ವಾಸ್ತು ಸಲಹೆ: ಹಣಕಾಸಿನ ಸಮಸ್ಯೆ ಬರಬಾರದು ಎಂದಾದರೆ ಮನೆಯ ಈ ಸ್ಥಳಗಳಲ್ಲಿ ಹಣ ಇಡುವುದನ್ನು ತಪ್ಪಿಸಿ
Vastu Tips: ವಾಸ್ತು ನಿಯಮದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಅಲ್ಲಿ ಹಣ ಇಡಬಾರದು, ಹೀಗೆ ಮಾಡುವುದರಿಂದ ಮುಂದೆ ಆರ್ಥಿಕ ನಷ್ಟವಾಗಬಹುದು. ಹಣವನ್ನು ಎಲ್ಲಿ ಸಂಗ್ರಹಿಸಬೇಕು? ಯಾವ ಸ್ಥಳಗಳಲ್ಲಿ ಇಡಬಾರದು? ಇಲ್ಲಿದೆ ಮಾಹಿತಿ.
ವಾಸ್ತು ಇಂದು ನಿನ್ನೆಯದಲ್ಲ, ಹಿಂದಿನ ಕಾಲದಲ್ಲಿ ಕೂಡಾ ಮನೆ ಕಟ್ಟುವವರು ವಾಸ್ತು ಅನುಸರಿಸುತ್ತಿದ್ದರು, ಇದಕ್ಕೆ ಉದಾಹರಣೆ ಎನ್ನುವಂತೆ ಇಂದಿಗೂ ಆ ಮನೆಯಗಳನ್ನು ನಾವು ನೋಡಬಹುದು. ಹಾಗೇ ಮನೆಯಲ್ಲಿ ಕೂಡಾ ಕೆಲವೊಂದು ವಸ್ತುಗಳನ್ನು ಸೂಕ್ತ ಜಾಗದಲ್ಲಿ ಇಟ್ಟರೆ ಎಂದಿಗೂ ಹಣಕಾಸಿನ ಸಮಸ್ಯೆ ಬರುವುದಿಲ್ಲ.
ಬಹಳಷ್ಟು ಜನರಿಗೆ ಹಣಕಾಸಿನ ಸಮಸ್ಯೆ ಇರುತ್ತದೆ. ಆದರೆ ಕೆಲವರಿಗೆ ಎಷ್ಟೇ ಹಣ ಒದಗಿಬಂದರೂ ಅದು ಖರ್ಚಾಗುತ್ತಲೇ ಇರುತ್ತದೆ. ಎಷ್ಟು ಪ್ರಯತ್ನಿಸಿದರೂ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಾಸ್ತು ಪ್ರಕಾರ ನೀವು ಸಲಹೆಗಳನ್ನು ಅನುಸರಿಸಬೇಕು. ಕೆಲವೊಂದು ಅಭ್ಯಾಸಗಳನ್ನು ನೀವು ತಪ್ಪಿಸಬೇಕು. ಹಣವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಹೇಗೆ ಇಡಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕು.ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.ಬಹಳ ಜನರು ಹಣವನ್ನು ಸಂಗ್ರಹಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೆಲವೊಂದು ಸ್ಥಳಗಳಲ್ಲಿ ಹಣವನ್ನು ಇಡಲೇಬಾರದು. ಆ ಸ್ಥಳಗಳು ಯಾವುವು ನೋಡೋಣ.
ಕತ್ತಲೆ ಇರುವ ಸ್ಥಳ
ಹಣ ಯಾರಿಗೂ ಕಾಣಬಾರದು ಎಂಬ ಉದ್ದೇಶದಿಂದಲೋ, ಅಥವಾ ಬೇರೆ ಕಾರಣದಿಂದಲೋ ಕೆಲವರು ಕತ್ತಲೆ ಇರುವ ಸ್ಥಳದಲ್ಲಿ ಬಚ್ಚಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಉಂಟಾಬಹುದು. ಹಣವನ್ನು ಈ ರೀತಿ ಬಚ್ಚಿಟ್ಟರೆ, ಧನಾತ್ಮಕ ಶಕ್ತಿ ಮಾಯವಾಗಿ, ಧನಾತ್ಮಕ ಶಕ್ತಿ ಹರಿಯುವಂತೆ ಮಾಡುತ್ತದೆ.
ಇದನ್ನೂ ಓದಿ: ಕ್ಯಾಲೆಂಡರ್ಗೂ ಇದೆ ವಾಸ್ತು ನಿಯಮ
ಶೌಚಾಲಯಗಳ ಪಕ್ಕದಲ್ಲಿ
ಶೌಚಾಲಯದ ಪಕ್ಕದಲ್ಲಿ ಹಣವನ್ನು ಇಡಬೇಡಿ. ಹೀಗೆ ಇಡುವುದರಿಂದ ಹಣದ ಹರಿವು ಕೂಡ ನಿಲ್ಲುತ್ತದೆ. ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಂಪತ್ತು ನಷ್ಟವಾಗುತ್ತದೆ. ಆರ್ಥಿಕ ನಷ್ಟ ಉಂಟಾಗಲಿದೆ.
ದಕ್ಷಿಣ ಭಾಗ
ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಹಣ ಇಡಬಾರದು. ದಕ್ಷಿಣ ಭಾಗದಲ್ಲಿ ಹಣವನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ದಕ್ಷಿಣವು ಯಮುನ ದಿಕ್ಕು. ಇಲ್ಲಿ ಹಣವನ್ನು ಸಂಗ್ರಹಿಸುವುದು ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗಬಹುದು .
ಇದನ್ನೂ ಓದಿ: ಮನೆಯಲ್ಲಿ ನವಿಲುಗರಿಗಳನ್ನು ಎಲ್ಲಿ ಇಡಬೇಕು?
ಹಣವನ್ನು ಯಾವ ದಿಕ್ಕಿನಲ್ಲಿ ಇಡಬಹುದು?
ಹಣವನ್ನು ಇಡಲು ಉತ್ತರ ಭಾಗವು ಒಳ್ಳೆಯದು. ಉತ್ತರ ಭಾಗದಲ್ಲಿ ಹಣವನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ನಿಮಗೆ ಹಣದ ಹರಿವು ಹೆಚ್ಚಾಗಲಿದೆ.ಉತ್ತರ, ಕುಬೇರನ ದಿಕ್ಕಾಗಿರುವುದರಿಂದ ಈ ದಿಕ್ಕಿಗೆ ಹಣ ಇಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ, ಲಕ್ಷ್ಮೀ ಕಟಾಕ್ಷವೂ ದೊರೆಯಲಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಲಕ್ಷ್ಮೀ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಎಲ್ಲಿ ಇಡಬೇಕು?