logo
ಕನ್ನಡ ಸುದ್ದಿ  /  ಕ್ರೀಡೆ  /  ಶೂಟಿಂಗ್​ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್​​ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ

ಶೂಟಿಂಗ್​ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್​​ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ

Prasanna Kumar P N HT Kannada

Jul 29, 2024 05:55 AM IST

google News

ಶೂಟಿಂಗ್​ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್​​ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ

    • India July 29th Full Schedule: 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ ಸ್ಪರ್ಧಿಸಲಿರುವ ಸ್ಪರ್ಧೆಗಳು ಮತ್ತು ಅವುಗಳ ಸಮಯದ ವಿವರ ಇಲ್ಲಿದೆ ನೋಡಿ. 
ಶೂಟಿಂಗ್​ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್​​ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ
ಶೂಟಿಂಗ್​ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್​​ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜುಲೈ 28ರ ಭಾನುವಾರ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿತ್ತು. ಕೆಲವು ನಿರಾಶೆಗಳು ಹಾಗೂ ಕೆಲವು ಭರವಸೆಯ ವಿಜಯಗಳ ನಡುವೆ ಶೂಟಿಂಗ್​ನಲ್ಲಿ ಮನು ಭಾಕರ್‌ ಕಂಚು ಗೆದ್ದಿದ್ದು, 140 ಕೋಟಿ ಭಾರತೀಯರ ಖುಷಿಗೆ ಕಾರಣವಾಗಿದೆ. ತನ್ನ ಕಂಚಿನ ಪದಕದೊಂದಿಗೆ 22 ವರ್ಷದ ಮನು, ಶೂಟಿಂಗ್‌ನಲ್ಲಿ ಭಾರತದ 12 ವರ್ಷಗಳ ಒಲಿಂಪಿಕ್ ಪದಕದ ಬರ ನೀಗಿಸಿದ್ದಲ್ಲದೆ, ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇದೀಗ 3ನೇ ದಿನವೂ ಪದಕ ಬೇಟೆಗೆ ಭಾರತ ಸಜ್ಜಾಗಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಮಹಿಳೆಯರ ಫೈನಲ್ ಹಾಗೂ ಪುರುಷರ 10 ಮೀ ಏರ್ ರೈಫಲ್ ಫೈನಲ್ ಪಂದ್ಯವೂ ಇಂದು ನಡೆಯಲಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಅದಲ್ಲದೆ, ಮಹತ್ವದ ಪಂದ್ಯಗಳು ಸಹ ನಡೆಯಲಿವೆ. ಮೊದಲ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ಮಣಿಸಿರುವ ಭಾರತದ ಹಾಕಿ ತಂಡವು, ತನ್ನ 2ನೇ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.

ಒಲಿಂಪಿಕ್ಸ್​ನಲ್ಲಿ ಜುಲೈ 29ರಂದು ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ.

ಮಧ್ಯಾಹ್ನ 12 : ಬ್ಯಾಡ್ಮಿಂಟನ್ – ಪುರುಷರ ಡಬಲ್ಸ್ ಗುಂಪು ಪಂದ್ಯ (ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ - ಚಿರಾಗ್ ಶೆಟ್ಟಿ vs ಮಾರ್ಕ್ ಲ್ಯಾಮ್ಸ್‌ಫಸ್ - ಮಾರ್ವಿನ್ ಸೀಡೆಲ್)

ಮಧ್ಯಾಹ್ನ 12:45 : ಶೂಟಿಂಗ್ - ಫೈನಲ್​ಗೆ ಅರ್ಹತೆ ಪಡೆಯುವ 10 ಮೀಟರ್​ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆ (ಮನು ಭಾಕರ್ -ಸರಬ್ಜೋತ್ ಸಿಂಗ್; ರಿದಮ್ ಸಾಂಗ್ವಾನ್ - ಅರ್ಜುನ್ ಸಿಂಗ್ ಚೀಮಾ)

ಮಧ್ಯಾಹ್ನ 12:50 : ಬ್ಯಾಡ್ಮಿಂಟನ್ – ಮಹಿಳೆಯರ ಡಬಲ್ಸ್ ಗುಂಪು ಪಂದ್ಯ (ಅಶ್ವಿನಿ ಪೊನ್ನಪ್ಪ - ತನಿಶಾ ಕ್ರಾಸ್ಟೊ vs ನಮಿ ಮತ್ಸುಯಾಮಾ - ಚಿಹಾರು ಶಿದಾ)

ಮಧ್ಯಾಹ್ನ 1 : ಶೂಟಿಂಗ್ – ಪುರುಷರ ಟ್ರ್ಯಾಪ್ ಅರ್ಹತೆ, ಡೇ-1 (ಪೃಥ್ವಿರಾಜ್ ತೊಂಡೈಮಾನ್)

ಮಧ್ಯಾಹ್ನ 1 : ಶೂಟಿಂಗ್ - 10 ಮೀಟರ್​ ಏರ್ ರೈಫಲ್ ಮಹಿಳೆಯರ ಫೈನಲ್ (ರಮಿತಾ ಜಿಂದಾಲ್)

ಮಧ್ಯಾಹ್ನ 3:30 : ಶೂಟಿಂಗ್ – ಪುರುಷರ 10 ಮೀಟರ್​ ಏರ್ ರೈಫಲ್ ಫೈನಲ್ (ಅರ್ಜುನ್ ಬಬುಟಾ)

ಸಂಜೆ 4:15 : ಹಾಕಿ – ಪುರುಷರ ಪೂಲ್ ಬಿ ಪಂದ್ಯ (ಭಾರತ vs ಅರ್ಜೆಂಟೀನಾ)

ಸಂಜೆ 5:30 : ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗುಂಪು ಪಂದ್ಯ (ಲಕ್ಷ್ಯ ಸೇನ್ vs ಜೂಲಿಯನ್ ಕರಾಗ್ಗಿ)

ಸಂಜೆ 6:31 : ಆರ್ಚರಿ – ಪುರುಷರ ರಿಕರ್ವ್ ತಂಡ ಕ್ವಾರ್ಟರ್ ಫೈನಲ್ (ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್, ತರುಣದೀಪ್ ರೈ)

ಸಂಜೆ 7:40 : ಆರ್ಚರಿ – ಪುರುಷರ ರಿಕರ್ವ್ ತಂಡ ಸೆಮಿಫೈನಲ್ (ಅರ್ಹತೆಗೆ ಒಳಪಟ್ಟಿರುತ್ತದೆ)

ರಾತ್ರಿ 8:18 : ಆರ್ಚರಿ – ಪುರುಷರ ರಿಕರ್ವ್ ತಂಡ ಕಂಚಿನ ಪದಕದ ಪಂದ್ಯ (ಅರ್ಹತೆಗೆ ಒಳಪಟ್ಟಿರುತ್ತದೆ)

ರಾತ್ರಿ 8:41 : ಆರ್ಚರಿ – ಪುರುಷರ ರಿಕರ್ವ್ ತಂಡ ಫೈನಲ್ (ಅರ್ಹತೆಗೆ ಒಳಪಟ್ಟಿರುತ್ತದೆ)

ರಾತ್ರಿ 11:30 : ಟೇಬಲ್ ಟೆನಿಸ್ – ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 32 (ಶ್ರೀಜಾ ಅಕುಲಾ vs ಝೆಂಗ್ ಜಿಯಾನ್)

ಒಲಿಂಪಿಕ್ಸ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ