logo
ಕನ್ನಡ ಸುದ್ದಿ  /  ಕ್ರೀಡೆ  /  Wpl2023: ಇಂದಿನಿಂದ Wpl ಹಬ್ಬ, ಮುಂಬೈಗೆ ಗುಜರಾತ್​ ಸವಾಲು, ಬಹುಮಾನ ಮೊತ್ತ ಎಷ್ಟು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

WPL2023: ಇಂದಿನಿಂದ WPL ಹಬ್ಬ, ಮುಂಬೈಗೆ ಗುಜರಾತ್​ ಸವಾಲು, ಬಹುಮಾನ ಮೊತ್ತ ಎಷ್ಟು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

HT Kannada Desk HT Kannada

Mar 04, 2023 08:15 AM IST

google News

ಗುಜರಾತ್​ ಜೈಂಟ್ಸ್​​ V/S ಮುಂಬೈ ಇಂಡಿಯನ್ಸ್​

    • WPL2023: ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್​ ಅಂಬಾನಿ ಒಡೆತನದ ಗುಜರಾತ್​ ಜೈಂಟ್ಸ್​​​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ವಿದೇಶಿ ಆಟಗಾರ್ತಿಯರ ಜೊತೆಗೆ ದೇಶೀಯ ಆಟಗಾರ್ತಿಯರು ಕ್ರಿಕೆಟ್​​​​​ನ ರಂಗು ಮತ್ತಷ್ಟು ಹೆಚ್ಚಿಸಲಿದ್ದಾರೆ.
ಗುಜರಾತ್​ ಜೈಂಟ್ಸ್​​ V/S ಮುಂಬೈ ಇಂಡಿಯನ್ಸ್​
ಗುಜರಾತ್​ ಜೈಂಟ್ಸ್​​ V/S ಮುಂಬೈ ಇಂಡಿಯನ್ಸ್​ (Twitter)

ಮಹಿಳಾ ಕ್ರಿಕೆಟ್​​​ನಲ್ಲಿ ಇಂದಿನಿಂದ ಹೊಸ ಮನ್ವಂತರ ಆರಂಭ.! ಬಿಸಿಸಿಐನ 2ನೇ ಕನಸಿಕ ಕೂಸಾದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​​ಗೆ ಐತಿಹಾಸಿಕ ಹೆಜ್ಜೆ.!ಮಹಿಳಾ ಕ್ರಿಕೆಟ್​​​​ನ ಹೊಸ ಮೈಲಿಗಲ್ಲಿಗೆ ಅಡಿಪಾಯ ಸಿಗಲಿದ್ದು, ಮಹಿಳಾ ಕ್ರಿಕೆಟರ್​​​​​​​ಗಳ ಬಹುಕಾಲದ ಕನಸು ನನಸಾಗುತ್ತಿದೆ. ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆಯ ಆರಂಭ ಎಂದೇ ಬಿಂಬಿತವಾಗಿರುವ ಮಹಿಳಾ ಪ್ರೀಮಿಯರ್‌ ಲೀಗ್‌ (WPL) T20 ಕ್ರಿಕೆಟ್‌ ಟೂರ್ನಿಗೆ ಇಂದು ಚಾಲನೆ ಸಿಗಲಿದೆ.

ಇಂದು ಮುಂಬೈ - ಗುಜರಾತ್​ ಮುಖಾಮುಖಿ.!

ಇವರೆಡು ದೇಶದ ಶ್ರೀಮಂತ ಉದ್ಯಮಿಗಳ ತಂಡಗಳು.! ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್​ ಅಂಬಾನಿ ಒಡೆತನದ ಗುಜರಾತ್​ ಜೈಂಟ್ಸ್​​​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ವಿದೇಶಿ ಆಟಗಾರ್ತಿಯರ ಜೊತೆಗೆ ದೇಶೀಯ ಆಟಗಾರ್ತಿಯರು ಕ್ರಿಕೆಟ್​​​​​ನ ರಂಗು ಮತ್ತಷ್ಟು ಹೆಚ್ಚಿಸಲಿದ್ದಾರೆ. ಹೊಡಿಬಡಿ ಆಟಕ್ಕೆ ಫೇಮಸ್​ ಆಗಿರುವ IPL​ನಂತೆ WPL ಕೂಡ ಅದೇ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ.

ಉಭಯ ತಂಡಗಳು ಬಲಿಷ್ಠ

ಮುಂಬೈ-ಗುಜರಾತ್​ ತಂಡಗಳಿಗೆ ಅನುಭವಿ ನಾಯಕಿಯರೇ ನೇಮಕಗೊಂಡಿದ್ದಾರೆ. ಹರ್ಮನ್​ ಪ್ರೀತ್​​ ಕೌರ್​, ಮುಂಬೈ ತಂಡವನ್ನು ಮುನ್ನಡೆಸಲಿದ್ದರೆ, ಗುಜರಾತ್​ ತಂಡಕ್ಕೆ ಬೆತ್​​ ಮೂನಿ ನಾಯಕಿಯಾಗಿದ್ದಾರೆ. ಉಭಯ ತಂಡಗಳು ತುಂಬಾ ಬಲಿಷ್ಠವಾಗಿದ್ದು, ಟೂರ್ನಿಯ ಮೊದಲ ಸವಾಲಿನಲ್ಲಿ ಯಾರು ಮೇಲುಗೈ ಸಾಧಿಸುತ್ತವೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಪಂದ್ಯದ ಆರಂಭ ಸಂಜೆ 7.30ಕ್ಕೆ.

ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ

ಚೊಚ್ಚಲ ಟೂರ್ನಿಯ ಕಾರಣ ಅದ್ಧೂರಿ ಸಮಾರಂಭಕ್ಕೆ ಬಿಸಿಸಿಐ ಸಿದ್ಧವಾಗಲಿದೆ. ಉದ್ಘಾಟನಾ ಪಂದ್ಯಕ್ಕೂ ಮುನ್ನ ಸಂಜೆ 5.30ಕ್ಕೆ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಾಲಿವುಡ್​ ನಟಿಯರಾದ ಕಿಯಾರಾ ಅಡ್ವಾಣಿ, ಕೃತಿ ಸನನ್​ ಹೆಜ್ಜೆ ಹಾಕಲಿದ್ದಾರೆ. ಗಾಯಕ ಎ.ಪಿ ಧಿಲ್ಲೋನ್​ ಗಾಯನ ಪ್ರದರ್ಶಿಸಲಿದ್ದಾರೆ.

ಒಟ್ಟು 10 ಕೋಟಿ ಬಹುಮಾನ

ಮಹಿಳಾ ಪ್ರೀಮಿಯರ್​​ ಲೀಗ್​​ನ ಚೊಚ್ಚಲ ಆವೃತ್ತಿಯ ಒಟ್ಟು 10 ಕೋಟಿ.. ಚಾಂಪಿಯನ್​ ಅಲಂಕರಿಸಿದ ತಂಡಕ್ಕೆ 6 ಕೋಟಿ, ರನ್ನರ್​ಅಪ್​ ತಂಡ 3 ಕೋಟಿ ಗಳಿಸಲಿದೆ. ಮತ್ತು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ತಂಡಕ್ಕೆ 1 ಕೋಟಿ ಬಹುಮಾನ ಸಿಗಲಿದೆ. ಈ ಬಹುಮಾನದ ಮೊತ್ತವನ್ನು ಸಂಪೂರ್ಣವಾಗಿ ಮಹಿಳೆಯರಿಗೇ ಸಿಗಲಿದೆ ಎಂಬುದು ವಿಶೇಷ.

ಡಬಲ್​ ರೌಂಡ್​​ ರಾಬಿನ್​ ಲೀಗ್​​

ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್​ ಹಂತದಲ್ಲಿ ರೌಂಡ್​ ರಾಬಿನ್​ ಮಾದರಿಯಲ್ಲಿ ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ. ಲೀಗ್​ ಹಂತದಲ್ಲಿ ಎಲ್ಲಾ ತಂಡಗಳು ತಲಾ 8 ಪಂದ್ಯಗಳನ್ನು ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್​ ಪ್ರವೇಶಿಸಲಿದೆ. 2 - 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್​ ಪಂದ್ಯವನ್ನು ಆಡಲಿವೆ. ಇಲ್ಲಿ ಗೆದ್ದ ತಂಡ ಫೈನಲ್​ಗೆ ಅರ್ಹತೆ ಪಡೆಯಲಿದ್ದು, ಮಾರ್ಚ್​ 26ರಂದು ಫೈನಲ್​ ಪಂದ್ಯ ನಡೆಯಲಿದೆ.

2 ಸ್ಟೇಡಿಯಂನಲ್ಲೇ ಪಂದ್ಯಗಳು

ಇಂಡಿಯನ್​ ಪ್ರೀಮಿಯರ್​​ ಲೀಗ್​​ನಂತೆ, ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲಿ ಎಲ್ಲಾ ಪಂದ್ಯಗಳು ಹೋಮ್​ ಮತ್ತು ಅವೇ ಮಾದರಿಯಲ್ಲಿ ನಡೆಯುವುದಿಲ್ಲ. ಎಲ್ಲಾ ಟಿ20 ಲೀಗ್​, ಪ್ಲೇ ಆಫ್​, ಫೈನಲ್​ ಪಂದ್ಯಗಳು ಮುಂಬೈನ ಡಿವೈ ಪಾಟೀಲ್​​ ಹಾಗೂ ಬ್ರೆಬೋರ್ನ್​​ ಮೈದಾನಗಳಲ್ಲಿ ನಡೆಯಲಿವೆ.

ಮುಂಬೈ ಇಂಡಿಯನ್ಸ್ ತಂಡ (MI)

ಹರ್ಮನ್‌ಪ್ರೀತ್ ಕೌರ್ (ನಾಯಕಿ), ನಟಾಲಿ ಸಿವರ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಯ್ಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ಜಿಂತಿಮಣಿ ಕಲಿತಾ, ನೀಲಂ ಬಿಷ್ಟ್.

ಗುಜರಾತ್ ಜೈಂಟ್ಸ್ ತಂಡ (GG)

ಬೆತ್ ಮೂನಿ (ನಾಯಕಿ), ಆ್ಯಶ್ಲೇ ಗಾರ್ಡ್ನರ್, ಸೋಫಿ ಡಂಕ್ಲಿ, ಅನ್ನಾ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ್​​ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ಡಿ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ನಮ್ ಶಕೀಲ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ