ಕುಂಭ ರಾಶಿ ಭವಿಷ್ಯ: ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ಕೈಗೊಳ್ಳಿ, ಬ್ರೇಕಪ್ ಆಗಿರುವವರಿಗೆ ಮತ್ತೆ ಪ್ರೀತಿ ಸಿಗಲಿದೆ
Aquarius Daily Horoscope 7 September 2024: ಇದು ರಾಶಿಚಕ್ರದ 11 ನೇ ಚಿಹ್ನೆಯಾಗಿದೆ. ಜನನದ ಸಮಯದಲ್ಲಿ ಚಂದ್ರನು ಕುಂಭದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯನ್ನು ಕುಂಭ ಎಂದು ಪರಿಗಣಿಸಲಾಗುತ್ತದೆ. ಕುಂಭ ರಾಶಿಯವರ ಇಂದಿನ ದಿನ ಹೇಗಿದೆ ನೋಡೋಣ.
ಕುಂಭ ರಾಶಿ ದಿನ ಸೆಪ್ಟೆಂಬರ್ 7: ವೃತ್ತಿ ಜೀವನದಲ್ಲಿ ವಾತಾವರಣ ಅನುಕೂಲಕರವಾಗಿರುತ್ತದೆ. ಆರೋಗ್ಯ ಸುಧಾರಿಸಲಿದೆ. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಇಂದು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಕುಂಭ ರಾಶಿಯ ಪ್ರೇಮ ಭವಿಷ್ಯ (Aquarius Love Horoscope)
ಒಬ್ಬಂಟಿ ಜನರ ಪ್ರೇಮ ಜೀವನಕ್ಕೆ ವಿಶೇಷ ವ್ಯಕ್ತಿ ಪ್ರವೇಶಿಸುತ್ತಾರೆ. ಕಚೇರಿ ಪ್ರಣಯದಿಂದ ದೂರವಿರಿ. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆ ಮೇಲೆ ಕೇಂದ್ರೀಕರಿಸಿ. ಪ್ರೀತಿಯ ಜೀವನದಲ್ಲಿ ಪ್ರಣಯ ಕ್ಷಣಗಳನ್ನು ಆನಂದಿಸುವಿರಿ. ಸಂಬಂಧಗಳಲ್ಲಿ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನೀವಿಬ್ಬರೂ ದೂರದ ಸ್ಥಳಕ್ಕೆ ಪ್ರಯಾಣಿಸಲು ಯೋಜಿಸಬಹುದು. ಇದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ಇತ್ತೀಚೆಗೆ ಬ್ರೇಕಪ್ ಆಗಿರುವ ಜನರಿಗೆ ಮತ್ತೆ ಹಳೆಯ ಪ್ರೀತಿ ಸಿಗಲಿದೆ.
ಕುಂಭ ರಾಶಿ ವೃತ್ತಿ ಭವಿಷ್ಯ (Aquarius Professional Horoscope)
ವೃತ್ತಿಪರ ಜೀವನದಲ್ಲಿ ನೀವು ಅಪಾರ ಯಶಸ್ಸು ಪಡೆಯುತ್ತೀರಿ. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಐಟಿ, ಆರೋಗ್ಯ ವೃತ್ತಿಪರರು, ಬಾಣಸಿಗರು ಮತ್ತು ಬ್ಯಾಂಕರ್‌ಗಳು ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗಬಹುದು. ಮಾಧ್ಯಮದವರು ಮತ್ತು ಸೃಜನಾತ್ಮಕ ವ್ಯಕ್ತಿಗಳು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಬಾರದು. ವ್ಯಾಪಾರಿಗಳು ಪರವಾನಗಿ, ತೆರಿಗೆ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು. ವಿದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುತ್ತದೆ.
ಕುಂಭ ರಾಶಿ ಹಣಕಾಸು ಭವಿಷ್ಯ (Aquarius Money Horoscope)
ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕೆಲವು ಜನರು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ದಿನದ ಆರಂಭದಲ್ಲಿ ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಅಡಚಣೆ ಉಂಟಾಗುವುದು. ಸಾಲವನ್ನು ಮರುಪಾವತಿಸಲು ಕೆಲವು ಜನರು ಸಮಸ್ಯೆ ಎದುರಿಸಬಹುದು. ಇಂದು ಷೇರು ಮಾರುಕಟ್ಟೆ, ವ್ಯಾಪಾರ ಅಥವಾ ಅಪಾಯಕಾರಿ ವ್ಯವಹಾರದಲ್ಲಿ ಹೂಡಿಕೆ ಮಾಡುವಾಗ ಸ್ವಲ್ಪ ಜಾಗರೂಕರಾಗಿರಿ.
ಕುಂಭ ರಾಶಿ ಆರೋಗ್ಯ ಭವಿಷ್ಯ (Aquarius Health Horoscope)
ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಸ್ವ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಪ್ರಕೃತಿಯೊಂದಿಗೆ ಕೆಲವು ಕ್ಷಣಗಳನ್ನು ಕಳೆಯಿರಿ. ಇದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕರವಾಗಿ ಮತ್ತು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
ಕುಂಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕುಂಭ ರಾಶಿಯ ಅಧಿಪತಿ: ಶನಿ, ಕುಂಭ ರಾಶಿಯವರಿಗೆ ಶುಭ ದಿನಾಂಕಗಳು: 2, 3, 7 ಮತ್ತು 9. ಕುಂಭ ರಾಶಿಯವರಿಗೆ ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಕುಂಭ ರಾಶಿಯವರಿಗೆ ಶುಭ ವರ್ಣ: ಹಿತ್ತಾಳೆ, ಹಸಿರು, ನೀಲಿ. ಕುಂಭ ರಾಶಿಯವರಿಗೆ ಅಶುಭ ವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಕುಂಭ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಕುಂಭ ರಾಶಿಯವರಿಗೆ ಶುಭ ತಿಂಗಳು: ಜೂನ್ 15 ರಿಂದ ಜುಲೈ 14 ಮತ್ತು ಡಿಸೆಂಬರ್ 15ರಿಂದ ಜನವರಿ14. ಕುಂಭ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಕುಂಭ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಕುಂಭ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.
ಕುಂಭ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1)ನವನಾಗ ಸ್ತೋತ್ರ: ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.
2)ಈ ದಾನಗಳಿಂದ ಶುಭ ಫಲ: ಮಿಶ್ರವರ್ಣದ ಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.
3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳ ಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.