ನನ್ನ ವೃತ್ತಿಜೀವನಕ್ಕೆ ಅಡ್ಡಿಯಾಗಿದ್ದ ಎಲ್ಲವನ್ನೂ ಕುಟುಂಬವೇ ನಿಭಾಯಿಸಿದೆ; ನಿವೃತ್ತಿ ಬಳಿಕ ಆರ್ ಅಶ್ವಿನ್ ಭಾವುಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನನ್ನ ವೃತ್ತಿಜೀವನಕ್ಕೆ ಅಡ್ಡಿಯಾಗಿದ್ದ ಎಲ್ಲವನ್ನೂ ಕುಟುಂಬವೇ ನಿಭಾಯಿಸಿದೆ; ನಿವೃತ್ತಿ ಬಳಿಕ ಆರ್ ಅಶ್ವಿನ್ ಭಾವುಕ

ನನ್ನ ವೃತ್ತಿಜೀವನಕ್ಕೆ ಅಡ್ಡಿಯಾಗಿದ್ದ ಎಲ್ಲವನ್ನೂ ಕುಟುಂಬವೇ ನಿಭಾಯಿಸಿದೆ; ನಿವೃತ್ತಿ ಬಳಿಕ ಆರ್ ಅಶ್ವಿನ್ ಭಾವುಕ

  • ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಭಾರತೀಯ ಅಭಿಮಾನಿಗಳಿಗೆ ಅವರು ಒಂದಷ್ಟು ಮರೆಯಲಾಗದ ಕ್ಷಣವನ್ನು ಸೃಷ್ಟಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 14 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯವಾಗಿದ್ದು, ಸಹಕಾರ ನೀಡಿದ ಸಹ ಆಟಗಾರರು, ಕೋಚ್‌ ಹಾಗೂ ಕುಟುಂಬಸ್ಥರಿಗೆ ವಂದಿಸಿದ್ದಾರೆ.

ನನ್ನ ವೃತ್ತಿ ಜೀವನವನ್ನು ಸುಲಭಗೊಳಿಸಲು, ನನ್ನ ಕುಟುಂಬ ನನಗೆ ಸಹಾಯ ಮಾಡಿತು. ನನ್ನ ಕುಟುಂಬಸ್ಥರಿಗೆ ಬಹಳ ಕಷ್ಟಕರವಾದ ಪ್ರಯಾಣವಾಗಿದೆ ಎಂದು ಅಶ್ವಿನ್‌ ಹೇಳಿದ್ದಾರೆ. ವೃತ್ತಿಬದುಕಿನುದ್ದಕ್ಕೂ ಕುಟುಂಬದಿಂದ ಪಡೆದ ಬೆಂಬಲದ ಬಗ್ಗೆ ಮಾತನಾಡಿದ ಅವರು, ಈ ಪ್ರಯಾಣವು ಭಾವನಾತ್ಮಕ ಏರಿಳಿತಗಳಿಂದ ಕೂಡಿದೆ ಎಂದು ಹೇಳಿದರು
icon

(1 / 9)

ಪಂದ್ಯದ ನಡುವೆ ಮಳೆಯಿಂದ ವಿರಾಮದ ಸಮಯದಲ್ಲಿ ಕೊಹ್ಲಿ ಅವರೊಂದಿಗಿನ ಚರ್ಚೆಯ ನಂತರ, ಅವರು ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಭಾರತ ಮತ್ತು ಆಸೀಸ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಮುಕ್ತಾಯದ ನಂತರ “ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಕೊನೆಯ ದಿನ” ಎಂದು ಹೇಳಿದರು.
icon

(2 / 9)

ನಾನು ನನ್ನ ಮೂವತ್ತರ ಹರೆಯದಲ್ಲಿದ್ದೇನೆ. ನನ್ನ ತಂದೆ ಇನ್ನೂ ನನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನೋಡುತ್ತಿರುವಂತೆ ನನ್ನ ಆಟವನ್ನು ನೋಡುತ್ತಾರೆ. ನನ್ನ ಕ್ರಿಕೆಟ್ ಪ್ರಯಾಣದ ಹಾದಿಯಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ದೂರ ಮಾಡುವುದು ನನ್ನ ಕುಟುಂಬದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ಅವರ ಜೀವನದ ಏಕೈಕ ಉದ್ದೇಶವಾಗಿದೆ ಎಂದು ಅಶ್ವಿನ್‌ ಹೇಳಿದ್ದಾರೆ.
icon

(3 / 9)

ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ, ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಸರಣಿಯ ಮಧ್ಯದಲ್ಲಿ ತವರಿಗೆ ಹಿಂತಿರುಗಿದೆ. ನಾನು ಆಸ್ಪತ್ರೆಗೆ ಹೋಗಿ ನನ್ನ ತಾಯಿಗೆ ಪ್ರಜ್ಞೆ ಬಂದಾಗ ಅವರು ನನ್ನಲ್ಲಿ ಕೇಳಿದ ಮೊದಲ ಪ್ರಶ್ನೆ ಏನೆಂದರೆ, 'ನೀನು ಏಕೆ ಇಲ್ಲಿಗೆ ಬಂದೆ?' ಎಂಬುದಾಗಿದೆ.
icon

(4 / 9)

ಅಶ್ವಿನ್ ಅವರ ಪತ್ನಿ ಹೆಸರು ಪ್ರೀತಿ ನಾರಾಯಣನ್. ಅವರು ಗೃಹಿಣಿ ಮಾತ್ರವಲ್ಲದೆ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಅಶ್ವಿನ್ ಮತ್ತು ಪ್ರೀತಿ ನಾರಾಯಣನ್ ಅವರದ್ದು ಲವ್‌ ಮ್ಯಾರೇಜ್.
icon

(5 / 9)

ಅಶ್ವಿನ್ ಅವರಿಗೆ ಅಕಿರಾ ಮತ್ತು ಆಧ್ಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಕಿರಾ 2014ರಲ್ಲಿ ಜನಿಸಿದರು. ಎರಡನೇ ಮಗಳು ಆಧ್ಯಾ 2016ರಲ್ಲಿ ಜನಿಸಿದರು.
icon

(6 / 9)

ರವಿಚಂದ್ರನ್ ಅಶ್ವಿನ್ ಭಾರತ ಪರ ಒಟ್ಟು 116 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 156 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 4/25 ಅತ್ಯುತ್ತಮ ಅಂಕಿ-ಅಂಶ.
icon

(7 / 9)

ರವಿಚಂದ್ರನ್ ಅಶ್ವಿನ್ ಭಾರತ ಪರ ಒಟ್ಟು 65 ಟಿ20 ಪಂದ್ಯಗಳನ್ನು ಆಡಿದ್ದಾರೆ. 65 ಇನ್ನಿಂಗ್ಸ್‌ಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. 19 ಇನ್ನಿಂಗ್ಸ್‌ಗಳಲ್ಲಿ 184 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 31 ರನ್.
icon

(8 / 9)

ನಿವೃತ್ತಿ ಕುರಿತು ಮಾತನಾಡಿದ ಅಶ್ವಿನ್‌, "ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಬಹಳಷ್ಟು ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ನೆನೆಪುಗಳಿವೆ. ನಾನು ಬಹಳಷ್ಟು ಜನರಿಗೆ ಧನ್ಯವಾದ ಹೇಳಬೇಕು. ಬಿಸಿಸಿಐ, ನನ್ನ ಸಹ ಆಟಗಾರರು, ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಆದರೆ ನಾನು ಕ್ಲಬ್ ಕ್ರಿಕೆಟ್ ಆಡುತ್ತೇನೆ," ಎಂದರು.
icon

(9 / 9)

ಇತರ ಗ್ಯಾಲರಿಗಳು