IPLನಲ್ಲಿ ಭರಪೂರ ಮನರಂಜನೆ ನೀಡಿದ RCBಯ ಟಾಪ್-5 ಬ್ಯಾಟರ್ಸ್ ಇವರೇ ನೋಡಿ.!
Mar 03, 2023 08:29 AM IST
ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ
- IPL: ಎಂಟರ್ಟೈನ್ಮೆಂಟ್ ಕಾ ಬಾಪ್, ಎಂಟರ್ಟೈನ್ಮೆಂಟ್ ಅಡ್ಡ, ಮನರಂಜನೆಯ ತವರು ಎಂದು ಆರ್‌ಸಿಬಿ ಕರೆಸಿಕೊಂಡಿದೆ. ರೆಡ್ ಆರ್ಮಿ ನೀಡುತ್ತಿದ್ದ ಮನರಂಜನೆಯಷ್ಟು, ಯಾವ ತಂಡದಿಂದಲೂ ಸಿಗುವುದಿಲ್ಲ ಎಂಬುದು ವಿಶೇಷ. ಅದರಲ್ಲೂ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ಗೇಲ್ ನೀಡಿದ್ದ ನೀಡಿದ ಮನರಂಜನೆ ಎಂದೆಂದಿಗೂ ಜೀವಂತ.!
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆದರೆ ಬ್ಯಾಟಿಂಗ್ ಫೈರ್ಪವರ್ಗೆ ಮಾತ್ರ ಯಾವುದೇ ಕೊರತೆಯೇ ಇರಲಿಲ್ಲ. ಎಂಟರ್ಟೈನ್ಮೆಂಟ್ ಕಾ ಬಾಪ್, ಎಂಟರ್ಟೈನ್ಮೆಂಟ್ ಅಡ್ಡ, ಮನರಂಜನೆಯ ತವರು ಎಂದೆಲ್ಲಾ ಕರೆಸಿಕೊಂಡಿದೆ ಬೆಂಗಳೂರು.! ರೆಡ್ ಆರ್ಮಿ ನೀಡುತ್ತಿದ್ದ ಮನರಂಜನೆಯಷ್ಟು, ಯಾವ ತಂಡದಿಂದಲೂ ಬರಲಿಲ್ಲ ಎಂಬುದು ವಿಶೇಷ.
ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಮೊತ್ತ, ಕಡಿಮೆ ಮೊತ್ತ, ಜೊತೆಯಾಟ, ಶತಕಗಳು, ರನ್.. ಹೀಗೆ ಪ್ರತಿಯೊಂದರಲ್ಲೂ ಆರ್ಸಿಬಿಯೇ ಮುಂದಿದೆ. ಅದರಲ್ಲೂ ಸೂಪರ್ ಸ್ಟಾರ್ ಬ್ಯಾಟರ್ಗಳು ನೀಡುತ್ತಿದ್ದ ಪವರ್ ಪ್ಯಾಕ್ ಇನ್ನಿಂಗ್ಸ್ಗಳು, ಕ್ರಿಕೆಟ್ ಲೋಕವನ್ನೇ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದವು. ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಎಂಟರ್ಟೈನ್ ನೀಡಿದ RCBಯ ಸಾರ್ವಕಾಲಿಕ ಟಾಪ್-5 ಬ್ಯಾಟರ್ಸ್ ಯಾರೆಂಬುದನ್ನು ಈ ಮುಂದೆ ನೋಡೋಣ..!
1. ಎಬಿ ಡಿವಿಲಿಯರ್ಸ್
AB ಡಿವಿಲಿಯರ್ಸ್.! IPLನಲ್ಲಿ ಅವರ ಅಸಾಮಾನ್ಯ ಬ್ಯಾಟಿಂಗ್, ಅತ್ಯದ್ಭುತ ಇನ್ನಿಂಗ್ಸ್ಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಆರ್ಸಿಬಿಯ ರಿಯಲ್ ಟ್ರಬಲ್ ಶೂಟರ್. ಸಂಕಷ್ಟದ ಸಮಯದಲ್ಲೂ ಸಿಂಗಲ್ ಶೇರ್ನಂತೆ ಘರ್ಜಿಸುತ್ತಿದ್ದರು. ಆರ್‌ಸಿಬಿ ಆಪತ್ಭಾಂಧವ.! IPLನಲ್ಲಿ ಆರ್‌ಸಿಬಿ ಪರ 145 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದು 39.71 ಸರಾಸರಿ, 151.69 ಸ್ಟ್ರೈಕ್ರೇಟ್ನಲ್ಲಿ 4,491 ರನ್ ಕಲೆ ಹಾಕಿದ್ದಾರೆ. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದ ಎಬಿಡಿ, ಬ್ಯಾಟಿಂಗ್ಗೆ ಕ್ರೀಸ್ಗೆ ಬಂದರೆ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುತ್ತಿದ್ದಂತೂ ಸುಳ್ಳಲ್ಲ.
2. ಕ್ರಿಸ್ ಗೇಲ್
ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್, ಟಿ20 ಕ್ರಿಕೆಟ್ಗೆ ಸಮಾನಾರ್ಥಕ ಪದ ಇದ್ದ ಹಾಗೆ.! ಆರಂಭಿಕನಾಗಿ ವಿಧ್ವಂಸಕ ಬ್ಯಾಟಿಂಗ್ ನಡೆಸಿ ಚುಟುಕು ಫಾರ್ಮೆಟ್ನಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಟ್ರೆಂಡ್‌ಸೆಟರ್.! ಕ್ರೀಸ್ಗೆ ಬಂದರೆ ದಂಡಿಸುವುದನ್ನೇ ಕೆಲಸ ಮಾಡಿಕೊಂಡಿದ್ದ ಗೇಲ್, ಬೌಲರ್ಗಳು ಸುಸ್ತಾಗುವವರೆಗೂ ಬಿಡುತ್ತಿರಲಿಲ್ಲ. RCB ಪರ ಗೇಲ್ 84 ಇನ್ನಿಂಗ್ಸ್‌ಗಳ ಬ್ಯಾಟ್ ಬೀಸಿದ್ದು, 39.72 ಸರಾಸರಿಯಲ್ಲಿ 3,163 ರನ್ ಗಳಿಸಿದ್ದಾರೆ. 152.73 ಸ್ಟ್ರೈಕ್ ರೇಟ್ ಹೊಂದಿದ್ದರು. ಅಜೇಯ 175 ರನ್ ಗಳಿಸಿ IPL ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. 2013 ರ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಈ ದೊಡ್ಡ ಇನ್ನಿಂಗ್ಸ್ ಬಂದಿತ್ತು.
3. ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಆರ್ಸಿಬಿಯ ಬ್ರಾಂಡ್ ಅಂಬಾಸಿಡರ್.. ಒಂದೇ ತಂಡದ ಪರ ಹೆಚ್ಚು ಸೀಸನ್ಗಳನ್ನಾಡಿದ ಏಕೈಕ ಆಟಗಾರ. IPLನಲ್ಲಿ ಲೀಡಿಂಗ್ ಸ್ಕೋರರ್..! RCBಗೆ ದೇಶ-ವಿದೇಶಗಳಲ್ಲೂ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಲು ಕೊಹ್ಲಿಯೇ ಕಾರಣ ಎಂದರೆ ತಪ್ಪಾಗಲ್ಲ. ತನ್ನ ಕ್ಲಾಸ್ ಬ್ಯಾಟಿಂಗ್ನಿಂದಲೇ ಅಬ್ಬರಿಸುತ್ತಿದ್ದ ವಿರಾಟ್, ಫೀಲ್ಡ್ನಲ್ಲಿ ಸದಾ ಅಗ್ರೆಸ್ಸಿವ್ ಆಗಿರುತ್ತಿದ್ದರು. ಕ್ಯಾಪ್ಟನ್ ಆಗಿ ಎದುರಾಳಿ ವಿರುದ್ಧ ತಿರುಗಿ ಬೀಳುತ್ತಿದ್ದ ಮಾಜಿ ನಾಯಕ, 215 ಇನ್ನಿಂಗ್ಸ್‌ಗಳಲ್ಲಿ 36.20 ಸರಾಸರಿ ಮತ್ತು 129.15 ಸ್ಟ್ರೈಕ್ ರೇಟ್‌ನಲ್ಲಿ 6,624 ರನ್ ಗಳಿಸಿದ್ದಾರೆ.
ಕೊಹ್ಲಿ, ಗೇಲ್ ಮತ್ತು ಎಬಿ ಮೂವರು ಸೇರಿ IPLನಲ್ಲಿ ಹೊಸ ಭಾಷ್ಯ ಬರೆದ ಸೂಪರ್ ಸ್ಟಾರ್ಗಳು. ಮೂವರು ಕ್ರೀಸ್ನಲ್ಲಿ ಇದ್ದರೆ ಬೆಟ್ಟದಷ್ಟು ಸ್ಕೋರ್ ಅನ್ನೂ ಸುಲಭವಾಗಿ ಚೇಸ್ ಮಾಡುತ್ತಿದ್ದರು. ಸ್ಪೋಟಕ, ಆಕ್ರಮಣಕಾರಿ ಆಟದ ಮೂಲಕವೇ ಪಂದ್ಯದ ಚಿತ್ರಣ ಬದಲಿಸುತ್ತಿದ್ದರು.
4. ಗ್ಲೇನ್ ಮ್ಯಾಕ್ಸ್ವೆಲ್
ಕಳೆದೆರಡು ಸೀಸನ್ಗಳಲ್ಲಿ ಆಸ್ಟ್ರೇಲಿಯಾ ಸ್ಪೋಟಕ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಆರ್ಸಿಬಿಯ ಪವರ್ ಹಿಟ್ಟರ್ಗಳಲ್ಲಿ ಒಬ್ಬರು. ಘಟಾನುಘಟಿ ಬೌಲರ್ಗಳನ್ನೇ ಚಿಂದಿ ಉಡಾಯಿಸುತ್ತಿದ್ದ ಮ್ಯಾಕ್ಸಿ, ಧಮಾಕೇದರ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಆಕ್ರಮಣಕಾರಿ ಆಟದ ಮೂಲಕವೇ ಗಮನ ಸೆಳೆದಿದ್ದಾರೆ. ಕಳೆದೆರಡು ಆವೃತ್ತಿಗಳಿಂದ ಆರ್ಸಿಬಿಯ ಭಾಗವಾಗಿರುವ ಮ್ಯಾಕ್ಸಿ, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅಬ್ಬರಿಸುತ್ತಿದ್ದಾರೆ. ಆ ಮೂಲಕ ಪಂದ್ಯದ ಗೆಲುವಿನ ರೂವಾರಿ ಎನಿಸಿದ್ದಾರೆ. ಆರ್‌ಸಿಬಿ ಪರ 27 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಗ್ಲೇನ್, 35.39ರ ಸರಾಸರಿಯಲ್ಲಿ 152.43ರ ಸ್ಟ್ರೈಕ್ರೇಟ್ 814 ರನ್ ಗಳಿಸಿದ್ದಾರೆ.
5. ರಾಸ್ ಟೇಲರ್
ರಾಸ್ ಟೇಲರ್ ಆಯ್ಕೆ, ಅಚ್ಚರಿ ಎನಿಸಬಹುದು. 2008ರಲ್ಲಿ ಟೂರ್ನಿ ಶುರುವಾದ ಸಂದರ್ಭದಲ್ಲಿ ಟಿ20 ಕ್ರಿಕೆಟ್ನಲ್ಲಿ ಬಿಗ್ ಹಿಟ್ ಮಾಡಲು ಹೆದರುತ್ತಿದ್ದರು. ಆದರೆ ನ್ಯೂಜಿಲೆಂಡ್ ತಂಡದ ರಾಸ್ ಟೇಲರ್ ಮಾತ್ರ, ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡುತ್ತಿದ್ದರು. ಮಧ್ಯಮ ಕ್ರಮಾಂಕದಲ್ಲಿ ಗ್ರೇಟ್ ಫಿನಿಷರ್ ಆಗಿದ್ದರು. ಬೌಲರ್ಗಳಿಗೆ ನರಕ ದರ್ಶನ ತೋರಿಸುತ್ತಿದ್ದರು. ಎಬಿ ಡಿವಿಲಿಯರ್ಸ್ಗೂ ಮುಂಚೆಯೇ ಫ್ಯಾನ್ಸಿ ಶಾಟ್ಗಳನ್ನು ಆಡಿದ್ದರು. ತಂಡದಲ್ಲಿದ್ದದ್ದು ಅಲ್ಪಾವಧಿಯೇ ಆದರೂ ಅವರ ಇನ್ನಿಂಗ್ಸ್ಗಳು ಇಂದಿಗೂ ಕಣ್ಣಿಗೆ ರಾಚುತ್ತವೆ. ಆರ್‌ಸಿಬಿ ಪರ 20 ಇನ್ನಿಂಗ್ಸ್‌ಗಳಲ್ಲಿ 30.41 ಸರಾಸರಿ ಮತ್ತು 142.03 ಸ್ಟ್ರೈಕ್ ರೇಟ್‌ನಲ್ಲಿ 517 ರನ್ ಗಳಿಸಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್ ಎಂಟರ್ಟೈನ್ ನೀಡಿದ ಘಟಾನುಘಟಿ ಬ್ಯಾಟ್ಸ್ಮನ್ಗಳ ಪಟ್ಟಿ ದೊಡ್ಡದೇ ಇದೆ. ಆದರೆ ಅವರಲ್ಲಿ ಈ ಟಾಪ್ - 5 ಬ್ಯಾಟರ್ಸ್ ಪ್ರಮುಖರು.! ಐಪಿಎಲ್ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದವರು. ಅಭಿಮಾನಿಗಳ ಹೃದಯ ಗೆದ್ದವರು. ಚಿರಕಾಲ ತಮ್ಮ ಬ್ಯಾಟಿಂಗ್ ಅನ್ನು ಸ್ಮರಿಸುವಂತೆ ಮಾಡಿದ ದಿಗ್ಗಜರು. ಆರ್‌ಸಿಬಿ ಪರ ಎಂದೆಂದಿಗೂ ಇವರ ಬ್ಯಾಟಿಂಗ್ ವೈಭವ ಜೀವಂತ.!