ಮೂಗಿನ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಮೂಗಿನ ಆಕಾರ ಹೇಗಿದೆ? ಇಲ್ಲಿ ತಿಳಿಸಿರುವಂತೆ ನಿಮಗೆ ಹೊಂದಾಣಿಕೆ ಗುಣವಿದ್ಯಾ?-horoscope astrology prediction by shape of nose characteristic of people who has sharp edge nose rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೂಗಿನ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಮೂಗಿನ ಆಕಾರ ಹೇಗಿದೆ? ಇಲ್ಲಿ ತಿಳಿಸಿರುವಂತೆ ನಿಮಗೆ ಹೊಂದಾಣಿಕೆ ಗುಣವಿದ್ಯಾ?

ಮೂಗಿನ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಮೂಗಿನ ಆಕಾರ ಹೇಗಿದೆ? ಇಲ್ಲಿ ತಿಳಿಸಿರುವಂತೆ ನಿಮಗೆ ಹೊಂದಾಣಿಕೆ ಗುಣವಿದ್ಯಾ?

ಮೂಗಿನ ತುದಿಯು ಮುಂದೆ ಬಾಗಿದಂತೆ ಇರುವವರಿಗೆ ಉತ್ತಮ ಬಾಳ ಸಂಗಾತಿ ದೊರೆಯುತ್ತಾರೆ. ದಂಪತಿ ನಡುವೆ ಒಳ್ಳೆಯ ಮನಸ್ಥಿತಿ ಇರುತ್ತದೆ. ಪರಸ್ಪರ ಒಬ್ಬರ ತಪ್ಪನ್ನು ಒಬ್ಬರು ಮನ್ನಿಸುವ ಕಾರಣ ಕುಟುಂಬದಲ್ಲಿ ಮನಸ್ತಾಪ ಕಡಿಮೆ ಇರುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮೂಗಿನ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಮೂಗಿನ ಆಕಾರ ಹೇಗಿದೆ? ಇಲ್ಲಿ ತಿಳಿಸಿರುವಂತೆ ನಿಮಗೆ ಹೊಂದಾಣಿಕೆ ಗುಣವಿದ್ಯಾ?
ಮೂಗಿನ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ಮೂಗಿನ ಆಕಾರ ಹೇಗಿದೆ? ಇಲ್ಲಿ ತಿಳಿಸಿರುವಂತೆ ನಿಮಗೆ ಹೊಂದಾಣಿಕೆ ಗುಣವಿದ್ಯಾ? (PC: Unsplash)

ಜನ್ಮ ದಿನಾಂಕ ಆಧರಿಸಿ ಭವಿಷ್ಯವನ್ನು ತಿಳಿಯಬಹುದು. ಆದರೆ ನಮ್ಮ ದೇಹದದಲ್ಲಿ ಕಣ್ಣು, ಕಿವಿ, ಮೂಗಿನ ಆಕಾರ ತಿಳಿದು ಆಯಾ ವ್ಯಕ್ತಿಗಳ ಸ್ವಭಾವವನ್ನೂ ತಿಳಿಯಬಹುದು. ಈ ಲೇಖನದಲ್ಲಿ ಮೂಗಿನ ಆಕಾರದಿಂದ ವ್ಯಕ್ತಿಗಳ ಗುಣ ಸ್ವಭಾವವನ್ನು ಹೇಗೆ ತಿಳಿಯಬಹುದು ಎಂದು ತಿಳಿಸಲಾಗಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಕೆಲವರ ಮೂಗಿನ ತುದಿಯು ಮುಂದೆ ಬಾಗಿದಂತೆ ಇರುತ್ತದೆ. ಇಂತಹವರು ಯಾವುದೇ ವಿಚಾರದಲ್ಲಿ ನಿರ್ದಿಷ್ಟವಾದ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೂ ಬೇರೆಯವರನ್ನು ಆಶ್ರಯಿಸುತ್ತಾರೆ. ಇವರ ಮುಖದಲ್ಲಿ ವಿಶೇಷ ತೇಜಸ್ಸು ಇರುತ್ತದೆ. ತಮ್ಮ ಕುಟುಂಬದ ಜನರನ್ನು ರಕ್ಷಿಸುವ ರೀತಿ ಎಲ್ಲರಿಗೂ ಮಾದರಿಯಾಗುತ್ತದೆ. ಇವರಿಗೆ ವಿಶೇಷ ಪ್ರತಿಭೆ ಇರುತ್ತದೆ.

ಇವರನ್ನು ಕಡೆಗಣಿಸಿದವರೇ ನಂತರ ಗೌರವಿಸುತ್ತಾರೆ

ಚಿಕ್ಕ ವಯಸ್ಸಿನಲ್ಲಿ ಇವರನ್ನು ಹಾಸ್ಯ ಮಾಡಿದವರು ಕ್ರಮೇಣವಾಗಿ ಇವರನ್ನು ಗೌರವಿಸುತ್ತಾರೆ. ಇವರು ಯಾವುದೇ ವಿಚಾರದಲ್ಲಿ ಸುಲಭವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇವರು ಅನೇಕ ವಿಷಯಗಳ ಬಗ್ಗೆ ಗುಟ್ಟಾಗಿ ಅಧ್ಯಯನ ಮಾಡುತ್ತಾರೆ. ಸಾಮಾನ್ಯವಾಗಿ ಇವರು ತಪ್ಪು ಮಾಡುವುದಿಲ್ಲ. ಒಂದು ವೇಳೆ ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ. ಇವರಿಗೆ ಅತಿ ಬುದ್ಧಿವಂತ ಸ್ನೇಹಿತರು ಇರುತ್ತಾರೆ. ಇವರಲ್ಲಿರುವ ವಿಶೇಷ ಜ್ಞಾನವನ್ನು ಬೇರೆಯವರಿಗೆ ಹೇಳಿಕೊಡುವುದಿಲ್ಲ. ಬೇರೆಯವರು ಮಾಡಿದ ತಪ್ಪು ಕೆಲಸಗಳನ್ನು ಟೀಕಿಸುತ್ತಾರೆ. ವಯಸ್ಸಿನ ಭೇದವಿಲ್ಲದೆ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಮಮತೆ ಮತ್ತು ಪ್ರೀತಿ ತೋರುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇವರಿಗೆ ಇರುತ್ತದೆ. ರುಚಿಕರವಾದ ಭೋಜನವೆಂದರೆ ಇವರಿಗೆ ಬಲು ಇಷ್ಟ. ಒಂದಕ್ಕಿಂತಲೂ ಹೆಚ್ಚಿನ ಪದವಿ ಇವರಿಗೆ ದೊರೆಯುತ್ತದೆ.

ಮದುವೆಯ ವಯಸ್ಸು ಮೀರಿದ ನಂತರ ವಿವಾಹವಾಗುತ್ತದೆ. ಆದರೆ ಇವರಿಗೆ ಉತ್ತಮ ಬಾಳ ಸಂಗಾತಿ ದೊರೆಯುತ್ತಾರೆ. ದಂಪತಿ ನಡುವೆ ಒಳ್ಳೆಯ ಮನಸ್ಥಿತಿ ಇರುತ್ತದೆ. ಪರಸ್ಪರ ಒಬ್ಬರ ತಪ್ಪನ್ನು ಒಬ್ಬರು ಮನ್ನಿಸುವ ಕಾರಣ ಕುಟುಂಬದಲ್ಲಿ ಮನಸ್ತಾಪ ಕಡಿಮೆ ಇರುತ್ತದೆ. ಆದರೆ ದಂಪತಿಗಳಿಬ್ಬರಿಗೂ ಕೋಪವು ಬೇಗ ಬರುತ್ತದೆ ಅದು ಬಹುಕಾಲ ನಿಲ್ಲುವುದಿಲ್ಲ. ಭಾವ ಮೈದುನರಿಗೆ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಅನಾವಶ್ಯಕವಾಗಿ ಅಗೌರವ ತೋರುತ್ತಾರೆ. ಇವರ ಮಕ್ಕಳು ಅತಿ ಬುದ್ಧಿವಂತರಾಗಿರುತ್ತಾರೆ. ಆದರೆ ಅವರಿಗೆ ಸೋಮಾರಿತನ ಹೆಚ್ಚಾಗಿಯೇ ಇರುತ್ತದೆ. ಸಮಾಜದಲ್ಲಿ ಇವರಿಗೆ ಗೌರವಯುತ ಸ್ಥಾನಮಾನ ದೊರೆಯುತ್ತದೆ. 

ಇವರದಲ್ಲದ ವಿಚಾರಗಳಿಗೆ ಗಮನ ನೀಡುವುದೇ ಇಲ್ಲ. ಪ್ರವಾಸ ಪ್ರಿಯರು. ಮಧ್ಯ ವಯಸ್ಸನವರೆಗೂ ಮಧ್ಯಮ ಗತಿಯ ಆದಾಯವಿರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಆದಾಯದ ಮೂಲವಿರುವ ಕಾರಣ ಹಣದ ಕೊರತೆ ಉಂಟಾಗುವುದಿಲ್ಲ. ದುಡುಕುತನದಿಂದ ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗಬಹುದು. ಎಚ್ಚರಿಕೆಯಿಂದ ಇದ್ದಷ್ಟು ಒಳ್ಳೆಯದು. ಸ್ವಂತ ಮನೆಯ ಕನಸು ಕಷ್ಟವೆನಿಸಿದರೂ ನನಸಾಗುತ್ತದೆ. ಇವರಿಗೆ ಅತಿಯಾದ ಆಸೆ ಇರುವುದಿಲ್ಲ.

ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ವ್ಯಕ್ತಿಗಳು

ಇವರಲ್ಲಿರುವ ಹೊಂದಾಣಿಕೆಯ ಬುದ್ಧಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಂತೆ ಮಾಡುತ್ತದೆ. ಇವರು ಯಾರಿಗೂ ಸುಲಭವಾಗಿ ಹಣದ ಸಹಾಯ ಮಾಡುವುದಿಲ್ಲ. ಅನಿವಾರ್ಯವಾಗಿ ಬೇರೆಯವರಿಂದ ಸಾಲ ಪಡೆದರೆ ಆ ಹಣವನ್ನು ಮರುಪಾವತಿ ಮಾಡುವವರೆಗೂ ನೆಮ್ಮದಿ ಇರುವುದಿಲ್ಲ. ಬೇರೆಯವರಿಗೆ ನೀಡಿದ ಹಣವನ್ನು ಒತ್ತಾಯ ಪೂರ್ವಕವಾಗಿ ಹಿಂದೆ ಪಡೆಯುವದಿಲ್ಲ. ಇವರಲ್ಲಿನ ನಿಸ್ವಾರ್ಥ ಗುಣ ಧರ್ಮಗಳು ಇವರ ಮಕ್ಕಳಿಗೆ ಎಲ್ಲರ ಸಹಾಯ ದೊರೆಯುವಂತೆ ಮಾಡುತ್ತದೆ. ವಿದ್ಯೆಗಿಂತಲೂ ಬುದ್ಧಿ ಶಕ್ತಿ ಅಧಿಕವಾಗಿರುತ್ತದೆ.

ಒಂದಲ್ಲಾ ಒಂದು ಕೆಲಸ ಕಾರ್ಯದಲ್ಲಿ ತೊಡಗಿರುತ್ತಾರೆ. ಕುಳಿತಲ್ಲಿಯೇ ಹಣವನ್ನು ಸಂಪಾದಿಸುವ ವಿಶೇಷವಾದ ವಿದ್ಯೆ ಇವರಿಗೆ ತಿಳಿದಿರುತ್ತದೆ. ಸುಳ್ಳನ್ನು ಹೇಳಿ ಬೇರೆಯವರಿಂದ ಹಣವನ್ನು ಪಡೆಯುವುದಿಲ್ಲ. ದೇವರ ಬಗ್ಗೆ ನಂಬಿಕೆಯ ಜೊತೆ ಭಯವೂ ಇರುತ್ತದೆ. ಗುರು ಹಿರಿಯರ ಮನಸ್ಸನ್ನು ನೋಯಿಸುವುದಿಲ್ಲ ಕಾರಣವೇನೆಂದರೆ ಅವರು ಕೆಟ್ಟದ್ದನ್ನು ಕೋರಬಹುದು ಎಂಬ ಭಯವಿರುತ್ತದೆ. ವಯಸ್ಸಾದ ನಂತರವೂ ದುಡಿಯಲೇಬೇಕೆಂಬ ಗುರಿ ಇರುವ ಕಾರಣ ಯೋಗ ಮತ್ತು ಇನ್ನಿತರ ದೈಹಿಕ ವ್ಯಾಯಾಮಗಳಲ್ಲಿ ಕಾಲ ಕಳೆಯುತ್ತಾರೆ. ಜೀವನದ ಕೊನೆಯ ದಿನಗಳಲ್ಲಿಯೂ ಸಂತೋಷ ಮತ್ತು ನೆಮ್ಮದಿ ಇವರಿಗೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.