logo
ಕನ್ನಡ ಸುದ್ದಿ  /  ಕ್ರೀಡೆ  /  Wpl 2023: ಮುಂಬೈ ಮತ್ತು ಗುಜರಾತ್ ನಡುವಿನ ಮೊದಲ ಪಂದ್ಯ ಮರುನಿಗದಿ; ರಾತ್ರಿ 8ಕ್ಕೆ ಪಂದ್ಯ ಆರಂಭ

WPL 2023: ಮುಂಬೈ ಮತ್ತು ಗುಜರಾತ್ ನಡುವಿನ ಮೊದಲ ಪಂದ್ಯ ಮರುನಿಗದಿ; ರಾತ್ರಿ 8ಕ್ಕೆ ಪಂದ್ಯ ಆರಂಭ

HT Kannada Desk HT Kannada

Mar 04, 2023 02:34 PM IST

google News

ಗುಜರಾತ್ ಮತ್ತು ಮುಂಬೈ ನಡುವೆ ಮೊದಲ ಪಂದ್ಯ

    • ಈ ಹಿಂದಿನ ವೇಳಾಪಟ್ಟಿ ಪ್ರಕಾರ, ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಬೇಕಿತ್ತು. ಟಾಸ್‌ ಪ್ರಕ್ರಿಯೆ 7.00 ಗಂಟೆಗೆ ನಡೆಯಬೇಕಿತ್ತು. ಆದರೆ, ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೊದಲ ಪಂದ್ಯವನ್ನು ಅರ್ಧ ಗಂಟೆ ಮುಂದೂಡಲಾಗಿದೆ.
ಗುಜರಾತ್ ಮತ್ತು ಮುಂಬೈ ನಡುವೆ ಮೊದಲ ಪಂದ್ಯ
ಗುಜರಾತ್ ಮತ್ತು ಮುಂಬೈ ನಡುವೆ ಮೊದಲ ಪಂದ್ಯ

ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ವಿಮೆನ್ಸ್‌ ಪ್ರೀಮಿಯರ್ ಲೀಗ್ (WPL) ಮೊದಲ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಸ್ಪಷ್ಟಪಡಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಟಾಸ್ ಪ್ರಕ್ರಿಯೆ ರಾತ್ರಿ 7.30ಕ್ಕೆ ನಡೆಯಲಿದೆ.

ಈ ಹಿಂದಿನ ವೇಳಾಪಟ್ಟಿ ಪ್ರಕಾರ, ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಬೇಕಿತ್ತು. ಟಾಸ್‌ ಪ್ರಕ್ರಿಯೆ 7.00 ಗಂಟೆಗೆ ನಡೆಯಬೇಕಿತ್ತು. ಆದರೆ, ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೊದಲ ಪಂದ್ಯವನ್ನು ಅರ್ಧ ಗಂಟೆ ಮುಂದೂಡಲಾಗಿದೆ.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಸಂಜೆ 6.25ಕ್ಕೆ ಪ್ರಾರಂಭವಾಗಲಿದೆ ಎಂದು ಮಂಡಳಿ ತಿಳಿಸಿದೆ. ಮೈದಾನಕ್ಕೆ ಅಭಿಮಾನಿಗಳ ಪ್ರವೇಶಕ್ಕಾಗಿ ಸಂಜೆ 4.00 ಗಂಟೆಗೆ ಕ್ರೀಡಾಂಗಣದ ಗೇಟ್‌ಗಳನ್ನು ತೆರೆಯಲಾಗುತ್ತದೆ. ಸಂಜೆ 6:25ಕ್ಕೆ ಪ್ರಾರಂಭವಾಗುವ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಅಭಿಮಾನಿಗಳು ವೀಕ್ಷಿಸಬಹುದು.

ಇಂದಿನ ಡಬ್ಲ್ಯೂಪಿಎಲ್‌ ಟೈಮ್‌ಲೈನ್‌

  • ಗೇಟ್‌ಗಳು ಓಪನ್‌: ಸಂಜೆ 4 ಗಂಟೆಗೆ
  • ಉದ್ಘಾಟನಾ ಸಮಾರಂಭ: ಸಂಜೆ 6:25
  • ಪಂದ್ಯ - ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್
  • ಟಾಸ್ ಪ್ರಕ್ರಿಯೆ: ಸಂಜೆ 7:30
  • ಪಂದ್ಯ ಆರಂಭ: ಸಂಜೆ 8

ಚೊಚ್ಚಲ ಟೂರ್ನಿಯ ಕಾರಣ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ ಸಿದ್ಧತೆ ನಡೆಸಿದೆ. ಉದ್ಘಾಟನಾ ಪಂದ್ಯಕ್ಕೂ ಮುನ್ನ ಸಂಜೆ 6:25 ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಾಲಿವುಡ್​ ನಟಿಯರಾದ ಕಿಯಾರಾ ಅಡ್ವಾಣಿ, ಕೃತಿ ಸನನ್​ ಹೆಜ್ಜೆ ಹಾಕಲಿದ್ದಾರೆ. ಗಾಯಕ ಎ.ಪಿ ಧಿಲ್ಲೋನ್​ ಗಾಯನ ಪ್ರದರ್ಶಿಸಲಿದ್ದಾರೆ.

ಆಸ್ಟ್ರೇಲಿಯಾದ ಬೆತ್ ಮೂನಿ ಗುಜರಾತ್ ತಂಡದ ನಾಯಕತ್ವ ವಹಿಸಲಿದ್ದು, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಮೂನಿ ಅವರನ್ನು ಗುಜರಾತ್ ಜೈಂಟ್ಸ್‌ 2 ಕೋಟಿ ರೂಪಾಯಿಗೆ ಖರೀದಿಸಿದೆ. ಅವರ ಸಹ ಆಟಗಾರ ಆಶ್ಲೀಗ್ ಗಾರ್ಡ್ನರ್ ಅವರಿಗೆ ತಂಡವು 3.2 ಕೋಟಿ ರೂಪಾಯಿ ಖರ್ಚು ಮಾಡಿದೆ. ಮತ್ತೊಂದೆಡೆ ಸ್ನೇಹ ರಾಣಾ ಕೂಡಾ ಉತ್ತಮ ಪ್ರದರ್ಶನವನ್ನು ನೀಡುವ ಭರವಸೆಯಲ್ಲಿದ್ದಾರೆ. ಅವರನ್ನು ಗುಜರಾತ್ 75 ಲಕ್ಷಕ್ಕೆ ಸ್ವಾಧೀನಪಡಿಸಿಕೊಂಡಿದೆ.

ಹರ್ಮನ್‌ಪ್ರೀತ್ ಅವರನ್ನು ಮುಂಬೈ ತಂಡವು 1.8 ಕೋಟಿ ರೂಪಾಯಿಗೆ ಖರೀದಿಸಿದೆ. ನಾಯಕತ್ವದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು, ಲೀಗ್‌ನಲ್ಲಿ ಮಿಂಚುವ ಹಂತದಲ್ಲಿದ್ದಾರೆ. ಇದೇ ವೇಳೆ ಇಂಗ್ಲೆಂಡಿನ ನಟಾಲಿ ಸಿವರ್ ಮೇಲೆ ಹೆಚ್ಚು ಇರೀಕ್ಷೆ ಇದೆ. ಭಾರತದ ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಕೂಡಾ 1.9 ಕೋಟಿ ರೂಪಾಯಿಗೆ ಮುಂಬೈ ಪಾಲಾಗಿದ್ದಾರೆ.

ವಿಮೆನ್ಸ್‌ ಪ್ರೀಮಿಯರ್​ ಲೀಗ್​​ನ ಎಲ್ಲಾ ಪಂದ್ಯಗಳು ಎಲ್ಲಾ ಲೀಗ್​, ಪ್ಲೇ ಆಫ್​ ಮತ್ತು ಫೈನಲ್​ ಪಂದ್ಯಗಳು ಮುಂಬೈನ ಡಿವೈ ಪಾಟೀಲ್​​ ಹಾಗೂ ಬ್ರಬೋರ್ನ್​​ ಮೈದಾನಗಳಲ್ಲಿ ನಡೆಯಲಿವೆ.

ಮಹಿಳಾ ಪ್ರೀಮಿಯರ್ ಲೀಗ್ (WPL)ನ ಮೊದಲ ಋತುವಿನಲ್ಲಿ ಐದು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಣಕ್ಕಿಳಿಯಲಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಐಪಿಎಲ್‌ನಲ್ಲಿ ಜನಪ್ರಿಯವಾಗಿರುವ ಹೆಸರುಗಳು. ಎಲಿಮಿನೇಟರ್ ಪಂದ್ಯವು ಮಾರ್ಚ್ 24 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಾರ್ಚ್ 26ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ