Horoscope Today: ಕೆಲಸ ಮಾಡುವ ಮನಸ್ಸಿದ್ದರೂ ವಯಸ್ಸು ಅಡ್ಡಿ, ಉದ್ಯೋಗದಲ್ಲಿ ಬದಲಾವಣೆ ಕಾಣದೆ ನೀರಸ; ಇಂದಿನ ರಾಶಿ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಏನು ಫಲ? ಭಾನುವಾರದ ದಿನಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (August 6, 2023, Daily Horoscope in Kannada)
ಇಂದಿನ ರಾಶಿ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (August 6, 2023, Daily Horoscope in Kannada)
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಭಾನುವಾರ, ತಿಥಿ: ಪಂಚಮಿ ಹ.12.52 ರವರೆಗೆ ಇರುತ್ತದೆ ಆನಂತರ ಷಷ್ಥಿ ಆರಂಭವಾಗುತ್ತದೆ. ನಕ್ಷತ್ರ: ಉತ್ತಾರಾಭಾದ್ರ ನಕ್ಷತ್ರವು ಬೆ.09.04 ರವರೆಗೆ ಇದ್ದು ಆನಂತರ ರೇವತಿ ನಕ್ಷತ್ರ ಆರಂಭವಾಗುತ್ತದೆ. ಸೂರ್ಯೋದಯ ಬೆ.06.03, ಸೂರ್ಯಾಸ್ತ: ಸ.6.45 ರಾಹುಕಾಲ: ಸ.05.13 ರಿಂದ ಬೆ..06.47
ರಾಶಿ ಫಲಗಳು
ಮೇಷ
ಕೇವಲ ಧೈರ್ಯ ಮಾತ್ರ ಕಷ್ಟ ನಷ್ಟಗಳಿಂದ ಪಾರು ಮಾಡುತ್ತದೆ. ತಪ್ಪಾದ ತೀರ್ಮಾನದಿಂದ ಕುಟುಂಬದಲ್ಲಿ ಸಂಧಿಗ್ದ ಪರಿಸ್ಥಿತಿ ಎದುರಾಗುತ್ತದೆ. ಆರಂಭದಲ್ಲಿ ನಿರಾಶೆ ಉಂಟಾದರೂ ಬಹುಕಾಲ ಇರದು. ಉದ್ಯೋಗದಲ್ಲಿ ಆತ್ಮೀಯರೊಬ್ಬರು ನಿಮ್ಮ ವಿರುದ್ಧ ವಿವಾದವನ್ನು ಉಂಟು ಮಾಡಬಹುದು. ವಿದ್ಯಾರ್ಥಿಗಳು ಪ್ರತಿ ವಿಚಾರದಲ್ಲಿಯೂ ಸಹಪಾಠಿಗಳನ್ನು ಅವಲಂಬಿಸುತ್ತಾರೆ. ವ್ಯಾಪಾರ ವ್ಯವಹಾರಗಳು ಸುದೀರ್ಘ ಗತಿಯಲ್ಲಿ ಸಾಗುತ್ತದೆ. ಹಣಕಾಸಿನ ತೊಂದರೆಯು ಕೊಂಚ ಕಡಿಮೆಯಾಗುತ್ತದೆ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ನೀರಿರುವ ಪ್ರದೇಶಗಳಿಂದ ದೂರವಿರಿ.
ಹೀಗೆ ಮಾಡಿ: ಪೂರ್ವ ದಿಕ್ಕಿನಲ್ಲಿ ಕಸವನ್ನು ಇಡಬಾರದು.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಬಿಳಿ
ವೃಷಭ
ಮನದ ವಿಚಾರವನ್ನು ಆತ್ಮೀಯರ ಜೊತೆಯಲ್ಲಿ ಹಂಚಿಕೊಳ್ಳುವಿರಿ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುವಿರಿ. ಮಾಡಬೇಕಾದ ಕೆಲಸ ಕಾರ್ಯಗಳು ಹೆಚ್ಚಾಗಿದ್ದರೂ ಮನಸ್ಸು ಒಪ್ಪದು. ಉದ್ಯೋಗದಲ್ಲಿ ಬದಲಾವಣೆಗಳೇ ಕಾಣದೆ ನೀರಸ ವಾತಾವರಣ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಹಪಾಠಿಗಳ ನೆರವಿನಿಂದ ಕಲಿಕೆಯಲ್ಲಿ ಒಲವು ತೋರುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದು. ಹಣಕಾಸಿನ ಸಂಸ್ಥೆಯನ್ನು ನಡೆಸುತ್ತಿದ್ದಲ್ಲಿ ಉತ್ತಮ ಆದಾಯವಿರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚುತ್ತದೆ.
ಹೀಗೆ ಮಾಡಿ: ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಕೆಂಪು
ಮಿಥುನ
ಸರಿ ತಪ್ಪನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗುವಿರಿ. ಅತಿ ಸಾಮಾನ್ಯ ಕೆಲಸ ಕಾರ್ಯಗಳನ್ನು ಪೂರೈಸಲು ಸಹ ಬೇರೊಬ್ಬರ ಸಹಾಯ ಸಹಕಾರದ ನಿರೀಕ್ಷೆಯಲ್ಲಿರುವಿರಿ. ಕುಟುಂಬದಲ್ಲಿ ನಲಿವಿನ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಎದುರಾದರೂ ಯಶಸ್ವಿಯಾಗಿ ನಿಭಾಯಿಸುವಿರಿ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲೇಬೇಕು. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಾಗದು. ಸಂಗಾತಿಗೆ ಕಣ್ಣಿನ ತೊಂದರೆ ಇರುತ್ತದೆ. ಕಿರು ಪ್ರವಾಸದ ಯೋಗ ಕಂಡುಬರುತ್ತದೆ. ಸಿದ್ಧಪಡಿಸಿದ ಉಡುಪಿನ ರಫ್ತಿನ ವ್ಯಾಪಾರದಲ್ಲಿ ಆದಾಯವಿದೆ.
ಹೀಗೆ ಮಾಡಿ: ಮನೆಯ ಮುಂದಿರುವ ಗಿಡಗಳಿಗೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟ ಸಂಖ್ಯೆ : 12
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ : ನೀಲಿ
ಕಟಕ
ಚುರುಕುತನದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕೆಲಸ ಮಾಡುವ ಮನಸ್ಸಿದ್ದರೂ ವಯಸ್ಸು ಅಡ್ಡಿಯಾಗುತ್ತದೆ. ಕುಟುಂಬದ ಚಕಮುಕಿಯಲ್ಲಿ ತೊಡಗಿದರು ಬುದ್ಧಿವಂತಿಕೆಯಿಂದ ಶಾಂತಿ ನೆಲೆಸಲು ಕಾರಣರಾಗುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ವಿದ್ಯಾರ್ಥಿಗಳು ಆಟವಾಡಿದಷ್ಟೇ ಸುಲಲಿತವಾಗಿ ಕಲಿಕೆಯಲ್ಲೂ ಮುಂದಿರುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳು ಯಾವುದೇ ಅಡ್ಡಿಯಿಲ್ಲದೆ ಮುಂದುವರೆಯುತ್ತವೆ. ಉದ್ಯೋಗವನ್ನು ಬದಲಾಯಿಸುವ ತೀರ್ಮಾನಕ್ಕೆ ಬರುವಿರಿ. ಅವಿವಾಹಿತರಿಗೆ ಅಪರಿಚಿತರ ಸಹಾಯದಿಂದ ಶುಭ ವರ್ತಮಾನವನ್ನು ಬರಲಿದೆ. ಬಿದ್ದು ಸೊಂಟಕ್ಕೆ ಪೆಟ್ಟು ಬೀಳುವ ಸಾಧ್ಯತೆಗಳಿವೆ ಎಚ್ಚರಿಕೆ ಇರಲಿ. ವೃದ್ಧರ ಅನುಭವವೇ ದಾರಿದೀಪವಾಗುತ್ತದೆ.
ಹೀಗೆ ಮಾಡಿ: ಮನೆಯಲ್ಲಿನ ಪೂಜಾ ಸ್ಥಳವನ್ನು ಶುಚಿಗೊಳಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕೇಸರಿ
ಸಿಂಹ
ಎಲ್ಲರ ಮೇಲೂ ಅಧಿಕಾರ ಚಲಾಯಿಸುವ ಗುಣವನ್ನು ತೋರುವಿರಿ. ಕುಟುಂಬದ ದೊಡ್ಡ ಜವಾಬ್ದಾರಿ ಒಂದನ್ನು ನಿರ್ವಹಿಸಬೇಕಾಗಿ ಬರುತ್ತದೆ. ಮಾಡದ ತಪ್ಪನ್ನು ಒಪ್ಪಲೇ ಬೇಕಾಗದ ಪ್ರಸಂಗ ಎದುರಾಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುತ್ತದೆ. ಉದ್ಯೋಗದಲ್ಲಿ ಪೂರ್ವ ನಿಯೋಜಿತ ತಂತ್ರ ಇರುತ್ತದೆ. ವಿದ್ಯಾರ್ಥಿಗಳು ಹಠದ ಸ್ವಭಾವದಿಂದ ತೊಂದರೆಗೆ ಒಳಗಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಕಾನೂನಿನ ತೊಂದರೆಯನ್ನು ಎದುರಾಗಬಹುದು. ವಿದೇಶಿ ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವಿರಿ. ಕುಟುಂಬದ ಹಿರಿಯರಿಗೆ ಶುಭ ವರ್ತಮಾನ ದೊರೆಯಲಿದೆ. ದೊಡ್ಡ ವ್ಯಕ್ತಿಗಳನ್ನು ಗೌರವದಿಂದ ಕಾಣುವುದು ಒಳ್ಳೆಯದು.
ಹೀಗೆ ಮಾಡಿ: ತಂದೆಯವರಿಗೆ ಇಷ್ಟವಾದ ತಿಂಡಿ ತಿನಿಸನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಹಳದಿ
ಕನ್ಯಾ
ಆಡುವ ಪ್ರತಿಮಾತಿನ ಮೇಲೆ ಗಮನವಿರಲಿ. ಕೇವಲ ಟೀಕೆ ಮಾಡುವುದರಲ್ಲಿ ದಿನ ಕಳೆಯುವಿರಿ. ಮಾಡುವ ತಪ್ಪನ್ನು ಮುಚ್ಚಿಡಲು ಬೇರೆಯವರ ಮೇಲೆ ಅಪವಾದವನ್ನು ಹಾಕುವಿರಿ. ಖ್ಯಾತ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ದೊರೆಯುವುದು. ಅತಿಯಾಗಿ ತಿನ್ನುವ ಅಭ್ಯಾಸದಿಂದ ಆರೋಗ್ಯದಲ್ಲಿ ತೊಂದರೆ ತಂದುಕೊಳ್ಳುವಿರಿ. ಕುಟುಂಬದಲ್ಲಿ ಪರಸ್ಪರ ವಾದ ವಿವಾದಗಳು ಇದ್ದರೂ ಪ್ರೀತಿ ವಿಶ್ವಾಸಕ್ಕೆ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷೆಯಂತೆ ಜಯ ಲಭಿಸುವ ಕಾರಣ ಸಂತಸದಿಂದ ಇರುವಿರಿ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಪ್ರಯತ್ನಕ್ಕೆ ಒಲವು ನೀಡಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ನಷ್ಟ ಸರಿಸಮನಾಗಿರುತ್ತದೆ.
ಹೀಗೆ ಮಾಡಿ: ಕಪ್ಪು ಎಳ್ಳಿನಿಂದ ಮಾಡಿದ ಸಿಹಿ ತಿಂಡಿಯನ್ನು ಮಕ್ಕಳಿಗೆ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ : ಹಸಿರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)