logo
ಕನ್ನಡ ಸುದ್ದಿ  /  ಕ್ರೀಡೆ  /  Ipl 2023 Points Table: ಮೂರು ಪಂದ್ಯಗಳ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ? ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಲಿಸ್ಟ್‌ ಇಲ್ಲಿದೆ

IPL 2023 points table: ಮೂರು ಪಂದ್ಯಗಳ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ? ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಲಿಸ್ಟ್‌ ಇಲ್ಲಿದೆ

HT Kannada Desk HT Kannada

Apr 02, 2023 10:20 AM IST

google News

ಸಹ ಆಟಗಾರರೊಂದಿಗೆ ಅರ್ಷದೀಪ್ ಸಿಂಗ್; ಮಾರ್ಕ್ ವುಡ್

    • ಮೂರು ಪಂದ್ಯಗಳ ಬಳಿಕ ಐಪಿಎಲ್‌ ಅಂಕಪಟ್ಟಿ, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿವೆ ಎಂಬುದನ್ನು ನೋಡಿಕೊಂಡು ಬನ್ನಿ.
ಸಹ ಆಟಗಾರರೊಂದಿಗೆ ಅರ್ಷದೀಪ್ ಸಿಂಗ್; ಮಾರ್ಕ್ ವುಡ್
ಸಹ ಆಟಗಾರರೊಂದಿಗೆ ಅರ್ಷದೀಪ್ ಸಿಂಗ್; ಮಾರ್ಕ್ ವುಡ್

ಐಪಿಎಲ್ 2023ರ ಸೀಸನ್‌ನ ಮೊದಲ ಡಬಲ್ ಹೆಡರ್ ದಿನಕ್ಕೆ ಶನಿವಾರ ಸಾಕ್ಷಿಯಾಯಿತು. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಮೊಹಾಲಿಯಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಿಎಲ್‌ಎಸ್‌ ನಿಯಮದ ಪ್ರಕಾರ ಧವನ್‌ ಪಡೆ 7 ರನ್‌ಗಳಿಂದ ಜಯ ಸಾಧಿಸಿತು. ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 50 ರನ್‌ಗಳಿಂದ ಪರಾಭವಗೊಳಿಸಿತು. ಸದ್ಯ ಐಪಿಎಲ್‌ನ ಮೂರು ಪಂದ್ಯಗಳು ನಡೆದಿದ್ದು, ಇಂದು ಮತ್ತೆರಡು ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿವೆ. ಮೂರು ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್ ಮತ್ತು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿವೆ ಎಂಬುದನ್ನು ನೋಡಿಕೊಂಡು ಬನ್ನಿ.

ತವರು ಮೈದಾನದಲ್ಲಿ 50 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ, ಗುಜರಾತ್ ಟೈಟಾನ್ಸ್ ಅನ್ನು ಕೆಳಗಿಳಿಸಿ ಅಗ್ರಸ್ಥಾನಕ್ಕೇರಿದೆ. ಕೈಲ್ ಮೇಯರ್ಸ್ 38 ಎಸೆತಗಳಲ್ಲಿ 73 ರನ್ ಮತ್ತು ನಿಕೋಲಸ್ ಪೂರನ್ 21 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಇದಕ್ಕುತ್ತರವಾಗಿ ಡೆಲ್ಲಿಯು ನಾಯಕ ಡೇವಿಡ್ ವಾರ್ನರ್ ತಾಳ್ಮೆಯ ಆಟವಾಡಿ ಅರ್ಧಶತಕ ಸಿಡಿಸಿದರು. ಆದರೆ, ಮಾರ್ಕ್ ವುಡ್‌ ನೇತೃತ್ವದ ಲಖನೌ ಬೌಲರ್‌ಗಳ ದಾಳಿಗೆ ನಲಗಿದ ಡಿಸಿ ಒಂಬತ್ತು ವಿಕೆಟ್‌ ಕಳೆದುಕೊಂಡು 149 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಮತ್ತೊಂದೆಡೆ ಪಂಜಾಬ್ ತಂಡವು ಕೆಕೆಆರ್‌ ವಿರುದ್ಧದ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸದ್ಯ ಅಂಕಪಟ್ಟಿ ಹೀಗಿದೆ…

ಐಪಿಎಲ್‌ 2023 ಅಂಕಪಟ್ಟಿ

ಆರೆಂಜ್ ಕ್ಯಾಪ್:

ಮೇಯರ್ಸ್ ಏಳು ಸಿಕ್ಸರ್‌ಗಳೊಂದಿಗೆ ಅರ್ಧಶತಕ ಸಿಡಿಸುವ ಮೂಲಕ ಸಿಎಸ್‌ಕೆಯ ರುತುರಾಜ್ ಗಾಯಕ್ವಾಡ್ ನಂತರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಶನಿವಾರ ಲಖನೌ ವಿರುದ್ಧ 56 ರನ್ ಗಳಿಸಿದ ಡೆಲ್ಲಿ ನಾಯಕ ವಾರ್ನರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಆರೇಂಜ್‌ ಕ್ಯಾಪ್‌ ವಿಜೇತರು

ಪರ್ಪಲ್ ಕ್ಯಾಪ್:

ಐದು ವರ್ಷಗಳ ನಂತರ ಐಪಿಎಲ್‌ಗೆ ಕಂಬ್ಯಾಕ್‌ ಮಾಡಿದ ಇಂಗ್ಲೆಂಡ್‌ ಬೌಲರ್‌ ವುಡ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾರಕವಾದರು. ಮೊದಲ ಐದು ವಿಕೆಟ್‌ ಗೊಂಚಲನ್ನು ಪಡೆದು ಮಿಂಚಿದರು. ಆ ಮೂಲಕ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರು. ಕೋಲ್ಕತ್ತಾ ವಿರುದ್ಧ 19 ರನ್‌ ಬಿಟ್ಟುಕೊಟ್ಟು 3 ವಿಕೆಟ್ ಗಳಿಸಿದ ಅರ್ಷದೀಪ್ ಸಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪರ್ಪಲ್‌ ಕ್ಯಾಪ್‌ ವಿಜೇತರು

‌ಭಾನುವಾರದ ಡಬಲ್ ಹೆಡರ್ ಪಂದ್ಯದಲ್ಲಿ ಒಂದು ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ಆತಿಥ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ವಿರುದ್ಧ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ