ಸೋಮಾವತಿ ಅಮಾವಾಸ್ಯೆ ಎಂದರೇನು, ದೇವರ ಪೂಜೆಗೆ ಶುಭ ಸಮಯ ಯಾವುದು, ಪಿತೃದೋಷ ನಿವಾರಣೆ ಮಾಡುವುದು ಹೇಗೆ?
Somavati Amavasya 2024: ಸೋಮಾವತಿ ಅಮಾವಾಸ್ಯೆ ಬಹಳ ವಿಶೇಷವಾದುದು. ಸೋಮವಾರದಂದು ಅಮಾವಾಸ್ಯೆ ಬರುವುದರಿಂದ ಇದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ, ದಾನ, ನೈವೇದ್ಯ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಪಿತೃದೋಷ ನಿವಾರಣೆಗೂ ಇದು ಒಳ್ಳೆಯ ದಿನ.
Somvati Amavasya 2024: ಸೋಮಾವತಿ ಅಮವಾಸ್ಯೆ ಬಹಳ ವಿಶೇಷವಾದದ್ದು. ಸೋಮವಾರದಂದು ಅಮಾವಾಸ್ಯೆ ಬರುವುದರಿಂದ ಇದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ, ಪೂಜೆ ಮಾಡಿ, ನೈವೇದ್ಯ ಸಲ್ಲಿಸಿದರೆ ಒಳಿತಾಗುತ್ತದೆ. ಜೊತೆಗೆ ದಾನ ಧರ್ಮಗಳಿಗೂ ಇದು ಒಳ್ಳೆ ಸಮಯ. ಸೋಮಾವತಿ ಅಮವಾಸ್ಯೆಗೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನು ತಿಳಿಯೋಣ.
ಸೋಮಾವತಿ ಅಮಾವಾಸ್ಯೆ ಮುಹೂರ್ತ
ಸೋಮಾವತಿ ಅಮಾವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಶಿವನ ಕೃಪೆಯೂ ಸಿಗುತ್ತದೆ. ಪಿತೃದೋಷಗಳಿದ್ದರೆ ಅಮವಾಸ್ಯೆಯಂದು ನಿವಾರಣೆಯಾಗುತ್ತದೆ. ಜಾತಕದಲ್ಲಿ ಪಿತೃದೋಷ ಇರುವವರು ಪಿತೃ ದೋಷ ನಿವಾರಣೆಗೆ ಅಮವಾಸ್ಯೆಯಂದು ಪರಿಹಾರೋಪಾಯಗಳನ್ನು ಅನುಸರಿಸಬೇಕು. ಸೋಮಾವತಿ ಅಮಾವಾಸ್ಯೆಯಂದು ಪಿತೃದೇವತೆಗಳನ್ನು ಪ್ರಸನ್ನಗೊಳಿಸಬಹುದು.ಈ ಬಾರಿ ಸೋಮಾವತಿ ಅಮವಾಸ್ಯೆ ಡಿಸೆಂಬರ್ 30 ರಂದು ಬರುತ್ತದೆ. ಬೆಳಗ್ಗೆ 4:00 ಕ್ಕೆ ಅಮಾವಾಸ್ಯೆ ತಿಥಿ ಪ್ರಾರಂಭವಾಗಿ ಡಿಸೆಂಬರ್ 31 ರಂದು ಬೆಳಗ್ಗೆ 3:56 ವರೆಗೆ ಇರುತ್ತದೆ.
ಪಿತೃಗಳನ್ನು ಮೆಚ್ಚಿಸಲು ಸೋಮಾವತಿ ಅಮವಾಸ್ಯೆಯಂದು ಏನು ಮಾಡಬೇಕು?
ಪಿತೃದೇವತೆಗಳನ್ನು ಮೆಚ್ಚಿಸಲು ಸೋಮಾವತಿ ಅಮವಾಸ್ಯೆಯಂದು ಬೆಳಗ್ಗೆ ಬೇಗ ಎದ್ದು ತರ್ಪಣ ಕೊಡಬಹುದು. ಕಪ್ಪು ಎಳ್ಳನ್ನು ದಾನ ಮಾಡಿ ಪಿತೃಗಳನ್ನು ಮೆಚ್ಚಿಸಬಹುದು.ಅರಳಿ ಮರಕ್ಕೆ ನೀರು ಹಾಕಿ ಏಳು ಬಾರಿ ಪ್ರದಕ್ಷಿಣೆ ಹಾಕುವುದು ಒಳ್ಳೆಯದು. ಈ ದಿನ ಸಾಸಿವೆ ಎಣ್ಣೆ ಅಥವಾ ಕರಿ ಎಳ್ಳೆಣ್ಣೆಯಿಂದ ದೀಪ ಹಚ್ಚಿದರೆ ಪಿತೃಗಳಿಗೆ ಸಮಾಧಾನವಾಗುತ್ತದೆ. ಧಾನ ಧರ್ಮ ನೀಡುವುದು, ಕಪ್ಪು ಎಳ್ಳು, ಮೊಸರು, ಹಾಲು, ಬಟ್ಟೆ, ಹಣ್ಣುಗಳು, ಬೇಳೆಕಾಳುಗಳನ್ನು ಸಹ ಇಂದು ದಾನ ಮಾಡಬಹುದು.ಇವಿಷ್ಟೇ ಅಲ್ಲದೆ ಅಮವಾಸ್ಯೆಯಂದು ಶಿವನ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದು. ಹಣಕಾಸಿನ ಸಮಸ್ಯೆಗಳು ಮತ್ತು ಮನೆಯಲ್ಲಿ ಯಾವುದೇ ಅಡೆತಡೆಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.