Kedareshwara Vrata: ದೀಪಾವಳಿ ವೇಳೆ ಕೇದಾರೇಶ್ವರ ವ್ರತ ಏಕೆ ಮಾಡಬೇಕು? ದಿನಾಂಕ, ಆಚರಣೆಯ ವಿಧಿ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kedareshwara Vrata: ದೀಪಾವಳಿ ವೇಳೆ ಕೇದಾರೇಶ್ವರ ವ್ರತ ಏಕೆ ಮಾಡಬೇಕು? ದಿನಾಂಕ, ಆಚರಣೆಯ ವಿಧಿ ವಿಧಾನ ಇಲ್ಲಿದೆ

Kedareshwara Vrata: ದೀಪಾವಳಿ ವೇಳೆ ಕೇದಾರೇಶ್ವರ ವ್ರತ ಏಕೆ ಮಾಡಬೇಕು? ದಿನಾಂಕ, ಆಚರಣೆಯ ವಿಧಿ ವಿಧಾನ ಇಲ್ಲಿದೆ

ಹೆಸರೇ ಸೂಚಿಸುವಂತೆ ಇದು ಈಶ್ವರನಿಗೆ ಸಂಬಂಧಿಸಿದ ಪೂಜೆಯಾಗಿದೆ. ಈ ಪೂಜೆಯನ್ನು ಅನೇಕ ಋಷಿಮುನಿಗಳು ಮಾಡಿ ಉತ್ತಮ ಫಲಗಳನ್ನು ಪಡೆದರೆಂದು, ಪಾರ್ವತಿ ದೇವಿಯು ಸಹ ಈ ವ್ರತವನ್ನು ಆಚರಿಸಿ ತನ್ನ ಇಷ್ಟಾರ್ಥ ಸಿದ್ದಿಯನ್ನು ಪಡೆದಳು ಎಂದು ತಿಳಿದುಬರುತ್ತದೆ. ಇದರ ಕಥೆಯನ್ನು ಕೇಳಿದರೂ ಸಹ ಸಕಲ ಸಂಪತ್ತು ಲಭಿಸಿ ಜೀವನದಲ್ಲಿ ಸುಖ, ಸಂತೋಷದಿಂದ ಇರುತ್ತಾರೆ ಎಂದು ನಂಬಲಾಗಿದೆ.

ಕೇದಾರೇಶ್ವರ ವ್ರತ (ಪ್ರಾತಿನಿಧಿಕ ಚಿತ್ರ)
ಕೇದಾರೇಶ್ವರ ವ್ರತ (ಪ್ರಾತಿನಿಧಿಕ ಚಿತ್ರ)

ದೀಪಾವಳಿ ಹಬ್ಬದ ವೇಳೆ, ನಿರ್ದಷ್ಟವಾಗಿ ದೀಪಾವಳಿ ಅಮಾವಾಸ್ಯೆಯಂದು ಕೇದಾರೇಶ್ವರ ವ್ರತವನ್ನು ಆಚರಣೆ ಮಾಡಲಾಗುತ್ತದೆ. ಕೇದಾರೇಶ್ವರ ವ್ರತವನ್ನು ಕೇದಾರ ಗೌರಿ ವ್ರತ ಎಂದೂ ಕರೆಯಲಾಗುತ್ತದೆ. ಈ ಬಾರಿ ನವೆಂಬರ್​ 13 ರಂದು ಕೇದಾರೇಶ್ವರ ವ್ರತ ಬಂದಿದೆ. ಕೆಲವರು ಈ ದಿನಕ್ಕೂ 21 ದಿನಗಳ ಮೊದಲಿನಂಲೇ ಅಂದರೆ ಶುಕ್ಲ ಪಕ್ಷದ ಅಷ್ಟಮಿಯಿಂದ ಉಪವಾಸವಿದ್ದುಕೊಂಡು ಆಚರಣೆ ಮಾಡಿ, 21ನೇ ದಿನ ಸಂಪನ್ನ ಮಾಡುತ್ತಾರೆ.

ಏನಿದು ಕೇದಾರೇಶ್ವರ ವ್ರತ? ಇದರ ಹಿನ್ನೆಲೆ ಮತ್ತು ಮಹತ್ವ ಏನು?

ಹೆಸರೇ ಸೂಚಿಸುವಂತೆ ಇದು ಈಶ್ವರನಿಗೆ ಸಂಬಂಧಿಸಿದ ಪೂಜೆಯಾಗಿದೆ. ಈ ಪೂಜೆಯನ್ನು ಅನೇಕ ಋಷಿಮುನಿಗಳು ಮಾಡಿ ಉತ್ತಮ ಫಲಗಳನ್ನು ಪಡೆದರೆಂದು ಹೇಳಲಾಗುತ್ತದೆ. ಪಾರ್ವತಿದೇವಿಯು ಸಹ ಈ ವ್ರತವನ್ನು ಆಚರಿಸಿ ತನ್ನ ಇಷ್ಟಾರ್ಥ ಸಿದ್ದಿಯನ್ನು ಪಡೆದಳು ಎಂದು ತಿಳಿದುಬರುತ್ತದೆ. ಇದರ ಕಥೆಯನ್ನು ಕೇಳಿದರೂ ಸಹ ಸಕಲ ಸಂಪತ್ತು ಲಭಿಸಿ ಜೀವನದಲ್ಲಿ ಸುಖ, ಸಂತೋಷದಿಂದ ಇರುತ್ತಾರೆ ಎಂದು ನಂಬಲಾಗಿದೆ.

ಕೈಲಾಸ ಪರ್ವತದಲ್ಲಿ ಶಿವನು ಸಂತೋಷದಿಂದ ಇರುವುದನ್ನು ಕಂಡ ನಾರದರು ಗಾಯನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಳಿದವರು ನಾಟ್ಯವನ್ನು ಮಾಡುತ್ತಿರುತ್ತಾರೆ. ಹಾಸ್ಯದಿಂದ ಎಲ್ಲರೂ ಇರುತ್ತಾರೆ. ಆನಂತರ ಎಲ್ಲರೂ ಶಿವನಿಗೆ ಮಾತ್ರ ನಮಸ್ಕರಿಸುತ್ತಾರೆ. ಇದರಿಂದ ಕೋಪಗೊಂಡ ಪಾರ್ವತಿಯು ಸಭೆಯಿಂದ ನಿರ್ಗಮಿಸುತ್ತಾಳೆ.

ಪತಿಯಿಂದ ದೂರವಾದ ಶಿವನು ದುಃಖದಲ್ಲಿ ಮುಳುಗುತ್ತಾನೆ. ಕೊನೆಗೆ ಪಾರ್ವತಿಯು ಮಹಾಋಷಿಯೊಬ್ಬರ ಆಶ್ರಮವನ್ನು ಸೇರುತ್ತಾಳೆ. ಹೊರಗೆ ತೆರಳಿದ್ದ ಮಹಾಋಷಿಯು ವಾಪಸ್ಸು ಬಂದಾಗ ಆಶ್ರಮದಲ್ಲಿ ವಿಶೇಷ ಕಾಂತಿ ಮನೆ ಮಾಡಿರುತ್ತದೆ. ಇಂತಹ ಬದಲಾವಣೆಗೆ ಕಾರಣ ಸ್ವಯಂ ಪಾರ್ವತಿ ಆಗಿರುತ್ತಾಳೆ. ಪಾರ್ವತಿಯನ್ನು ಕಂಡ ಮುನಿಯು, ಅತಿಥಿ ಸತ್ಕಾರ ಮಾಡಿ ಬಂದ ಕಾರಣವನ್ನು ಕೇಳುತ್ತಾನೆ. ಆಗ ಪಾರ್ವತಿಯು ಋಷಿಯ ಮಾರ್ಗದರ್ಶನದಲ್ಲಿ ಕೇದಾರೇಶ್ವರ ವ್ರತವನ್ನು ಆಚರಿಸುತ್ತಾಳೆ. ಕೈಗೆ ಕಂಕಣವನ್ನು ಕಟ್ಟಿಕೊಂಡು ಈ ವ್ರತ ಆಚರಿಸಿ ಉಪವಾಸ ಮಾಡಬೇಕಾಗುತ್ತದೆ. ಈ ಪೂಜೆಯಿಂದ ಶಿವನು ಪಾರ್ವತಿಯೊಡನೆ ಅಂತರ್ಗತನಾಗುತ್ತಾನೆ.

ಕೇದಾರೇಶ್ವರ ವ್ರತ ಆಚರಣೆ ಹೇಗೆ ಮತ್ತು ಏಕೆ?

ಉಪವಾಸದಲ್ಲಿದ್ದುಕೊಂಡು ಧಾನ್ಯಗಳ ರಾಶಿಯ ಮಧ್ಯೆ ಕುಂಭವನ್ನು ಇಟ್ಟು ಅದರಲ್ಲಿ ಶಿವನನ್ನು ಆಹ್ವಾನಿಸಬೇಕು. ನಂತರ ಪ್ರಾಣ ಪ್ರತಿಷ್ಠೆ ಮಾಡಿ ಷೋಡಚೋಪಚಾರ ಪೂಜೆಯನ್ನು ಮಾಡಬೇಕು. 21 ಕಜ್ಜಾಯಗಳು, ಅತಿರಸ, ಪಾಯಸ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ವಿವಿಧ ಬಗೆಯ ಹಣ್ಣುಗಳನ್ನು ನೈವೇದ್ಯವನ್ನಾಗಿ ಮಾಡಿ ಸೇವಿಸುತ್ತಾರೆ. ಈ ಪೂಜೆಯಿಂದಾಗಿ ಮುಖ್ಯವಾಗಿ ದಂಪತಿಗಳ ನಡುವಿನ ಮನಸ್ತಾಪವು ಮರೆಯಾಗುತ್ತದೆ. ಈ ಪೂಜೆಯ ಬಗ್ಗೆ ಸ್ಕಂದಪುರಾಣದಲ್ಲಿ ಉಲ್ಲೇಖವಿದೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.