logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಹೀನಾಯ ಸೋಲು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಗೂಳಿಗಳು

ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಹೀನಾಯ ಸೋಲು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಗೂಳಿಗಳು

Jayaraj HT Kannada

Nov 10, 2024 10:20 AM IST

google News

ಬೆಂಗಳೂರಿಗೆ ಮತ್ತೊಂದು ಹೀನಾಯ ಸೋಲು; ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬುಲ್ಸ್

    • ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಾಂಗ್ಲಾ ವಾರಿಯರ್ಸ್ ತಂಡ ಎರಡು ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿತು. ಇದರೊಂದಿಗೆ ಬುಲ್ಸ್‌ ಪಂದ್ಯವನ್ನು ಗೆಲ್ಲುವ ಅವಕಾಶ ಕೈಚೆಲ್ಲಿತು. ಬೆಂಗಾಲ್ ರೈಡರ್ಸ್ ಅನ್ನು ತಡೆಯುವಲ್ಲಿ ಸಫಲವಾಗದ ಬುಲ್ಸ್ ಡಿಫೆನ್ಸ್‌, ಸೋಲಿಗೆ ಕಾರಣವಾಯ್ತು.
ಬೆಂಗಳೂರಿಗೆ ಮತ್ತೊಂದು ಹೀನಾಯ ಸೋಲು; ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬುಲ್ಸ್
ಬೆಂಗಳೂರಿಗೆ ಮತ್ತೊಂದು ಹೀನಾಯ ಸೋಲು; ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬುಲ್ಸ್

ಪ್ರೊ ಕಬಡ್ಡಿ ಲೀಗ್‌ನ (Pro Kabaddi League) 44 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 40-29 ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿದೆ. 7 ಪಂದ್ಯಗಳ ನಂತರ ಇದು ವಾರಿಯರ್ಸ್‌ ತಂಡದ ಮೂರನೇ ಗೆಲುವು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಅತ್ತ ಬುಲ್ಸ್​ಗೆ ಇದು ಆರನೇ ಸೋಲಾಗಿದ್ದು, ತಂಡ 11ನೇ ಸ್ಥಾನದಲ್ಲಿದೆ.

ಮೊದಲಾರ್ಧದ ನಂತರ ಬೆಂಗಾಲ್ ವಾರಿಯರ್ಸ್ 15-12 ಅಂಕಗಳಿಂದ ಮುನ್ನಡೆ ಸಾಧಿಸಿತು. ಆರಂಭದಿಂದಲೇ ಮುನ್ನಡೆಯಲ್ಲಿದ್ದ ಬೆಂಗಾಲ್ ಕೊನೆಯವರೆಗೂ ಅಂತರ ಕಾಯ್ದುಕೊಂಡಿತು. ತಂಡದ ನಾಯಕ ಮಣಿಂದರ್ ಸಿಂಗ್ ಫಾರ್ಮ್‌ನಲ್ಲಿ ಕಾಣಿಸಿಕೊಂಡು ನಿರಂತರವಾಗಿ ಪಾಯಿಂಟ್‌ಗಳನ್ನು ತಂದು ಕೊಟ್ಟರು. ಅವರು 12 ದಾಳಿಗಳಲ್ಲಿ 8 ಅಂಕಗಳನ್ನು ಗಳಿಸಿದರು. ಏತನ್ಮಧ್ಯೆ, ಬಂಗಾಳದ ರಕ್ಷಣಾ ವಿಭಾಗವು ಉತ್ತಮ ಸಂಯಮ ಪ್ರದರ್ಶಿಸಿತು. ಬೆಂಗಳೂರು ಬುಲ್ಸ್ ರೈಡರ್‌ಗಳಿಗೆ ಮುಕ್ತವಾಗಿ ಚಲಿಸಲು ಅವಕಾಶವೇ ನೀಡಲಿಲ್ಲ.

ಪ್ರೊ ಕಬಡ್ಡಿ ಲೀಗ್ 2024 ರ ಕೊನೆಯ ಕೆಲವು ಪಂದ್ಯಗಳಂತೆ, ಈ ಪಂದ್ಯದಲ್ಲೂ ಪರ್ದೀಪ್ ಹೆಚ್ಚು ರೇಡ್ ಮಾಡುವ ಅವಕಾಶ ಪಡೆಯಲಿಲ್ಲ. ಮೊದಲಾರ್ಧದಲ್ಲಿ, ಡುಬ್ಕಿ ಕಿಂಗ್ ಕೇವಲ 5 ಬಾರಿ ರೈಡ್ ಮಾಡಿದರು. ಅದರಲ್ಲಿ ಅವರು ಎರಡು ಅಂಕಗಳನ್ನು ಮಾತ್ರ ಗಳಿಸಿದರು. ಈ ಮಧ್ಯೆ ಪರ್ದೀಪ್ ನರ್ವಾಲ್ ಬದಲಿಗೆ ಸ್ಥಾನ ಪಡೆದರು.

ದ್ವಿತೀಯಾರ್ಧದಲ್ಲೂ ಮಣಿಂದರ್ ಸಿಂಗ್ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಅಲ್ಲದೆ ಸೂಪರ್ 10 ಅನ್ನು ಪೂರ್ಣಗೊಳಿಸಿದರು. ಬೆಂಗಳೂರು ಬುಲ್ಸ್ ತಂಡವು ಪುನರಾಗಮನಕ್ಕೆ ಪ್ರಯತ್ನಿಸಿತು. ಆದರೆ ಬೆಂಗಾಲ್ 30ನೇ ನಿಮಿಷದವರೆಗೆ ತನ್ನ ಮುನ್ನಡೆಯನ್ನು ಅದ್ಭುತವಾಗಿ ಕಾಯ್ದುಕೊಂಡಿತು. ಮೊದಲು ನಿತಿನ್ ಕುಮಾರ್ ಮತ್ತು ನಂತರ ಪಿ ರಾಣೆ ದಾಳಿ ನಡೆಸಿದರು. ಇಬ್ಬರು ಬುಲ್ಸ್ ಡಿಫೆಂಡರ್‌ಗಳನ್ನು ಔಟ್ ಮಾಡಿ ಬ್ಯಾಕ್‌ಫೂಟ್‌ನಲ್ಲಿ ಕಳುಹಿಸಿದರು.

ಡಿಫೆನ್ಸ್‌ ಸಂಪೂರ್ಣ ವಿಫಲ

37ನೇ ನಿಮಿಷದಲ್ಲಿ ಬಾಂಗ್ಲಾ ವಾರಿಯರ್ಸ್ ಎರಡನೇ ಬಾರಿಗೆ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿತು. ಇದರೊಂದಿಗೆ ಬುಲ್ಸ್‌ ಈ ಪಂದ್ಯವನ್ನು ಗೆಲ್ಲುವ ಎಲ್ಲಾ ನಿರೀಕ್ಷೆಗಳು ಕೊನೆಗೊಂಡಿತು. ಈ ಪಂದ್ಯದಲ್ಲಿ ಬುಲ್ಸ್ ಸೋಲಿಗೆ ಕಾರಣ ಬೆಂಗಾಲ್ ರೈಡರ್ಸ್ ಅನ್ನು ತಡೆಯುವಲ್ಲಿ ಎಳ್ಳಷ್ಟೂ ಸಫಲವಾಗದ ಡಿಫೆನ್ಸ್. ಕೊನೆಯಲ್ಲಿ, 2024 ರ ಪ್ರೊ ಕಬಡ್ಡಿ ಲೀಗ್‌ನ ಈ ಪಂದ್ಯವನ್ನು ಬೆಂಗಾಲ್ ಗೆದ್ದುಕೊಂಡಿತು ಮತ್ತು ಬುಲ್ಸ್ ಒಂದೇ ಒಂದು ಅಂಕವನ್ನೂ ಪಡೆಯಲಿಲ್ಲ.

ಈ ಪಂದ್ಯದ ಮೂಲಕ ಕಮ್​ಬ್ಯಾಕ್ ಮಾಡಿದ ನಂತರ ಪರ್ದೀಪ್ ನರ್ವಾಲ್ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಮತ್ತು ಕೇವಲ 2 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಪ್ರೊ ಕಬಡ್ಡಿ ಲೀಗ್‌ನ ಈ ಪಂದ್ಯದಲ್ಲಿ ಮಣಿಂದರ್ ಸಿಂಗ್ ಮತ್ತು ನಿತಿನ್ ಕುಮಾರ್ ಬೆಂಗಾಲ್ ವಾರಿಯರ್ಸ್‌ ಪರ ಸೂಪರ್ 10 ಪೂರೈಸಿದರು.

ಪಿಕೆಎಲ್‌ನಲ್ಲಿ ಇಂದು ನಡೆಯುವ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್‌ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಹರಿಯಾಣ ಸ್ಟೀಲರ್ಸ್‌ ಎದುರಾಗಲಿವೆ.

 

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ