Shani Graha: ಶನಿ ಎಂದರೆ ಭಯ ಬೇಡ, ಭಕ್ತಿ ಇರಲಿ; ಸಾಡೇ ಸಾತಿ ಇದ್ದರೂ ಉತ್ತಮ ಫಲಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Graha: ಶನಿ ಎಂದರೆ ಭಯ ಬೇಡ, ಭಕ್ತಿ ಇರಲಿ; ಸಾಡೇ ಸಾತಿ ಇದ್ದರೂ ಉತ್ತಮ ಫಲಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Shani Graha: ಶನಿ ಎಂದರೆ ಭಯ ಬೇಡ, ಭಕ್ತಿ ಇರಲಿ; ಸಾಡೇ ಸಾತಿ ಇದ್ದರೂ ಉತ್ತಮ ಫಲಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಶನಿಯ ಅಧಿದೇವತೆ ಈಶ್ವರನಾಗುತ್ತಾನೆ. ಕಪ್ಪು ಎಳ್ಳು ಮೆಣಸು ಸಾಸಿವೆ ಇಷ್ಟವಾದ ಪದಾರ್ಥಗಳು. ಸಾಮಾನ್ಯವಾಗಿ ಶನಿಯು ತನ್ನ ಜೊತೆ ಇರುವ ಗ್ರಹದ ಮೇಲೆ ಅವಲಂಬಿತನಾಗಿರುತ್ತಾನೆ. ಆದ್ದರಿಂದ ಶನಿಯಿಂದ ಬರುವ ಫಲಗಳು ಬೇರೆ ಗ್ರಹಗಳನ್ನು ಅವಲಂಬಿಸಿವೆ ಎಂದು ಹೇಳಬಹುದು.

ಸಾಡೇಸಾತಿಗೆ ಪರಿಹಾರ
ಸಾಡೇಸಾತಿಗೆ ಪರಿಹಾರ

ಜೀವನದಲ್ಲಿ ಕಷ್ಟ ನಷ್ಟ ಎದುರಾದರೆ ನೆನಪಿಗೆ ಬರುವುದು ಶನಿ ಗ್ರಹ. ಶನಿಯು ಅತಿ ಮುಖ್ಯವಾದ ಗ್ರಹ. ಆಯಸ್ಸು ಮತ್ತು ಉದ್ಯೋಗ ಮುಖ್ಯವಾಗಿ ಶನಿಯ ಅಧೀನಕ್ಕೆ ಬರುತ್ತದೆ. ಶನಿಯು ಕೆಟ್ಟ ಗ್ರಹವಲ್ಲ. ಆದರೆ ಪಾಪಗ್ರಹ. ಹಾಗೆಂದರೆ ಪಾಪ ಮಾಡಿದವನು ಎಂಬ ಅರ್ಥವೂ ಅಲ್ಲ. ಜನರು ಮಾಡುವ ಪಾಪ ಪುಣ್ಯದ ಕೆಲಸಗಳಿಗೆ ಅನುಗುಣವಾಗಿ ಫಲ ನೀಡುವ ಗ್ರಹ. ಅದುವೇ ಶನಿ.

ಕರ್ಮಕ್ಕೆ ತಕ್ಕ ಫಲಗಳನ್ನು ನೀಡುವ ಶನಿ

ಶನಿ ಎಂದರೆ ಭಯ ಬೇಡ. ಅವನೊಬ್ಬ ನಿಷ್ಪಕ್ಷವಾಗಿ ಗುಣವುಳ್ಳ ಶಿಕ್ಷಕ ಎಂದು ಹೇಳಬಹುದು. ಒಬ್ಬ ಶಿಕ್ಷಕನು ತಪ್ಪನ್ನು ಒಪ್ಪಿ ಬೇಡಿದಾಗ ಹೇಗೆ ಮನ್ನಿಸುವನೋ ಅದೇ ರೀತಿ ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟು ಶಾಂತಿ ಮಾಡಿದರೆ ಶನಿಯು ಖಂಡಿತ ಒಪ್ಪುತ್ತಾನೆ . ಶನಿಗೆ, ಮಕರ, ಮತ್ತು ಕುಂಭ ರಾಶಿಗಳು ಸ್ವಕ್ಷೇತ್ರಗಳಾಗುತ್ತವೆ. ಅದರಲ್ಲೂ ಕುಂಭವೇ ಶನಿಗೆ ಮೂಲ ತ್ರಿಕೋನವಾಗುತ್ತದೆ. ವೃಷಭ, ಮಿಥುನ, ಕನ್ಯಾ , ಮತ್ತು ತುಲಾ ರಾಶಿಗಳು ಮಿತ್ರ ಕ್ಷೇತ್ರಗಳಾಗುತ್ತವೆ. ಕಟಕ ,ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಗಳು ಶತ್ರು ಕ್ಷೇತ್ರಗಳಾಗುತ್ತವೆ. ಧನಸ್ಸು ಮತ್ತು ಮೀನ ರಾಶಿಗಳು ಸಮಕ್ಷೇತ್ರಗಳಾಗುತ್ತವೆ. ತುಲಾ ರಾಶಿಯು ಉಚ್ಚ ರಾಶಿಯಾದರೆ ಮೇಷವು ನೀಚರಾಶಿಯಾಗುತ್ತದೆ.

ಶನಿಗೆ ಬುಧ, ಶುಕ್ರ , ರಾಹು ,ಕೇತುಗಳು ಮಿತ್ರರಾಗುತ್ತಾರೆ. ರವಿ ಚಂದ್ರ ಮತ್ತು ಕುಜರು ಶತ್ರುಗಳಾಗುತ್ತಾರೆ. ಉಳಿದ ಗುರುವು ಸಮನಾಗುತ್ತಾನೆ. ಪುಷ್ಯ ಅನುರಾಧ ಮತ್ತು ಉತ್ತರಭಾದ್ರ ನಕ್ಷತ್ರಗಳು ಶನಿಗೆ ಸೇರುತ್ತದೆ. ಶನಿಯ ದಶಕಾಲವು 19 ವರ್ಷಗಳಾಗುತ್ತವೆ. ಶನಿಯು ಮೂರು, ಆರು, ಮತ್ತು ಹನ್ನೊಂದನೇ ಭಾವಗಳಲ್ಲಿ ಉತ್ತಮ ಫಲಗಳನ್ನು ಕೊಡುತ್ತಾನೆ. ಲಗ್ನವನ್ನು ಆಧರಿಸಿದರೆ ಒಂಬತ್ತನೆಯ ಮನೆಯಲ್ಲಿಯೂ ಉತ್ತಮ ಫಲಗಳನ್ನು ಕೊಡುತ್ತಾನೆ. ಒಂದು ಎರಡು , ಐದು, ಏಳು, ಎಂಟು ಮತ್ತು ಹನ್ನೆರಡನೇ ಭಾವಗಳಲ್ಲಿ ಅಶುಭ ಫಲಗಳನ್ನು ಕೊಡುತ್ತಾನೆ.

ಪಂಚಮ ಶನಿಯಿಂದ ತೊಂದರೆ

ಕಾರಕೋ ಭಾವನಾಶಾಯ ಎಂಬಂತೆ ಶನಿಗೆ ಎಂಟನೇ ಮನೆಯು ಶ್ರೇಷ್ಠವಲ್ಲ. ಶನಿಯು ಹನ್ನೆರಡು, ಒಂದು ಮತ್ತು ಎರಡನೇ ಮನೆಗಳಲ್ಲಿದ್ದಾಗ ಶನಿ ಕಾಟ ಎನ್ನುತ್ತೇವೆ. ಶನಿಯು ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಬ್ಬರಿಗೂ ಶನಿ ಕಾಟವು ಒಟ್ಟು ಏಳೂವರೆ ವರ್ಷ ಬೇಕಾಗುತ್ತದೆ. ಈ ಕಾರಣದಿಂದಲೇ ಇದನ್ನು ಸಾಡೇ ಸಾತಿ ಎಂದು ಕರೆಯುತ್ತೇವೆ. ಸಾಡೇ ಸಾತಿಯಷ್ಟೇ ಕಷ್ಟಕರ ಎಂದರೆ ಪಂಚಮಶನಿ. ಅಂದರೆ ಶನಿಯು ಐದನೇ ಮನೆಯಲ್ಲಿ ಸಂಚರಿಸುವಾಗ ಉಂಟಾಗುವ ತೊಂದರೆಗಳು ಹೆಚ್ಚು.

ಶನಿಯ ಅಧಿದೇವತೆ ಈಶ್ವರನಾಗುತ್ತಾನೆ. ಕಪ್ಪು ಎಳ್ಳು ಮೆಣಸು ಸಾಸಿವೆ ಇಷ್ಟವಾದ ಪದಾರ್ಥಗಳು. ಸಾಮಾನ್ಯವಾಗಿ ಶನಿಯು ತನ್ನ ಜೊತೆ ಇರುವ ಗ್ರಹದ ಮೇಲೆ ಅವಲಂಬಿತನಾಗಿರುತ್ತಾನೆ. ಆದ್ದರಿಂದ ಶನಿಯಿಂದ ಬರುವ ಫಲಗಳು ಬೇರೆ ಗ್ರಹಗಳನ್ನು ಅವಲಂಬಿಸಿವೆ ಎಂದು ಹೇಳಬಹುದು. ಸಾಮಾನ್ಯವಾಗಿ ಉದ್ಯೋಗದಲ್ಲಿ ಪದೇ ಪದೇ ತೊಂದರೆಯಾಗುವುದು, ಸತತವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು, ಪದೇ ಪದೇ ವಾಹನ ಅಪಘಾತ ಆಗುವುದು, ಕೈ ಕೆಳಗಿನ ಉದ್ಯೋಗಿಗಳ ಜೊತೆಯಲ್ಲಿ ಅನಾವಶ್ಯಕವಾದ ವಿವಾದ ಬಡಿದಾಟ, ಚಿಕ್ಕ ವಯಸ್ಸಿನಲ್ಲಿಯೇ ಕೈಕಾಲುಗಳಲ್ಲಿ ನೋವು, ಅತಿಯಾದ ನಿದ್ರೆ, ಅತಿಯಾಗಿ ಊಟ ಮಾಡುವುದು, ಕೊಳಕು ಬಟ್ಟೆಗಳನ್ನು ಧರಿಸುವುದು, ತಂದೆಗೆ ಗೌರವ ಕೊಡದೆ ಮಾತನಾಡುವುದು ಇವೆಲ್ಲವೂ ಶನಿ ಗ್ರಹದ ಪ್ರಭಾವದಿಂದ ಆಗುವ ಕೆಲವು ಸಮಸ್ಯೆಗಳು.

ಪರಿಹಾರವೇನು?

ಇಂತಹ ಸಂದರ್ಭದಲ್ಲಿ ಆಂಜನೇಯನ ಪೂಜೆಯನ್ನು ಮಾಡಬೇಕು. ತಂದೆಯಾದ ಸೂರ್ಯನ ಬಳಿಗೆ ಶನಿಯನ್ನು ಕರೆದುಕೊಂಡು ಹೋಗಿದ್ದು ಆಂಜನೇಯ ಸ್ವಾಮಿ. ಹಾಗೆಯೇ ಶನಿವಾರದಂದು ಶ್ರೀರಾಮರ ಪಟ್ಟಾಭಿಷೇಕದ ಭಾವಚಿತ್ರ ಇಟ್ಟು ಪೂಜೆ ಮಾಡಬೇಕು. ರವೆಯಿಂದ ಮಾಡಿದ ಸಜ್ಜಿಗೆಯನ್ನು ನೇವೇದ್ಯ ಮಾಡಿ, ನಂತರ ಮಕ್ಕಳಿಗೆ ನೀಡಿ ನಂತರ ನೀವು ಸೇವಿಸಬೇಕು. ಇದರಿಂದ ಶನಿಯ ಪ್ರಭಾವ ಕಡಿಮೆಯಾಗಿ ಶುಭ ಫಲಗಳು ದೊರೆಯುತ್ತವೆ.

ಇದಲ್ಲದೆ ಕಿರಿಯ ಸೋದರ ಮತ್ತು ತಂದೆಯ ನಡುವೆ ಇರುವ ವಿವಾದವನ್ನು ಶಮನಗೊಳಿಸಿದರೆ ಮತ್ತು ಕಿರಿಯ ಸೋದರನಿಗೆ ಸಹಾಯ ಮಾಡಿದರೆ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಶನಿವಾರದಂದು ಕಪ್ಪು ಎಳ್ಳಿನಿಂದ ಮಾಡಿದ ತಿಂಡಿಯನ್ನು ಮಕ್ಕಳಿಗೆ ನೀಡುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವುದರಿಂದಲೂ ಶನಿಯ ಕೋಪ ಶಮನವಾಗುತ್ತದೆ. ಮುಖ್ಯವಾಗಿ ನಾವು ದಿನನಿತ್ಯ ಬಳಸುವ ವಾಹನವನ್ನು ಶುಚಿಯಾಗಿಟ್ಟುಕೊಂಡರೆ ಶನಿಯ ಪ್ರಭಾವ ಕಡಿಮೆಯಾಗುತ್ತದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.