Karnataka News Live December 24, 2024 : ಕರಾವಳಿ ಉತ್ಸವಕ್ಕೆ ಹೆಲಿಕಾಪ್ಟರ್ ತರಿಸಿದ್ದೀರಾ, ಸರ್ಕಾರಿ ಶಾಲಾ ಮಕ್ಕಳು ನಾವು, ಹಾರಲು ದುಡ್ಡಿಲ್ಲ, ಹತ್ತಿರದಿಂದ ನೋಡಲು ಬಿಡ್ತೀರಾ ಪ್ಲೀಸ್
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 24 Dec 202412:59 PM IST
Karavali Utsava 2024: ಜಿಲ್ಲಾಧಿಕಾರಿಗಳೇ, ಸರ್ಕಾರಿ ಶಾಲಾ ಮಕ್ಕಳು ನಾವು, ಹಾರಲು ದುಡ್ಡಿಲ್ಲ, ಹತ್ತಿರದಿಂದ ನೋಡಲು ಬಿಡ್ತೀರಾ ಪ್ಲೀಸ್ ಎಂಬ ಬೇಡಿಕೆ ದಕ್ಷಿಣ ಕನ್ನಡ ಜಿಲ್ಲೆ ಸರ್ಕಾರಿ ಶಾಲಾಮಕ್ಕಳ ವಲಯದಲ್ಲಿ ಕೇಳತೊಡಗಿದೆ. ಕಾಪ್ಟರ್ ಹಾರಾಟ ಡಿ29ಕ್ಕೆ ಕೊನೆಯಾಗುತ್ತಿದ್ದು, ಅದಕ್ಕೂ ಮೊದಲೇ ಜಿಲ್ಲಾಡಳಿತ ಸ್ಪಂದಿಸುತ್ತ ನೋಡಬೇಕು. (ವರದಿ ಹರೀಶ ಮಾಂಬಾಡಿ, ಮಂಗಳೂರು)
Tue, 24 Dec 202412:25 PM IST
- ಮಂಗಳೂರು ಕರಾವಳಿ ಉತ್ಸವ ಪ್ರಯುಕ್ತ ಆರಂಭವಾಗಿದ್ದ ಹೆಲಿಕಾಪ್ಟರ್ ಸಂಚಾರದ ನಿಲ್ದಾಣವೀಗ ಮಂಗಳೂರು ಹೊರವಲಯದ ಅಡ್ಯಾರ್ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರವಾಗಿದೆ.
Tue, 24 Dec 202412:19 PM IST
Bengaluru Crime: ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ ಸೈಬರ್ ವಂಚನೆ ಎಸಗಿ 5 ಲಕ್ಷ ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Tue, 24 Dec 202411:46 AM IST
ಕರ್ನಾಟಕದ ತುತ್ತ ತುದಿಯ ಜಿಲ್ಲೆ ಬೀದರ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಲಾಗಿದೆ.
Tue, 24 Dec 202410:42 AM IST
- New Year 2025: ನಮ್ಮನ್ನು ನಾವು ಮರು ರೂಪಿಸಿಕೊಳ್ಳುವುದು ಹೇಗೆ, ರೀಲಾಂಚ್ ಆಗಬೇಕೆಂದರೆ ನಮ್ಮ ಯೋಚನೆ ಹಾಗೂ ಯೋಜನೆಗಳು ಹೇಗಿರಬೇಕು. ಇಲ್ಲಿದೆ ಕೆಲ ಟಿಪ್ಸ್.
Tue, 24 Dec 202409:37 AM IST
CT Ravi Case: ವಿಧಾನ ಪರಿಷತ್ ಕಲಾಪ ಸ್ಥಳದಲ್ಲಿ ಕಲಾಪ ಮುಂದೂಡಲ್ಪಟ್ಟ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಸಿದ್ದಾರೆ ಎನ್ನಲಾದ ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.
Tue, 24 Dec 202407:47 AM IST
- ಕರ್ನಾಟಕ ರಾಜ್ಯದಲ್ಲಿ 2024ರ ವರ್ಷವು ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ರಾಜಕೀಯವಾಗಿ ಸಿಡಿ ಹಗರಣ, ಚುನಾವಣೆಗಳು, ಸಿದ್ದರಾಮಯ್ಯ ಹಗರಣ ಆರೋಪ, ಸಿಟಿರವಿ- ಲಕ್ಷ್ಮಿ ಹೆಬ್ಬಾಳಕರ್ ಜಟಾಪಟಿ ಪ್ರಮುಖ ಘಟನೆಗಳು. ಮಂಡ್ಯ ಸಾಹಿತ್ಯ ಸಮ್ಮೇಳನ ಆಹಾರ ಸಂಸ್ಕೃತಿಗೆ ದನಿಯಾಗಿದ್ದು ವಿಶೇಷ.
Tue, 24 Dec 202403:54 AM IST
- Lease a house in bangalore precautions: ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು? ಮನೆ ಲೀಸ್ ಪಡೆದವರಿಗೆ ವಂಚನೆಯಾದರೆ ಪಾರಾಗಲು ದಾರಿ ಇರುವುದೇ? ಉದ್ಯಾನನಗರಿಯಲ್ಲಿ ಮನೆ ಲೀಸ್‌ಗೆ ಪಡೆದವರ ಕಹಿ ಅನುಭವಗಳ ಜತೆಗೆ ಮನೆ ಲೀಸ್ ಪಡೆಯುವವರು ಗಮನಿಸಬೇಕಾದ ಅಂಶಗಳ ಕುರಿತು ರಾಜೀವ್ ಹೆಗಡೆ ಉಪಯುಕ್ತ ಲೇಖನ ಬರೆದಿದ್ದಾರೆ.
Tue, 24 Dec 202403:28 AM IST
Dakshina Kannada News ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದ ಯುವತಿಯನ್ನು ಎಳೆದೊಯ್ದು ಶಾಲೆಯ ಕೊಠಡಿಯಲ್ಲಿ ಅತ್ಯಾಚಾರ ವೆಸಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ವ್ಯಕ್ತಿಯನ್ನು ಬಂಧಿಸಲಾಗಿದೆ
ವರದಿ: ಹರೀಶ ಮಾಂಬಾಡಿ. ಮಂಗಳೂರು
Tue, 24 Dec 202403:15 AM IST
- ಹೊಸದಾಗಿ ಕೊಂಡ ಕಾರಿನಲ್ಲಿ ಹೊರಟಿದ್ದ ಕುಟುಂಬ ಅಪಘಾತಕ್ಕೆ ಕಳೆದ ವಾರ ಬಲಿಯಾಯಿತು. ಅಪಘಾತದ ಹಿಂದಿರುವ ಬೆಂಗಳೂರು ತುಮಕೂರು ಹೆದ್ದಾರಿಯ ಸ್ಥಿತಿಗತಿಯ ಚಿತ್ರಣವನ್ನು ಪತ್ರಕರ್ತ, ಲೇಖಕ ರಾಜೀವ್ ಹೆಗಡೆ ಬಿಡಿಸಿಟ್ಟಿದ್ದಾರೆ.
Tue, 24 Dec 202401:38 AM IST
New Year 2025: ಹೊಸ ವರ್ಷಾಚರಣೆಗೆ ವಾರವಷ್ಟೇ ಬಾಕಿ ಉಳಿದಿದ್ದು ಬೆಂಗಳೂರು , ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಗೃಹಸಚಿವ ಜಿ ಪರಮೇಶ್ವರ್, ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
Tue, 24 Dec 202401:14 AM IST
- Karnataka Weather: ಕರ್ನಾಟಕ ಮಲೆನಾಡು ಭಾಗದ ಜತೆಗೆ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ದಟ್ಟವಾದ ಮಂಜಿನ ವಾತಾವರಣದೊಂದಿಗೆ ಚಳಿಯ ಅನುಭವ ಕಂಡು ಬಂದಿದೆ. ಕೆಲವೆಡೆ ಹಗುರ ಮಳೆ ಮುನ್ಸೂಚನೆಯೂ ಇದೆ.