logo
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪಾಯಿಂಟ್ಸ್ ಟೇಬಲ್‌​ನಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ?

PKL 11: ಪಾಯಿಂಟ್ಸ್ ಟೇಬಲ್‌​ನಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ?

Jayaraj HT Kannada

Nov 03, 2024 11:52 AM IST

google News

ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ

    • ಪ್ರೊ ಕಬಡ್ಡಿ ಲೀಗ್‌ ಅಂಕಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಟ್ನಾ ಪೈರೇಟ್ಸ್ ಟಾಪ್-5ರಲ್ಲಿ ಸ್ಥಾನ ಗಳಿಸಿದೆ. ಅತ್ತ ಯುಪಿ ಯೋಧ ಸೋತರೂ ಮೊದಲಿನಂತೆಯೇ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಬೆಂಗಳೂರು ಬುಲ್ಸ್ ಪಿಕೆಎಲ್‌ 11ರಲ್ಲಿ ಐದನೇ ಸೋಲನ್ನು ಎದುರಿಸಬೇಕಾಯಿತು.
ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ
ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ (X)

ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ, ನವೆಂಬರ್ 2ರಂದು ಎರಡು ಪ್ರಮುಖ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಈ ಋತುವಿನಲ್ಲಿ ಅದ್ಭುತವಾಗಿ ಆಡುತ್ತಿರುವ ಯುಪಿ ಯೋಧಾಸ್ ತಂಡವನ್ನು ಸೋಲಿಸಿತು. ಎರಡನೇ ಪಂದ್ಯದಲ್ಲಿ ಪವನ್ ಸೆಹ್ರಾವತ್ ನೇತೃತ್ವದ ತೆಲುಗು ಟೈಟಾನ್ಸ್ ತಂಡ ಪರ್ದೀಪ್ ನರ್ವಾಲ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡವನ್ನು ಸೀಸನ್‌ನಲ್ಲಿ ಎರಡನೇ ಬಾರಿ ಸೋಲಿಸಿತು.

ಈ ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಟ್ನಾ ಪೈರೇಟ್ಸ್ ದೊಡ್ಡ ಮುನ್ನಡೆ ಸಾಧಿಸಿ ಟಾಪ್-5ರಲ್ಲಿ ಸ್ಥಾನ ಗಳಿಸಿದೆ. ತಂಡ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಯುಪಿ ಯೋಧಾಸ್ ಸೋತರೂ ಮೊದಲಿನಂತೆಯೇ ಮೂರನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಬೆಂಗಳೂರು ಬುಲ್ಸ್ ತನ್ನ ಐದನೇ ಸೋಲನ್ನು ಎದುರಿಸಬೇಕಾಯಿತು. ಈ ಕಾರಣದಿಂದಾಗಿ ತಂಡ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಈ ಗೆಲುವಿನ ನಂತರ ತೆಲುಗು ಟೈಟಾನ್ಸ್ ದೊಡ್ಡ ಜಿಗಿತವನ್ನು ಸಾಧಿಸಿ ಐದನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್

1) ತಮಿಳ್ ತಲೈವಾಸ್ - 5 ಪಂದ್ಯಗಳ ನಂತರ 19 ಅಂಕಗಳು

2) ಪುಣೇರಿ ಪಲ್ಟನ್ - 5 ಪಂದ್ಯಗಳ ನಂತರ 19 ಅಂಕಗಳು

3) ಯುಪಿ ಯೋಧಾಸ್ - 6 ಪಂದ್ಯಗಳ ನಂತರ 18 ಅಂಕಗಳು

4) ಪಾಟ್ನಾ ಪೈರೇಟ್ಸ್ - 5 ಪಂದ್ಯಗಳ ನಂತರ 16 ಅಂಕಗಳು

5) ತೆಲುಗು ಟೈಟಾನ್ಸ್ - 6 ಪಂದ್ಯಗಳ ನಂತರ 16 ಅಂಕಗಳು

6) ಹರಿಯಾಣ ಸ್ಟೀಲರ್ಸ್ - 4 ಪಂದ್ಯಗಳ ನಂತರ 15 ಅಂಕಗಳು

7) ಜೈಪುರ ಪಿಂಕ್ ಪ್ಯಾಂಥರ್ಸ್ - 5 ಪಂದ್ಯಗಳ ನಂತರ 14 ಅಂಕಗಳು

8) ಯು ಮುಂಬಾ - 4 ಪಂದ್ಯಗಳ ನಂತರ 13 ಅಂಕಗಳು

9) ದಬಾಂಗ್ ದೆಹಲಿ ಕೆಸಿ - 6 ಪಂದ್ಯಗಳ ನಂತರ 13 ಅಂಕಗಳು

10) ಬೆಂಗಾಲ್ ವಾರಿಯರ್ಸ್ - 4 ಪಂದ್ಯಗಳ ನಂತರ 12 ಅಂಕಗಳು

11) ಗುಜರಾತ್ ಜೈಂಟ್ಸ್ - 4 ಪಂದ್ಯಗಳ ನಂತರ 7 ಅಂಕಗಳು

12) ಬೆಂಗಳೂರು ಬುಲ್ಸ್ - 6 ಪಂದ್ಯಗಳ ನಂತರ 7 ಅಂಕಗಳು

ಪ್ರೊ ಕಬಡ್ಡಿ ಲೀಗ್ 2024 ರ ಟಾಪ್ 5 ರೈಡರ್‌ಗಳು

1) ಪವನ್ ಕುಮಾರ್ ಸೆಹ್ರಾವತ್ (ತೆಲುಗು ಟೈಟಾನ್ಸ್) - 65 ರೇಡ್ ಪಾಯಿಂಟ್‌ಗಳು

2) ಆಶು ಮಲಿಕ್ (ದಬಾಂಗ್ ದೆಹಲಿ ಕೆಸಿ) - 64 ರೇಡ್ ಪಾಯಿಂಟ್‌ಗಳು

3) ದೇವಾಂಕ್ (ಪಾಟ್ನಾ ಪೈರೇಟ್ಸ್) - 61 ರೇಡ್ ಪಾಯಿಂಟ್‌ಗಳು

4) ನರೇಂದ್ರ ಕಾಂಡೋಲಾ (ತಮಿಳು ತಲೈವಾಸ್) - 50 ರೇಡ್ ಪಾಯಿಂಟ್‌ಗಳು

5) ಭರತ್ ಹೂಡಾ (ಯುಪಿ ಯೋಧಾಸ್) - 49 ರೇಡ್ ಪಾಯಿಂಟ್‌ಗಳು

ಪ್ರೊ ಕಬಡ್ಡಿ ಲೀಗ್ 2024 ರ ಟಾಪ್ 5 ಡಿಫೆಂಡರ್‌ಗಳು:

1) ನಿತಿನ್ ರಾವಲ್ (ಬೆಂಗಳೂರು ಬುಲ್ಸ್) - 22 ಟ್ಯಾಕಲ್ ಪಾಯಿಂಟ್‌ಗಳು

2) ಸುಮಿತ್ ಸಾಂಗ್ವಾನ್ (ಯುಪಿ ಯೋಧಾಸ್) - 22 ಟ್ಯಾಕಲ್ ಪಾಯಿಂಟ್‌ಗಳು

3 ) ಗೌರವ್ ಖತ್ರಿ (ಪುನೇರಿ ಪಲ್ಟನ್) - 21 ಟ್ಯಾಕಲ್ ಪಾಯಿಂಟ್‌ಗಳು

4) ಅಂಕಿತ್ ಜಗ್ಲಾನ್ (ಪಾಟ್ನಾ ಪೈರೇಟ್ಸ್) - 18 ಟ್ಯಾಕಲ್ ಪಾಯಿಂಟ್‌ಗಳು

5) ನಿತೀಶ್ ಕುಮಾರ್ (ತಮಿಳು ತಲೈವಾಸ್) - 17 ಟ್ಯಾಕಲ್ ಪಾಯಿಂಟ್‌ಗಳು

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ