ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ರೀತಿಯ ಆಭರಣ ಧರಿಸಬೇಕು, ಯಾವ ರಾಶಿಗೆ ಯಾವ ಬಣ್ಣದ ಹರಳು ಸೂಕ್ತ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ರೀತಿಯ ಆಭರಣ ಧರಿಸಬೇಕು, ಯಾವ ರಾಶಿಗೆ ಯಾವ ಬಣ್ಣದ ಹರಳು ಸೂಕ್ತ ತಿಳಿಯಿರಿ

ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ರೀತಿಯ ಆಭರಣ ಧರಿಸಬೇಕು, ಯಾವ ರಾಶಿಗೆ ಯಾವ ಬಣ್ಣದ ಹರಳು ಸೂಕ್ತ ತಿಳಿಯಿರಿ

ಜ್ಯೋತಿಷ್ಯದ ವಿಚಾರಕ್ಕೆ ಬರುವುದಾದರೆ ಎಲ್ಲಾ ರಾಶಿಗೂ ಎಲ್ಲಾ ಆಭರಣಗಳು ಹೊಂದುವುದಿಲ್ಲ. ಕೆಲವು ರಾಶಿಯವರಿಗೆ ಕೆಲವು ಆಭರಣ ಹೊಂದುತ್ತದೆ. ರಾಶಿಗೆ ಅನುಗುಣವಾಗಿ ಹರಳಿನ ಬಣ್ಣದ ಕೂಡ ನಿರ್ಧಾರ ಮಾಡಲಾಗುತ್ತದೆ. ಯಾವ ರಾಶಿಯವರಿಗೆ ಯಾವ ರೀತಿಯ ಆಭರಣ ಹೊಂದುತ್ತದೆ ಎಂಬುದರ ವಿವರ ಇಲ್ಲಿದೆ.

ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ರೀತಿಯ ಆಭರಣ ಧರಿಸಬೇಕು, ಯಾವ ರಾಶಿಗೆ ಯಾವ ಬಣ್ಣದ ಹರಳು ಸೂಕ್ತ ತಿಳಿಯಿರಿ
ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ರೀತಿಯ ಆಭರಣ ಧರಿಸಬೇಕು, ಯಾವ ರಾಶಿಗೆ ಯಾವ ಬಣ್ಣದ ಹರಳು ಸೂಕ್ತ ತಿಳಿಯಿರಿ

ಆಭರಣ ಧರಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರು ಆಭರಣ ಪ್ರಿಯರು. ಆಭರಣವಿಲ್ಲದೆ ನಮ್ಮಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಲು ಸಾಧ್ಯವಿಲ್ಲ. ಇನ್ನು ಆಭರಣ ಧರಿಸಿದಾಗ ಅಂದ ಹೆಚ್ಚುವುದು ಸುಳ್ಳಲ್ಲ. ಚಿನ್ನಾಭರಣವು ಘನತೆ, ಸಂಪತ್ತಿನ ಪ್ರತೀಕವೂ ಹೌದು. ಭಾರತೀಯ ಸಂಸ್ಕೃತಿಯಲ್ಲಿ ಆಭರಣಕ್ಕೆ ತನ್ನದೇ ಆದ ಮೌಲ್ಯವಿದೆ. ಅದರಲ್ಲೂ ಹಬ್ಬದ ಸಮಯದಲ್ಲಿ ಆಭರಣ ಖರೀದಿ ಮಾಡುವುದು ಧರಿಸುವುದು ಸಾಂಪ್ರದಾಯಿಕ ಮೌಲ್ಯದ ಸಂಕೇತವೂ ಹೌದು.

ಇನ್ನು ಜ್ಯೋತಿಷ್ಯದ ವಿಚಾರಕ್ಕೆ ಬರುವುದಾದರೆ ಎಲ್ಲಾ ರಾಶಿಗೂ ಎಲ್ಲಾ ಆಭರಣಗಳು ಹೊಂದುವುದಿಲ್ಲ. ಕೆಲವು ರಾಶಿಯವರಿಗೆ ಕೆಲವು ಆಭರಣ ಹೊಂದುತ್ತದೆ. ಹಾಗಾದರೆ ರಾಶಿಗನುಗುಣವಾಗಿ ಯಾವ ರಾಶಿಗೆ ಯಾವ ಆಭರಣ ಹೊಂದುತ್ತದೆ ನೋಡಿ.

ಮೇಷ

ಮೇಷ ರಾಶಿಯವರು ಶೃಂಗಾರಪ್ರಿಯರು. ಇವರು ನಮ್ಮ ಬಟ್ಟೆ, ಆಭರಣ, ಅಲಂಕಾರ ಮೂಲಕ ಗಮನ ಸೆಳೆಯುತ್ತಾರೆ. ರಾಮ್‌ ಮೇಷ ರಾಶಿಯ ಲಾಂಛನವಾಗಿದೆ. ಮೇಷ ರಾಶಿಯ ಆಡಳಿತ ಗ್ರಹ ಮಂಗಳ, ಮಂಗಳನ ಅಂಶ ಬೆಂಕಿಯಾಗಿದೆ. ಈ ರಾಶಿಯವರು ರೂಬಿ(ಮಾಣಿಕ್ಯ), ಡೈಮಂಡ್‌ (ವಜ್ರ) ಅಥವಾ ಬೆಳ್ಳಿಯಲ್ಲಿ ಹೊಂದಿಸಲಾದ ಬ್ಲಡ್‌ಸ್ಟೋನ್‌ಗಳನ್ನು ಧರಿಸುವುದು ಸೂಕ್ತ.

ವೃಷಭ

ಈ ರಾಶಿಯು ಮಣ್ಣಿನ ಚಿಹ್ನೆ, ಆದ್ದರಿಂದ ಹಳದಿ ಬಣ್ಣ ಹೊಂದಿರುವ ಎಲ್ಲವೂ ಈ ರಾಶಿಯವರಿಗೆ ಸರಿ ಹೊಂದುತ್ತದೆ. ಶುಕ್ರವು ವೃಷಭ ರಾಶಿಯ ಆಡಳಿತ ಗ್ರಹವಾಗಿದೆ. ನೀವು ನೀಲಮಣಿ, ಚಿನ್ನ, ಬೆಳ್ಳಿ ಅಥವಾ ಕಂಚಿನ ಆಭರಣಗಳನ್ನು ಆಯ್ಕೆ ಮಾಡಿದರೆ ಹೆಚ್ಚು ಹೊಂದುತ್ತದೆ.

ಮಿಥುನ

ಮಿಥುನ ರಾಶಿಗೆ ಬುಧವು ಆಡಳಿತ ಗ್ರಹವಾಗಿದೆ. ಗಾಳಿಯು ಬುಧನ ಅಂಶವಾಗಿದೆ. ಮಿಥುನ ರಾಶಿಯವರು ಭಾರದ ಆಭರಣಕ್ಕಿಂತ ಹಗುರವಾದ ಆಭರಣ ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಬೆಳ್ಳಿ ಅಥವಾ ಉಕ್ಕಿನ ಆಭರಣಗಳಲ್ಲಿ ಅಮೆಥಿಸ್ಟ್‌ ಕಲ್ಲು ಹೊಂದಿರುವ ಆಭರಣಗಳು ಇವರಿಗೆ ಹೆಚ್ಚು ಹೊಂದುತ್ತದೆ. ಇದರ ಪ್ರಾಥಮಿಕ ಬಣ್ಣ ನೇರಳೆಯಾಗಿರುತ್ತದೆ. ಈ ರಾಶಿಯವರು ಅಮೆಥಿಸ್ಟ್‌ ಹರಳುಗಳ ಉಂಗುರ, ಪೆಂಡೆಂಟ್‌ ಧರಿಸಬಹುದು.

ಕಟಕ

ಈ ರಾಶಿಯವರು ಹೆಚ್ಚು ಸಂವೇದನಾಶೀಲರು ಮತ್ತು ಭಾವನಾತ್ಮಕ ಅಂಶ ಇರುವವರು. ನೀರು ಈ ರಾಶಿಯ ಅಂಶವಾಗಿದ್ದು, ಚಂದ್ರ ಈ ರಾಶಿಯ ಆಡಳಿತ ಗ್ರಹವಾಗಿದೆ. ಪಚ್ಚೆ ಅಥವಾ ಮೂನ್‌ಸ್ಟೋನ್‌ನಿಂದ ಅಲಂಕರಿಸಿದ ಬೆಳ್ಳಿಯ ಆಭರಣಗಳು ಇವರಿಗೆ ಹೊಂದುತ್ತದೆ. ಇದನ್ನು ಉಂಗುರ ಅಥವಾ ಪೆಂಡೆಂಟ್‌ ರೂಪದಲ್ಲಿ ಧರಿಸಬಹುದು.

ಸಿಂಹ

ಸೂರ್ಯನು ಸಿಂಹರಾಶಿಯ ಆಡಳಿತ ಗ್ರಹವಾಗಿದೆ. ಬೆಂಕಿ ಇದರ ಅಂಶವಾಗಿದೆ. ಚಿನ್ನ ಅಥವ ತಾಮ್ರ ಮಿಶ್ರಣದ ಆಭರಣಗಳು ಇವರಿಗೆ ಹೆಚ್ಚು ಹೊಂದುತ್ತದೆ. ಅಂಬರ್‌ ಬಣ್ಣವನ್ನು ಹೊಂದಿರುವ ಯಾವುದೇ ಕಲ್ಲು ಅಥವಾ ಲೋಹ ಇವರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇವರ ರಾಶಿಗೆ ಅನುಗುಣವಾಗಿ ದಪ್ಪನೆಯ ಆಭರಣಗಳು ಇವರಿಗೆ ಹೆಚ್ಚು ಹೊಂದುತ್ತದೆ. ಈ ರಾಶಿಯವರು ಹೆಚ್ಚು ಬಾಳಿಗೆ ಬರುವಂತಹ ಆಭರಣ ಖರೀದಿ ಮಾಡುವುದು ಸೂಕ್ತ.

ಕನ್ಯಾ

ಕನ್ಯಾ ರಾಶಿಯು ಭೂಮಿಯ ಚಿಹ್ನೆಯಾಗಿದೆ. ಈ ರಾಶಿಯವರು ತಮ್ಮ ಸುತ್ತಲಿರುವ ಎಲ್ಲದರ ಬಗ್ಗೆಯೂ ತೀವ್ರವಾಗಿ ತಿಳಿದಿರುತ್ತಾರೆ ಮತ್ತು ಈ ರಾಶಿಯವರು ಚಿಂತನಶೀಲರಾಗಿರುತ್ತಾರೆ. ಜೀವನದಲ್ಲಿ ಸಣ್ಣ ಸಂತೋಷಗಳು ಇವರಿಗೆ ಹೆಚ್ಚು ಖುಷಿ ನೀಡುತ್ತದೆ. ಈ ರಾಶಿಯವರಿಗೆ ಬೆಳ್ಳಿ ಅಥವಾ ಆಕ್ಸಿಡೈಟ್‌ ಆಭರಣಗಳು ಹೆಚ್ಚು ಹೊಂದುತ್ತವೆ. ಇವರು ಸರಳ ಆಭರಣ ಮತ್ತು ಬಿಳಿ ಮುತ್ತನ್ನು ಧರಿಸುವುದು ಸೂಕ್ತ.

ತುಲಾ

ಸಮತೋಲನವನ್ನು ಪ್ರತಿನಿಧಿಸುವ ಮಾಪಕಗಳಂತೆ, ತುಲಾ ರಾಶಿಯವರು ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಸಾಮರಸ್ಯಕ್ಕಾಗಿ ಶ್ರಮಿಸುತ್ತಾರೆ. ಈ ರಾಶಿಯವರು ಸಾಮಾಜಿಕವಾಗಿ ಹೆಚ್ಚು ಬೆರೆಯಲು ಇಷ್ಟಪಡುವ ಕಾರಣ ಇವರು ಇತ್ತೀಚಿನ ಟ್ರೆಂಡ್‌ಗಳನ್ನು ಆರಿಸಿಕೊಳ್ಳಲು ಬಯಸುತ್ತಾರೆ. ಈ ರಾಶಿಯವರಿಗೆ ಅಂಬರ್‌, ಅಕ್ವಾಮರಿನ್‌ ಮತ್ತು ನೀಲಮಣಿ ಇರುವ ಬೆಳ್ಳಿಯಿಂದ ಮಾಡಿದ ಆಭರಣ ಹೆಚ್ಚು ಹೊಂದುತ್ತದೆ.

ವೃಶ್ಚಿಕ

ವೃಶ್ಚಿಕ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಲ್ಲದೇ ಇವರು ರಹಸ್ಯವಾಗಿರುತ್ತಾರೆ. ಪ್ಲುಟೊ ಈ ರಾಶಿಯ ಆಡಳಿತ ಗ್ರಹವಾಗಿದೆ. ನೀರು ಈ ರಾಶಿಯ ಅಂಶವಾಗಿದೆ. ಆಭರಣದ ವಿಷಯಕ್ಕೆ ಬಂದಾಗಲೂ ಈ ರಾಶಿಯವರು ನೀರಿನಂತಹ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಾಣಿಕ್ಯ, ಹವಳ ಹಾಗೂ ಬೆಳ್ಳಿ ಇವರಿಗೆ ಹೆಚ್ಚು ಹೊಂದುತ್ತದೆ. ಸುಂದರವಾದ ಹವಳದ ಕಂಕಣ ಮತ್ತು ಹವಳದ ಕಿವಿಯೋಲೆಗಳು ಈ ರಾಶಿಯವರಿಗೆ ಹೆಚ್ಚು ಸೂಕ್ತ ಎನ್ನಿಸುತ್ತದೆ.

ಧನು

ಧನುರಾಶಿಗೆ ಗುರುವು ಆಡಳಿತ ಗ್ರಹವಾಗಿದ್ದರೆ, ಬಿಲ್ಲುಗಾರ ಇದರ ಸಂಕೇತವಾಗಿದೆ. ಬೆಂಕಿ ಈ ಗ್ರಹದ ಅಂಶವಾಗಿದೆ. ನೀಲಿ ಬಣ್ಣವು ಗುರುವಿನ ಇಷ್ಟದ ಬಣ್ಣ. ಆ ಕಾರಣಕ್ಕೆ ಧನು ರಾಶಿಯವರು ಆಯ್ಕೆ ಮಾಡುವ ಯಾವುದೇ ಆಭರಣದೊಂದಿಗೆ ನೀಲಮಣಿ, ವೈಡೂರ್ಯದಂತಹ ನೀಲಿ ಬಣ್ಣದ ಹರಳನ್ನು ಆಯ್ಕೆ ಮಾಡುವುದು ಸೂಕ್ತ. ಇದು ಚಿನ್ನದಿಂದ ಮಾಡಲ್ಪಟ್ಟಿರಬೇಕು.

ಮಕರ

ಮಕರ ರಾಶಿಯು ಭೂಮಿಯ ಚಿಹ್ನೆಯಾಗಿದೆ. ಇದು ಸಮುದ್ರ ಮೇಕೆಯನ್ನು ಪ್ರತಿನಿಧಿಸುತ್ತದೆ. ಶನಿ ಗ್ರಹವು ಮಕರದ ಆಡಳಿತ ಗ್ರಹವಾಗಿದೆ. ಈ ರಾಶಿಯವರು ಸದಾ ತಾರ್ತಿಕ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆಭರಣಗಳ ವಿಚಾರದಲ್ಲಿ ಇವರಿಗೆ ಮೌಲ್ಯ ಮುಖ್ಯವಾಗುತ್ತದೆ. ಆಭರಣಗಳನ್ನು ಖರೀದಿಸುವಾಗ ದೀರ್ಘಾವಧಿಯ ಹಾಗೂ ಉತ್ತಮ ಗುಣಮಟ್ಟದ ತುಣುಕುಗಳನ್ನು ಹುಡುಕುತ್ತಾರೆ. ಈ ರಾಶಿಯವರು ಚಿನ್ನ ಅಥವಾ ಬೆಳ್ಳಿಯಿಂ ಮಾಡಿದ ಸೊಗಸಾದ ಆಭರಣಗಳನ್ನು ಧರಿಸುವುದು ಉತ್ತಮ ಆಯ್ಕೆ.

ಕುಂಭ

ಈ ರಾಶಿಯ ಆಡಳಿತ ಗ್ರಹ ಯುರೇನಸ್‌. ಗಾಳಿಯು ಈ ಗ್ರಹದ ಅಂಶವಾಗಿದೆ. ಕುಂಭ ರಾಶಿಯವರು ವೈಯಕ್ತಿಕ ಸ್ವಾತಂತ್ರವನ್ನು ಹೆಚ್ಚು ಇಷ್ಟಪಡುತ್ತಾರೆ. ಈ ರಾಶಿಯವರಿಗೆ ಯುರೇನಿಯಂ ಅಥವಾ ಬೆಳ್ಳಿಯಿಂದ ಮಾಡಿದ ವಿಶಿಷ್ಟವಾದ ಆಭರಣ ಖರೀದಿಸಬೇಕು. ಗಾರ್ನೆಟ್‌, ಅಮೆಥಿಸ್ಟ್‌ ಅಥವಾ ಓಪಲ್‌ ಅಳವಡಿಕೆ ಸೂಕ್ತ ಎನ್ನಿಸುತ್ತದೆ.

ಮೀನ

ನೆಪ್ಚೂನ್‌ ಮೀನ ರಾಶಿಯ ಆಡಳಿತ ಗ್ರಹವಾಗಿದೆ. ಇದು ಮೀನನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನೀರು ಈ ರಾಶಿಯ ಅಂಶವಾಗಿದೆ. ಈ ರಾಶಿಯವರಿಗೆ ನೀಲಿ ಬಣ್ಣ ಹೆಚ್ಚು ಹೊಂದುತ್ತದೆ. ಇವರು ನೀಲಮಣಿ, ಅಮೆಥಿಸ್ಟ್‌ ಅಥವಾ ಅಕ್ವಾಮರೀನ್‌ನಂತಹ ಹರಳುಗಳನ್ನು ಪ್ಲಾಟಿನಂ ಅಥವಾ ಬೆಳ್ಳಿ ಆಭರಣದ ಜೊತೆ ಸೇರಿಸಿ ಧರಿಸಬೇಕು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.