ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ವಕ್ರಿ: ಅನಾವಶ್ಯಕ ವೆಚ್ಚ ಕಡಿಮೆ, ಆತ್ಮವಿಶ್ವಾಸ ಹೆಚ್ಚುತ್ತೆ; ಮೇಷ ವೃಷಭ ಸೇರಿ 6 ರಾಶಿಯವರಿಗೆ ಭಾರಿ ಅದೃಷ್ಟ -Shani Vakri

ಶನಿ ವಕ್ರಿ: ಅನಾವಶ್ಯಕ ವೆಚ್ಚ ಕಡಿಮೆ, ಆತ್ಮವಿಶ್ವಾಸ ಹೆಚ್ಚುತ್ತೆ; ಮೇಷ ವೃಷಭ ಸೇರಿ 6 ರಾಶಿಯವರಿಗೆ ಭಾರಿ ಅದೃಷ್ಟ -Shani Vakri

ಜೂನ್ ತಿಂಗಳ ಕೊನೆಯಲ್ಲಿ ಶನಿ ವಕ್ರಿ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಿಶೇಷವಾಗಿ ಆರು ರಾಶಿಯವರಿಗೆ ಹೆಚ್ಚಿನ ಲಾಭಗಳಿವೆ. ರಾಶಿಯವರು ಯಾರು ಎನ್ನೋದರ ಮಾಹಿತಿ ಇಲ್ಲಿದೆ.

ಶನಿ ವಕ್ರಿ: ಅನಾವಶ್ಯಕ ವೆಚ್ಚ ಕಡಿಮೆ, ಆತ್ಮವಿಶ್ವಾಸ ಹೆಚ್ಚುತ್ತೆ; ಮೇಷ ವೃಷಭ ಸೇರಿ 6 ರಾಶಿಯವರಿಗೆ ಭಾರಿ ಅದೃಷ್ಟ
ಶನಿ ವಕ್ರಿ: ಅನಾವಶ್ಯಕ ವೆಚ್ಚ ಕಡಿಮೆ, ಆತ್ಮವಿಶ್ವಾಸ ಹೆಚ್ಚುತ್ತೆ; ಮೇಷ ವೃಷಭ ಸೇರಿ 6 ರಾಶಿಯವರಿಗೆ ಭಾರಿ ಅದೃಷ್ಟ

ಜೂನ್ ತಿಂಗಳ 30ರಂದು ಶನಿಯು ವಕ್ರಿಯಾಗುತ್ತಾನೆ. ಆನಂತರ ನವೆಂಬರ್ ತಿಂಗಳ 14ರಂದು ವಕ್ರತ್ಯಾಗ ಮಾಡುತ್ತಾನೆ. ಅಂದರೆ ರುಜುತ್ವ ಪಡೆಯುತ್ತಾನೆ. ಸಾಮಾನ್ಯವಾಗಿ ಶನಿಗ್ರಹ ಎಂದರೆ ಪ್ರತಿಯೊಬ್ಬರೂ ಭಯಪಡುತ್ತಾರೆ. ಖಂಡಿತವಾಗಿ ಶನಿಗ್ರಹದಿಂದಲೂ ಶುಭಫಲಗಳು ಎಲ್ಲಾ ಹನ್ನೆರಡುರಾಶಿಗಳಿಗೂ ದೊರೆಯುತ್ತದೆ. ಶನಿಯು ಶುಭಸ್ಥಾನದಲ್ಲಿದ್ದರೆ ತೊಂದರೆ ಇರುವುದಿಲ್ಲ. ಅಶುಭ ಸ್ಥಾನದಲ್ಲಿ ಇದ್ದಲ್ಲಿ ಪೂಜೆ ಮತ್ತು ಶಾಂತಿಯ ಅವಶ್ಯಕತೆ ಇರುತ್ತದೆ. ಶ್ರೀಆಂಜನೇಯ ಸ್ವಾಮಿ ಪೂಜೆ ಮಾಡುವುದರಿಂದ ಮತ್ತು ಕಾರ್ಮಿಕರಿಗೆ ಸಹಾಯ ಮಾಡುವುದರಿಂದ ಶುಭಫಲಗಳನ್ನು ಪಡೆಯಬಹುದು. ಕಷ್ಟ ಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನಿಭಗವಾನನಿಗೆ ಇಷ್ಟ. ಕಷ್ಟಪಟ್ಟು ಕೆಲಸಮಾಡುವವರಿಗೆ ಸಹಾಯಮಾಡಿದರೆ ಶುಭ ಉಂಟಾಗುತ್ತದೆ. ನಾರದರು ಶನಿಯನ್ನು ಪುಟ್ಟಮಗುವಿಗೆ ಹೋಲಿಸುತ್ತಾರೆ. ಅಂದರೆ ಶನಿಭಗವಾನನಿಗೆ ಸಂತೋಷವಾಗುವಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ.

ಮೇಷ ರಾಶಿ

ಮೇಷ ರಾಶಿಯಲ್ಲಿ ಜನಿಸಿದವರ ಕೆಲಸ ಕಾರ್ಯಗಳಲ್ಲಿ ಇದ್ದ ಅನಾವಶ್ಯಕ ಅಡ್ಡಿ ಆತಂಕಗಳು ದೂರವಾಗುತ್ತದೆ. ಮನದಲ್ಲಿ ಇದ್ದ ಹಣಕಾಸಿನ ವಿಚಾರದಲ್ಲಿನ ಭಯದಿಂದ ಹೊರಬರುವಿರಿ. ಹಿರಿಯ ಸೋದರ ಅಥವಾ ಸೋದರಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಬಹು ದಿನದಿಂದ ಬರಬೇಕಾಗಿದ್ದ ಹಣವು ಸುಲಭವಾಗಿ ನಿಮ್ಮ ಕೈ ಸೇರುತ್ತದೆ. ಮನದಲ್ಲಿನ ಭಯಬಿಟ್ಟು ಎಲ್ಲರೊಂದಿಗೆ ಮಾತುಕತೆ ಆಡುವ ಸುಸಂದರ್ಭ ಬರಲಿದೆ. ಪ್ರಮುಖವಾಗಿ ನಿಮ್ಮ ಜೀವನದಲ್ಲಿನ ಎಲ್ಲಾ ಕಷ್ಟ ನಷ್ಟಗಳು ದೂರವಾಗಿ ಸಂತೋಷ ಸಂಭ್ರಮ ಮರುಕಳಿಸುತ್ತದೆ. ನಿಮ್ಮ ಮೇಲೆ ಅನಾವಶ್ಯಕವಾಗಿ ದ್ವೇಷ ಸಾಧಿಸುತ್ತಿದ್ದ ಆತ್ಮೀಯರೂ ಮತ್ತೊಮ್ಮೆ ನಿಮ್ಮ ಸ್ನೇಹ ಬಯಸಿ ಬಳಿ ಬರುತ್ತಾರೆ. ಕುಟುಂಬದಲ್ಲಿ ಮರೆಯಾಗಿದ್ದ ಶಾಂತಿ ಸೌಹಾರ್ದತೆ ಮರುಕಳಿಸುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಕಳೆದು ಹೋದ ಸ್ಥಾನಮಾನವೂ ಮರಳಿ ದೊರೆಯುತ್ತದೆ. ಹಠದ ಮನಸ್ಸನಿಂದ ಹೊರಬಂದಲ್ಲಿ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಅನುಬಂಧ ಮೂಡುತ್ತದೆ. ವಂಶದ ಆಸ್ತಿಯಲ್ಲಿನ ವಿವಾದವು ಮಾತುಕತೆಯಿಂದ ಪರಿಹಾರ ಗೊಳ್ಳುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಅನುಕೂಲತೆಗಳು ಮುಖ್ಯವಾಗಿ ಉತ್ತಮ ಆದಾಯವು ದೊರೆಯುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಇದ್ದ ಮನಸ್ತಾಪವು ದೂರವಾಗಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಆರೋಗ್ಯದ ಬಗ್ಗೆ ನಿಮಗಿದ್ದ ಭಯವು ಕ್ರಮೇಣವಾಗಿ ದೂರವಾಗುತ್ತವೆ. ಯಾವುದೇ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಆತ್ಮೀಯರ ಜೊತೆ ಚರ್ಚೆ ನಡೆಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಕ್ಕಳ ವಿಚಾರದಲ್ಲಿ ಇದ್ದ ಅಸಮಾಧಾನವು ದೂರವಾಗುತ್ತದೆ

ಕನ್ಯಾ ರಾಶಿ

ಕನ್ಯಾ ರಾಶಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ತಮ್ಮ ಆತ್ಮೀಯರ ಜೊತೆ ಇದ್ದ ಅನಾವಶ್ಯಕ ಮನಸ್ತಾಪವು ದೂರವಾಗುತ್ತದೆ. ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಹಿಂದೊಮ್ಮೆ ನಿಮ್ಮಿಂದ ಸಹಾಯ ಪಡೆದವರು ನಿಮಗೆ ಸಹಾಯ ಮಾಡಲು ಇಚ್ಚಿಸುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಉದ್ಯೋಗದಲ್ಲಿ ಸಹೋದ್ಯೋಗಿಗಳ ನಡುವೆ ಇದ್ದ ಅಸಮಾಧಾನವು ಮರೆಯಾಗಿ ಪರಸ್ಪರ ಸ್ನೇಹ ಸಹಕಾರ ನೆಲೆಸುತ್ತದೆ. ದಂಪತಿಗಳ ನಡುವಿನ ವಾದ, ವಿವಾದಗಳು, ಜಗಳಗಳು ಕಡಿಮೆಯಾಗುತ್ತದೆ. ಹೊಸದಾಗಿ ಆರಂಭಿಸಿರುವ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಆದಾಯ ದೊರೆಯುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ನಿಧಾನಗೊಂಡ ಕುಟುಂಬದಲ್ಲಿನ ಮಂಗಳ ಕಾರ್ಯಗಳು ತ್ವರಿತವಾಗಿ ನಡೆಯಲಿವೆ.

ತುಲಾ ರಾಶಿ

ತುಲಾ ರಾಶಿಯಲ್ಲಿ ಜನಿಸಿದವರ ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಮುಖ್ಯವಾಗಿ ಹೆತ್ತವರ ಜೊತೆ ಮಕ್ಕಳ ಒಡನಾಟ ಉತ್ತಮಗೊಳ್ಳುತ್ತದೆ. ಹೆಚ್ಚಿನ ಪ್ರಯತ್ನ ಪಟ್ಟರೆ ಹೊಸ ಮನೆ ಅಥವಾ ಜಮೀನನ್ನು ಕೊಳ್ಳುವ ನಿಮ್ಮ ಆಸೆಯು ಈಡೇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಅಜೀರ್ಣತೆಯ ತೊಂದರೆ ಅಥವಾ ಜೀರ್ಣಾಂಗಕ್ಕೆ ಸಂಬಂಧಪಟ್ಟ ತೊಂದರೆ ನಿಮ್ಮನ್ನು ಕಾಡಬಹುದು. ಬಹುದಿನದ ನಂತರ ಕುಟುಂಬದ ಎಲ್ಲರೊಂದಿಗೆ ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ಉದ್ಯೋಗದಲ್ಲಿ ಇದ್ದ ಅಡೆ ತಡೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುವ ಸೂಚನೆಗಳಿವೆ. ಅತಿಯಾದ ಆತುರ ಪಡದೆ ಸಂಯಮದಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಯಶಸ್ಸು ಲಭಿಸುತ್ತದೆ. ಹಣಕಾಸಿನ ವಿವಾದಗಳಿಂದ ದೂರವಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ಮಕರ ರಾಶಿ

ಮಕರ ರಾಶಿಯವರಿಗೆ ಅವರ ಇಚ್ಛೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ. ಆಡುವ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಇದರಿಂದಾಗಿ ಎದುರಾಗುತ್ತಿದ್ದ ತೊಂದರೆಗಳು ಕಡಿಮೆಯಾಗುತ್ತದೆ. ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದ ಕೆಲವರ ಮನಸ್ಸು ಸಹ ತಿಳಿಯಾಗುತ್ತದೆ. ನಿಮ್ಮ ಕಷ್ಟ ನಷ್ಟಗಳಿಗೆ ಕುಟುಂಬದವರ ಸ್ಪಂದನೆ ದೊರೆಯುತ್ತದೆ. ಅಪರಿಚಿತರು ಸಹ ನಿಮಗೆ ಸಹಾಯ ಸಹಕಾರ ನೀಡುತ್ತಾರೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಕೊಂಚ ತಡವಾದರೂ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸೋದರ ಅಥವಾ ಸೋದರಿಯರ ಜೊತೆಯಲ್ಲಿ ಉತ್ತಮ ಮಟ್ಟದ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಶಾಂತಿ ಸಂಯಮದಿಂದ ವರ್ತಿಸಿದರೆ ಉದ್ಯೋಗದಲ್ಲಿ ಉತ್ತಮ ಪರಿವರ್ತನೆ ದೊರೆಯುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆರೋಗ್ಯವು ಉತ್ತಮವಾಗಿರುತ್ತದೆ.

ಮೀನ ರಾಶಿ

ಮೀನ ರಾಶಿಯವರ ಮನದಲ್ಲಿ ಆತಂಕ ಮನೆ ಮಾಡಿರುತ್ತದೆ. ಆದರೆ ಕ್ರಮೇಣವಾಗಿ ಆತಂಕವು ಮರೆಯಾಗುತ್ತದೆ. ಅನಾವಶ್ಯಕ ವೆಚ್ಚಗಳು ಕಡಿಮೆಯಾಗಲಿದೆ. ದೃಷ್ಟಿ ದೋಷವು ದೂರವಾಗಲಿದೆ. ಸೋದರರಿಗೆ ಉತ್ತಮ ಆದಾಯ ದೊರೆಯಲಿದೆ. ಉದ್ಯೋಗವನ್ನು ಬದಲಾಯಿಸುವ ಅವಕಾಶ ದೊರೆಯಲಿದೆ. ಹೊಸ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಶುಭಫಲಗಳು ದೊರೆಯುತ್ತವೆ. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಆದರೆ ಉತ್ತಮ ಆಹಾರ ಕ್ರಮ ಮತ್ತು ದೈಹಿಕ ವ್ಯಾಯಾಮದಿಂದ ಆರೋಗ್ಯವು ಸುಧಾರಿಸುತ್ತದೆ. ಕುಟುಂಬದಲ್ಲಿದ್ದ ಅವಿಶ್ವಾಸವು ದೂರವಾಗಿ ಒಮ್ಮತ ಮೂಡಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಹೊಸ ವಾಹನಕೊಳ್ಳುವ ನಿಮ್ಮ ಕನಸು ನನಸಾಗಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.