Horoscope Today: ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ನಡೆಯಲಿದೆ, ವಿವಾದವೊಂದು ಕೊನೆಗೊಳ್ಳಲಿದೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಮಾರ್ಚ್ 10, ಭಾನುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (10 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಭಾನುವಾರ
ತಿಥಿ : ಅಮಾವಾಸ್ಯೆ ಬೆ.03.22 ರವರೆಗು ಇದ್ದು ಆನಂತರ ಪಾಡ್ಯ ಆರಂಭವಾಗುತ್ತದೆ.
ನಕ್ಷತ್ರ : ಪೂರ್ವಾಭಾದ್ರ ನಕ್ಷತ್ರವು ರಾ.03.37 ರವರೆಗೆ ಇರುತ್ತದೆ. ಆನಂತರ ಉತ್ತರಾಭಾದ್ರ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.29
ಸೂರ್ಯಾಸ್ತ: ಸ.06.28
ht ಸ.04.30 ರಿಂದ ಸ.06.00
ರಾಶಿ ಫಲಗಳು
ಧನಸ್ಸು
ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಬಹುದು. ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಇರುವುದಿಲ್ಲ. ನಿಮ್ಮ ಸ್ವಂತ ವಿಚಾರವನ್ನು ಕುಟುಂಬದ ಪ್ರಭಾವ ಬೀರದು. ಕುಟುಂಬದಲ್ಲಿ ಹಾಸ್ಯದ ಮನೋಭಾವನೆ ತುಂಬಿರುತ್ತದೆ. ಉದ್ಯೋಗದಲ್ಲಿ ನಿಮ್ಮದಲ್ಲದ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ನಿರ್ಧಾರವನ್ನು ಒಪ್ಪದೇ ಹೋದಲ್ಲಿ ಕೋಪದ ಕೈ ಗೊಂಬೆ ಆಗುವಿರಿ. ಕೋಪದಿಂದ ಎಲ್ಲರಿಂದ ದೂರ ಉಳಿಯುವಿರಿ. ಆದರೆ ತಾಯಿಯವರ ಮಾತು ನಿಮ್ಮ ಮನಸ್ಸನ್ನು ಬದಲಿಸುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ವಿಚಾರವು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯಲಿದೆ.
ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಮಕರ
ಕುಟುಂಬದ ಸಂತೋಷ ಸಂಭ್ರಮಕ್ಕಾಗಿ ಮುಖ್ಯ ಕೆಲಸಗಳನ್ನು ಮುಂದೂಡುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ದೀರ್ಘಕಾಲದ ಪ್ರವಾಸಕ್ಕೆ ಸಜ್ಜಾಗುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ತುಂಬಿರುತ್ತದೆ. ಆತ್ಮೀಯರಿಗೆ ದುಬಾರಿ ಉಡುಗೊರೆಯನ್ನು ನೀಡಬೇಕಾಗುತ್ತದೆ. ಕಾತುರದಿಂದ ಯಾವುದೇ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಡಿರಿ. ಉದ್ಯೋಗದಲ್ಲಿನ ಕಠಿಣ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವಿರಿ. ವಿದ್ಯಾರ್ಥಿಗಳು ಚಿಂತೆ ಮತ್ತು ಒತ್ತಡದಿಂದ ಹೊರ ಬರುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಹಣಕಾಸಿನ ತೊಂದರೆ ಇರುವುದಿಲ್ಲ. ಹಣದ ಮೇಲೆ ಅತಿಯಾದ ಆಸೆಯೂ ಇರದು. ಇದರಿಂದ ಎಲ್ಲರೊಡನೆ ನೆಮ್ಮದಿಯಿಂದ ಜೀವನ ನಡೆಸುವಿರಿ.
ಪರಿಹಾರ : ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ತೊಡುಗೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಕುಂಭ
ಕ್ಷುಲ್ಲಕ ವಿಚಾರಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡುವಿರಿ. ನಿಮ್ಮ ರೀತಿ ನೀತಿಗಳಿಗೆ ಕುಟುಂಬದಲ್ಲಿ ವಿರೋಧವಿರುತ್ತದೆ. ಅನಗತ್ಯವಾದ ವಿವಾದಗಳಿಂದ ಮಾನಸಿಕ ವ್ಯಥೆ ಉಂಟಾಗುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಸಾಲವಾಗಿ ನೀಡಿದ ಹಣ ಮರಳಿ ಕೈ ಸೇರುವುದು. ಸದಾಕಾಲ ಸಂತೋಷ ಸಂಭ್ರಮದಿಂದ ಇರಲು ಬಯಸುವಿರಿ. ತಪ್ಪನ್ನು ಒಪ್ಪುವ ಕಾರಣ ವಿವಾದವೊಂದು ಕೊನೆಗೊಳ್ಳುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ಥಿರವಾದ ಆದಾಯ ದೊರೆಯಲಿದೆ. ಸ್ನೇಹಿತರ ಸಹಾಯದಿಂದ ಉದ್ಯೋಗದಲ್ಲಿನ ಸಮಸ್ಯೆಯೊಂದು ಬಗೆಹರಿಯಲಿದೆ. ಬೇರೆಯವರ ಮನಸ್ಸಿಗೆ ಬೇಸರ ಬರದಂತೆ ನಡೆದುಕೊಂಡರೆ ನಿಮಗೆ ಲಾಭ. ಸಂಗಾತಿಯ ಸಹಕಾರ ಇರುತ್ತದೆ.
ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೀಲಿ ಬಣ್ಣ
ಮೀನ
ಮನದಲ್ಲಿ ಆತಂಕದ ಭಾವನೆ ಇರುತ್ತದೆ. ಅನಾವಶ್ಯಕ ಮಾನಸಿಕ ಒತ್ತಡ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ಧನಾತ್ಮಕ ಮನೋಭಾವನೆ ಮತ್ತು ಸತತ ಪ್ರಯತ್ನದಿಂದ ಯಾವುದೇ ಕೆಲಸವನ್ನು ಸಾಧಿಸಬಲ್ಲಿರಿ. ಅನಿವಾರ್ಯವಾಗಿ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸುತ್ತಿದ್ದ ಬದಲಾವಣೆಗಳು ಉಂಟಾಗಲಿವೆ. ಕುಟುಂಬದ ಸದಸ್ಯರ ಸಲಹೆಯನ್ನು ಪಾಲಿಸಿದರೆ ಹಣಕಾಸಿನ ಕೊರತೆ ಕಾಣುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ವರಮಾನ ಕಡಿಮೆಯಾಗಬಹುದು. ವಿದ್ಯಾರ್ಥಿಗಳು ನಿರೀಕ್ಷಿಸಿದಂತೆ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಹೊಂದಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ಪರಸ್ಪರ ಕ್ಷಮಾ ಗುಣ ಇರುವ ಕಾರಣ ಸಂತಸ ನೆಲೆಸಿರುತ್ತದೆ.
ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ : ನೇರಳೆ ಬಣ್ಣ
------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ