ನಿವೇಶನದ ಅಕ್ಕ ಪಕ್ಕದಲ್ಲಿ ಏನಿರಬೇಕು? ಮಹಡಿ ಮನೆಯಲ್ಲಿ ಎಷ್ಟು ಬಾಗಿಲು, ಕಿಟಕಿಗಳು ಇರಬೇಕು: ವಾಸ್ತು ಶಾಸ್ತ್ರ
ಭಾರತೀಯರು ವಾಸ್ತುಶಾಸ್ತ್ರ ಅಳವಡಿಸಿಕೊಳ್ಳುವಂತೆ ಚೀನಿಯರು ಫೆಂಗ್‌ಶೂಯಿ ಬಳಸುತ್ತಾರೆ. ಇದರ ಪ್ರಕಾರ ಮನೆಗೆ ಒಳಿತಾಗಲು ಗಾಳಿಗಂಟೆಗಳನ್ನು ಅಳವಡಿಸುವುದು, ಮನೆಗೆ ನೀಲಿ ಬಣ್ಣ ಬಳಿಸುವುದು, ಗೋಡೆಗಳ ಮೇಲೆ ಸುಂದರ ಚಿತ್ರಗಳನ್ನು ಹಾಕಿಕೊಳ್ಳುವುದು ಸೇರಿದಂತೆ ಅನೇಕ ಅಂಶಗಳನ್ನು ಫೆಂಗ್‌ಶೂಯಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಫೆಂಗ್‌ಶೂಯಿ ಎಂಬುದು ಚೀನಿ ವಾಸ್ತು ಶಾಸ್ತ್ರ. ಇದು ಬಹುತೇಕ ನಮ್ಮ ವೇದ ವಿಜ್ಞಾನವನ್ನು ಹೋಲುತ್ತದೆ. ಮುಖ್ಯವಾಗಿ ಯಿನ್ ಮತ್ತು ಯಾಂಗ್ ಶಕ್ತಿಯ ಬಗ್ಗೆ ವಿಶೇಷವಾದ ವಿವರಣೆ ಇದೆ. ಜೀವನದಲ್ಲಿ ಇಲ್ಲಿ ತಿಳಿಸಿರುವ ಅಂಶಗಳನ್ನು ಅಳವಡಿಸಿಕೊಂಡರೆ ಸುಖ, ಸಂತೋಷದಿಂದ ಬಾಳಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
- ಬೆಟ್ಟ ಗುಡ್ಡಗಳು, ಉಪಯೋಗಿಸಿದ ನಿವೇಶನಗಳು ಅಥವಾ ಪಾಳುಬಿದ್ದ ಮನೆಯ ಎದುರುಗಡೆ ಇರುವ ನಿವೇಶನವನ್ನು ಅಥವಾ ಮನೆಯನ್ನು ಕೊಳ್ಳಬಾರದು.
- ದಕ್ಷಿಣ ದಿಕ್ಕಿನಲ್ಲಿ ಇರುವ ನಿವೇಶನ ಅಥವಾ ಮನೆಯನ್ನು ಕೊಳ್ಳಬಾರದು ಅನಿವಾರ್ಯ ಎನಿಸಿದಲ್ಲಿ ಉತ್ತರ ದಿಕ್ಕಿನಲ್ಲಿ ಕನಿಷ್ಠ ಪಕ್ಷ ಹೊರಗಿನಿಂದ ಗಾಳಿ ಬರಲು ಕಿಟಕಿ ಇರಬೇಕು.
- ಪಶ್ಚಿಮ ದಿಕ್ಕಿನ ನಿವೇಶನ ಅಥವಾ ಮನೆಯನ್ನು ಕೊಳ್ಳಲು ಯೋಗ್ಯವಲ್ಲ. ಆದರೆ ಅನಿವಾರ್ಯವಾದಲ್ಲಿ ಪೂರ್ವದಿಕ್ಕಿನಲ್ಲಿ ಕನಿಷ್ಠ ಪಕ್ಷ ವರಗಿನ ಹೊರಗಿನಿಂದ ಗಾಳಿ ಬರಲು ಕಿಟಕಿ ಇರಬೇಕು.
- ನಿವೇಶನದ ಅಥವಾ ಮನೆಯ ನಾಲ್ಕು ಬದಿಯಲ್ಲಿಯೂ ರಸ್ತೆ ಇದ್ದಲ್ಲಿ ಉತ್ತಮ. ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನ ರಸ್ತೆ ಇರುವುದು ಒಳ್ಳೆಯದು. ಇದರಿಂದ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸವಿರುತ್ತದೆ.
- ಮನೆಗೆ ಮುಂದೆ ನೀರು ಪಶ್ಚಿಮದಿಂದ ಪೂರ್ವಕ್ಕೆ ಹರಿಯುವಂತೆ ಇರಬೇಕು. ಮನೆಗೆ ಉತ್ತರ ದಿಕ್ಕಿನಲ್ಲಿ ನೀರು ನಿಲ್ಲುವಂತಿದ್ದಲ್ಲಿ ಶುಭದಾಯಕವಾಗಿರುತ್ತದೆ.
ಇದನ್ನೂ ಓದಿ: ಯಾವುದೇ ಸಮಯದಲ್ಲೂ ಪಠಣ ಮಾಡಬಹುದಾದ ಗಾಯತ್ರಿ ಮಂತ್ರವನ್ನು ಮೀರಿದ ಮಂತ್ರವಿಲ್ಲ, ಏನಿದರ ವಿಶೇಷ?
- ವೃತ್ತಾಕಾರದ ನಿವೇಶನದಲ್ಲಿ ಮನೆ ಕಟ್ಟಿಸಬಾರದು. ಈಗಾಗಲೇ ಇರುವ ಮನೆಯ ದಕ್ಷಿಣ ಅಥವಾ ನೈರುತ್ಯ ಮೂಲೆಗಳನ್ನು ವಿಸ್ತರಿಸಬಾರದು.
- ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳನ್ನು ವಿಸ್ತರಿಸಿದರೆ ಮನೆಯ ಹಿರಿಯರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ.
- ಹಳೆಯ ಮನೆಯಲ್ಲಿ ಆಗ್ನೇಯ ದಿಕ್ಕನ್ನು ವಿಸ್ತರಿಸಿದರೆ ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ. ನೆರೆಹೊರೆಯವರು ಬಂಧು ಬಳಗದವರು ನಿಮ್ಮಿಂದ ದೂರ ಉಳಿಯುತ್ತಾರೆ.
- ನಿವೇಶನವು ತ್ರಿಕೋನಾಕಾರವಾಗಿದ್ದು ಮನೆಯನ್ನು ಕಟ್ಟಿದಲ್ಲಿ ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಇರುತ್ತದೆ. ಯಾವುದೇ ಕೆಲಸ ಕಾರ್ಯಗಳು ಆರಂಭಿಸಿದರೂ ಅಡ್ಡಿ ಆತಂಕಗಳು ಸಾಮಾನ್ಯವಾಗಿರುತ್ತದೆ.
- ನಿವೇಶನವು ವಾಯುವ್ಯ ಮೂಲೆಗಿಂತ ಈಶಾನ್ಯ ಮೂಲೆಯು ಕೆಳಮಟ್ಟದಲ್ಲಿ ಇರಬೇಕು.
- ಆಗ್ನೇಯ ದಿಕ್ಕಿಗಿಂತ ನೈರುತ್ಯವು ಎತ್ತರದಲ್ಲಿ ಇರಬೇಕು. ಮೂಲೆಯಲ್ಲಿ ನೀರಿನ ತೊಟ್ಟಿ ಅಥವಾ ಯಾವುದೇ ರೀತಿಯ ಬಾವಿಗಳನ್ನು ಸ್ಥಾಪಿಸಬಹುದು.
- ಮನೆಯಲ್ಲಿನ ಬಾವಿಗೆ ಸೂರ್ಯನ ಬೆಳಕು ಬೀಳುವಂತಿರಬೇಕು. ಉತ್ತರ ಅಥವಾ ಪಶ್ಚಿಮಕ್ಕೆ ರಸ್ತೆಗಳು ಇದ್ದರೆ ಉತ್ತರಕ್ಕೆ ಮನೆಯ ಗೇಟನ್ನು ಇಡಬೇಕು.
ಇದನ್ನೂ ಓದಿ: ಜೈ ಶ್ರೀಕೃಷ್ಣ: ಬಂದೇ ಬಿಡ್ತು ಕೃಷ್ಣಾಷ್ಟಮಿ; ದಿನಾಂಕ, ಮುಹೂರ್ತ, ಆಚರಣೆ ವಿಧಾನ, ಕಥೆಯ ವಿವರ ಇಲ್ಲಿದೆ
- ದೇವ ಮೂಲೆಯಲ್ಲಿ ಅಡುಗೆ ಮನೆ ಇರಬಾರದು. ಯಾವುದೇ ಮೂಲೆಯಿಂದ ನಿವೇಶನವನ್ನು ಪ್ರವೇಶಿಸಿದರೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಂದುವರೆಯುವಂತೆ ಇರಬೇಕು.
- ಮಹಡಿ ಮನೆಯಾಗಿದ್ದಲ್ಲಿ ಕೆಳಗಿನ ಮನೆಯಲ್ಲಿರುವ ಸಂಖ್ಯೆಯಷ್ಟೇ ಕಿಟಕಿ ಮತ್ತು ಬಾಗಿಲುಗಳನ್ನು ಇಡಬಾರದು.
- ನೀರಿನ ತೊಟ್ಟಿಯು ಉತ್ತರ ಅಥವಾ ಪೂರ್ವ ಭಾಗಕ್ಕೆ ತಾಗಿದಂತೆ ಇರಬಾರದು.
- ಮನೆಯಿಂದ ಹೊರ ಹೋಗುವ ಗಲೀಜು ನೀರು ಮನೆಯ ಸುತ್ತಮುತ್ತ ನಿಲ್ಲುವುದು ಶ್ರೇಯಸ್ಕರವಲ್ಲ.
- ಮನೆಗೆ ಸುತ್ತಮುತ್ತಲು ಸ್ವಚ್ಛತೆ ಇದ್ದಲ್ಲಿ ಮಾತ್ರ ಧನಾತ್ಮಕ ಶಕ್ತಿಯು ಇರುತ್ತದೆ. ಬೋರ್ ವೆಲ್ ಮುಂತಾದ ನೀರು ಲಭ್ಯವಿದ್ದಲ್ಲಿ ಅದನ್ನು ಅವಶ್ಯಕವಾಗಿ ಬಳಸಬೇಕು.
- 2 ನಿವೇಶನಗಳನ್ನು ಬಳಸಿ ಒಂದೇ ಮನೆಯನ್ನು ಕಟ್ಟಿದ್ದಲ್ಲಿ ನಿವೇಶನಗಳ ಮಧ್ಯೆ ಗೋಡೆ ಕಟ್ಟಿಸಬಾರದು. ಮನೆಯ ಬಾಗಿಲು ಸಮ ಸಂಖ್ಯೆಯಲ್ಲಿ ಇದ್ದಷ್ಟು ಒಳ್ಳೆಯದು.
- ಮನೆಯ ಹಿಂಭಾಗದಲ್ಲಿ ಬೆಳೆಸುವ ಮರ ಅಥವಾ ಗಿಡಗಳ ಸಂಖ್ಯೆಯು ಸಮ ಸಂಖ್ಯೆಯಲ್ಲಿ ಇರಬೇಕು.
- ಮನೆಯ ಮುಖ್ಯದ್ವಾರವಾಗಲಿ ಅಥವಾ ಯಾವುದೇ ಕೊಠಡಿಯ ಬಾಗಿಲು ಗೋಡೆಯ ಮಧ್ಯಭಾಗದಲ್ಲಿ ಇರಬಾರದು.
- ನೆಲ ಮಹಡಿ ಮತ್ತು ಉಳಿದ ಮಹಡಿಗಳ ಬಾಗಿಲುಗಳು ಒಂದೇ ನೇರದಲ್ಲಿ ಇರುವುದು ಒಳ್ಳೆಯದು.
- ತಕ್ಷಣ ದಿಕ್ಕಿನಲ್ಲಿ ಮುಖ್ಯ ದ್ವಾರವಿದ್ದರೆ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮತ್ತೊಂದು ಬಾಗಿಲನ್ನು ಇಡುವುದು ಒಳ್ಳೆಯದು.
- ಪೂಜಾ ಕೊಠಡಿಯಲ್ಲಿ ಮಾತ್ರ ದೇವರ ವಿಗ್ರಹವನ್ನು ಇಡಬಹುದು ಆದರೆ ಉಳಿದ ಬೇರೆ ಯಾವುದೇ ಕೋಣೆಯಲ್ಲಿ ದೇವರುಗಳ ವಿಗ್ರಹವನ್ನು ಇಡಬಾರದು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).