Solar Eclipse: ಕನ್ಯಾ ರಾಶಿಯಲ್ಲಿ ಸೂರ್ಯ ಗ್ರಹಣ; ಈ ರಾಶಿಯವರಿಗೆ ಭಾರಿ ಅದೃಷ್ಟ, ಮನೆಯಲ್ಲಿ ಹಣಕ್ಕೆ ಕೊರತೆ ಇರಲ್ಲ
Solar Eclipse: 2024 ರ ಮೊದಲ ಸೂರ್ಯಗ್ರಹಣ ಏಪ್ರಿಲ್‌ನಲ್ಲಿ ಸಂಭವಿಸಿದ್ದು, ಇದೀಗ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣ ಹಲವು ಕಾರಣಗಳಿಂದ ವಿಶೇಷವಾಗಿರುತ್ತದೆ. ಸೂರ್ಯಗ್ರಹಣದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ ಕಾಣಿಸುತ್ತಾನೆ. ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.
Solar Eclipse 2024: ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್‌ನಲ್ಲಿ ಸಂಭವಿಸಿತ್ತು. ಇದೀಗ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತುರವಾಗಿದೆ. ಎರಡನೇ ಸೂರ್ಯಗ್ರಹಣ 2024 ರ ಅಕ್ಟೋಬರ್ 2 ರಂದು ಸಂಭವಿಸಲಿದೆ. ಪಿತೃ ಪಕ್ಷವೂ ಇಂದೇ ಮುಕ್ತಾಯವಾಗುತ್ತದೆ. ಈ ಸೂರ್ಯಗ್ರಹಣ ಹಲವು ಕಾರಣಗಳಿಗಾಗಿ ವಿಶೇಷವಾಗಿದೆ. ಈ ಸೂರ್ಯಗ್ರಹಣದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ (Ring of Fire) ಕಾಣಿಸುತ್ತಾನೆ. ಇದನ್ನು ರಿಂಗ್ ಆಫ್ ಫೈಯರ್ ಅಂತ ಕರೆಯಲಾಗುತ್ತೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 2 ರಂದು ಸರ್ವಪಿತೃ ಅಮಾವಾಸ್ಯೆ ಇರುತ್ತೆ. ಸೂರ್ಯನು ಪ್ರಸ್ತುತ ಸಿಂಹರಾಶಿಯಲ್ಲಿದ್ದಾನೆ. ಸೆಪ್ಟೆಂಬರ್ 16 ರಂದು, ಸೂರ್ಯನು ತನ್ನ ಚಿಹ್ನೆಯನ್ನು ಬದಲಾಯಿಸುತ್ತಾನೆ. ರವಿ ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದೇ ಸಮಯದಲ್ಲಿ ಕನ್ಯಾ ರಾಶಿಯಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತಿದೆ.
ಸೂರ್ಯಗ್ರಹಣ ಸಂಭವಿಸಿದಾಗ ಸೂರ್ಯನು ಕನ್ಯಾರಾಶಿಯಲ್ಲಿರುತ್ತಾನೆ. ಅಕ್ಟೋಬರ್ 2 ರಂದು ಸೂರ್ಯಗ್ರಹಣ ಇದ್ದರೆ ಆ ದಿನ ಪಿತೃ ಪಕ್ಷದ ಕೊನೆಯ ದಿನವಾಗಿರುತ್ತದೆ. ಇದನ್ನು ಸರ್ವಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ.
ಈ ಬಾರಿಯ ರಿಂಗ್ ಆಫ್ ಫೈರ್ ವಿಶೇಷ ತಿಳಿದುಕೊಳ್ಳಿ
ಅಕ್ಟೋಬರ್ 2 ರಂದು ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಇದರಲ್ಲಿ ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿ ಇರುತ್ತಾನೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋಗುತ್ತದೆ. ಆದ್ದರಿಂದ, ಸೂರ್ಯನ ಬೆಳಕು ಭೂಮಿಯನ್ನು ಸಂಪೂರ್ಣವಾಗಿ ತಲುಪುವುದಿಲ್ಲ. ಈ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಆದ್ದರಿಂದ ಈ ಸೂರ್ಯಗ್ರಹಣವು ಬೆಂಕಿಯ ಉಂಗುರದಂತೆ ಕಾಣುತ್ತದೆ. ರಾತ್ರಿಯಲ್ಲಿ ಸೂರ್ಯಗ್ರಹಣವು ಹೊಳೆಯುವ ಉಂಗುರದಂತೆ ಕಾಣುತ್ತದೆ. ಆದ್ದರಿಂದ ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.
ಸೂರ್ಯಗ್ರಹಣ ಮತ್ತು ಸೂತಕ ಕಾಲ ಯಾವಾಗ?
ನಾಸಾ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಈ ಸೂರ್ಯ ಗ್ರಹಣ ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಟಿಕಾದಲ್ಲಿ ಸಂಭವಿಸಲಿದೆ. ಪೆಸಿಫಿಕ್, ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಅಮೆರಿಕಾದಲ್ಲಿಯೂ ಕಂಡುಬರುತ್ತದೆ. ಭಾಗಶಃ ಗ್ರಹಣವು ಅಮೆರಿಕದ ಸ್ಥಳೀಯ ಕಾಲಮಾನ 11: 42 ಕ್ಕೆ ಪ್ರಾರಂಭವಾಗುತ್ತದೆ, ಚಂದ್ರನು ಸೂರ್ಯನಾದ್ಯಂತ ಹಾದುಹೋದಾಗ ಇದರ ನಂತರ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಮಧ್ಯಾಹ್ನ 12:50 ಕ್ಕೆ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ.
ರಿಂಗ್ ಆಫ್ ಫೈರ್ ಅಟ್ಲಾಂಟಿಕ್ ಸಾಗರದಲ್ಲಿ ಸಂಜೆ 4:39 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣವು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಸಂಜೆ 5:47 ಕ್ಕೆ ಕೊನೆಗೊಳ್ಳಲಿದೆ. ಇದು ಭಾರತದಲ್ಲಿ ಕಂಡುಬರುವುದಿಲ್ಲ. ಇದೇ ಕಾರಣಕ್ಕೆ ಇದನ್ನು ಸೂತಕ ಕಾಲವೆಂದು ಪರಿಗಣಿಸಲಾಗುವುದಿಲ್ಲ. ಇದು ಭಾರತದಲ್ಲಿ ಯಾರ ಮೇಲೂ ಪರಿಣಾಮ ಬೀರುವುದಿಲ್ಲ.
ಸೂರ್ಯಗ್ರಹಣ ದಿನ ಕೆವೊಂದು ರಾಶಿಯವರಿಗೆ ಶುಭಫಲ
ಮೇಷ, ಮಿಥುನ, ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಸೂರ್ಯಗ್ರಹಣದಿಂದ ಶುಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹೊಸ ವಾಹನ ಅಥವಾ ಮನೆ ಖರೀದಿ ಮಾಡುತ್ತೀರಿ. ಚಿಂತೆಗಳು ದೂರವಾಗುತ್ತವೆ. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಸೂಕ್ತ ಸಮಯ. ಮಾರಾಟದಲ್ಲಿ ಲಾಭವಿದೆ.
ಆಸ್ತಿ, ವ್ಯವಹಾರ ಇತ್ಯಾದಿಗಳಲ್ಲಿ ಲಾಭವಿದೆ. ದೈನಂದಿನ ಕಾರ್ಯಗಳು ಪ್ರಯೋಜನಕಾರಿ. ಗೌರವ ಹೆಚ್ಚಾಗುತ್ತದೆ. ಆರ್ಥಿಕ ಲಾಭ ಗಳಿಸುವ ಸಾಧ್ಯತೆ ಇದೆ. ವ್ಯಾಪಾರಕ್ಕೆ ಇದು ಬಹಳ ಒಳ್ಳೆಯ ಸಮಯ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೆಲವು ಒಳ್ಳೆಯ ಸುದ್ದಿ ಇರುತ್ತವೆ.