logo
ಕನ್ನಡ ಸುದ್ದಿ  /  ಕ್ರೀಡೆ  /  Women's Premier League: ಚೊಚ್ಚಲ ಗೆಲುವಿಗಾಗಿ ಆರ್‌ಸಿಬಿ-ಗುಜರಾತ್‌ ಕಾದಾಟ; ಟೂರ್ನಿಯಲ್ಲಿ ಉಳಿಯಲು ಗೆಲ್ಲಲೇಬೇಕಿದೆ ಮಂಧನಾ ಪಡೆ

Women's Premier League: ಚೊಚ್ಚಲ ಗೆಲುವಿಗಾಗಿ ಆರ್‌ಸಿಬಿ-ಗುಜರಾತ್‌ ಕಾದಾಟ; ಟೂರ್ನಿಯಲ್ಲಿ ಉಳಿಯಲು ಗೆಲ್ಲಲೇಬೇಕಿದೆ ಮಂಧನಾ ಪಡೆ

HT Kannada Desk HT Kannada

Mar 08, 2023 02:57 PM IST

ಆರ್‌ಸಿಬಿ ನಾಯಕಿ ಸ್ಮೃತಿ ಮಂಧನ

    • ಆರ್‌ಸಿಬಿ ತಂಡದಲ್ಲಿ ಪವರ್‌ ಹಿಟ್ಟರ್‌ಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ ಆಲ್‌ರೌಂಡರ್‌ಗಳೂ ಇದ್ದಾರೆ. ಆದರೆ ಯಾರೊಬ್ಬರೂ ಸ್ಟ್ಯಾಂಡಿಂಗ್‌ ಪ್ರದರ್ಶನ ನೀಡುತ್ತಿಲ್ಲ. ಭರವಸೆಯ ಪ್ರದರ್ಶನ ಯಾರಿಂದಲೂ ಬರುತ್ತಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳನ್ನು ತಂಡ ಪುನರಾವರ್ತಿಸದಂತೆ ನೋಡಿಕೊಳ್ಳಬೇಕಿದೆ. ಅಲ್ಲದೆ ಬೌಲಿಂಗ್‌ನಲ್ಲಿ ತುಂಬಾ ಸುಧಾರಿಸಬೇಕಿದೆ.
ಆರ್‌ಸಿಬಿ ನಾಯಕಿ ಸ್ಮೃತಿ ಮಂಧನ
ಆರ್‌ಸಿಬಿ ನಾಯಕಿ ಸ್ಮೃತಿ ಮಂಧನ

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಇಂದಿನ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಎರಡು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಸತತ ಎರಡು ಪಂದ್ಯಗಳಲ್ಲೂ ಭಾರಿ ಅಂತರದಿಂದ ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಅದೇ ರೀತಿಯ ಫಲಿತಾಂಶ ಕಂಡಿರುವ ಗುಜರಾತ್‌ ಜೈಂಟ್ಸ್‌ ಸವಾಲೆಸೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಮಾರ್ಚ್ 8ರ ಬುಧವಾರದ ಪಂದ್ಯದಲ್ಲಿ ಸ್ನೇಹ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ಮತ್ತು ಸ್ಮೃತಿ ಮಂಧನ ನೇತೃತ್ವದ ಆರ್‌ಸಿಬಿ ನಡುವಿನ ರೋಚಕ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30 ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಮೊದಲೆರಡು ಪಂದ್ಯಗಳನ್ನು ಸೋತಿರುವ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಟೂರ್ನಿಯಲ್ಲಿ ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ತಂಡಗಳು ಸಿಲುಕಿವೆ.

ಗುಜರಾತ್‌ ತಂಡದ ನಾಯಕಿಯಾಗಿದ್ದ ಬೆತ್‌ ಮೂನಿ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಸ್ನೇಹ ರಾಣಾಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ತಮ್ಮ ಸಾಮರ್ಥ್ಯವನ್ನು ಗೆಲುವಿನೊಂದಿಗೆ ಪ್ರದರ್ಶಿಸಲು ರಾಣಾ ಎದುರು ನೋಡತ್ತಿದ್ದಾರೆ. ಅತ್ತ ಬಲಿಷ್ಠ ಆಟಗಾರ್ತಿ ಸ್ಮೃತಿ ಮಂಧನ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. ಬಲಿಷ್ಠ ತಂಡದಲ್ಲಿ ಉತ್ತಮ ಗುಣಮಟ್ಟದ ಕ್ರಿಕೆಟಿಗರಿದ್ದರೂ ತಂಡ ಸತತ ಎರಡು ಸೋಲು ಕಂಡಿದೆ. ಹೀಗಾಗಿ ಮತ್ತೆ ಗೆಲುವಿನ ಹಳಿಗೆ ಮರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಮಂಧನ ತಂತ್ರ ರೂಪಿಸಿದ್ದಾರೆ.

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋತ ಬಳಿಕ ತಂಡ ಮತ್ತಷ್ಟು ಭರವಸೆಯೊಂದಿಗೆ ಕಣಕ್ಕೆ ಇಳಿಯಬೇಕಿದೆ. ತಂಡವು ಉತ್ತಮ ಆರಂಭ ಪಡೆದರೂ, ಅದನ್ನು ಉತ್ತಮಪಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ತಂಡದಲ್ಲಿ ಪವರ್‌ ಹಿಟ್ಟರ್‌ಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ ಆಲ್‌ರೌಂಡರ್‌ಗಳೂ ಇದ್ದಾರೆ. ಆದರೆ ಯಾರೊಬ್ಬರೂ ಸ್ಟ್ಯಾಂಡಿಂಗ್‌ ಪ್ರದರ್ಶನ ನೀಡುತ್ತಿಲ್ಲ. ಭರವಸೆಯ ಪ್ರದರ್ಶನ ಯಾರಿಂದಲೂ ಬರುತ್ತಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳನ್ನು ತಂಡ ಪುನರಾವರ್ತಿಸದಂತೆ ನೋಡಿಕೊಳ್ಳಬೇಕಿದೆ. ಅಲ್ಲದೆ ಬೌಲಿಂಗ್‌ನಲ್ಲಿ ತುಂಬಾ ಸುಧಾರಿಸಬೇಕಿದೆ.

ಮತ್ತೊಂದೆಡೆ WPLನ ಉದ್ಘಾಟನಾ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಹೀನಾಯ ಸೋಲು ಕಂಡಿತ್ತು.‌ ಬರೋಬ್ಬರಿ 143 ರನ್‌ಗಳಿಂದ ಸೋತಿತ್ತು. ದುರದೃಷ್ಟವೆಂಬಂತೆ ಯುಪಿ ವಾರಿಯರ್ಜ್ ವಿರುದ್ಧದ ಪಂದ್ಯದಲ್ಲೂ ಇದೇ ಮಾದರಿಯ ಫಲಿತಾಂಶ ಮರುಕಳಿಸಿತು. ರೋಚಕ ಪಂದ್ಯದಲ್ಲಿ ಮತ್ತೆ ಮೂರು ವಿಕೆಟ್‌ಗಳಿಂದ ಸೋಲೊಪ್ಪಿತು. ಇದರ ನಡಡುವೆಯೂ ಬಲಗೈ ಬೌಲರ್ ಕಿಮ್ ಗಾರ್ತ್ ತಮ್ಮ ನಾಲ್ಕು ಓವರ್‌ಗಳಲ್ಲಿ 36 ರನ್‌ಗಳನ್ನು ಬಿಟ್ಟುಕೊಟ್ಟರೂ ಆಕರ್ಷಕ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಪಿಚ್ ವರದಿ

ಡಬ್ಲ್ಯೂಪಿಎಲ್‌ 2023ಕ್ಕೆ ಆತಿಥ್ಯ ವಹಿಸುತ್ತಿರುವ ಎರಡೂ ಮೈದಾನಗಳಲ್ಲಿ ರನ್ ಗಳಿಸುವುದು ತುಲನಾತ್ಮಕವಾಗಿ ಸುಲಭವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಗೆದ್ದಿವೆ. ಚೇಸಿಂಗ್ ಮಾಡಿದ ತಂಡಗಳು ಕೂಡಾ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಕಲೆ ಹಾಕಿದ ಮೊತ್ತವನ್ನು ರಕ್ಷಿಸಿಕೊಳ್ಳಲು, ಒಟ್ಟು 180 ಕ್ಕಿಂತ ಹೆಚ್ಚು ರನ್ ಗಳಿಸಬೇಕಾಗುತ್ತದೆ. ಈ ಪರಿಸ್ಥಿತಿಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದಾರೆ.

ಹವಾಮಾನ ವರದಿ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ GG ಮತ್ತು RCB ನಡುವಿನ ಪಂದ್ಯದ ವೇಳೆ ಮಳೆಯ ಸಾಧ್ಯತೆ ಇಲ್ಲ. ಹವಾಮಾನ ಮುನ್ಸೂಚನೆಯ ಪ್ರಕಾರ, ಆಟದ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆಯ ಪ್ರಮಾಣ ಶೂನ್ಯ. ಹೀಗಾಗಿ ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಯುವ ಸಂಭವ ಹೆಚ್ಚು.

ಸಂಭಾವ್ಯ ಆಡುವ ಬಳಗ

ಗುಜರಾತ್‌ ಜೈಂಟ್ಸ್: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ (ವಿಕೆ ಟ್‌ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧನ (ನಾಯಕಿ), ಸೋಫಿ ಡಿವೈನ್, ಹೆದರ್ ನೈಟ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಪೂನಂ ಖೇಮ್ನಾರ್, ಮೇಗನ್ ಶಟ್, ರೇಣುಕಾ ಠಾಕೂರ್ ಸಿಂಗ್

    ಹಂಚಿಕೊಳ್ಳಲು ಲೇಖನಗಳು