Deepavali Gifts: ದೀಪಾವಳಿ ಹಬ್ಬಕ್ಕೆ ಗಿಫ್ಟ್ ಕೊಡುವ ಪ್ಲಾನ್ ಮಾಡಿಕೊಂಡಿದ್ದೀರಾ? ಈ ವಸ್ತುಗಳನ್ನು ಮಾತ್ರ ಕೊಡಬೇಡಿ
ದೀಪಾವಳಿ ಗಿಫ್ಟ್: ದೀಪಾವಳಿಯ ದಿನ, ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿಯಾದಾಗ, ಅವರಿಗೆ ಉಡುಗೊರೆಗಳನ್ನು ನೀಡುವ ಅಭ್ಯಾಸ ಕೆಲವರಿಗೆ ಇರುತ್ತೆ. ನಿಮ್ಮ ಸ್ನೇಹಿತರಿಗೆ ಗಿಫ್ಟ್ ಖರೀದಿಸಲು ನೀವು ಯೋಜಿಸುತ್ತಿದ್ದೀರಾ? ಆದರೆ ಇಂಥ ವಸ್ತುಗಳನ್ನು ಅವರಿಗೆ ಕೊಡಬೇಡಿ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಒಂದೇ ಸ್ಥಳದಲ್ಲಿ ಸೇರುತ್ತಾರೆ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ. ಹಬ್ಬದ ಶುಭಾಶಯಗಳನ್ನು ವಿನಿಯಮ ಮಾಡಿಕೊಳ್ಳುತ್ತಾರೆ. ಪರಸ್ಪರ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಗೊರೆಗಳನ್ನು ವಿನಿಯಮ ಮಾಡಿಕೊಳ್ಳುತ್ತಾರೆ. ಉಡುಗೊರೆಗಳನ್ನು ನೀಡುವುದು ಸಂಪ್ರದಾಯದ ಭಾಗವಾಗಿದೆ. ಹಬ್ಬಕ್ಕೆ ಸೂಕ್ತವಾದ ಉಡುಗೊರೆಗಳನ್ನು ಆಯ್ಕೆ ಮಾಡುವುದು ಮುಖ್ಯ. ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಮತ್ತು ಹಿತೈಷಿಗಳಿಗೆ ಉಡುಗೊರೆಗಳನ್ನು ನೀಡಲು ನೀವು ಪ್ಲಾನ್ ಮಾಡಿಕೊಂಡಿದ್ದರೆ? ನಿಮಗೆ ಇಷ್ಟವಾಗುವ ಉಡುಗೊರೆಗಳನ್ನು ನೀಡಿ. ಆದರೆ ಅಪ್ಪಿತಪ್ಪಿಯೂ ಇವುಗಳನ್ನು ಇವುಗಳನ್ನು ಮಾತ್ರ ಕೊಡಬೇಡಿ.
ಗಡಿಯಾರ
ವಾಚ್ ಅತ್ಯಂತ ಜನಪ್ರಿಯ ಉಡುಗೊರೆಗಳಲ್ಲಿ ಒಂದಾಗಿದೆ. ಆದರೆ ನಂಬಿಕೆಗಳ ಪ್ರಕಾರ, ದೀಪಾವಳಿಯ ಸಮಯದಲ್ಲಿ ಗಡಿಯಾರವನ್ನು ಉಡುಗೊರೆಯಾಗಿ ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ನಕಾರಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ. ಗಡಿಯಾರ ಮುಳ್ಳು ತಿರುಗುವ ಸಮಯದಲ್ಲಿ ಟಿಕ್ ಟಿಕ್ ಎಂಬ ಶಬ್ದವನ್ನು ಮಾಡುತ್ತದೆ.ಈ ಶಬ್ದವು ಜೀವನ ಹೇಗೆ ಕ್ಷೀಣಿಸುತ್ತಿದೆ ಎಂಬುದರ ಸೂಚಕವಾಗಿದೆ ಅನ್ನೋದು ಅನೇಕರಿಂದ ಕಂಡುಬರುತ್ತದೆ. ಆದ್ದರಿಂದ ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು.
ಕಪ್ಪು ಮತ್ತು ಬಿಳಿ ಬಟ್ಟೆ
ಎಲ್ಲರೂ ಹೊಸ ಬಟ್ಟೆ ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನೀವು ಬೇರೆಯವರ ಮನೆಗೆ ಭೇಟಿ ನೀಡಲು ಹೋದಾಗ, ಅವರಿಗೆ ಕಪ್ಪು ಮತ್ತು ಬಿಳಿ ಬಟ್ಟೆಗಳನ್ನು ಅಪ್ಪಿತಪ್ಪಿಯೂ ಕೊಡಬೇಡಿ. ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಅಥವಾ ಧರಿಸುವುದು ದುಃಖಕ್ಕೆ ಸಂಬಂಧಿಸಿದೆ. ಅದಕ್ಕಾಗಿಯೇ ಆಚರಣೆಗಳಲ್ಲಿ ಸಾಮಾನ್ಯವಾಗಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದಿಲ್ಲ. ಬಿಳಿ ಬಣ್ಣವು ಶೋಕವನ್ನು ಪ್ರತಿನಿಧಿಸುತ್ತದೆ.
ತೀಕ್ಷ್ಣವಾದ ವಸ್ತುಗಳು
ಚಾಕು, ಕತ್ತರಿಯಂತಹ ಇತರ ಹರಿತವಾದ ವಸ್ತುಗಳನ್ನು ಸಹ ಉಡುಗೊರೆಯ ಭಾಗವಾಗಿ ನೀಡಬಾರದು. ಇವು ಸಂಬಂಧಗಳ ವಿಘಟನೆಯನ್ನು ಸೂಚಿಸುತ್ತವೆ. ಒಟ್ಟಿಗೆ ಸಂತೋಷದಿಂದ ಆಚರಿಸುವಾಗ ಇವುಗಳನ್ನು ದೂರವಿಡಬೇಕು. ಕುಟುಂಬ ಮತ್ತು ಸ್ನೇಹಿತರ ನಡುವೆ ಏಕತೆ, ಸಂತೋಷ ಮತ್ತು ಸಕಾರಾತ್ಮಕ ಬಂಧಗಳನ್ನು ಉತ್ತೇಜಿಸುವ ಉಡುಗೊರೆಗಳನ್ನು ಆಯ್ಕೆಮಾಡಿ. ಅದಕ್ಕಾಗಿಯೇ ನೀವು ಇವುಗಳನ್ನು ಕೊಡಬಾರದು.
ಬ್ಯಾಗ್
ಬ್ಯಾಗ್ ಅಥವಾ ಕೈ ಚೀಲಗಳು ಮಹಿಳೆಯರಿಗೆ ಅಚ್ಚುಮೆಚ್ಚಿನ ವಸ್ತುಗಳಲ್ಲಿ ಒಂದಾಗಿದೆ. ಇವುಗಳನ್ನು ಹೆಚ್ಚಾಗಿ ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ಇವುಗಳನ್ನು ದೀಪಾವಳಿಯಂದು ಕೊಡಬಾರದು. ಚರ್ಮದ ಉತ್ಪನ್ನಗಳನ್ನು ಪ್ರಾಣಿ ಮೂಲಗಳಿಂದ ಪಡೆಯಲಾಗಿರುತ್ತದೆ. ದೀಪಾವಳಿ ಒಂದು ಸಂತೋಷದ ಹಬ್ಬ. ಅದಕ್ಕಾಗಿಯೇ ಅಂತಹ ಸಂತೋಷದ ದಿನದಂದು ಜೀವಿಗಳಿಗೆ ಹಾನಿ ಮಾಡಿ ಪಡೆದ ವಸ್ತುಗಳನ್ನು ತೆಗೆದುಕೊಳ್ಳಬಾರದು. ವಾಲೆಟ್, ಶೂಗಳು, ಹಾಗೂ ಬ್ಯಾಗ್ ಇತ್ಯಾದಿಗಳನ್ನು ಗಿಫ್ಟ್ ಆಗಿ ಕೊಡಬೇಡಿ, ನೀವು ಕೂಡ ತೆಗೆದುಕೊಳ್ಳಬೇಡಿ.
ಮರು ಬಳಕೆಯಾದ ಗಿಫ್ಟ್‌ಗಳು
ಹಿಂದೆ ಯಾರಾದರೂ ನಿಮಗೆ ನೀಡಿದ ಉಡುಗೊರೆಗಳಿಗೆ ಸ್ವಲ್ಪ ಹೊಸ ಸ್ಪರ್ಶವನ್ನು ನೀಡಿ ಮತ್ತೆ ಬೇರೊಬ್ಬರಿಗೆ ಅದನ್ನು ಈ ದೀಪಾವಳಿಗೆ ಗಿಫ್ಟ್ ಆಗಿ ನೀಡುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ. ಇಂಥ ವಸ್ತುಗಳನ್ನು ಇತರರಿಗೆ ಉಡುಗೊರೆಯಾಗಿ ಕಳುಹಿಸಬೇಡಿ. ನಿಮ್ಮ ಉಡುಗೊರೆಯನ್ನು ಇತರರಿಗೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು ಉಡುಗೊರೆಯನ್ನು ನೀಡುತ್ತಿದ್ದೀರಿ ಮತ್ತು ಅದಕ್ಕೆ ಸಂಬಂಧಿಸಿದ ಶಕ್ತಿಯನ್ನು ನೀಡುತ್ತಿದ್ದೀರಿ ಎಂದರ್ಥ.
ಮದ್ಯ
ದೀಪಾವಳಿ ಪಾರ್ಟಿ ಎಂದರೆ ಪುರುಷರು ಮದ್ಯ ಸೇವಿಸುವುದನ್ನು ಆನಂದಿಸುತ್ತಾರೆ. ಇವುಗಳನ್ನು ಉಡುಗೊರೆಯಾಗಿ ನೀಡಲು ಸಹ ಒಳ್ಳೆಯದಲ್ಲ. ದೀಪಾವಳಿ ಹಬ್ಬವು ಶುದ್ಧತೆ ಮತ್ತು ಅಧ್ಯಾತ್ಮಿಕತೆಯನ್ನು ಒತ್ತಿಹೇಳುತ್ತದೆ. ಹಾಗಾಗಿ ಇವುಗಳನ್ನು ಉಡುಗೊರೆಯಾಗಿ ನೀಡಬೇಡಿ. ಬದಲಿಗೆ ಜ್ಯೂಸ್, ವಿಶೇಷವಾಗಿ ತಯಾರಿಸಿದ ಹಬ್ಬದ ಪಾನೀಯಗಳನ್ನು ನೀಡಬಹುದು.
ದೇವಿಯ ವಿಗ್ರಹಗಳು
ದೀಪಾವಳಿ ಪೂಜೆಯಲ್ಲಿ ಲಕ್ಷ್ಮಿ ದೇವಿಯ ಮತ್ತು ಗಣೇಶನ ವಿಗ್ರಹಗಳನ್ನು ಇಡಲಾಗುತ್ತದೆ. ನೀವು ಈ ದೇವರುಗಳ ವಿಗ್ರಹಗಳನ್ನು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬಾರದು. ವಿಗ್ರಹಗಳನ್ನು ನೀಡುವ ಆಲೋಚನೆ ಸಕಾರಾತ್ಮಕವಾಗಿದ್ದರೂ, ಅದು ಒಳ್ಳೆಯದಲ್ಲ. ಹಾಗಾಗಿ ಹಬ್ಬ ಹರಿದಿನಗಳಲ್ಲಿ ಮೂರ್ತಿಗಳನ್ನು ಉಡುಗೊರೆಯಾಗಿ ನೀಡದಿರುವುದು ಉತ್ತಮ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.