logo
ಕನ್ನಡ ಸುದ್ದಿ  /  ಕ್ರೀಡೆ  /   Cwg 2022:ಪುರುಷರ ಹಾಕಿಯಲ್ಲಿ ಭಾರತಕ್ಕೆ ಬೆಳ್ಳಿ ಪದಕ;ಆಸೀಸ್ ವಿರುದ್ಧ 3ನೇ ಬಾರಿ ಫೈನಲ್ ಸೋಲು

CWG 2022:ಪುರುಷರ ಹಾಕಿಯಲ್ಲಿ ಭಾರತಕ್ಕೆ ಬೆಳ್ಳಿ ಪದಕ;ಆಸೀಸ್ ವಿರುದ್ಧ 3ನೇ ಬಾರಿ ಫೈನಲ್ ಸೋಲು

HT Kannada Desk HT Kannada

Aug 08, 2022 07:57 PM IST

google News

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ಬೆಳ್ಳಿ ಗೆದ್ದಿದೆ

  • ಭಾರತದ ಪುರುಷರ ಹಾಕಿ ತಂಡ ಕಾಮನ್‌ವೆಲ್ತ್ ಗೇಮ್ಸ್‌ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 0-7 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಆಸೀಸ್ ವಿರುದ್ಧ ಭಾರತ 3ನೇ ಬಾರಿ ಫೈನಲ್ ಸೋಲು ಕಂಡಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ಬೆಳ್ಳಿ ಗೆದ್ದಿದೆ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹಾಕಿ ಫೈನಲ್ ನಲ್ಲಿ ಭಾರತ ಬೆಳ್ಳಿ ಗೆದ್ದಿದೆ

ಬರ್ಮಿಂಗ್ ಹ್ಯಾಮ್: ಭಾರತದ ಪುರುಷರ ಹಾಕಿ ತಂಡ ಕಾಮನ್‌ವೆಲ್ತ್ ಗೇಮ್ಸ್‌ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 0-7 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಆಸೀಸ್ ವಿರುದ್ಧ ಭಾರತ 3ನೇ ಬಾರಿ ಫೈನಲ್ ಸೋಲು ಕಂಡಿದೆ.

ಆರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಪಂದ್ಯದುಕ್ಕೂ ಪ್ರಾಬಲ್ಯ ಸಾಧಿಸಿತು. 7ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದುಕೊಂಡಿತು.

ಭಾರತವು ಸೆಮಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 3-2 ಅಂತರದಿಂದ ಮಣಿಸಿ ಫೈನಲ್ ಗೆ ತಲುಪಿತ್ತು. 1998ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಾಕಿಯನ್ನು ಪರಿಚಯಿಸಿದ ಬಳಿಕ ನಡೆದ ಎಲ್ಲಾ 7 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಇದೇ ವೇಳೆ ಭಾರತವು 2010, 2014 ಹಾಗೂ 2022ರಲ್ಲಿ ಮೂರು ಬಾರಿ ಫೈನಲ್ ಗೆ ಪ್ರವೇಶಿತು. ಮೂರೂ ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ.

ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಮಹಿಳಾ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

ಹಾಕಿಯ 3ನೇ ಕ್ವಾರ್ಟರ್‌ ಫೈನಲ್​ನಲ್ಲಿ ಭಾರತೀಯ ವನಿತೆಯರು ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ಪಂದ್ಯ ಮುಗಿಯಲು ಕೇವಲ 17 ಸೆಕೆಂಡ್​ಗಳಲ್ಲಿ ತಮ್ಮ ಸ್ಕೋರ್​ಅನ್ನು ಸಮಗೊಳಿಸಿತು. ಆದ್ದರಿಂದ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಇದಕ್ಕಿಂತ ಮುಂಚೆ ಭಾರತದ ತಂಡ 1-0 ಮುನ್ನಡೆ ಸಾಧಿಸಿತ್ತು.

ಈ ಹಿಂದೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಭಾರತದ ಮಹಿಳಾ ತಂಡ ಸೋಲು ಕಂಡಿತ್ತು. ಇದೀಗ ಇಂದು ಕಂಚಿಗಾಗಿ ನ್ಯೂಜಿಲೆಂಡ್​​ ವಿರುದ್ಧ ಹೋರಾಟ ನಡೆಸಿ ಪದಕಕ್ಕೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ಕಳೆದ 11 ದಿನಗಳ ಹಿಂದೆ ಆರಂಭಗೊಂಡಿದ್ದ ಕಾಮನ್​​ವೆಲ್ತ್​ ಗೇಮ್ಸ್​​​​ ಇಂದು ಅಂತ್ಯಗೊಂಡಿತು. ಭಾರತದ ಕ್ರೀಡಾಪಟುಗಳು ಅತ್ಯದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೀಡಾಕೂಟದ ಕೊನೆಯ ದಿನ ಭಾರತದ ಅಥ್ಲೀಟ್ಸ್ ನಾಲ್ಕು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಜುಲೈ 29ರಂದು ಇಂಗ್ಲೆಂಡ್​ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಶುರುವಾದ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 61 ಪದಕ ಸಂಪಾದಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ. ಪ್ರತಿಷ್ಟಿತ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್​ ಮೊದಲ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕಗಳ ಖಾತೆ ತೆರೆದಿದ್ದರು. 55 ಕೆಜಿ ವೇಟ್​ ಲಿಫ್ಟಿಂಗ್​​ನಲ್ಲಿ ಇವರು ಬೆಳ್ಳಿ ಸಾಧನೆ ಮಾಡಿದ್ದರು. ಇದಾದ ಬಳಿಕ ದೇಶದ ಅನೇಕ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರಿ, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ