Planet Transit: ಸೆಪ್ಟೆಂಬರ್‌ನಲ್ಲಿ 3 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತೆ, ಸಾಲದಿಂದ ಹೊರ ಬರುತ್ತೀರಿ-horoscope sun mercury venus transit in september 2024 these 3 zodiac signs have financial benefits rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Planet Transit: ಸೆಪ್ಟೆಂಬರ್‌ನಲ್ಲಿ 3 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತೆ, ಸಾಲದಿಂದ ಹೊರ ಬರುತ್ತೀರಿ

Planet Transit: ಸೆಪ್ಟೆಂಬರ್‌ನಲ್ಲಿ 3 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತೆ, ಸಾಲದಿಂದ ಹೊರ ಬರುತ್ತೀರಿ

Planet Transit 2024: ಮೂರು ಪ್ರಮುಖ ಗ್ರಹಗಳು ಸೆಪ್ಟೆಂಬರ್ ತಿಂಗಳಲ್ಲಿ ಸಾಗಲಿವೆ. ಇದರ ಪರಿಣಾಮವಾಗಿ ಪ್ರಮುಖ 3 ರಾಶಿಯವರಿಗೆ ಲಾಭಗಳನ್ನು ತಂದಿದೆ. ಈ ರಾಶಿಯವರು ಸಾಲದಿಂದ ಹೊರಬರಲಿದ್ದಾರೆ. ಜೊತೆಗೆ ಇವರ ಆದಾಯವೂ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭದ ಜೊತೆಗೆ ಇನ್ನೂ ಏನೆಲ್ಲಾ ಪ್ರಯೋಜಗಳಿವೆ ತಿಳಿಯಿರಿ.

Planet Transit: ಸೆಪ್ಟೆಂಬರ್‌ನಲ್ಲಿ 3 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತೆ, ಸಾಲದಿಂದ ಹೊರ ಬರುತ್ತೀರಿ
Planet Transit: ಸೆಪ್ಟೆಂಬರ್‌ನಲ್ಲಿ 3 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತೆ, ಸಾಲದಿಂದ ಹೊರ ಬರುತ್ತೀರಿ

Planet Transit 2024: ಕೆಲವು ಗ್ರಹಗಳು ಪ್ರತಿ ತಿಂಗಳು ಚಿಹ್ನೆಗಳನ್ನು ಬದಲಾಯಿಸುತ್ತವೆ. ಇದರ ಪ್ರಭಾವವು ಎಲ್ಲಾ ಹನ್ನೆರಡು ರಾಶಿ ಚಿಹ್ನೆಗಳ ಮೇಲೆ ಇರುತ್ತದೆ. ಗ್ರಹಗಳ ಚಲನೆಯ ವಿಷಯದಲ್ಲಿ ಸೆಪ್ಟೆಂಬರ್ ತಿಂಗಳು ಬಹಳ ನಿರ್ಣಾಯಕವಾಗುತ್ತದೆ. ಸೂರ್ಯ, ಬುಧ ಹಾಗೂ ಶುಕ್ರನಂತಹ ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಸೆಪ್ಟೆಂಬರ್ 4 ರಂದು ಹಿಮ್ಮುಖ ಮತ್ತು ಅಸ್ತಂಗತ್ವ ಹಂತದಲ್ಲಿರುವ ಬುಧನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಗ್ರಹಗಳ ಅಧಿಪತಿ ಸೂರ್ಯ ಸೆಪ್ಟೆಂಬರ್ 16 ರಂದು ಸಂಜೆ 07:29 ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಶುಕ್ರವು ಅಂತಿಮವಾಗಿ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 01:41 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಮೂರನೇಯದಾಗಿ ಸೆಪ್ಟೆಂಬರ್ 23 ರಂದು ಬುಧನು ಮತ್ತೆ ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ.

ಈ ಮೂರು ಪ್ರಮುಖ ಗ್ರಹಗಳ ಸಂಚಾರವು 2024ರ ಸೆಪ್ಟೆಂಬರ್‌ನಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಅದೃಷ್ಟವನ್ನು ನೀಡುತ್ತದೆ. ವ್ಯಾಪಾರ ಮತ್ತು ವೃತ್ತಿಯಲ್ಲಿಯೂ ಲಾಭ ಇರುತ್ತದೆ. ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಕನ್ಯಾರಾಶಿಯಲ್ಲಿ ಮೂರು ಗ್ರಹಗಳು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತವೆ. ಅಷ್ಟೇ ಅಲ್ಲ, ಬುಧನು ಭದ್ರ ಮಹಾ ಪುರುಷ ರಾಜಯೋಗವನ್ನೂ, ಶುಕ್ರನು ಮಾಲವ್ಯ ರಾಜಯೋಗವನ್ನೂ, ಸೂರ್ಯ ಮತ್ತು ಬುಧರು ಒಟ್ಟಾಗಿ ಬುದ್ಧಾದಿತ್ಯ ಯೋಗವನ್ನೂ ಕೊಡುತ್ತಾರೆ. ಮೂರು ಗ್ರಹಗಳ ಸಂಚಾರದಿಂದ ಯಾವ ರಾಶಿಚಕ್ರದ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ.

ಮೇಷ ರಾಶಿ

2024 ರ ಸೆಪ್ಟೆಂಬರ್ ತಿಂಗಳು ಮೇಷ ರಾಶಿಯವರಿಗೆ ಅತ್ಯಂತ ಮಂಗಳಕರ ತಿಂಗಳು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಅಂಟಿಕೊಂಡಿರುವ ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಈ ಅವಧಿಯಲ್ಲಿ ಲಾಭ ಗಳಿಸುವ ಸಾಧ್ಯತೆಗಳು ಹೆಚ್ಚು. ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಒಳ್ಳೆಯ ಕೆಲಸದ ಆಫರ್ ಬರಲಿದೆ. ಕಚೇರಿಗಳಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ನೆರವು ಸಿಗುತ್ತದೆ. ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಿಸುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಸಿಂಹ ರಾಶಿ

ಸೆಪ್ಟೆಂಬರ್ ತಿಂಗಳು ಸಿಂಹ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ರಾಶಿಯ ಹನ್ನೆರಡನೇ ಮನೆಯಲ್ಲಿ ಬುಧಾದಿತ್ಯ ಯೋಗವು ಸಂಭವಿಸಲಿದೆ. ಇದರಿಂದಾಗಿ ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಅನಿರೀಕ್ಷಿತವಾಗಿ ಹಣ ಬರುತ್ತಲೇ ಇರುತ್ತದೆ. ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ಇರುತ್ತದೆ. ವ್ಯಾಪಾರವನ್ನು ವಿಸ್ತರಿಸಲು ಉತ್ತಮ ಅವಕಾಶಗಳಿವೆ. ಹೊಸ ಹೊಸ ತಂತ್ರಗಳನ್ನು ಅನುಸರಿಸಿ ಲಾಭ ಮಾಡಿಕೊಳ್ಳುತ್ತೀರಿ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಲಗ್ನ ಮನೆಯಲ್ಲಿ ಬುಧಾದಿತ್ಯ ಯೋಗ ಉಂಟಾಗುತ್ತದೆ. ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಉದ್ಯೋಗ ಬದಲಾವಣೆಯ ಬಯಕೆಯು ಈ ಸಮಯದಲ್ಲಿ ಈಡೇರುತ್ತದೆ. ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ. ಹೂಡಿಕೆಯಿಂದ ಆರ್ಥಿಕ ಲಾಭ. ಆಸ್ತಿ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಅವಕಾಶಗಳಿವೆ. ಧಾರ್ಮಿಕ ಅಥವಾ ಶುಭ ಕಾರ್ಯಗಳಲ್ಲಿ ಭಾಗವಹಿಸಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಇದು ಅವರಿಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.