logo
ಕನ್ನಡ ಸುದ್ದಿ  /  ಕ್ರೀಡೆ  /  ಹೆಚ್ಚಾಯ್ತು ಕೊರೊನಾ-Ipl​​ಗೆ ಮತ್ತೆ ವಕ್ಕರಿಸಿದ ಮಹಾಮಾರಿ; ಪ್ರೇಕ್ಷಕರಿಗಿಲ್ವಾ ಅವಕಾಶ?

ಹೆಚ್ಚಾಯ್ತು ಕೊರೊನಾ-IPL​​ಗೆ ಮತ್ತೆ ವಕ್ಕರಿಸಿದ ಮಹಾಮಾರಿ; ಪ್ರೇಕ್ಷಕರಿಗಿಲ್ವಾ ಅವಕಾಶ?

HT Kannada Desk HT Kannada

Mar 19, 2023 03:10 PM IST

google News

ಐಪಿಎಲ್​ ಟ್ರೋಫಿ

    • ಈ ಬಾರಿಯ ಐಪಿಎಲ್​ಗೆ ಕೊರೊನಾ ಪ್ರೋಟೋಕಾಲ್​​ಗಳಿಗೆ ನಿರ್ಬಂಧ ಹೇರದಿರಲು ಬಿಸಿಸಿಐ ನಿರ್ಧರಿಸಿದೆ. ಕೋವಿಡ್​ ಸುರಕ್ಷತಾ ನಿಯಮಗಳು ಅಳವಡಿಸಲು ಡಿಸೈಡ್​ ಆಗಿದೆ.
ಐಪಿಎಲ್​ ಟ್ರೋಫಿ
ಐಪಿಎಲ್​ ಟ್ರೋಫಿ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​​ ಲೀಗ್​​ (Indian Premier League) ಆರಂಭಕ್ಕೂ ಮುನ್ನವೇ ಕೊರೊನಾ (Corona Virus) ಕರಿನೆರಳು ಬಿದ್ದಿದೆ.​ ಮಾರ್ಚ್​ 31 ರಿಂದ ಟೂರ್ನಿ ಅದ್ಧೂರಿ ಆರಂಭ ಪಡೆಯಲಿದೆ. ಸದ್ಯ ಭಾರತದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಸ್ಪೋಟಗೊಂಡಿದ್ದು, ಆತಂಕವನ್ನೂ ಹೆಚ್ಚಿಸಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳದ ಜೊತೆಗೆ ನೂತನ ವೈರಸ್​​​​​ H3N2 ವೈರಸ್​​ನ ಅವಾಂತರವೂ ಜೋರಾಗಿದೆ.

ಹಾಗಾಗಿ ಐಪಿಎಲ್​​ಗೆ ಸಂಬಂಧಿಸಿದಂತೆ ಬಿಸಿಸಿಐ (BCCI) ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಜಾಗತಿಕವಾಗಿ ಕ್ರೀಡಾ ಟೂರ್ನಿಗಳಲ್ಲಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಸಡಿಲಗೊಳಿಸಲಾಗಿದೆ. ಕ್ರೀಡಾಪಟುಗಳು ಸಹ ಕೊರೊನಾ ಆತಂಕವಿಲ್ಲದೆ, ಮೈದಾನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಆದರೂ ಮಹಾಮಾರಿ ಇಲ್ಲವೆಂದು ಯಾವುದೇ ತೊಂದರೆ ತೆಗೆದುಕೊಳ್ಳಲು ಮುಂದಾಗಿಲ್ಲ.

ಈ ಬಾರಿಯ ಐಪಿಎಲ್​ಗೆ ಕೊರೊನಾ ಪ್ರೋಟೋಕಾಲ್​​ಗಳಿಗೆ ನಿರ್ಬಂಧ ಹೇರದಿರಲು ಬಿಸಿಸಿಐ ನಿರ್ಧರಿಸಿದೆ. ಕೋವಿಡ್​ ಸುರಕ್ಷತಾ ನಿಯಮಗಳು ಅಳವಡಿಸಲು ಡಿಸೈಡ್​ ಆಗಿದೆ. ಬಿಗ್​ ಬ್ಯಾಷ್​ ಲೀಗ್​ ಸೇರಿದಂತೆ ಕೆಲ T20 ಲೀಗ್​​​ಗಳಲ್ಲಿ ಸೋಂಕು ತಗುಲಿದ್ದರೂ, ಆಡುವ ಅವಕಾಶ ನೀಡಲಾಗಿದೆ. ಆದರೆ, ಐಪಿಎಲ್​​​​​​ಗೆ ಕಟ್ಟುನಿಟ್ಟಾಗಿ ನಿಮಯಗಳನ್ನು ಅನುಕರಣೆ ಮಾಡುವಂತೆ ಸೂಚಿಸಲಾಗಿದೆ.

ಆಟಗಾರನಿಗೆ ಮಹಾಮಾರಿಯ ಸೋಂಕು ವಕ್ಕರಿಸಿದರೆ, ಆ ಆಟಗಾರ ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ತಂಡಕ್ಕೆ​​ ಸೇರ್ಪಡೆಗೊಳ್ಳುವ ಮೊದಲು ಕನಿಷ್ಠ 7 ದಿನಗಳ ಕಾಲ ಕ್ವಾರಂಟೈನ್​​ನಲ್ಲಿ ಇರಬೇಕಾಗುತ್ತದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ದಿಢೀರ್​ ಏರಿಕೆ ಕಾಣುತ್ತಿರುವುದು ಆತಂಕ ಹೆಚ್ಚಿಸಿದ ಕಾರಣ, ಐಪಿಎಲ್​ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಇದರಿಂದ ಆಟಗಾರರಿಗೂ ಟೆನ್ಶನ್​ ಶುರುವಾಗಿದೆ.

ಒಂದು ಖುಷಿಯ ವಿಚಾರ ಏನೆಂದರೆ ಐಪಿಎಲ್ ಬಯೋಬಬಲ್‌ನಲ್ಲಿ ನಡೆಯುವುದಿಲ್ಲ. ಆದರೆ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಂಡು ಬಿಸಿಸಿಐ ಮತ್ತು ಐಪಿಎಲ್ ಆಡಳಿತವು ತುಂಬಾ ಜಾಗ್ರತೆ ವಹಿಸಲು ತೀರ್ಮಾನ ಕೈಗೊಂಡಿದೆ. ಹಾಗಾಗಿ, ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಆಟಗಾರರಿಗೆ ಆಡಲು ಅವಕಾಶ ನೀಡಲಾಗುವುದಿಲ್ಲ. ಸೋಂಕಿತ ಆಟಗಾರ ತನ್ನ ಎರಡು ನೆಗೆಟಿವ್​ ರಿಪೋರ್ಟ್​ ನೀಡಿದರಷ್ಟೇ ಆಡಲು ಅವಕಾಶ ನೀಡಲಾಗುತ್ತದೆ.

ದೇಶದಲ್ಲಿ ಕೋವಿಡ್​​ ಕೇಸ್​​​ಗಳು ಗಣನೀಯ ಇಳಿಮುಖವಾಗುತ್ತಿದ್ದರೂ, ಹೊಸ ತಳಿಗಳು, ಹೊಸ ವೈರಸ್​ಗಳು ಸಂಖ್ಯೆ ಏರಿಕೆ ಕಾಣುತ್ತಿವೆ. ಅತ್ಯಂತ ವೇಗವಾಗಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂತಹ ಕಠಿಣ ಸನ್ನಿವೇಶಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಐಪಿಎಲ್ ಫ್ರಾಂಚೈಸಿಗಳಿಗೆ ವೈದ್ಯಕೀಯ ಮಾರ್ಗದರ್ಶಿಗಳನ್ನು ನೀಡಲಾಗಿದೆ.

ಆಟಗಾರರು ತಂಡಕ್ಕೆ ಸೇರುವ ಮೊದಲು 7 ದಿನಗಳ ಐಸೋಲೇಷನ್​​ನಲ್ಲಿ ಉಳಿಯಬೇಕಾಗುತ್ತದೆ. RTPCR ಪರೀಕ್ಷೆಯಲ್ಲಿ ನೆಗೆಟಿವ್​ ಬಂದ ನಂತರವೇ ಆಟಗಾರರು ತಂಡವನ್ನು ಸೇರಲು ಅವಕಾಶ ಇದೆ. ರೋಗ ಲಕ್ಷಣಗಳು ಕಂಡು ಬಂದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತದೆ.

ತಹ್ಲಿಯಾ​ ಕೊರೊನಾ ಇದ್ರೂ ಆಡಿದ್ರು!

ಆಸ್ಟ್ರೇಲಿಯಾದ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ಕೊರೊನಾ ಸೋಂಕಿದ್ದರೂ ಆಡಿದ ಕ್ರಿಕೆಟರ್​ ಎನಿಸಿದ್ದರು. ಭಾರತದ ವಿರುದ್ಧ ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಮೆಕ್​ಗ್ರಾತ್​ ಆಡಿದ್ದರು. ಪುರುಷರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಸಹ ಕೊರೊನಾ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಅವರನ್ನು ಆಸ್ಟ್ರೇಲಿಯಾ ಆಡಿಸಿತ್ತು.

ಪ್ರೇಕ್ಷಕರಿಗೆ ಇಲ್ಲ ನಿರ್ಬಂಧ!

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹಾಗಾಗಿ ಟಿಕೆಟ್​ಗಳು ಭರ್ಜರಿ ಸೇಲ್​ ಆಗುತ್ತಿವೆ. ಟಿಕೆಟ್​ಗಾಗಿ ಫ್ಯಾನ್ಸ್​ ಮುಗಿ ಬೀಳುತ್ತಿದ್ದಾರೆ. ಆದರೆ ಕೊರೊನಾ ಪ್ರಕರಣಗಳು ದಿಢೀರ್​ ಏರಿಕೆ ಕಂಡರೆ ಪ್ರೇಕ್ಷಕರಿಗೆ ಬ್ರೇಕ್​ ಹಾಕ್ತಾರಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಕೆಲವು ಮೂಲಗಳ ಪ್ರಕಾರ ಅಂತಹ ನಿರ್ಧಾರಕ್ಕೆ ಬಿಸಿಸಿಐ ಮುಂದಾಗಿಲ್ಲ ಎನ್ನಲಾಗಿದೆ. 2019ರ ಬಳಿಕ ಇದೇ ಮೊದಲ ಬಾರಿ ಹಳೆಯ ಮಾದರಿಯಲ್ಲೇ ಐಪಿಎಲ್​ ನಡೆಯಲಿದೆ. ಹಾಗಾಗಿ ಕ್ರೀಡಾಂಗಣಗಳಿಗೂ ನಷ್ಟವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ