logo
ಕನ್ನಡ ಸುದ್ದಿ  /  ಕ್ರೀಡೆ  /  Pv Sindhu: ಕಾಮನ್‌ವೆಲ್ತ್ ಗೇಮ್ಸ್ ಸಿಂಗಲ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಪಿವಿ ಸಿಂಧು

PV Sindhu: ಕಾಮನ್‌ವೆಲ್ತ್ ಗೇಮ್ಸ್ ಸಿಂಗಲ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಪಿವಿ ಸಿಂಧು

HT Kannada Desk HT Kannada

Aug 08, 2022 03:58 PM IST

google News

ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧು

  • ಸ್ಟಾರ್ ಷಟ್ಲರ್ ಪಿವಿ ಸಿಂಧು ಕಾಮನ್‌ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಕ್ರೀಡಾಕೂಟದಲ್ಲಿ ಅವರು ಸಿಂಗಲ್ಸ್ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು.

ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧು
ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧು

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು ಕೆನಡಾದ ಮಿಚೆಲ್ ಲೀ ಅವರನ್ನು 21-15, 21-13 ಸೆಟ್‌ಗಳಿಂದ ಸುಲಭವಾಗಿ ಸೋಲಿಸಿದರು. ಸಿಂಧು ಕಾಮನ್‌ವೆಲ್ತ್‌ ಗೇಮ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದಿದ್ದು ಇದೇ ಮೊದಲು. ಹಿಂದಿನ ಪಂದ್ಯಗಳಲ್ಲಿ ಮಿಶ್ರ ತಂಡ ಚಿನ್ನ ಗೆದ್ದು ಸಿಂಗಲ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವುದು ಖಚಿತ ಎಂದು ಹೇಳಿದ್ದರು. ಮೊದಲಿನಿಂದಲೂ ಎದುರಾಳಿಗಳನ್ನು ಮಣಿಸಿ ಫೈನಲ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.

ಫೈನಲ್‌ನಲ್ಲಿ ಆರಂಭದಿಂದಲೂ ಎದುರಾಳಿ ಮಿಚೆಲಿ ಮೇಲೆ ಪ್ರಾಬಲ್ಯ ಮೆರೆದರು. ಯಾವುದೇ ಸಂದರ್ಭದಲ್ಲೂ ಆಕೆ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಸಿಂಧು 21-15ರಿಂದ ಮೊದಲ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್ ನಲ್ಲೂ ಸಿಂಧು ಆರಂಭದಿಂದಲೇ ಮುನ್ನಡೆ ಮುಂದುವರಿಸಿದರು. ಪಂದ್ಯ ಮಧ್ಯಂತರದಲ್ಲಿ 11-6ರಲ್ಲಿ ಮುನ್ನಡೆಯಿತು.

ವಿರಾಮದ ನಂತರ ಎದುರಾಳಿ ಲೀ ಆಕ್ರಮಣಕಾರಿ ಆಟವಾಡಿದರು. ಇಬ್ಬರೂ ಅಂಕಕ್ಕಾಗಿ ಶ್ರಮಿಸಿದರು. ಒಂದೇ ರ್ಯಾಲಿಯಲ್ಲಿ 57 ಶಾಟ್‌ಗಳನ್ನು ಏಕಕಾಲದಲ್ಲಿ ಆಡಲಾಯಿತು. ಆ ಬಳಿಕ ಪಾಯಿಂಟ್ ಸಿಂಧು ಪಾಲಾಯಿತು.

ಈ ಗೆಲುವಿನೊಂದಿಗೆ ಸಿಂಧು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಪದಕಗಳನ್ನು ಪೂರ್ಣಗೊಳಿಸಿದರು. 2014ರಲ್ಲಿ ಕಂಚಿನ ಪದಕ, 2018ರಲ್ಲಿ ಬೆಳ್ಳಿ ಹಾಗೂ ಈಗ 2022ರಲ್ಲಿ ಚಿನ್ನದ ಪದಕ ಗೆದ್ದಿರುವುದು ವಿಶೇಷ. ಈಗಾಗಲೇ ಒಲಿಂಪಿಕ್ಸ್ ನಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಗೆದ್ದಿರುವ ಸಿಂಧು ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕದೊಂದಿಗೆ ಮತ್ತೊಂದು ಹಂತಕ್ಕೆ ಹೋಗಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ ವಿ ಸಿಂಧು ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್​​ನಲ್ಲಿ ಸೆಮಿಫೈನಲ್​ನಲ್ಲಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 3 ಗೇಮ್​​ಗಳ ಪಂದ್ಯದಲ್ಲಿ 21-13​ 19-21, 16-21ರ ಅಂತರದಲ್ಲಿ ಸೋಲು ಕಂಡಿದ್ದರು. ಮೊದಲ ಗೇಮ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಗೆದ್ದ ಸಿಂಧು 2ನೇ ಗೇಮ್​ನಲ್ಲಿ ರೋಚಕ ಸೋಲು ಕಂಡರು. ಆದರೆ ಮೂರನೇ ಗೇಮ್​ನಲ್ಲಿ ಜಪಾನ್ ಆಟಗಾರ್ತಿ ಮೇಲುಗೈ ಸಾಧಿಸಿ ಫೈನಲ್​ ಪ್ರವೇಶಿಸಿದರು. ಈ ಟೂರ್ನಮೆಂಟ್​ನಲ್ಲಿ ಸಿಂಧು ಪಡೆದ 2ನೇ ಪದಕ ಇದಾಗಿದೆ. 2014 ರ ಆವೃತ್ತಿಯಲ್ಲಿ ಸಿಂಧು ಕಂಚಿನ ಪದಕ ಪಡೆದಿದ್ದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು ಕೆನಡಾದ ಮಿಚೆಲ್ ಲೀ ಅವರನ್ನು 21-15, 21-13 ಸೆಟ್‌ಗಳಿಂದ ಸುಲಭವಾಗಿ ಸೋಲಿಸಿದರು.

ಸಿಂಧು ಅವರ ಸಾಧನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪಿವಿ ಸಿಂಧು ಚಾಂಪಿಯನ್‌ಗಳ ಚಾಂಪಿಯನ್ ಆಗಿದ್ದಾರೆ. ಶ್ರೇಷ್ಠತೆ ಏನೆಂದು ಈಕೆ ಪದೇ ಪದೇ ತೋರಿಸುತ್ತಾಳೆ. ಆಕೆಯ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. CWG ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಆಕೆಗೆ ಅಭಿನಂದನೆಗಳು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪಿವಿ ಸಿಂಧು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆಲ್ಲುವ ಮೂಲಕ ದೇಶದ ಹೃದಯ ಗೆದ್ದಿದ್ದಾರೆ. ನೀವು ಕೋರ್ಟಿನಲ್ಲಿ ಜಾದೂ ಸೃಷ್ಟಿಸಿ ಲಕ್ಷಾಂತರ ಜನರನ್ನು ಆಕರ್ಷಿಸಿದ್ದೀರಿ. ನಿಮ್ಮ ಪಾಂಡಿತ್ಯಪೂರ್ಣ ಗೆಲುವು ಬರ್ಮಿಂಗ್ ಹ್ಯಾಮ್ ನಲ್ಲಿ ನಮ್ಮ ತಿರಂಗಾವನ್ನು ಎತ್ತರಕ್ಕೆ ಹಾರುವಂತೆ ಮಾಡಿದ್ದೀರಿ. ನಮ್ಮ ರಾಷ್ಟ್ರಗೀತೆಯನ್ನು ಪ್ರತಿಧ್ವನಿಸಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮುರ್ಮು ಟ್ವೀಟ್ ಮಾಡಿದ್ದಾರೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ