Wimbledon: ಕನ್ನಡದಲ್ಲಿ ಫೇಸ್‌ಬುಕ್ ಪೋಸ್ಟ್ ಮಾಡಿದ ವಿಂಬಲ್ಡನ್; ಇದು ಪ್ರಾದೇಶಿಕ ಪ್ರಚಾರ ತಂತ್ರ ಅಷ್ಟೇ ಎಂದ ಕನ್ನಡಿಗರು
Jul 11, 2023 09:44 AM IST
ವಿಂಬಲ್ಡನ್ ಫೇಸ್‌ಬುಕ್ ಪೋಸ್ಟ್
- Rohan Bopanna: ಈ ಫೋಟೋಗೆ ವಿಂಬಲ್ಡನ್ 'ಭಾರತದ ಸೂಪರ್ ಸ್ಟಾರ್' ಎಂದು ಕನ್ನಡದಲ್ಲೇ ಕ್ಯಾಪ್ಷನ್ ನೀಡಲಾಗಿದೆ. ಇದು ಕನ್ನಡಿಗರ ಗಮನ ಸೆಳೆದಿದ್ದು, ಜಾಗತಿಕ ಟೂರ್ನಿಯಲ್ಲಿ ಕನ್ನಡ ಬಳಸಿದ್ದಕ್ಕೆ ಕನ್ನಡಿಗರು ಖುಷಿಯಾಗಿದ್ದಾರೆ. ಪೋಸ್ಟ್ ನೋಡಿ ಹಲವು ಕನ್ನಡಿಗರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.
ವಿಂಬಲ್ಡನ್ (Wimbledon 2023) ಟೆನಿಸ್ ಟೂರ್ನಿ ರೋಚಕವಾಗಿ ಸಾಗುತ್ತಿದೆ. ಈ ನಡುವೆ ಕರ್ನಾಟಕ ಸೇರಿದಂತೆ ಭಾರತದಲ್ಲೂ ಟೂರ್ನಿಯ ಪ್ರಮೋಷನ್‌ಗೆ ವಿಂಬಲ್ಡನ್ ಮುಂದಾಗಿದೆ. ಅದರಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಬಳಕಗೆ ವಿಂಬಲ್ಡನ್ ಗಮನಹರಿಸಿದೆ.
ಸೋಮವಾರವಷ್ಟೇ ಪುರುಷರ ಡಬಲ್ಸ್ ವಿಭಾಗದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್ ಜೋಡಿ ಮೂರನೇ ಸುತ್ತಿಗೆ ಕಾಲಿಟ್ಟರು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು ಯುನೈಟೆಡ್ ಕಿಂಗ್‌ಡಮ್‌ನ ಜೋಡಿಯನ್ನು 7-5, 6-3ರ ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದರು. ಈ ನಡುವೆ ವಿಂಬಲ್ಡನ್ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬೋಪಣ್ಣ ಫೋಟೋ ಹಂಚಿಕೊಂಡಿದೆ.
ವಿಶೇಷವೆಂದರೆ ಈ ಫೋಟೋಗೆ 'ಭಾರತದ ಸೂಪರ್ ಸ್ಟಾರ್' ಎಂದು ಕನ್ನಡದಲ್ಲೇ ಕ್ಯಾಪ್ಷನ್ ನೀಡಲಾಗಿದೆ. ಇದು ಕನ್ನಡಿಗರ ಗಮನ ಸೆಳೆದಿದ್ದು, ಜಾಗತಿಕ ಟೂರ್ನಿಯಲ್ಲಿ ಕನ್ನಡ ಬಳಸಿದ್ದಕ್ಕೆ ಕನ್ನಡಿಗರು ಖುಷಿಯಾಗಿದ್ದಾರೆ. ಪೋಸ್ಟ್ ನೋಡಿ ಹಲವು ಕನ್ನಡಿಗರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.
ಭಾರತೀಯನೊಬ್ಬ ದೊಡ್ಡ ಮಟ್ಟದ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ಭಾರತೀಯರಿಗೆ ಹೆಮ್ಮ. ಅದರಲ್ಲೂ ಬೋಪಣ್ಣ ಕನ್ನಡಿಗ ಆಗಿರುವುದರಿಂದ ಕನ್ನಡದಲ್ಲಿ ಈ ಪೋಸ್ಟ್ ಮಾಡಲಾಗಿದೆ.
ವಿಂಬಲ್ಡನ್ ಕನ್ನಡ ಫೇಸ್‌ಬುಕ್ ಪೋಸ್ಟ್‌ಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಾದೇಶಿಕ ಪ್ರಮೋಷನ್‌ಗೆ ಈ ತಂತ್ರ
ಕನ್ನಡದಲ್ಲಿ ಪೋಸ್ಟ್ ಮಾಡಿರುವುದಕ್ಕೆ ಹಲವರು ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ, ಇದರ ಹಿಂದೆ ವಿಂಬಲ್ಡನ್‌ಗೆ ಪ್ರಮೋಷನ್ ಪಡೆಯುವುದೇ ಪ್ರಮುಖ ಉದ್ದೇಶ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವಿಂಬಲ್ಡನ್ ತನ್ನ ಅಧಿಕೃತ ಫೇಟ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರೂ, ಇದು ಕರ್ನಾಟಕದ ಜನತೆಗೆ ಮಾತ್ರ ಕಾಣುವಂತೆ ಪ್ರೈವೆಸಿ ಸೆಟ್ಟಿಂಗ್ ಮಾಡಲಾಗಿದೆ. ಹೀಗಾಗಿ ಇದು ಕನ್ನಡಿಗರಿಗೆ ಮಾತ್ರ ಕಾಣುತ್ತದೆ. ವಿಂಬಲ್ಡನ್ ಈ ಪೋಸ್ಟ್ ಮೂಲಕ ಪ್ರಾದೇಶಿಕ ಪ್ರಚಾರ ಮಾಡುತ್ತಿದೆ ಅಷ್ಟೇ. ಭಾರತದಲ್ಲೂ ಬೇರೆ ರಾಜ್ಯಗಳಲ್ಲಿ ಈ ಪೋಸ್ಟ್ ಕಾಣಿಸುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅನುರಾಗ್ ಆರ್ ಗೌಡ ಎಂಬ ಬಳಕೆದಾರ ಕಾಮೆಂಟ್ ಮಾಡಿದ್ದು, “ಇಲ್ಲೊಂದು ಸಮಸ್ಯೆ ಇದೆ. ಇಲ್ಲಿ ವಿಂಬಲ್ಡನ್ ರೀಜನಲ್ ಪ್ರಮೋಷನ್ ಮಾಡುತ್ತಿದೆ. ಕರ್ನಾಟಕದ ಜನರಿಗೆ ಮಾತ್ರ ಈ ಪೋಸ್ಟ್ ಕಾಣುವುದು. ಪ್ರೈವೆಸ್ ಸೆಟ್ಟಿಂಗ್ ಗ್ಲೋಬಲ್ ಇರುವುದಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.
ಕ್ರಿಕೆಟನ್ನು ಅತಿಯಾಗಿ ಅಭಿಮಾನಿಸಿ ಆರಾಧಿಸುವ ಭಾರತದಲ್ಲಿ, ಇತರ ಕ್ರೀಡೆಗಳಿಗೆ ನಿರೀಕ್ಷಿತ ಬೆಂಬಲ ಸಿಗುವುದು ಭಾರಿ ಕಡಿಮೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಫುಟ್ಬಾಲ್ ಕ್ರೇಜ್ ಅಧಿಕವಿದ್ದರೆ, ಭಾರತದಲ್ಲಿ ಕ್ರಿಕೆಟ್‌ಗೆ ಹೋಲಿಸಿದರೆ ಫುಟ್ಬಾಲ್ ಕ್ರೇಜ್ ಅದರ ಅರ್ಧದಷ್ಟೂ ಇಲ್ಲ. ಆದರೆ, ಇತ್ತೀಚೆಗೆ ಕಾಲ್ಚೆಂಡು ಕ್ರೀಡೆ ಕಡೆ ಜನರ ಒಲವು ಹೆಚ್ಚುತ್ತಿದೆ. ಅಭಿಮಾನಿಗಳ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಅದಕ್ಕೆ ಸರಿಯಾಗಿ ಭಾರತ ಫುಟ್ಬಾಲ್ ತಂಡವು ಮೇಲಿಂದ ಮೇಲೆ ಟ್ರೋಫಿಗಳನ್ನು ಗೆಲ್ಲುತ್ತಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ