Krittika Nakshatra: ಶಾಂತರಾದರೂ ಕೋಪ ಬಂದಾಗ ಉಗ್ರವಾಗಿ ವರ್ತಿಸುತ್ತಾರೆ; ಕೃತ್ತಿಕಾ ನಕ್ಷತ್ರದವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಕೃತ್ತಿಕಾ ನಕ್ಷತ್ರದವರು ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಯಾರ ಮಾತನ್ನೂ ಕೇಳುವುದಿಲ್ಲ. ಸುಲಭವಾಗಿ ಹಣವನ್ನು ಗಳಿಸುವ ಮಾರ್ಗವನ್ನು ಹುಡುಕುತ್ತಾರೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ.
ಕೃತ್ತಿಕಾ ನಕ್ಷತ್ರದವರ ಗುಣಲಕ್ಷಣ (PC: Freepik.com)
ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಜ್ಯೋತಿಷ್ಯದಲ್ಲಿ ಎಲ್ಲರ ಗುಣ ಲಕ್ಷಣವನ್ನು ತಿಳಿಯಬಹುದಾಗಿದೆ. ಇಂದು ಕೃತ್ತಿಕಾ ನಕ್ಷತ್ರಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ತಿಳಿಯೋಣ. ಅಶ್ವಿನಿ ಮತ್ತು ಭರಣಿ ನಕ್ಷತ್ರಗಳ ನಾಲ್ಕೂ ಪಾದಗಳು ಮೇಷ ರಾಶಿಯಲ್ಲಿ ಬರುತ್ತವೆ. ಆದರೆ ಕೃತ್ತಿಕ ನಕ್ಷತ್ರದ ಒಂದನೇ ಪಾದ ಮೇಷದಲ್ಲಿಯೂ, ಉಳಿದ ಮೂರೂ ಪಾದಗಳು ವೃಷಭದಲ್ಲಿಯೂ ಬರುತ್ತದೆ. ಆದ್ದರಿಂದ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಫಲವು ಎರಡೂ ರಾಶಿಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: ಸ್ತ್ರೀ ವಾರ ಭವಿಷ್ಯ; ಹೆಣ್ಣು ಸಂಸಾರದ ಕಣ್ಣು, ಈ ಎರಡೂ ರಾಶಿಯವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ
- ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಬಹಳ ಹಠದ ಸ್ವಭಾವದವರು ಎಷ್ಟು ಎಂದರೆ, ಇವರ ಸ್ನೇಹ ಸಂಬಂಧವನ್ನು ಕಳೆದುಕೊಂಡಲ್ಲಿ ಮತ್ತೆ ದೊರೆಯುವುದಿಲ್ಲ. ಇವರಲ್ಲಿ ವಿಶೇಷವಾದ ತೇಜಸ್ಸು ಇರುತ್ತದೆ. ಬುದ್ಧಿವಂತರಾಗಿರುತ್ತಾರೆ. ಹಲವು ವಿದ್ಯೆಯ ಅನುಭವ ಇದ್ದರೂ, ಯಾವುದಾದರೂ ಒಂದು ವಿದ್ಯೆಯನ್ನು ಉಪಯೋಗಿಸಿ ಜೀವನ ನಡೆಸುತ್ತಾರೆ. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗುತ್ತಾರೆ. ರುಚಿಕರವಾದ ಆಹಾರವನ್ನು ಇಷ್ಟ ಪಡುತ್ತಾರೆ. ಇವರ ಜೀವನದಲ್ಲಿ ಹಣವೊಂದೇ ಮುಖ್ಯವಾಗುವುದಿಲ್ಲ.
- ಕೆಲವೊಮ್ಮೆ ಇವರು ಆಡುವ ಮಾತುಗಳು ಬೇರೆಯವರಿಗೆ ಬೇಸರ ಉಂಟು ಮಾಡುತ್ತದೆ. ಇವರು ಪ್ರವಾಸ ಪ್ರಿಯರು. ಭೂ ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ. ದಿನಸಿ ಪದಾರ್ಥಗಳು ಮತ್ತು ತರಕಾರಿ ವ್ಯಾಪಾರದಲ್ಲಿ ಆಸಕ್ತಿ ಇರುತ್ತದೆ. ಉನ್ನತ ಹುದ್ದೆ ಇದ್ದರೂ, ವ್ಯಾಪಾರ ಮಾಡುತ್ತಾರೆ. ಬೇಗನೆ ಕೋಪ ಬರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ. ಬಂಧು ಬಳಗದವರಿಂದ ದೂರ ಉಳಿಯುತ್ತಾರೆ.
ಸ್ತ್ರೀ ಗ್ರಹವಾದ ಚಂದ್ರನ ಬಗ್ಗೆ ನಿಮಗೆಷ್ಟು ಗೊತ್ತು; ಚಂದ್ರನಿಗೆ ಸಂಬಂಧಿಸಿದ ಧಾನ್ಯ, ಬಣ್ಣ, ಲೋಹದ ಬಗ್ಗೆ ಇಲ್ಲಿದೆ ಮಾಹಿತಿ
- ಈ ನಕ್ಷತ್ರದವರು ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಯಾರ ಮಾತನ್ನೂ ಕೇಳುವುದಿಲ್ಲ. ಸುಲಭವಾಗಿ ಹಣವನ್ನು ಗಳಿಸುವ ಮಾರ್ಗವನ್ನು ಹುಡುಕುತ್ತಾರೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಕುಟುಂಬದ ಸದಸ್ಯರನ್ನು ಹೆಚ್ಚು ಪ್ರೀತಿಸುತ್ತಾರೆ. ಭವಿಷ್ಯದ ಬಗ್ಗೆ ಆಸೆ ಇರುತ್ತದೆ. ಅದಕ್ಕಾಗಿ ಹಣವನ್ನು ನಾನಾ ರೀತಿಯಲ್ಲಿ ಉಳಿಸಲು ಪ್ರಯತ್ನಿಸುತ್ತಾರೆ. ನೋಡಲು ಶಾಂತರಾದರೂ ಕೋಪ ಬಂದಾಗ ಉಗ್ರವಾಗಿ ವರ್ತಿಸುತ್ತಾರೆ.
- ಉತ್ತಮ ವಿದ್ಯಾಭ್ಯಾಸವಿರುತ್ತದೆ. ಸದಾ ಕಾಲ ಯಾವುದಾದರೂ ಹೊಸ ವಿಚಾರವನ್ನು ಕಲಿಯುವಲ್ಲಿ ನಿರತರಾಗಿರುತ್ತಾರೆ. ಕಷ್ಟವೋ ನಷ್ಟವೋ ಮನಸ್ಸಿಗೆ ಮುದ ನೀಡುವ ಕೆಲಸದಲ್ಲಿ ನಿರತರಾಗುತ್ತಾರೆ. ತಂದೆಯ ಆಸ್ತಿಯನ್ನು ಬಹಳ ಜೋಪಾನವಾಗಿ ಕಾಪಾಡುತ್ತಾರೆ. ಅದೇ ರೀತಿ ಬಾಳ ಸಂಗಾತಿಯ ಮನದ ವಿಚಾರವನ್ನು ಅರಿತು ಪೂರೈಸುವಲ್ಲಿ ಸಂತೋಷ ಕಾಣುತ್ತಾರೆ. ವೈಭೋಗದ ಪದಾರ್ಥಗಳನ್ನು ಸಂಗ್ರಹಿಸುವ ಗುರಿ ಇರುತ್ತದೆ.
- ಮಕ್ಕಳ ಜೊತೆಯಲ್ಲಿ ಒಳ್ಳೆಯ ಸ್ನೇಹಿತನಂತೆ ಇರುತ್ತಾರೆ. ಆದರೆ ಇವರಿಗೆ ಇಷ್ಟವಾಗದ ಕೆಲಸ ಮಾಡಿದಲ್ಲಿ ಯಾರನ್ನಾದರೂ ಶಿಕ್ಷಿಸುವಲ್ಲಿ ಒಂದು ಕ್ಷಣವೂ ಯೋಚಿಸುವುದಿಲ್ಲ. ಒಟ್ಟಾರೆ ಕೃತ್ತಿಕಾ ನಕ್ಷತ್ರದವರು ಇತರರಿಗೆ ಮಾದರಿಯಾಗಿ ಬಾಳುತ್ತಾರೆ.
ನಿಮ್ಮ ಜಾತಕದಲ್ಲಿ ಕುಜ ದೋಷ ಇದ್ಯಾ, ಬೆಂಗಳೂರಿನಲ್ಲಿದೆ ಅಂಗಾರಕ ದೋಷದಿಂದ ಮುಕ್ತಿ ನೀಡುವ ದೇವಾಲಯ; ಇಲ್ಲಿದೆ ಮಾಹಿತಿ
ವಿಭಾಗ
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.