Horoscope Today: ಈ ರಾಶಿಯ ವಿದ್ಯಾರ್ಥಿಗಳಿಗೆ ಗೆಲುವೇ ಹವ್ಯಾಸ, ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ; ಇಂದಿನ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಏನು ಫಲ? ಭಾನುವಾರದ ದಿನಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (August 6, 2023, Daily Horoscope in Kannada)
ಇಂದಿನ ರಾಶಿ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (August 6, 2023, Daily Horoscope in Kannada)
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಭಾನುವಾರ, ತಿಥಿ: ಪಂಚಮಿ ಹ.12.52 ರವರೆಗೆ ಇರುತ್ತದೆ ಆನಂತರ ಷಷ್ಥಿ ಆರಂಭವಾಗುತ್ತದೆ. ನಕ್ಷತ್ರ: ಉತ್ತಾರಾಭಾದ್ರ ನಕ್ಷತ್ರವು ಬೆ.09.04 ರವರೆಗೆ ಇದ್ದು ಆನಂತರ ರೇವತಿ ನಕ್ಷತ್ರ ಆರಂಭವಾಗುತ್ತದೆ. ಸೂರ್ಯೋದಯ ಬೆ.06.03, ಸೂರ್ಯಾಸ್ತ: ಸ.6.45 ರಾಹುಕಾಲ: ಸ.05.13 ರಿಂದ ಬೆ..06.47
ತುಲಾ
ಸದಾಕಾಲ ಬೇರೆಯವರಿಗೆ ಒಳ್ಳೆಯದನ್ನೇ ಬಯಸುವಿರಿ. ಕೊಂಚವೂ ಯೋಚಿಸದೆ ಪ್ರತಿಯೊಬ್ಬರನ್ನು ಸುಲಭವಾಗಿ ನಂಬುವ ಗುಣವಿರುತ್ತದೆ. ಅತಿಯಾದ ಆತುರದ ನಿರ್ಧಾರ ವ್ಯಸನಕ್ಕೆ ಕಾರಣವಾಗಬಹುದು. ಸೋಲುವ ಅಂಚಿನಲ್ಲಿ ಇದ್ದರೂ ಗೆಲ್ಲುವ ಹಟವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ವಿರುತ್ತದೆ. ವಿದ್ಯಾರ್ಥಿಗಳು ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ. ಹುಟ್ಟೂರಿನ ಜಮೀನಿನಲ್ಲಿ ಬೇಸಾಯವನ್ನು ಆರಂಭಿಸುವಿರಿ. ಸೋದರಿಯ ಕುಟುಂಬದಲ್ಲಿ ವಿವಾದ ಒಂದು ಎದುರಾಗಬಹುದು. ಗ್ರಾಮ ಪಂಚಾಯಿತಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆಟಿಕೆಗಳ ವ್ಯಾಪಾರ ಹೆಚ್ಚು ಲಾಭದಾಯಕ. ಅರೆ ತಲೆ ಶೂಲೆ ಸಾಕಷ್ಟು ಬಾರಿಸಬಹುದು.
ಹೀಗೆ ಮಾಡಿ: ಬಲಗೈಯಲ್ಲಿ ತಾಮ್ರದ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 17
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ : ನೀಲಿ
ವೃಶ್ಚಿಕ
ಬೇರೊಬ್ಬರ ಬುದ್ಧಿ ಮಾತನ್ನು ಒಪ್ಪದ ಕಾರಣ ತೊಂದರೆಗೆ ಸಿಲುಕುವಿರಿ. ಬೇಡದ ಆಲೋಚನೆಗಳಿಂದ ಮನಸ್ಸಿನ ನೆಮ್ಮದಿ ಹಾಳಾಗಬಹುದು. ಸಮಾಜದ ಗಣ್ಯ ವ್ಯಕ್ತಿ ಒಬ್ಬರ ಪರಿಚಯ ಆಗಲಿದೆ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಹಠದಿಂದ ಎಲ್ಲಾ ವಿಚಾರದಲ್ಲಿಯೂ ಯಶಸ್ಸನ್ನುಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟದ ಮಾತಿರದು. ವಿದ್ಯಾರ್ಥಿಗಳಿಗೆ ಸಹಪಾಠಿಗಳ ಸಹಕಾರವಿರುವ ಕಾರಣ ಕಲಿಕೆಯಲ್ಲಿ ಮುಂದಿರುತ್ತಾರೆ. ಭೂ ವ್ಯವಹಾರದಲ್ಲಿ ವಿಶೇಷವಾದ ಲಾಭ ದೊರೆಯುತ್ತದೆ.
ಹೀಗೆ ಮಾಡಿ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕೆಂಪು
ಧನಸ್ಸು
ಎದುರಾಗುವ ಅವಕಾಶಗಳ ಆಯ್ಕೆಯಲ್ಲಿ ಸೋಲುವಿರಿ. ಸ್ಥಿರವಾದ ಮನಸ್ಸು ಜಯದ ಹಾದಿಯನ್ನು ತೋರುವುದು. ಮಕ್ಕಳೊಂದಿಗೆ ವಿದ್ಯಾಭ್ಯಾಸದ ವಿಚಾರಕ್ಕಾಗಿ ವಿದೇಶಕ್ಕೆ ತೆರಳುವಿರಿ. ಕುಟುಂಬದಲ್ಲಿ ಪರಸ್ಪರ ನಂಬಿಕೆ ಇರುವ ಕಾರಣ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಋಣಾತ್ಮಕ ಫಲಿತಾಂಶಗಳು ಕಾಣಬಾರದು. ವಿದ್ಯಾರ್ಥಿಗಳಿಗೆ ಓದುವುದೊಂದೇ ಕಾಯಕವಾಗುತ್ತದೆ. ಬೇಸಾಯವನ್ನೇ ನೆಚ್ಚಿಕೊಂಡವರಿಗೆ ಉತ್ತಮ ಆದಾಯ ದೊರೆಯುತ್ತದೆ. ತಂದೆ ಅಥವಾ ತಾಯಿಯೊಂದಿಗೆ ಪಾಲುಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಸಿಡುಕುತನವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಹೀಗೆ ಮಾಡಿ: ಬಿಳಿ ಬಣ್ಣದ ನಾಯಿಗೆ ಆಹಾರವನ್ನು ನೀಡಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಆಗ್ನೇಯ
ಅದೃಷ್ಟದ ಬಣ್ಣ : ಹಾಲಿನ ಬಣ್ಣ
ಮಕರ
ದೇಹದ ತೂಕ ಮಿತಿಮೀರುವ ಸಾಧ್ಯತೆ ಇದೆ. ಕೇವಲ ಒಳ್ಳೆಯ ಹವ್ಯಾಸಗಳು ಉತ್ತಮ ಆರೋಗ್ಯವನ್ನು ಉಳಿಸುತ್ತದೆ. ಹಣದ ಆಸೆ ಇರುವುದಿಲ್ಲ. ಸಿಕ್ಕಿದಷ್ಟಕ್ಕೆ ಸಂತೃಪ್ತಿಪಡುವ ದೊಡ್ಡ ಗುಣವಿರುತ್ತದೆ. ಕುಟುಂಬದಲ್ಲಿ ಬೇಸರ ತರಿಸುವಷ್ಟು ಮಾತನ್ನು ಆಡುವಿರಿ. ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಸಂಘ ಸಂಸ್ಥೆಯನ್ನು ಆರಂಭಿಸುವ ಸೂಚನೆಗಳಿವೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಸೋಮಾರಿತನವನ್ನು ಬಿಡುವ ಅವಶ್ಯಕತೆ ಇದೆ.
ಹೀಗೆ ಮಾಡಿ: ಕೋತಿಗಳಿಗೆ ಬಾಳೆಹಣ್ಣನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 15
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ : ನೇರಳೆ
ಕುಂಭ
ನಿರೀಕ್ಷೆ ಇಲ್ಲದೆ ಹೋದರು ಪ್ರಭಾವಿ ಜನರ ಬೆಂಬಲ ದೊರೆಯುತ್ತದೆ. ಕುಟುಂಬದಲ್ಲಿ ಮಾದರಿಯಾಗಬಲ್ಲ ವಾತಾವರಣ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವವರೆಗೂ ರಹಸ್ಯವನ್ನು ಕಾಪಾಡಿಕೊಳ್ಳುವಿರಿ. ಅನಿರೀಕ್ಷಿತ ಧನ ಲಾಭವಿದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಉನ್ನತ ಅಧಿಕಾರ ಯೋಗವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರದ್ಧೆ ತೋರದೆ ಹೋದರು ಲಾಭಕ್ಕೆ ಕೊರತೆಯಾಗದು. ಜನಸಾಮಾನ್ಯರಿಗೆ ಸಹಾಯಕವಾಗುವ ಸೇವಾ ಪೂರ್ವ ವೃತ್ತಿಯಲ್ಲಿ ಲಾಭವಿದೆ. ವಿದ್ಯಾರ್ಥಿಗಳಿಗೆ ಶುಭವಿದೆ.
ಹೀಗೆ ಮಾಡಿ: ಬಿಳಿ ಬಟ್ಟೆಯನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿದರೆ ಜಯ ನಿಶ್ಚಿತ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ : ಮಿಶ್ರಬಣ್ಣ
ಮೀನ
ಮನರಂಜನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಬೇರೊಬ್ಬರ ಸಹಾಯವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾಗದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ. ಪದೇಪದೇ ತೆಗೆದುಕೊಳ್ಳುವ ನಿರ್ಧಾರವನ್ನು ಬದಲಿಸದಿರಿ. ಉದ್ಯೋಗದಲ್ಲಿ ಸರಿಯಾದ ಗಮನವಹಿಸದೆ ಹೋದಲ್ಲಿ ವಿವಾದ ಒಂದು ಎದುರಾಗಲಿದೆ. ವಿದ್ಯಾರ್ಥಿಗಳು ನಿಷ್ಠೆಯಿಂದ ಕಲಿಕೆಯಲ್ಲಿ ಮಗ್ನರಾಗಬೇಕು . ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿಲ್ಲ. ವಿದೇಶ ಪ್ರಯಾಣ ಯೋಗವಿದೆ. ಆತ್ಮೀಯರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಶೀತ ವಾಯುವಿನ ದೋಷ ಬಹುವಾಗಿ ಕಾಡುತ್ತದೆ.
ಹೀಗೆ ಮಾಡಿ: ಹಸುವಿನ ಗಂಜಲದಿಂದ ಮನೆಯನ್ನು ಶುದ್ಧೀಕರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಕೆಂಪು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)