logo
ಕನ್ನಡ ಸುದ್ದಿ  /  ಕ್ರೀಡೆ  /  Pkl 2024: ಮಿಂಚದ ಡುಬ್ಕಿ ಕಿಂಗ್; ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಕಳಪೆ ಪ್ರದರ್ಶನ

PKL 2024: ಮಿಂಚದ ಡುಬ್ಕಿ ಕಿಂಗ್; ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಕಳಪೆ ಪ್ರದರ್ಶನ

Jayaraj HT Kannada

Nov 02, 2024 11:04 AM IST

google News

ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಕಳಪೆ ಪ್ರದರ್ಶನ

    • ಪರ್ದೀಪ್ ನರ್ವಾಲ್‌ ಅವರು ಪಿಕೆಎಲ್ ಮೊದಲ ಸೀಸನ್​ನಲ್ಲಿ ಬೆಂಗಳೂರು ಬುಲ್ಸ್‌ ಪರ ಪಿಕೆಎಲ್‌ನಲ್ಲಿ ಆಡಿದ್ದರು. ಆದರೆ, ಆ ಸಂದರ್ಭ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆ ಸಮಯದಲ್ಲಿ ಅವರು ಗಳಿಸಿದ್ದು ಕೇವಲ 9 ಅಂಕಗಳು. ಇದರ ನಂತರ, ಅವರು 11ನೇ ಸೀಸನ್‌ನಲ್ಲಿ ಮತ್ತೆ ಬೆಂಗಳೂರು ಬುಲ್ಸ್‌ ತಂಡದ ಪರ ಆಡುತ್ತಿದ್ದಾರೆ.
ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಕಳಪೆ ಪ್ರದರ್ಶನ
ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಕಳಪೆ ಪ್ರದರ್ಶನ

ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಮೂಲಕ ಪರ್ದೀಪ್ ನರ್ವಾಲ್ ಬೆಂಗಳೂರು ಬುಲ್ಸ್‌ ತಂಡಕ್ಕೆ ಮರಳಿದ್ದಾರೆ. ಬುಲ್ಸ್ 70 ಲಕ್ಷಕ್ಕೆ ಪರ್ದೀಪ್ ಅವರನ್ನು ಹರಾಜಿನಲ್ಲಿ ಖರೀದಿಸಿತು. ಮಾತ್ರವಲ್ಲದೆ ಈ ಋತುವಿನಲ್ಲಿ ತಂಡದ ನಾಯಕರಾಗಿದ್ದಾರೆ. ಇವರ ನಾಯಕತ್ವದಲ್ಲಿ ಬೆಂಗಳೂರು 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು 4ರಲ್ಲಿ ಸೋತಿದೆ. ಡುಬ್ಕಿ ಕಿಂಗ್ ಬೆಂಗಳೂರು ಬುಲ್ಸ್‌ ನಾಯಕನಾಗಿ ಮೊದಲ ಸೂಪರ್ 10 ಗಳಿಸಿದರು. ಆದಾಗ್ಯೂ, ಇವರು ಅನೇಕ ವಿಷಯಗಳಲ್ಲಿ ವಿಫಲರಾಗಿದ್ದಾರೆ. ಪರ್ದೀಪ್ ನರ್ವಾಲ್ ಅವರು ಮಾಡಲು ಸಾಧ್ಯವಾಗದ ಆ ವಿಷಯಗಳ ಬಗ್ಗೆ ನಾವು ಹೇಳಲಿದ್ದೇವೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಪರ್ದೀಪ್ ನರ್ವಾಲ್ ಒಂದು ಋತುವಿನಲ್ಲಿ 100 ರೇಡ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.

ಪರ್ದೀಪ್ ನರ್ವಾಲ್ ಮೊದಲ ಸೀಸನ್​ನಲ್ಲಿ ಬೆಂಗಳೂರು ಬುಲ್ಸ್‌ ತಂಡದಲ್ಲಿ ಪಿಕೆಎಲ್‌ ಆಡಿದರು. ಆದರೆ, ಆ ಸಂದರ್ಭ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆ ಸಮಯದಲ್ಲಿ ಅವರು ಗಳಿಸಿದ್ದು ಕೇವಲ 9 ಅಂಕಗಳು. ಇದರ ನಂತರ, ಅವರು 11 ನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಮತ್ತೆ ಆಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ, ಪರ್ದೀಪ್ ಎರಡೂ ಸೀಸನ್‌ಗಳ ಅಂಕಗಳನ್ನು ಸೇರಿಸಿದರೆ 100 ಅಂಕಗಳನ್ನು ಕೂಡ ಪೂರ್ಣಗೊಳಿಸಿಲ್ಲ. ಈ ಋತು ಅಂತ್ಯವಾಗುವ ಮುನ್ನವಾದರೂ ಈ ಸಾಧನೆ ಮಾಡುತ್ತಾರಾ ನೋಡಬೇಕು.

20 ಕ್ಕಿಂತ ಹೆಚ್ಚು ಅಂಕ ಬಂದಿಲ್ಲ

ಪ್ರೊ ಕಬಡ್ಡಿ ಲೀಗ್‌ನಲ್ಲಿ, ಪರ್ದೀಪ್ ನರ್ವಾಲ್ ಬೆಂಗಳೂರು ಬುಲ್ಸ್‌ ತಂಡದಲ್ಲಿ ಒಂದು ಪಂದ್ಯದಲ್ಲಿ 20 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.

ಪರ್ದೀಪ್ ನರ್ವಾಲ್ ಫಾರ್ಮ್‌ನಲ್ಲಿರುವಾಗ, ಅವರನ್ನು ತಡೆಯಲು ಡಿಫೆಂಡರ್‌ಗಳಿಗೆ ತುಂಬಾ ಕಷ್ಟವಾಗುತ್ತದೆ. ಅವರು ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವಾರು ಬಾರಿ ಪಂದ್ಯವೊಂದರಲ್ಲಿ 20ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಪರ್ದೀಪ್ ಅವರು ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾಸ್‌ ಪರ ಈ ಸಾಧನೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಬೆಂಗಳೂರು ಬುಲ್ಸ್‌ ತಂಡದಲ್ಲಿ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಬುಲ್ಸ್ ಪರ ಪಂದ್ಯವೊಂದರಲ್ಲಿ ಪರ್ದೀಪ್ ಅವರ ಅತ್ಯುತ್ತಮ ಪ್ರದರ್ಶನ ಎಂದರೆ 16 ಅಂಕಗಳು. ಪ್ರೊ ಕಬಡ್ಡಿ ಲೀಗ್ 2024 ರಲ್ಲಿ ಅವರು 20 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ.

ಟ್ಯಾಕಲ್ ಪಾಯಿಂಟ್ ಇಲ್ಲ

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಪರ ಪರ್ದೀಪ್ ನರ್ವಾಲ್ ಒಂದೇ ಒಂದು ಟ್ಯಾಕಲ್ ಪಾಯಿಂಟ್ ಸಂಪಾದಿಸಿಲ್ಲ. ಬೆಂಗಳೂರು ಬುಲ್ಸ್ ಪರ ಆಡುವಾಗ ಪರ್ದೀಪ್ ನರ್ವಾಲ್ ಇಲ್ಲಿಯವರೆಗೆ 44 ಅಂಕಗಳನ್ನು ಗಳಿಸಿದ್ದಾರೆ ಮತ್ತು ಈ ಎಲ್ಲಾ ಅಂಕಗಳನ್ನು ರೇಡ್ ಮಾಡುವಾಗ ಗಳಿಸಲಾಗಿದೆ. ಪ್ರೊ ಕಬಡ್ಡಿ ಲೀಗ್ ವೃತ್ತಿಜೀವನದಲ್ಲಿ ಪರ್ದೀಪ್ ಟ್ಯಾಕಲ್ ಮೂಲಕ ಕೇವಲ 9 ಅಂಕಗಳನ್ನು ಗಳಿಸಿದ್ದರೂ, ಅವರು ಬುಲ್ಸ್‌ಗಾಗಿ ಒಂದೇ ಒಂದು ಅಂಕವನ್ನೂ ಗಳಿಸಿಲ್ಲ ಎಂಬುದು ಅಚ್ಚರಿ. ಈ ಋತುವಿನಲ್ಲಿ ಬೆಂಗಳೂರು ಬುಲ್ಸ್ ಇನ್ನೂ ಕನಿಷ್ಠ 17 ಪಂದ್ಯಗಳನ್ನು ಆಡಬೇಕಾಗಿರುವುದರಿಂದ ಖಾತೆ ತೆರೆಯಲು ಅವರಿಗೆ ಸುವರ್ಣಾವಕಾಶವಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ