ಸ್ಮಿತ್ ಅವರೊಂದಿಗೆ ನೊವಾಕ್ ಜೊಕೊವಿಕ್ ಅವರು ಟೆನಿಸ್ ಮತ್ತು ಕ್ರಿಕೆಟ್ ಆಡಿ ಗಮನ ಸೆಳೆದರು.
ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್ ಜೊಕೊವಿಕ್.
ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್ ಜೊಕೊವಿಕ್.

ಟೆನಿಸ್ ಲೋಕದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ (Novak Djokovic), ಟೆನಿಸ್ ಅಂಗಳದಲ್ಲೇ ಆಸ್ಟ್ರೇಲಿಯಾದ ಸ್ಟಾರ್​ ಕ್ರಿಕೆಟಿಗ ಸ್ಟೀವ್ ಸ್ಮಿತ್ (Steve Smith) ಜೊತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಸ್ಮಿತ್ ರಾಕೆಟ್​ ಹಿಡಿದು ತೋರಿದ ಪ್ರದರ್ಶನಕ್ಕೆ ಸರ್ಬಿಯಾದ ಲೆಜೆಂಡ್ ಸ್ಟನ್ ಆಗಿದ್ದು, ಶಿರಬಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಟೆನಿಸ್ ಅಂಗಳದಲ್ಲೇ ಬ್ಯಾಟ್ ಹಿಡಿದ ಜೊಕೊವಿಕ್ ತಮ್ಮ ಕ್ರೀಡಾ ಪರಾಕ್ರಮದ ವಿಭಿನ್ನ ಮುಖವನ್ನು ಪ್ರದರ್ಶಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

'ಎ ನೈಟ್ ವಿತ್ ನೊವಾಕ್ ಅಂಡ್ ಫ್ರೆಂಡ್ಸ್' ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಜೊಕೊವಿಕ್ ಅವರು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಜೊತೆಗೆ ಟೆನಿಸ್ ಆಡುವ ಗಮನ ಸೆಳೆದರು. ರಾಕೆಟ್ ಹಿಡಿದು ಟೆನಿಸ್ ಲೋಕವನ್ನೇ ಆಳುತ್ತಿರುವ ನೊವಾಕ್, ತಾನು ಕ್ರಿಕೆಟ್​ ಬ್ಯಾಟ್ ಹಿಡಿದು ಸಿಕ್ಸರ್​ ಬಾರಿಸಿದರು. ಇಬ್ಬರು ಸಹ ಮೆಲ್ಬೋರ್ನ್​ನ ಅಪ್ರತಿಮ ಸೆಂಟರ್ ಕೋರ್ಟ್​​​ನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.

ಸ್ಮಿತ್​ಗೆ ಶಿರಬಾಗಿದ ನೊವಾಕ್​

ಮೊದಲು ಸ್ಮಿತ್ ಮತ್ತು ನೊವಾಕ್ ಟೆನಿಸ್ ಆಡಿದರು. ಆದರೆ, ಸ್ಮಿತ್​ ನಿಧಾನಗತಿಯಲ್ಲಿ ಸರ್ವ್​ ಮಾಡಿದ ಪರಿಗೆ ಟೆನಿಸ್ ಮಾಂತ್ರಿಕ ಒಂದು ಕ್ಷಣ ದಂಗಾಗಿ ಹೋದರು. ತುಂಬಾ ಆಶ್ಚರ್ಯ ವ್ಯಕ್ತಪಡಿಸಿದ ನೊವಾಕ್, ರಾಕೆಟ್​ ಕೈಬಿಟ್ಟು ಶಿರಬಾಗಿ ನಮಸ್ಕರಿಸಿದರು. ಸ್ಮಿತ್ ಆಟಕ್ಕೆ ಫಿದಾ ಆದ ಸರ್ಬಿಯಾದ ಸ್ಟಾರ್, ಅಭಿನಂದಿಸಿದರು. ಏಕೆಂದರೆ ಜೊಕೊವಿಕ್ ಸ್ಮಿತ್​ಗೆ ಬಿರುಸಾಗಿ ಸರ್ವ್ ಮಾಡಿದರು. ಸ್ಮಿತ್ ಕೌಶಲ್ಯದಿಂದ ಅಡೆತಡೆಯಿಲ್ಲದೆ ಸರ್ವ್ ಮಾಡಿದರು. ಪ್ರಭಾವಶಾಲಿ ಸಾಧನೆಯನ್ನು ಒಪ್ಪಿಕೊಂಡ ಸರ್ಬಿಯಾದ ಆಟಗಾರ, ಸ್ಮಿತ್ ಗೆ ನಮಸ್ಕರಿಸಿದರು. ಪ್ರೇಕ್ಷಕರು ಚಪ್ಪಾಳೆ ಸಿಡಿಸಿ ಅಭಿನಂದಿಸಿದರು.

ಕ್ರಿಕೆಟ್​ ಆಡಿದ ಜೊಕೊವಿಕ್

ಜೊಕೊವಿಕ್ ಹಂಚಿಕೊಂಡ ಮತ್ತು ವಿಡಿಯೋದಲ್ಲಿ ಸೆಂಟರ್-ಕೋರ್ಟ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ನೋಡಬಹುದು. ಮೊದಲ ಎಸೆತವನ್ನು ಬಾರಿಸುವಲ್ಲಿ ವಿಫಲರಾದ ಜೊಕೊವಿಕ್, ಬ್ಯಾಟ್​ನಿಂದ ಬಿಸಾಡಿ ಟೆನಿಸ್ ರಾಕೆಟ್​​ನಿಂದ ಸಿಕ್ಸರ್​ ಬಾರಿಸಿದರು. ಚೆಂಡನ್ನು ಪ್ರೇಕ್ಷಕರ ಗ್ಯಾಲರಿಗೆ ಬಾರಿಸಿದರು. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಜೊಕೊವಿಕ್ ಆಸ್ಟ್ರೇಲಿಯನ್ ಓಪನ್​​ನಲ್ಲಿ ಗೆದ್ದು ದಾಖಲೆಯ 25ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಸಜ್ಜಾಗಿದ್ದಾರೆ. ಕಳೆದ ವರ್ಷ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಮೂರನ್ನು (ವಿಂಬಲ್ಡನ್ ಹೊರತುಪಡಿಸಿ) ಗೆದ್ದಿರುವ ಟೆನಿಸ್ ಸೂಪರ್ ಸ್ಟಾರ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಸೆಣಸಾಟ ನಡೆಸಲು ಸಜ್ಜಾಗಿದ್ದಾರೆ. ಜೊಕೊವಿಕ್, ಈ ವರ್ಷದ ಕೊನೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಆರಂಭಿಕನಾಗಿ ಸ್ಮಿತ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್​​​ನಲ್ಲಿ ಆರಂಭಿಕನಾಗಿ ಅಧಿಕಾರ ವಹಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಜನವರಿಯಲ್ಲಿ ಪಾಕಿಸ್ತಾನ ವಿರುದ್ಧದ 3 ಟೆಸ್ಟ್ ಸರಣಿಯ ನಂತರ ಸ್ವರೂಪದಿಂದ ನಿವೃತ್ತರಾದ ಡೇವಿಡ್ ವಾರ್ನರ್ ಅವರ ಸ್ಥಾನಕ್ಕೆ ಸ್ಮಿತ್ ನೇಮಕಗೊಂಡಿದ್ದಾರೆ. ಹಿರಿಯ ಆಯ್ಕೆದಾರರು ನಿರ್ಧರಿಸಿದಂತೆ ಪ್ಯಾಟ್ ಕಮಿನ್ಸ್ ಅವರಿಗೆ ಸೂಕ್ತ ವಿಶ್ರಾಂತಿ ನೀಡಲಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸ್ಮಿತ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ