logo
ಕನ್ನಡ ಸುದ್ದಿ  /  ಕ್ರೀಡೆ  /  Wpl 2023 Tickets: ವನಿತೆಯರಿಗೆ ವಿಮೆನ್ಸ್ ಪ್ರೀಮಿಯರ್ ಲೀಗ್ ಟಿಕೆಟ್‌ ಉಚಿತ! ಪುರುಷರಿಗೆ ಕೇವಲ ನೂರು ರೂಪಾಯಿ

WPL 2023 tickets: ವನಿತೆಯರಿಗೆ ವಿಮೆನ್ಸ್ ಪ್ರೀಮಿಯರ್ ಲೀಗ್ ಟಿಕೆಟ್‌ ಉಚಿತ! ಪುರುಷರಿಗೆ ಕೇವಲ ನೂರು ರೂಪಾಯಿ

Jayaraj HT Kannada

Mar 03, 2023 05:54 PM IST

google News

ಆರ್‌ಸಿಬಿ ಆಟಗಾರ್ತಿಯರು

    • ಚೊಚ್ಚಲ ಸೀಸನ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ಮಾತ್ರ ನಡೆಯುತ್ತಿದೆ. ಪಂದ್ಯಗಳು ಬ್ರಬೋರ್ನ್ ಸ್ಟೇಡಿಯಂ ಮತ್ತು ಡಾ.ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಆರ್‌ಸಿಬಿ ಆಟಗಾರ್ತಿಯರು
ಆರ್‌ಸಿಬಿ ಆಟಗಾರ್ತಿಯರು (RCB twitter)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌(Women's Premier League)ನ ಮೊದಲ ಋತುವಿಗೆ ನಾಳೆ (ಮಾರ್ಚ್ 4, ಶನಿವಾರ) ಅದ್ಧೂರಿ ಚಾಲನೆ ಸಿಗಲಿದೆ. ಕಳೆದ ತಿಂಗಳು ವಾಣಿಜ್ಯ ನಗರಿ ಮುಂಬೈನಲ್ಲಿ ಚೊಚ್ಚಲ ಸೀಸನ್‌ಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಭಾರತ ವನಿತೆಯರ ಕ್ರಿಕೆಟ್‌ ತಂಡದ ಸ್ಟೈಲಿಶ್‌ ಆಟಗಾರ್ತಿ ಸ್ಮೃತಿ ಮಂಧನ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದರು. ಬರೋಬ್ಬರಿ 3.4 ಕೋಟಿ ರೂಪಾಯಿಗೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಖರೀದಿಸಿತು. ಮತ್ತೊಂದೆಡೆ ಆಸೀಸ್ ತಾರೆ ಆಶ್ಲೀಗ್ ಗಾರ್ಡ್ನರ್ ಅವರನ್ನು ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು 3.2 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಕರೆಸಿಕೊಂಡಿತು.

ನವಿ ಮುಂಬೈನಲ್ಲಿರುವ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಶನಿವಾರ ಡಬ್ಲ್ಯೂಪಿಎಲ್‌ ಉದ್ಘಾಟನಾ ಸೀಸನ್‌ನ ಮೊದಲ ಪಂದ್ಯ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ (MI) ತಂಡವು ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ 2023ರ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?

ವಿಶೇಷವೆಂದರೆ, ಡಬ್ಲ್ಯೂಪಿಎಲ್‌ 2023ರ ಟಿಕೆಟ್‌ಗಳು ಭಾರತದಲ್ಲಿ ಎಲ್ಲಾ ಮಹಿಳೆಯರು ಅಥವಾ ಹುಡುಗಿಯರಿಗೆ ಸಂಪೂರ್ಣ ಉಚಿತವಾಗಿದೆ. ಟಿಕೆಟ್‌ ಬುಕ್‌ ಮಾಡುವ ವೇಳೆ ‘ಮಹಿಳೆ’ ಎಂದು ನಮೂದಿಸಿ ಈ ಉಚಿತ ಟಿಕೆಟ್‌ ಖರೀದಿಸಬಹುದು. ಇದೇ ವೇಳೆ ಪುರುಷರಿಗೆ ಶನಿವಾರದ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಅತ್ಯಂತ ಕಡಿಮೆ ಬೆಲೆಗೆ ಟಿಕೆಟ್‌ ಮಾರಾಟ ಮಾಡಲಾಗುತ್ತದೆ. BookMyShow ಅಪ್ಲಿಕೇಶನ್‌ನಲ್ಲಿ ತಲಾ 100 ರೂಪಾಯಿಯಂತೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವ ಹಂತಗಳು ಇಲ್ಲಿವೆ:

ಹಂತ 1: BookMyShow ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ನಗರದಲ್ಲಿ ಮುಂಬೈಯನ್ನು ಆಯ್ಕೆಮಾಡಿ.

ಹಂತ 3: ನೀವು ಹಾಜರಾಗಲು ಬಯಸುವ WPL 2023 ಪಂದ್ಯಗಳನ್ನು ಆಯ್ಕೆಮಾಡಿ.

ಹಂತ 4: ಆಸನ ವರ್ಗ ಮತ್ತು ಟಿಕೆಟ್ ಪ್ರಮಾಣವನ್ನು ಆಯ್ಕೆ ಮಾಡಿ.

ಹಂತ 5: ನೀವು ತುಂಬಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ವಿವರಗಳನ್ನು ಭರ್ತಿ ಮಾಡಿ.

ಹಂತ 6: ಹಣ ಪಾವತಿ ಮಾಡಿ.

ಹಂತ 7: ನಿಮ್ಮ ಟಿಕೆಟ್‌ಗಳ ದೃಢೀಕರಣವನ್ನು ಸ್ವೀಕರಿಸಿದ ಬಳಿಕ ಅವುಗಳನ್ನು ಆನ್‌ಲೈನ್‌ನಲ್ಲೇ ಪಡೆಯಿರಿ.

ಪಂದ್ಯಗಳು ನಡೆಯುವ ಸ್ಥಳಗಳು

ಚೊಚ್ಚಲ ಸೀಸನ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ಮಾತ್ರ ನಡೆಯುತ್ತಿದೆ. ಪಂದ್ಯಗಳು ಬ್ರಬೋರ್ನ್ ಸ್ಟೇಡಿಯಂ ಮತ್ತು ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿವೆ.

ನೇರಪ್ರಸಾರ ಹೇಗೆ?

WPL 2023ರ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಮೊಬೈಲ್‌ ಮೂಲಕ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ (Jio Cinema) ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಅಲ್ಲದೆ https://www.hindustantimes.com/cricket ನಲ್ಲಿ ಲೈವ್ ಸ್ಕೋರ್ ಮತ್ತು ಲೈವ್ ಅಪ್ಡೇಟ್‌ಗಳನ್ನು ನೋಡಬಹುದು.

ಉದ್ಘಾಟನಾ ಸಮಾರಂಭ

ಡಬ್ಲ್ಯೂಪಿಎಲ್‌ 2023ರ ಉದ್ಘಾಟನಾ ಸಮಾರಂಭವು ಮುಂಬೈನ ಡಾ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬಾಲಿವುಡ್ ತಾರೆಗಳಾದ ಕೃತಿ ಸನೋನ್ ಮತ್ತು ಕಿಯಾರಾ ಅಡ್ವಾಣಿ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಅಲ್ಲದೆ ಖ್ಯಾತ ಗಾಯಕ ಎಪಿ ಧಿಲ್ಲೋನ್ ಸಹ ಪ್ರದರ್ಶನ ನೀಡಲಿದ್ದಾರೆ. ಇದರ ನೇರಪ್ರಸಾರ ಮಾಡಲಾಗುತ್ತದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ