logo
ಕನ್ನಡ ಸುದ್ದಿ  /  ಕ್ರೀಡೆ  /  ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಯ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಯ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Jayaraj HT Kannada

Oct 08, 2023 02:03 PM IST

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ

    • Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದೇಶವು 28 ಚಿನ್ನ ಸೇರಿದಂತೆ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ (PTI/AP)

ಏಷ್ಯನ್ ಗೇಮ್ಸ್‌ನ (Asian Games) 19ನೇ ಆವೃತ್ತಿಯಲ್ಲಿ ಭಾರತವು ಐತಿಹಾಸಿಕ ಸಾಧನೆ ಮಾಡಿದೆ. ಅಭೂತಪೂರ್ವ 107 ಪದಕಗಳನ್ನು ಗೆದ್ದು ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ತಲುಪಿದೆ. ಅಕ್ಟೋಬರ್ 7ರಂದು ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನ ಗೆಲ್ಲುವುದರೊಂದಿಗೆ ಭಾರತವು ಪದಕ ಗಳಿಕೆಯಲ್ಲಿ ಶತಕದ ಸಾಧನೆ ಮಾಡಿತು.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ತಂಡವು ಈವೆಂಟ್‌ನಲ್ಲಿ ಒಟ್ಟು 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳನ್ನು ಗಳಿಸುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿತು. ಸದ್ಯ 2023ರ ಏಷ್ಯನ್‌ ಗೇಮ್ಸ್‌ ಪದಕ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನ ಪಡೆದಿದೆ. ಚೀನಾ, ಜಪಾನ್ ಮತ್ತು ಕೊರಿಯಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ. ಕ್ರೀಡಾಕೂಟದಲ್ಲಿ ಭಾರತ ಗೆದ್ದ ಒಟ್ಟು ಪದಕಗಳು ಹೀಗಿವೆ.

ಭಾರತದ ಪದಕ ವಿಜೇತರ ಸಂಪೂರ್ಣ ಪಟ್ಟಿ (Full list of India's medalists at Asian Games 2023)

ಬಿಲ್ಲುಗಾರಿಕೆ (Archery)

  • ಸಂಯುಕ್ತ ಪುರುಷರ ವೈಯಕ್ತಿಕ: ಚಿನ್ನ - ಓಜಸ್ ಡಿಯೋಟಾಲೆ, ಬೆಳ್ಳಿ - ಅಭಿಷೇಕ್ ವರ್ಮಾ
  • ಸಂಯುಕ್ತ ಮಹಿಳಾ ವೈಯಕ್ತಿಕ: ಚಿನ್ನ - ಜ್ಯೋತಿ ಸುರೇಖಾ ವೆನ್ನಂ, ಕಂಚು - ಅದಿತಿ ಸ್ವಾಮಿ
  • ಸಂಯುಕ್ತ ಪುರುಷರ ತಂಡ: ಚಿನ್ನ
  • ಸಂಯುಕ್ತ ಮಹಿಳಾ ತಂಡ: ಚಿನ್ನ
  • ಸಂಯುಕ್ತ ಮಿಶ್ರ ತಂಡ: ಚಿನ್ನ
  • ರಿಕರ್ವ್ ಪುರುಷರ ತಂಡ: ಬೆಳ್ಳಿ
  • ರಿಕರ್ವ್ ಮಹಿಳಾ ತಂಡ: ಕಂಚು

ಅಥ್ಲೆಟಿಕ್ಸ್

  • ಪುರುಷರ 3000ಮೀ ಸ್ಟೀಪಲ್‌ಚೇಸ್: ಚಿನ್ನ - ಅವಿನಾಶ್ ಸೇಬಲ್
  • ಪುರುಷರ 4 x 400 ಮೀಟರ್ ರಿಲೇ: ಚಿನ್ನ
  • ಪುರುಷರ ಜಾವೆಲಿನ್ ಥ್ರೋ: ಚಿನ್ನ- ನೀರಜ್ ಚೋಪ್ರಾ
  • ಪುರುಷರ ಶಾಟ್‌ಪುಟ್: ಚಿನ್ನ-ತಜಿಂದರ್‌ಪಾಲ್ ಸಿಂಗ್ ತೂರ್
  • ಮಹಿಳೆಯರ 5000 ಮೀಟರ್‌ ಓಟ: ಚಿನ್ನ- ಪಾರುಲ್ ಚೌಧರಿ
  • ಮಹಿಳೆಯರ ಜಾವೆಲಿನ್ ಥ್ರೋ: ಚಿನ್ನ-ಅನ್ನು ರಾಣಿ
  • ಪುರುಷರ 10000 ಮೀಟರ್‌ ಓಟ: ಬೆಳ್ಳಿ- ಕಾರ್ತಿಕ್ ಕುಮಾರ್
  • ಪುರುಷರ 1500 ಮೀಟರ್‌ ಓಟ: ಬೆಳ್ಳಿ- ಅಜಯ್ ಕುಮಾರ್
  • ಪುರುಷರ 5000 ಮೀಟರ್‌ ಓಟ: ಬೆಳ್ಳಿ- ಅವಿನಾಶ್ ಸೇಬಲ್
  • ಪುರುಷರ 800 ಮೀಟರ್‌ ಓಟ: ಬೆಳ್ಳಿ- ಮೊಹಮ್ಮದ್ ಅಫ್ಸಲ್
  • ಪುರುಷರ ಡೆಕಾಥ್ಲಾನ್: ಬೆಳ್ಳಿ- ತೇಜಸ್ವಿನ್ ಶಂಕರ್
  • ಪುರುಷರ ಜಾವೆಲಿನ್ ಥ್ರೋ: ಬೆಳ್ಳಿ - ಕಿಶೋರ್ ಜೆನಾ
  • ಪುರುಷರ ಲಾಂಗ್ ಜಂಪ್: ಬೆಳ್ಳಿ- ಶ್ರೀಶಂಕರ್
  • ಮಹಿಳೆಯರ 100 ಮೀಟರ್‌ ಹರ್ಡಲ್ಸ್: ಬೆಳ್ಳಿ- ಜ್ಯೋತಿ ಯರ್ರಾಜಿ
  • ಮಹಿಳೆಯರ 1500 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್
  • ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಬೆಳ್ಳಿ-ಪಾರುಲ್ ಚೌಧರಿ
  • ಮಹಿಳೆಯರ 4x400ಮೀ ರಿಲೇ: ಬೆಳ್ಳಿ
  • ಮಹಿಳೆಯರ 800 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್
  • ಮಹಿಳೆಯರ ಲಾಂಗ್ ಜಂಪ್: ಬೆಳ್ಳಿ - ಆನ್ಸಿ ಸೋಜನ್
  • 4x400ಮೀ ಮಿಶ್ರ ರಿಲೇ: ಬೆಳ್ಳಿ
  • ಪುರುಷರ 10000 ಮೀಟರ್: ಕಂಚು - ಗುಲ್ವೀರ್ ಸಿಂಗ್
  • ಪುರುಷರ 1500 ಮೀಟರ್: ಕಂಚು - ಜಿನ್ಸನ್ ಜಾನ್ಸನ್
  • ಪುರುಷರ ಟ್ರಿಪಲ್ ಜಂಪ್: ಕಂಚು - ಪ್ರವೀಣ್ ಚಿತ್ರವೇಲ್
  • ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಕಂಚು-ಪ್ರೀತಿ ಲಂಬಾ
  • ಮಹಿಳೆಯರ 400 ಮೀಟರ್ ಹರ್ಡಲ್ಸ್: ಕಂಚು - ವಿತ್ಯಾ ರಾಮರಾಜ್
  • ಮಹಿಳೆಯರ ಡಿಸ್ಕಸ್ ಥ್ರೋ: ಕಂಚು - ಸೀಮಾ ಪುನಿಯಾ
  • ಮಹಿಳೆಯರ ಹೆಪ್ಟಾಥ್ಲಾನ್: ಕಂಚು- ನಂದಿನಿ ಅಗಸರ
  • ಮಹಿಳೆಯರ ಶಾಟ್ ಪುಟ್: ಕಂಚು- ಕಿರಣ್ ಬಲಿಯಾನ್
  • 35 ಕಿಮೀ ಓಟದ ನಡಿಗೆ ಮಿಶ್ರ ತಂಡ: ಕಂಚು

ಬ್ಯಾಡ್ಮಿಂಟನ್

  • ಪುರುಷರ ಡಬಲ್ಸ್: ಚಿನ್ನ- ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
  • ಪುರುಷರ ತಂಡ: ಬೆಳ್ಳಿ
  • ಪುರುಷರ ಸಿಂಗಲ್ಸ್: ಕಂಚು - ಪ್ರಣಯ್

ಬಾಕ್ಸಿಂಗ್ (Boxing)

  • ಮಹಿಳೆಯರ 75 ಕೆಜಿ: ಕಂಚು - ಲೊವ್ಲಿನಾ
  • ಪುರುಷರ +92 ಕೆಜಿ: ಕಂಚು - ನರೇಂದರ್
  • ಮಹಿಳೆಯರ 45-50 ಕೆಜಿ: ಕಂಚು - ನಿಖತ್ ಜರೀನ್
  • ಮಹಿಳೆಯರ 50-54 ಕೆಜಿ: ಕಂಚು- ಪ್ರೀತಿ
  • ಮಹಿಳೆಯರ 54-57 ಕೆಜಿ: ಕಂಚು-ಪರ್ವೀನ್

ಬ್ರಿಡ್ಜ್‌ (Bridge)

  • ಪುರುಷರ ತಂಡ: ಬೆಳ್ಳಿ
  • ಕ್ಯಾನೋ ಸ್ಪ್ರಿಂಟ್ (Canoe Sprint)
  • ಪುರುಷರ ಕ್ಯಾನೋ ಡಬಲ್ 1000 ಮೀಟರ್: ಕಂಚು

ಚೆಸ್

  • ಪುರುಷರ ತಂಡ: ಬೆಳ್ಳಿ
  • ಮಹಿಳಾ ತಂಡ: ಬೆಳ್ಳಿ

ಕ್ರಿಕೆಟ್

  • ಪುರುಷರ ತಂಡ: ಚಿನ್ನ
  • ಮಹಿಳಾ ತಂಡ: ಚಿನ್ನ

ಕುದುರೆ ಸವಾರಿ (Equestrian)

  • ಡ್ರೆಸ್ಸೇಜ್ ತಂಡ: ಚಿನ್ನ
  • ಡ್ರೆಸ್ಸೇಜ್: ಕಂಚು - ಅನುಷ್ ಅಗರ್ವಾಲಾ

ಗಾಲ್ಫ್ (Golf)

  • ಮಹಿಳೆಯರ ವೈಯಕ್ತಿಕ: ಬೆಳ್ಳಿ- ಅದಿತಿ ಅಶೋಕ್

ಹಾಕಿ

  • ಪುರುಷರ ತಂಡ: ಚಿನ್ನ
  • ಮಹಿಳಾ ತಂಡ: ಕಂಚು

ಕಬಡ್ಡಿ

  • ಪುರುಷರ ತಂಡ: ಚಿನ್ನ
  • ಮಹಿಳಾ ತಂಡ: ಚಿನ್ನ

ರೋಲರ್ ಸ್ಕೇಟಿಂಗ್ (Roller Skating)

  • ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3000‌ ಮೀಟರ್ ರಿಲೇ ಓಟ: ಕಂಚು
  • ಪುರುಷರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇ ಓಟ: ಕಂಚು

ರೋಯಿಂಗ್‌ (Rowing)

  • ಲೈಟ್‌ವೈಟ್‌ ಪುರುಷರ ಡಬಲ್ ಸ್ಕಲ್ಸ್: ಬೆಳ್ಳಿ
  • ಪುರುಷರ ಎಂಟರ ತಂಡ: ಬೆಳ್ಳಿ
  • ಪುರುಷರ ನಾಲ್ಕರ ತಂಡ: ಕಂಚು
  • ಪುರುಷರ ಜೋಡಿ: ಕಂಚು
  • ಪುರುಷರ ಕ್ವಾಡ್ರುಪಲ್ ಸ್ಕಲ್ಸ್: ಕಂಚು

ಸೈಲಿಂಗ್ (Sailing)

  • ಬಾಲಕಿಯರ ಡಿಂಗಿ ILCA 4: ಬೆಳ್ಳಿ - ನೇಹಾ ಠಾಕೂರ್
  • ಪುರುಷರ ಡಿಂಗಿ ILCA 7: ಕಂಚು - ವಿಷ್ಣು ಸರವಣನ್
  • ಪುರುಷರ ವಿಂಡ್‌ಸರ್ಫರ್ ಆರ್‌ಎಸ್ -ಎಕ್ಸ್: ಕಂಚು - ಇಯಾಬಾದ್ ಅಲಿ

ಸೆಪಕ್ಟಕ್ರಾ (Sepaktakraw)

  • ಮಹಿಳೆಯರ ರೆಗು: ಕಂಚು

ಶೂಟಿಂಗ್

  • 10 ಮೀ ಏರ್ ಪಿಸ್ತೂಲ್ ತಂಡ ಪುರುಷರು: ಚಿನ್ನ
  • 10 ಮೀ ಏರ್ ರೈಫಲ್ ತಂಡ ಪುರುಷರು: ಚಿನ್ನ
  • 50 ಮೀ ರೈಫಲ್ 3 ಸ್ಥಾನಗಳ ತಂಡ ಪುರುಷರು: ಚಿನ್ನ
  • ಟ್ರ್ಯಾಪ್ ಟೀಮ್ ಮೆನ್: ಚಿನ್ನ
  • 10 ಮೀ ಏರ್ ಪಿಸ್ತೂಲ್ ಮಹಿಳೆಯರು: ಚಿನ್ನ - ಪಾಲಕ್
  • 25 ಮೀ ಪಿಸ್ತೂಲ್ ತಂಡ ಮಹಿಳೆಯರು: ಚಿನ್ನ
  • 50 ಮೀ ರೈಫಲ್ 3 ಸ್ಥಾನಗಳು ಮಹಿಳೆಯರು: ಚಿನ್ನ - ಸಿಫ್ಟ್ ಕೌರ್ ಸಮ್ರಾ
  • 50 ಮೀ ರೈಫಲ್ 3 ಸ್ಥಾನಗಳು ಪುರುಷರು: ಬೆಳ್ಳಿ - ಐಶ್ವರಿ ಪ್ರತಾಪ್ ಸಿಂಗ್ ತೋಮರ್
  • ಸ್ಕೀಟ್ ಮೆನ್: ಬೆಳ್ಳಿ - ಅನಂತ್ ಜೀತ್ ಸಿಂಗ್
  • 10 ಮೀ ಏರ್ ಪಿಸ್ತೂಲ್ ತಂಡ ಮಹಿಳೆಯರು: ಬೆಳ್ಳಿ
  • 10 ಮೀ ಏರ್ ಪಿಸ್ತೂಲ್ ಮಹಿಳೆಯರು: ಬೆಳ್ಳಿ - ಇಶಾ ಸಿಂಗ್
  • 10 ಮೀ ಏರ್ ರೈಫಲ್ ತಂಡ ಮಹಿಳೆಯರು: ಬೆಳ್ಳಿ
  • 25 ಮೀ ಪಿಸ್ತೂಲ್ ಮಹಿಳೆಯರು: ಬೆಳ್ಳಿ - ಇಶಾ ಸಿಂಗ್
  • 50 ಮೀ ರೈಫಲ್ 3 ಸ್ಥಾನಗಳ ತಂಡ ಮಹಿಳೆಯರು: ಬೆಳ್ಳಿ
  • ಟ್ರ್ಯಾಪ್ ಟೀಮ್ ಮಹಿಳೆಯರು: ಬೆಳ್ಳಿ
  • 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ: ಬೆಳ್ಳಿ
  • 10 ಮೀ ಏರ್ ರೈಫಲ್ ಪುರುಷರು: ಕಂಚು - ಐಶ್ವರಿ ಪ್ರತಾಪ್ ಸಿಂಗ್ ತೋಮರ್
  • 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ತಂಡ ಪುರುಷರು: ಕಂಚು
  • ಸ್ಕೀಟ್ ಪುರುಷರ ತಂಡ: ಕಂಚು
  • ಟ್ರ್ಯಾಪ್ ಮೆನ್: ಕಂಚು - ಚೆನೈ ಕೆಡಿ
  • 10 ಮೀ ಏರ್ ರೈಫಲ್ ಮಹಿಳೆಯರು: ಕಂಚು - ರಮಿತಾ
  • 50 ಮೀ ರೈಫಲ್ 3 ಸ್ಥಾನಗಳು: ಕಂಚು - ಆಶಿ ಚೌಸ್ಕಿ

ಸ್ಕ್ವ್ಯಾಷ್

  • ಪುರುಷರ ತಂಡ: ಚಿನ್ನ
  • ಮಿಶ್ರ ಡಬಲ್ಸ್: ಚಿನ್ನ
  • ಪುರುಷರ ಸಿಂಗಲ್ಸ್: ಬೆಳ್ಳಿ - ಸೌರವ್ ಘೋಸಲ್
  • ಮಹಿಳಾ ತಂಡ: ಕಂಚು
  • ಮಿಶ್ರ ಡಬಲ್ಸ್: ಕಂಚು

ಟೇಬಲ್ ಟೆನ್ನಿಸ್

  • ಮಹಿಳೆಯರ ಡಬಲ್ಸ್: ಕಂಚು

ಟೆನಿಸ್

  • ಮಿಶ್ರ ಡಬಲ್ಸ್: ಚಿನ್ನ
  • ಪುರುಷರ ಡಬಲ್ಸ್: ಬೆಳ್ಳಿ

ಕುಸ್ತಿ

  • ಪುರುಷರ ಫ್ರೀಸ್ಟೈಲ್ 86 ಕೆಜಿ: ಬೆಳ್ಳಿ- ದೀಪಕ್ ಪುನಿಯಾ
  • ಪುರುಷರ ಫ್ರೀಸ್ಟೈಲ್ 57 ಕೆಜಿ: ಕಂಚು - ಅಮನ್
  • ಪುರುಷರ ಗ್ರೀಕೋ-ರೋಮನ್ 87 ಕೆಜಿ: ಕಂಚು - ಸುನಿಲ್ ಕುಮಾರ್
  • ಮಹಿಳೆಯರ ಫ್ರೀಸ್ಟೈಲ್ 53 ಕೆಜಿ: ಕಂಚು - ಆಂಟಿಮ್ ಪಂಗಲ್
  • ಮಹಿಳೆಯರ ಫ್ರೀಸ್ಟೈಲ್ 62 ಕೆಜಿ: ಕಂಚು - ಸೋನಂ
  • ಮಹಿಳೆಯರ ಫ್ರೀಸ್ಟೈಲ್ 76 ಕೆಜಿ: ಕಂಚು- ಕಿರಣ್

ವುಶು

  • ಮಹಿಳೆಯರ 60 ಕೆಜಿ: ಬೆಳ್ಳಿ - ರೋಶಿಬಿನಾ ದೇವಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ