logo
ಕನ್ನಡ ಸುದ್ದಿ  /  ಕ್ರೀಡೆ  /  Women's Premier League: 'ಡಬ್ಲ್ಯೂಪಿಎಲ್ ಭಾರತವನ್ನು ಮಹಿಳಾ ಕ್ರಿಕೆಟ್‌ನ ಶಕ್ತಿ ಕೇಂದ್ರವನ್ನಾಗಿಸಲಿದೆ'

Women's Premier League: 'ಡಬ್ಲ್ಯೂಪಿಎಲ್ ಭಾರತವನ್ನು ಮಹಿಳಾ ಕ್ರಿಕೆಟ್‌ನ ಶಕ್ತಿ ಕೇಂದ್ರವನ್ನಾಗಿಸಲಿದೆ'

HT Kannada Desk HT Kannada

Mar 02, 2023 10:37 PM IST

google News

ಭಾರತೀಯ ಯುವತಿಯರಿಗೆ WPL ಉತ್ತಮ ವೇದಿಕೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದರು.

    • ಭಾರತೀಯ ಯುವತಿಯರಿಗೆ WPL ಉತ್ತಮ ವೇದಿಕೆಯಾಗಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಜನರ ಜೀವನದ ಭಾಗವಾಗಿಬಿಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಯುವತಿಯರಿಗೆ WPL ಉತ್ತಮ ವೇದಿಕೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದರು.
ಭಾರತೀಯ ಯುವತಿಯರಿಗೆ WPL ಉತ್ತಮ ವೇದಿಕೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದರು. (ANI)

ಜಾಗತಿಕ ಕ್ರಿಕೆಟ್‌ನಲ್ಲಿ ಬಹುನಿರೀಕ್ಷಿತ ವಿಮೆನ್ಸ್‌ ಪ್ರೀಮಿಯರ್ ಲೀಗ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ತುಂಬಾ ಶ್ರೀಮಂತ ಹಾಗೂ ಬಲಾಢ್ಯವಾಗಿರುವ ಭಾರತವು, ಅಂತಿಮವಾಗಿ ಮಹಿಳಾ ಕ್ರಿಕೆಟ್‌ನ ಶಕ್ತಿ ಕೇಂದ್ರವಾಗಲು ನೆರವಾಗುವ ಪ್ರಮುಖ ಟೂರ್ನಿಯೊಂದನ್ನು ನಡೆಸಲು ಸಿದ್ಧವಾಗಿದೆ.

ಡಬ್ಲ್ಯೂಪಿಎಲ್‌(WPL) ಭಾರತೀಯ ಕ್ರಿಕೆಟ್ ಮೇಲೆ, ಅದರಲ್ಲೂ ವನಿತೆಯರ ಕ್ರಿಕೆಟ್‌ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಈಗಾಗಲೇ ಹಲವು ದಿಗ್ಗಜರು ಉದ್ಘರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಚಾರ್ಲೆಟ್ ಎಡ್ವರ್ಡ್ ಕೂಡಾ ಈ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. “ಮಹಿಳಾ ಕ್ರಿಕೆಟ್‌ಗೆ ದಿ ಹಂಡ್ರೆಡ್ಸ್‌ (The Hundred) ನಿಜವಾಗಿಯೂ ವಿಶೇಷವಾಗಿದೆ. ಅದೇ ರೀತಿ WPL ಕೂಡಾ ಇನ್ನೂ ದೊಡ್ಡ ಹಂತಕ್ಕೆ ಹೋಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಭಾರತ ಕ್ರಿಕೆಟ್ ಮತ್ತು ಭಾರತ ತಂಡವನ್ನು ಒಂದೆರಡು ವರ್ಷಗಳಲ್ಲಿ ಇದು ಇನ್ನಷ್ಟು ಬಲಿಷ್ಠಗೊಳಿಸುತ್ತದೆ,” ಎಂದು ಮಾಜಿ ಇಂಗ್ಲಿಷ್ ಕ್ರಿಕೆಟಿಗ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಕುರಿತು ಮಾತನಾಡಿದ್ದಾರೆ.

“ಇದು ನಂಬಲಸಾಧ್ಯವಾದಷ್ಟು ಪ್ರತಿಭೆಗಳನ್ನು ಹೊರತೆಗೆಯಲಿದೆ. ಪಂದ್ಯಾವಳಿಯು ಮುಂದಿನ ಕೆಲವು ವರ್ಷಗಳಲ್ಲಿ ಭಾರತವನ್ನು ಮಹಿಳಾ ಕ್ರಿಕೆಟ್‌ನ ಶಕ್ತಿ ಕೇಂದ್ರವನ್ನಾಗಿ ರೂಪಿಸಲಿದೆ” ಎಂದು 23 ಟೆಸ್ಟ್ ಪಂದ್ಯಗಳು, 191 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 95 ಟಿ20 ಪಂದ್ಯಗಳನ್ನು ಆಡಿರುವ ಎಡ್ವರ್ಡ್ಸ್ ಹೇಳಿದರು. 1996ರಿಂದ 2016ರವರೆಗೆ ಅವರು ಇಂಗ್ಲೆಂಡ್‌ ಪರ ಆಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕಿಯಾಗಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿ, ಡಬ್ಲ್ಯುಪಿಎಲ್‌ನಂತಹ ಪಂದ್ಯಾವಳಿಯನ್ನು ಭಾರತೀಯ ಕ್ರಿಕೆಟ್ ಈವರೆಗೆ ಮಿಸ್‌ ಮಾಡಿಕೊಂಡಿತ್ತು ಎಂದು ಹೇಳಿದ್ದಾರೆ.

“ಡಬ್ಲ್ಯುಪಿಎಲ್ ಎಲ್ಲಾ ಭಾರತೀಯ ಆಟಗಾರ್ತಿಯರಿಗೆ ಉತ್ತಮ ವೇದಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಈ ಪಂದ್ಯಾವಳಿಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ, ಡಬ್ಲ್ಯುಬಿಬಿಎಲ್ ಮತ್ತು ಇಂಗ್ಲೆಂಡ್‌ನಲ್ಲಿ ದಿ ಹಂಡ್ರೆಡ್ ಟೂರ್ನಿಯೂ ತೆರೆಮರೆಯಲ್ಲಿದ್ದ ಸಾಕಷ್ಟು ತಾರೆಗಳನ್ನು ಹೊರತಂದಿದೆ. ಡಬ್ಲ್ಯುಪಿಎಲ್ ನಂತರ, ನಾವು ಖಂಡಿತವಾಗಿಯೂ ಕೆಲವು ಉತ್ತಮ ಪ್ರತಿಭೆಗಳನ್ನು ಪಡೆಯಲಿದ್ದೇವೆ” ಎಂದು ಹರ್ಮನ್‌ಪ್ರೀತ್ ವರ್ಚುವಲ್ ಸಂವಾದದ ಸಂದರ್ಭದಲ್ಲಿ ಹೇಳಿದರು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನೆಲದಲ್ಲಿ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಿದ ಅನುಭವವು, ಹೇಗೆ ತಮ್ಮ ಆಟವನ್ನು ಉತ್ತಮಗೊಳಿಸಲು ಸಹಾಯ ಮಾಡಿದೆ ಎಂಬುದನ್ನು ಭಾರತದ ನಾಯಕಿ ತಮ್ಮದೇ ಶೈಲಿಯಲ್ಲಿ ವಿವರಿಸಿದರು.

“ಸಾಗರೋತ್ತರ ಆಟಗಾರ್ತಿಯರನ್ನು ತಿಳಿದುಕೊಳ್ಳಲು ಮತ್ತು ಅವರ ಅನುಭವದ ಸಾರವನ್ನು ಪಡೆಯಲು ಡಬ್ಲ್ಯುಪಿಎಲ್ ಉತ್ತಮ ವೇದಿಕೆಯಾಗಿದೆ. ನಾನು ಡಬ್ಲ್ಯುಬಿಬಿಎಲ್ ಮತ್ತು ದಿ ಹಂಡ್ರೆಡ್‌ನಲ್ಲಿ ಆಡಿ ಪಡೆದ ಅನುಭವ ಮತ್ತು ಆತ್ಮವಿಶ್ವಾಸವನ್ನು, ಭಾರತದ ಯುವ ದೇಶೀಯ ಆಟಗಾರ್ತಿಯರು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಿಂದ ಪಡೆಯಬೇಕೆಂದು ನಾನು ಬಯಸುತ್ತೇನೆ” ಎಂದು ಎಂಐ ನಾಯಕಿ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮುಖ್ಯ ಕೋಚ್ ಬೆನ್ ಸಾಯರ್ ಅವರು ನ್ಯೂಜಿಲೆಂಡ್ ಮಹಿಳಾ ತಂಡದ ಉಸ್ತುವಾರಿಯಾಗಿದ್ದಾರೆ. ಅವರು ದಿ ಹಂಡ್ರೆಡ್ ಮತ್ತು ವಿಮೆನ್ಸ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ತರಬೇತುದಾರರಾಗಿದ್ದಾರೆ. WPL ಬಗ್ಗೆ ಮಾತನಾಡಿದ ಅವರು, “ಡಬ್ಲ್ಯುಬಿಬಿಎಲ್ ಮತ್ತು ದಿ ಹಂಡ್ರೆಡ್ ಸೃಷ್ಟಿಸಿರುವ ಪ್ರಭಾವವನ್ನು ನಾನು ನೋಡಿದ್ದೇನೆ. ಅದು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ” ಎಂದು ಸಾಯರ್ ಹೇಳಿದರು.

ಭಾರತೀಯ ಯುವತಿಯರಿಗೆ WPL ಉತ್ತಮ ವೇದಿಕೆಯಾಗಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಜನರ ಜೀವನದ ಭಾಗವಾಗಿಬಿಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ