Samvatsara: 60 ಸಂವತ್ಸರಗಳ ಹೆಸರುಗಳು ಏನನ್ನು ಸಂಕೇತಿಸುತ್ತದೆ; ಇವುಗಳ ಅರ್ಥವೇನು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Samvatsara: 60 ಸಂವತ್ಸರಗಳ ಹೆಸರುಗಳು ಏನನ್ನು ಸಂಕೇತಿಸುತ್ತದೆ; ಇವುಗಳ ಅರ್ಥವೇನು? ಇಲ್ಲಿದೆ ಮಾಹಿತಿ

Samvatsara: 60 ಸಂವತ್ಸರಗಳ ಹೆಸರುಗಳು ಏನನ್ನು ಸಂಕೇತಿಸುತ್ತದೆ; ಇವುಗಳ ಅರ್ಥವೇನು? ಇಲ್ಲಿದೆ ಮಾಹಿತಿ

ಯುಗಾದಿ 2024: ಹಿಂದೂಗಳಿಗೆ ಹೊಸ ವರ್ಷವು ಯುಗಾದಿಯೊಂದಿಗೆ ಪ್ರಾರಂಭವಾಗುತ್ತದೆ. ಈ ಭಾರಿ ಕ್ರೋಧಿನಾಮ ಸಂವತ್ಸರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರತಿಯೊಂದು ಸಂವತ್ಸರಕ್ಕೂ ಒಂದೊಂದು ಹೆಸರುಗಳಿವೆ. ಒಟ್ಟು ಎಷ್ಟು ಸಂವತ್ಸರಗಳಿವೆ? ಅವುಗಳ ಹೆಸರೇನು? ಅರ್ಥವೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸಂವತ್ಸರಗಳು ಹಾಗೂ ಅವುಗಳ ಅರ್ಥ
ಸಂವತ್ಸರಗಳು ಹಾಗೂ ಅವುಗಳ ಅರ್ಥ (PC: Canva)

ಯುಗಾದಿ 2024: ಈ ವರ್ಷ ಏಪ್ರಿಲ್ 9 ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಹೊಸ ವರ್ಷವು ಪಂಚಾಂಗದ ಪ್ರಕಾರ ಯುಗಾದಿಯಿಂದ ಪ್ರಾರಂಭವಾಗುತ್ತದೆ. ನಾವು ಪ್ರಸ್ತುತ ಶೋಭಾಕೃತ ನಾಮ ಸಂವತ್ಸರದಲ್ಲಿದ್ದೇವೆ. ಏಪ್ರಿಲ್ 9 ರಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗಲಿದೆ. ಪಂಚಾಂಗದ ಪ್ರಕಾರ ಪ್ರತಿ ವರ್ಷಕ್ಕೆ ಬೇರೆ ಬೇರೆ ಹೆಸರುಗಳಿವೆ.

ಒಟ್ಟು ಎಷ್ಟು ಸಂವತ್ಸರಗಳಿವೆ?

ಒಟ್ಟು 60 ಸಂವತ್ಸರಗಳಿವೆ. ಈ ಸಂವತ್ಸರವು ಪ್ರಭಾವದಿಂದ ಪ್ರಾರಂಭವಾಗಿ ಅಕ್ಷಯದಿಂದ ಕೊನೆಗೊಳ್ಳುತ್ತದೆ. 60 ಪೂರ್ಣಗೊಂಡ ನಂತರ, ವರ್ಷವು ಮತ್ತೆ ಮೊದಲಿನಿಂದ ಪ್ರಾರಂಭವಾಗುತ್ತದೆ. ಒಂದೊಂದು ಹೆಸರಿನ ಹಿಂದೆಯೂ 60 ವರ್ಷಗಳ ಕಥೆಯಿದೆ. ಮೊದಲ ಋತುವು ವಸಂತಕಾಲ. ಮೊದಲ ತಿಂಗಳು ಚೈತ್ರ ಮಾಸ. ಹಿಂದೂಗಳಿಗೆ ಹೊಸ ವರ್ಷವು ಜನವರಿ 1 ರ ಬದಲಿಗೆ ಯುಗಾದಿಯಿಂದ ಪ್ರಾರಂಭವಾಗುತ್ತದೆ. ಯುಗಾದಿ ಹಬ್ಬವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಡ್ವಾ ಎಂದು ಆಚರಿಸಲಾಗುತ್ತದೆ. ಬೆಂಗಾಲಿಗಳು ಯುಗಾದಿಯನ್ನು ಪೊಯಿಲಾ ಭೈಶಾಖ್ ಎಂದು ಆಚರಿಸುತ್ತಾರೆ, ಸಿಖ್ಖರು ವೈಶಾಖಿ ಮತ್ತು ಮಲಯಾಳಿಗಳು ವಿಶು ಎಂದು ಆಚರಿಸುತ್ತಾರೆ.

ಸಂವತ್ಸರಗಳ ಹೆಸರುಗಳ ಹಿಂದಿನ ಕಥೆ

ಸಂವತ್ಸರದ 60 ಹೆಸರುಗಳು ನಾರದನ ಮಕ್ಕಳ ಹೆಸರುಗಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಒಂದು ದಿನ ವಿಷ್ಣುವು ನಾರದನ ಗರ್ವವನ್ನು ಕಡಿಮೆ ಮಾಡಲು ಉಪಾಯ ಮಾಡುತ್ತಾನೆ. ನಾರದನನ್ನು ಮಹಿಳೆಯನ್ನಾಗಿ ಮಾಡುತ್ತಾನೆ. ಸ್ತ್ರೀ ರೂಪದಲ್ಲಿ ನಾರದನು ರಾಜನನ್ನು ಮದುವೆಯಾಗಿ 60 ಮಕ್ಕಳಿಗೆ ಜನ್ಮ ನೀಡುತ್ತಾನೆ. ಆದರೆ ಯುದ್ಧದಲ್ಲಿ 60 ಮಕ್ಕಳೂ ಸಾಯುತ್ತಾರೆ. ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವು ನಾರದನ ಅಹಂ ತೊಡೆದು ಹಾಕಿ ನಿನ್ನ ಮಕ್ಕಳು ಸಂವತ್ಸರಗಳ ಹೆಸರಿನಿಂದ ಕ್ಯಾತಿ ಪಡೆಯಲಿ ಎಂದು ವರ ನೀಡುತ್ತಾನೆ. ಹೀಗಾಗಿ ಆ ಸಂವತ್ಸರಗಳನ್ನು ನಾರದನ ಮಕ್ಕಳು ಎನ್ನಲಾಗಿದೆ.

60 ಸಂವತ್ಸರಗಳ ಹೆಸರು ಹಾಗೂ ಅರ್ಥ ಹೀಗಿದೆ

1) ಪ್ರಭವ - ಯಜ್ಞಗಳು ಹೇರಳವಾಗಿ ನಡೆಯುತ್ತವೆ

2) ವಿಭವ - ಆರಾಮವಾಗಿ ಜೀವಿಸುತ್ತಾರೆ

3) ಶುಕ್ಲ - ಸಮೃದ್ಧ ಬೆಳೆಗಳನ್ನು ಬಯಸುತ್ತಾರೆ

4) ಪ್ರಮೋದೂತ - ಎಲ್ಲರಿಗೂ ಸಂತೋಷವನ್ನು ನೀಡುತ್ತದೆ

5) ಪ್ರಜೋತ್ಪತ್ತಿ - ಎಲ್ಲರಿಗೂ ಸಂತೋಷವನ್ನು ನೀಡುತ್ತದೆ

6) ಆಂಗೀರಸ - ಭೋಗಗಳು ಉಂಟಾಗುತ್ತವೆ

7) ಶ್ರೀಮುಖ - ಸಂಪನ್ಮೂಲಗಳು ಹೇರಳವಾಗಿದೆ

8) ಭಾವ - ಉನ್ನತ ಭಾವನೆಗಳನ್ನು ಹೊಂದಿರುತ್ತಾರೆ

9) ಯುವ - ಮಳೆ ಬೀಳುತ್ತದೆ, ಬೆಳೆಗಳು ಸಮೃದ್ಧವಾಗಿ ಕೊಯ್ಲು ಮಾಡಲಾಗುತ್ತದೆ

10) ಧಾತ್ರಿ - ರೋಗಗಳು ಕಡಿಮೆಯಾಗುವುದು

11) ಈಶ್ವರ - ಯೋಗಕ್ಷೇಮ, ಆರೋಗ್ಯವನ್ನು ಸೂಚಿಸುತ್ತದೆ

12) ಬಹುಧಾನ್ಯ - ದೇಶವು ಸಮೃದ್ಧ ಮತ್ತು ಸಂತೋಷದಿಂದ ಇರಬೇಕೆಂದು ಸೂಚಿಸುತ್ತದೆ

13) ಪ್ರಮಾಥಿ - ಮಳೆ ಸಾಧಾರಣವಾಗಿದೆ

14) ವಿಕ್ರಮ - ಬೆಳೆಗಳು ಚೆನ್ನಾಗಿ ಬೆಳೆದು ರೈತರಿಗೆ ಸಂತೋಷ

15) ವೃಷ/ ವಿಷು - ಮಳೆ ಸಮೃದ್ಧವಾಗಿ ಬೀಳುತ್ತದೆ

16) ಚಿತ್ರಭಾನು - ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವರು

17) ಸ್ವಭಾನು - ಸಮೃದ್ಧವಾಗಿ ಮಳೆ ಆಗುತ್ತದೆ.

18) ತಾರಣ - ಯೋಗಕ್ಷೇಮ, ಆರೋಗ್ಯ

19) ಪಾರ್ಥಿವ - ಸಂಪತ್ತು ಹೆಚ್ಚಾಗುತ್ತದೆ

20) ವ್ಯಯ - ಸಾಕಷ್ಟು ಮಳೆಯಾಗುತ್ತದೆ

21) ಸರ್ವಜಿತ್ - ಸಮೃದ್ಧಿ ಆಗಲಿದೆ.

22) ಸರ್ವಧಾರಿ - ಸಮೃದ್ಧಿಯಾಗಲಿದೆ

23) ವಿರೋಧಿ - ಮಳೆಯಿಲ್ಲದೆ ಸಂಕಷ್ಟದ ಕಾಲ

24) ವಿಕೃತ - ಈ ಸಮಯ ಭಯಾನಕವಾಗಿದೆ

25) ಖರ - ಪರಿಸ್ಥಿತಿ ಸಹಜವಾಗಿರುತ್ತದೆ

26) ನಂದನ - ಸಾಮಾನ್ಯ ಪರಿಸ್ಥಿತಿಗಳಿವೆ

27) ವಿಜಯ - ಶತ್ರುಗಳನ್ನು ಗೆಲ್ಲುತ್ತಾರೆ

28) ಜಯ - ಲಾಭ ಮತ್ತು ಯಶಸ್ಸು

29) ಮನ್ಮಥ - ಜ್ವರ ಬಾಧೆಗಳು ದೂರಾಗುತ್ತದೆ

30) ದುರ್ಮುಖಿ - ಕಷ್ಟ ಇರುವವರಿಗೆ ಸಮಸ್ಯೆ ಕಳೆಯುತ್ತದೆ

31) ಹೇವಿಳಂಬಿ - ಜನರು ಸಂತೋಷವಾಗಿರುತ್ತಾರೆ

32) ವಿಳಂಬಿ - ಸಮೃದ್ಧಿಯಾಗಲಿದೆ

33) ವಿಕಾರಿ - ಅನಾರೋಗ್ಯ ಉಂಟು ಮಾಡುತ್ತದೆ

34) ಶಾರ್ವರಿ - ಬೆಳೆಗಳ ಇಳುವರಿ ಕಡಿಮೆ

35) ಪ್ಲವ - ನೀರು ಸಮೃದ್ಧವಾಗಿರುತ್ತದೆ

36) ಶುಭಕೃತ್ - ಮಂಗಳಕರ

37) ಶೋಭಾಕೃತ್ - ಲಾಭ ನೀಡುತ್ತದೆ

38) ಕ್ರೋಧಿ - ಕೋಪ ಉಂಟು ಮಾಡುತ್ತದೆ

39) ವಿಶ್ವಾವಸು - ಸಂಪತ್ತು ಹೇರಳವಾಗುತ್ತದೆ

40) ಪರಾಭವ - ಜನರು ಭ್ರಮೆಗಳಿಂದ ನರಳುತ್ತಾರೆ

41) ಪ್ಲವಂಗ - ನೀರು ಸಮೃದ್ಧವಾಗಿರುತ್ತದೆ

42) ಕೀಲಕ - ಪ್ರಮುಖ ಬೆಳೆಗಳು ಚೆನ್ನಾಗಿರತ್ತದೆ

43) ಸೌಮ್ಯ - ಅನೂಕೂಲಕರ ಫಲಿತಾಂಶಗಳು ಹೆಚ್ಚು

44) ಸಾಧಾರಣ - ಸಾಮಾನ್ಯವಾಗಿರುತ್ತದೆ

45) ವಿರೋಧಿಕೃತ್ - ಜನರಲ್ಲಿ ದ್ವೇಷ ಉಂಟಾಗುತ್ತದೆ

46) ಪರಿಧಾವಿ - ಜನರಲ್ಲಿ ಭಯ ಕಾಡುತ್ತದೆ

47) ಪ್ರಮಾದೀ - ಪ್ರಮಾದಗಳು ಹೆಚ್ಚು

48) ಆನಂದ - ಸಂತೋಷವಾಗಿರುತ್ತದೆ

49) ರಾಕ್ಷಸ - ಕಠಿಣ ಹೃದಯ

50) ನಳ - ಬೆಳೆಗಳು ಚೆನ್ನಾಗಿರುತ್ತದೆ

51) ಪಿಂಗಳ - ಸಾಮಾನ್ಯ ಫಲಿತಾಂಶ

52) ಕಾಳಯುಕ್ತಿ - ಸಮಯೋಚಿತ ಫಲಿತಾಂಶಗಳು ದೊರೆಯುತ್ತವೆ

53) ಸಿದ್ಧಾರ್ಥಿ - ಕಾರ್ಯ ಸಿದ್ಧಿ

54) ರುದ್ರ / ರೌದ್ರಿ - ಜನರಿಗೆ ಸಣ್ಣ ನೋವುಗಳಿರುತ್ತವೆ

55) ದುರ್ಮತಿ - ಮಳೆ ಸಾಮಾನ್ಯವಾಗಿರುತ್ತದೆ

56) ದುಂದುಭಿ - ಯೋಗಕ್ಷೇಮ, ಧ್ಯಾನ

57) ರುಧಿರೋದ್ಗಾರಿ - ಪ್ರಮಾದಗಳು ಹೆಚ್ಚು

58) ರಕ್ತಾಕ್ಷಿ - ಅಶುಭಗಳು ಸಂಭವಿಸುತ್ತವೆ

59) ಕ್ರೋಧನ - ಯಶಸ್ಸು ಲಭಿಸುತ್ತದೆ

60) ಅಕ್ಷಯ/ಕ್ಷಯ - ಅಕ್ಷಯ ಸಂಪತ್ತು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.