logo
ಕನ್ನಡ ಸುದ್ದಿ  /  ಕ್ರೀಡೆ  /  Cwg2022: ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಕಂಚು ಗೆದ್ದ ಭಾರತ

CWG2022: ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಕಂಚು ಗೆದ್ದ ಭಾರತ

HT Kannada Desk HT Kannada

Aug 07, 2022 04:26 PM IST

google News

ಕಾಮನ್‌ವೆಲ್ತ್ ಗೇಮ್ಸ್ 2022ಯಲ್ಲಿ ಮಹಿಳಾ ಹಾಕಿಯಲ್ಲಿ ಕಂಚು ಗೆದ್ದ ಭಾರತ ತಂಡ (ಫೋಟೋ-ANI)

  • ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 (CWG 2022) ನ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ, ನ್ಯೂಜಿಲೆಂಡ್ ಅನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ. 

ಕಾಮನ್‌ವೆಲ್ತ್ ಗೇಮ್ಸ್ 2022ಯಲ್ಲಿ ಮಹಿಳಾ ಹಾಕಿಯಲ್ಲಿ ಕಂಚು ಗೆದ್ದ ಭಾರತ ತಂಡ (ಫೋಟೋ-ANI)
ಕಾಮನ್‌ವೆಲ್ತ್ ಗೇಮ್ಸ್ 2022ಯಲ್ಲಿ ಮಹಿಳಾ ಹಾಕಿಯಲ್ಲಿ ಕಂಚು ಗೆದ್ದ ಭಾರತ ತಂಡ (ಫೋಟೋ-ANI)

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 (CWG 2022)ಯಲ್ಲಿ ಇಂದು ಭಾರತ ಪದಕಗಳ ಸಖತ್ ಬೇಟೆಯಾಡಿದೆ. ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ, ನ್ಯೂಜಿಲೆಂಡ್ ಅನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಹಾಕಿಯ 3ನೇ ಕ್ವಾರ್ಟರ್‌ ಫೈನಲ್​ನಲ್ಲಿ ಭಾರತೀಯ ವನಿತೆಯರು ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ಪಂದ್ಯ ಮುಗಿಯಲು ಕೇವಲ 17 ಸೆಕೆಂಡ್​ಗಳಲ್ಲಿ ತಮ್ಮ ಸ್ಕೋರ್​ಅನ್ನು ಸಮಗೊಳಿಸಿಕೊಂಡಿತ್ತು. ಆದ್ದರಿಂದ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಇದಕ್ಕಿಂತ ಮುಂಚೆ ಭಾರತದ ತಂಡ 1-0 ಮುನ್ನಡೆ ಸಾಧಿಸಿತ್ತು.

ಸಲಿಮಾ ಟೆಟೆ ಬಾರಿಸಿದ ಗೋಲಿನ ನಂತರ ಭಾರತ ಗೆಲುವಿನ ಹಾದಿಯಲ್ಲಿತ್ತು. ಆದರೆ ಒಲಿವಿಯಾ ಮೆರ್ರಿ ಕ್ವಾರ್ಟರ್ 4 ರ ಅಂತಿಮ ಸೆಕೆಂಡ್‌ಗಳಲ್ಲಿ ನ್ಯೂಜಿಲೆಂಡ್‌ಗೆ ಪಂದ್ಯವನ್ನು ಶೂಟೌಟ್‌ಗೆ ಒತ್ತಾಯಿಸಿದರು. ಶೂಟೌಟ್‌ನಲ್ಲಿ, ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಪುನಿಯಾ ಕೆಲವು ಉತ್ತಮ ಉಳಿತಾಯಗಳೊಂದಿಗೆ ಭಾರತ 2-1 ಗೆಲುವು ಸಾಧಿಸಿತು.

ಈ ಹಿಂದೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಭಾರತದ ಮಹಿಳಾ ತಂಡ ಸೋಲು ಕಂಡಿತ್ತು. ಇದೀಗ ಇಂದು ಕಂಚಿಗಾಗಿ ನ್ಯೂಜಿಲೆಂಡ್​​ ವಿರುದ್ಧ ಹೋರಾಟ ನಡೆಸಿ ಪದಕಕ್ಕೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ