Umesh Yadav: 'ನನ್ನ ಕೆಲಸ ರನ್ ಗಳಿಸೋದು ಅಷ್ಟೇ'; ರೋಹಿತ್ ನೀಡಿದ ಸಂದೇಶದ ಬಗ್ಗೆ ತಿಳಿಸಿದ ಯಾದವ್
Mar 02, 2023 09:41 PM IST
ಉಮೇಶ್ ಯಾದವ್
- “ಕ್ರಿಕೆಟ್‌ನಲ್ಲಿ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ನಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಅಲ್ಲದೆ ಬಿಗಿಯಾಗಿ ಬೌಲಿಂಗ್ ಮಾಡುತ್ತೇವೆ. ಇದು ನಮ್ಮ ಬ್ಯಾಟರ್‌ಗಳಿಗಾಗಲಿ ಅಥವಾ ಅವರ ಬ್ಯಾಟ್ಸ್‌ಮನ್‌ಗಳಿಗಾಗಲಿ ಸುಲಭದ ಪಿಚ್ ಅಲ್ಲ. ಸ್ಟಂಪ್ ಬಿಟ್ಟು ಬಂತು ದೊಡ್ಡ ಹೊಡೆತ ಆಡುವುದು ಸುಲಭ ಅಲ್ಲ” ಎಂದು ಉಮೇಶ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಅಂತಿಮ ಕ್ಷಣದಲ್ಲಿ ಉಮೇಶ್ ಯಾದವ್ ಅಭಿಮಾನಿಗಳನ್ನು ರಂಜಿಸಿದ್ದರು. ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಮತ್ತು ಬಳಗವು ಮೂರಂಕಿ ಮೊತ್ತ ಗಳಿಸಲು ಉಮೇಶ್ ನೆರವಾದರು. ಎರಡು ಸಿಕ್ಸರ್ ಸಹಿತ ಅವರ ಪವರ್ ಹಿಟ್ಟಿಂಗ್ ವಿರಾಟ್ ಕೊಹ್ಲಿಯ ಮುಖದಲ್ಲೂ ನಗು ತರಿಸಿತು. ಆದರೆ, 2ನೇ ಇನ್ನಿಂಗ್ಸ್‌ನಲ್ಲಿ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಅವರ ಎಸೆತದಲ್ಲಿ ಸ್ಟಾರ್ ವೇಗಿಯು ಡಕ್ ಔಟ್ ಆಗುವ ಮೂಲಕ ಮತ್ತೊಮ್ಮೆ ಸ್ಫೋಟಕ ಪ್ರದರ್ಶನ ನೀಡಲು ವಿಫಲರಾದರು.
ಭಾರತ ಇನ್ನಿಂಗ್ಸ್‌ನ 57ನೇ ಓವರ್‌ನಲ್ಲಿ ಲಿಯಾನ್ ಬೌಲಿಂಗ್‌ಗೆ ಸ್ಲಾಗ್-ಸ್ವೀಪ್ ಮಾಡಲು ಹೋದ ವಿದರ್ಭ ಎಕ್ಸ್‌ಪ್ರೆಸ್, ಬೌಂಡರಿ ಕ್ಲಿಯರ್ ಮಾಡುವಲ್ಲಿ ವಿಫಲರಾದರು. ಡೀಪ್ ಮಿಡ್ ವಿಕೆಟ್‌ನಲ್ಲಿ ನಿಂತಿದ್ದ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್, ಉಮೇಶ್ ಯಾದವ್ ಅವರು ಸಿಕ್ಸರ್‌ಗಟ್ಟಿದ್ದ ಚೆಂಡನ್ನು ಕ್ಯಾಚ್ ಪಡೆದರು. ಉಮೇಶ್ ನಿರ್ಗಮನದ ನಂತರ, ಇಂದೋರ್‌ನಲ್ಲಿ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 163 (60.3 ಓವರ್‌ಗಳು) ರನ್‌ಗಳಿಗೆ ಆಲೌಟ್ ಆಯ್ತು. ಉಮೇಶ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಮೊಹಮ್ಮದ್ ಸಿರಾಜ್ ಅವರನ್ನು ಕೂಡಾ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಲಿಯಾನ್ ತಮ್ಮ ಎಂಟು ವಿಕೆಟ್‌ಗಳ ಬೇಟೆಯನ್ನು ಪೂರ್ಣಗೊಳಿಸಿದರು.
ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್, ಆಸ್ಟ್ರೇಲಿಯದ ಬೌಲರ್‌ಗಳ ಮೇಲೆ ದಾಳಿ ಮಾಡುವ ಬಗ್ಗೆ ನಾಯಕ ರೋಹಿತ್ ಅವರಿಂದ ಸಂದೇಶವೇನಾದರೂ ಬಂದಿತ್ತಾ ಎಂಬ ಬಗ್ಗೆ ಕೇಳಲಾಯ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಬ್ಯಾಟಿಂಗ್‌ಗೆ ಹೋದಾಗ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಲು ಯಾವುದೇ ಸಂದೇಶ ಬಂದಿರಲಿಲ್ಲ. ಈ ಕಠಿಣ ವಿಕೆಟ್‌ನಲ್ಲಿ ರನ್ ಗಳಿಸುವುದು ನನ್ನ ಕೆಲಸವಾಗಿತ್ತು. ಇಲ್ಲಿ ರನ್ ಗಳಿಸುವುದು ಕಷ್ಟ. ಡಿಫೆಂಡ್ ಮಾಡಿ ಅಂತಿಮವಾಗಿ ಔಟಾಗುವುದಕ್ಕಿಂತ ಈ ರೀತಿಯ ವಿಕೆಟ್‌ನಲ್ಲಿ ಉತ್ತಮ ಶಾಟ್‌ಗಳನ್ನು ಆಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ. ನಾನು 10ರಿಂದ 20 ರನ್ ಗಳಿಸಿದ್ದರೂ, ಅದು ತಂಡದ ಮುನ್ನಡೆಯನ್ನು 90ಕ್ಕೆ ಕೊಂಡೊಯ್ಯುತ್ತಿತ್ತು. ಅದು ನನಗೆ ಹೆಚ್ಚು ಮುಖ್ಯ" ಎಂದು ಉಮೇಶ್ ಸುದ್ದಿಗಾರರಿಗೆ ತಿಳಿಸಿದರು.
“ಕ್ರಿಕೆಟ್‌ನಲ್ಲಿ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ನಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಅಲ್ಲದೆ ಬಿಗಿಯಾಗಿ ಬೌಲಿಂಗ್ ಮಾಡುತ್ತೇವೆ. ಇದು ನಮ್ಮ ಬ್ಯಾಟರ್‌ಗಳಿಗಾಗಲಿ ಅಥವಾ ಅವರ ಬ್ಯಾಟ್ಸ್‌ಮನ್‌ಗಳಿಗಾಗಲಿ ಸುಲಭದ ಪಿಚ್ ಅಲ್ಲ. ಸ್ಟಂಪ್ ಬಿಟ್ಟು ಬಂತು ದೊಡ್ಡ ಹೊಡೆತ ಆಡುವುದು ಸುಲಭ ಅಲ್ಲ” ಎಂದು ಉಮೇಶ್ ಹೇಳಿದ್ದಾರೆ.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಉಮೇಶ್ ಯಾದವ್, ಭರ್ಜರಿ 2 ಸಿಕ್ಸರ್ ಹಾಗೂ 1 ಫೋರ್ ಸಹಿತ 17 ರನ್ ಸಿಡಿಸಿದ್ದರು. ಆ ಎರಡು ಸಿಕ್ಸರ್‌ನೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 24 ಸಿಕ್ಸರ್‌ಗಳನ್ನು ಪೂರೈಸಿದರು. ಆ ಮೂಲಕ ಅವರು ಕಿಂಗ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದರು.
ನಿನ್ನೆಯಷ್ಟೇ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ದಾಖಲೆ ನಿರ್ಮಿಸಿದ್ದ ವಿದರ್ಭ ಎಕ್ಸ್‌ಪ್ರೆಸ್, ಇಂದು ಬೌಲಿಂಗ್‌ನಲ್ಲಿ ದಾಖಲೆ ಮಾಡಿದ್ದಾರೆ. ಉಮೇಶ್ ಯಾದವ್ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆಗೂಡಿ, ಇಂದು ಆಸ್ಟ್ರೇಲಿಯನ್ ಬ್ಯಾಟಿಂಗ್ ಲೈನಪ್‌ಗೆ ಶಾಕ್ ಕೊಟ್ಟರು. 2 ನೇ ದಿನದ ಮೊದಲ ಸೆಷನ್‌ನಲ್ಲಿ ಒಂದು ಹಂತದಲ್ಲಿ 186 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸೀಸ್, ಆ ಬಳಿಕ 197 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯ್ತು.
ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವುದರೊಂದಿಗೆ, ಉಮೇಶ್ ಭಾರತದಲ್ಲಿ ತಮ್ಮ 100ನೇ ಟೆಸ್ಟ್ ವಿಕೆಟ್ ಪಡೆದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈಲಿಗಲ್ಲು ಸಾಧಿಸಿದ ದೇಶದ ಐದನೇ ವೇಗದ ಬೌಲರ್ ಎನಿಸಿಕೊಂಡರು.