ಬಾಡೂಟದ ಬೇಡಿಕೆ ನಡುವೆ ಹೋಳಿಗೆ, ಅಡುಗೆ ತಯಾರಿ ಶುರುವಾಯ್ತು: ಹೀಗಿರಲಿದೆ ಮಂಡ್ಯ ಸಾಹಿತ್ಯ ಸಮ್ಮೇಳನ ಕನ್ನಡಾಭಿಮಾನಿಗಳ ಏಕರೂಪದ ಊಟ
ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ನಿತ್ಯದ ಊಟೋಪಚಾರದ ತಯಾರಿ ಶುರುವಾಗಿದೆ. ಮಾಂಸಾಹಾರದ ಬೇಡಿಕೆ ನಡುವೆ ಮಂಡ್ಯದಲ್ಲಿ ಹೋಳಿಗೆ ಸಿದ್ದಪಡಿಸಲಾಗುತ್ತಿದೆ. ಇಲ್ಲಿದೆ ತಯಾರಿ ನೋಟ.
(1 / 6)
ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕನ್ನಡದ ಮನಸುಗಳಿಗೆ ರಸದೌತಣ. ಕಿವಿಗಳ ಜತೆಗೆ ನಾಲಿಗೆಗೂ ಕೆಲಸ ನೀಡಲು ಬಗೆಬಗೆಯ ಆಡುಗೆಗಳ ತಯಾರಿ ಬುಧವಾರದಿಂದಲೇ ಶುರುವಾಗಿದೆ.
(2 / 6)
ಮಂಡ್ಯ ಮಾತ್ರವಲ್ಲದೇ ಹಲವ ಭಾಗಗಳಿಂದ ಆಗಮಿಸಿರುವ ಬಾಣಸಿಗರು ಅಡುಗೆ ತಯಾರಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರುಚಿ ಶುಚಿಯಾದ ಅಡುಗೆ ತಯಾರಿ ಆರಂಭಿಸಿದ್ದಾರೆ.
(3 / 6)
ಈ ಬಾರಿ ಸಮ್ಮೇಳನಕ್ಕೆ ಗುರುವಾರರಿಂದಲೇ ಆಗಮಿಸುವ ಅತಿಥಿಗಳು, ಪ್ರತಿನಿಧಿಗಳು ಸೇರಿ ಗಣ್ಯರಿಗೆ ಊಟದ ವ್ಯವಸ್ಥೆ ಇರಲಿದೆ.
(4 / 6)
ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಹೋಳಿಗೆಯನ್ನು ಊಟದೊಂದಿಗೆ ನೀಡುತ್ತಿದ್ದು. ಹೋಳಿಗೆಯನ್ನು ಹಾಕುವ ಮೂಲಕ ಸಚಿವ ಚಲುವರಾಯಸ್ವಾಮಿ ಅಡುಗೆ ತಯಾರಿಗೆ ಚಾಲನೆ ನೀಡಿದರು.
(5 / 6)
ಸಾಹಿತ್ಯ ಸಮ್ಮೇಳನಕ್ಕಾಗಿ 70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, ಎರಡು ಸಮಾನಾಂತರ ವೇದಿಕೆ, 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. 55 ವಸ್ತುಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆ , 450 ಪುಸ್ತಕ ಮಳಿಗೆಗಳು ಕೂಡ ತಲೆಎತ್ತಿವೆ. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್ ಗಳನ್ನು ತೆರೆಯಲಾಗಿದ್ದು ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ
(6 / 6)
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಹಾರದ ಗುಣಮಟ್ಟ ಪರೀಕ್ಷೆ ಮಾಡಿ ವರದಿ ಪಡೆಯಲಾಗುತ್ತದೆ. ನೀರನ್ನು ಸಹ ಪರೀಕ್ಷಿಸಲಾಗುತ್ತದೆ. ಸ್ವಚ್ಛತೆಗೆ 250 ಸಿಬ್ಬಂದಿಯನ್ನು ನೇಮಿಸಲಾಗಿದೆ. 150ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. 6 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಅರ್ಧ ಕೆಜಿ ಬೆಲ್ಲ, ಅರ್ಧ ಕೆಜಿ ಸಕ್ಕರೆ, ಬ್ರೆಶ್, ಪೇಸ್ಟ್, ಸೋಪು,ಬೆಡ್ ಶಿಟ್ ಒಳಗೊಂಡ ಲೇದರ್ ಬ್ಯಾಗ್ ನಲ್ಲಿ ವಸತಿ ಮತ್ತು ಸಮ್ಮೇಳನದ ಕಿಟ್ ನೀಡಲಾಗುತ್ತದೆ.
ಇತರ ಗ್ಯಾಲರಿಗಳು