ಕೃಷ್ಣ ಜನ್ಮಾಷ್ಠಮಿ 2024: ವೃಷಭ ಸೇರಿದಂತೆ ಈ 4 ರಾಶಿಗಳೆಂದರೆ ಕೃಷ್ಣನಿಗೆ ಅಚ್ಚುಮೆಚ್ಚು, ನಿಮ್ಮದು ಯಾವ ರಾಶಿ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೃಷ್ಣ ಜನ್ಮಾಷ್ಠಮಿ 2024: ವೃಷಭ ಸೇರಿದಂತೆ ಈ 4 ರಾಶಿಗಳೆಂದರೆ ಕೃಷ್ಣನಿಗೆ ಅಚ್ಚುಮೆಚ್ಚು, ನಿಮ್ಮದು ಯಾವ ರಾಶಿ?

ಕೃಷ್ಣ ಜನ್ಮಾಷ್ಠಮಿ 2024: ವೃಷಭ ಸೇರಿದಂತೆ ಈ 4 ರಾಶಿಗಳೆಂದರೆ ಕೃಷ್ಣನಿಗೆ ಅಚ್ಚುಮೆಚ್ಚು, ನಿಮ್ಮದು ಯಾವ ರಾಶಿ?

12 ರಾಶಿಗಳಲ್ಲಿ ಒಂದೊಂದು ರಾಶಿಗಳಿಗೂ ಒಂದೊಂದು ಗ್ರಹಗಳು ಅಧಿಪತಿಯಾಗಿರುತ್ತದೆ. ಹಾಗೇ ದೇವರು ಒಂದೊಂದು ರಾಶಿಗಳ ಮೇಲೆ ವಿಶೇಷ ಅನುಗ್ರಹ ನೀಡಿ ಹರಸುತ್ತಾರೆ. ಶ್ರೀ ಕೃಷ್ಣನಿಗೂ ಕೂಡಾ ಕೆಲವೊಂದು ಪ್ರಿಯವಾದ ರಾಶಿಗಳಿವೆ. ತುಲಾ ಸೇರಿದಂತೆ ಗೋಪಾಲನಿಗೆ ಯಾವ ರಾಶಿಯವರು ಅಚ್ಚುಮೆಚ್ಚು ನೋಡೋಣ.

ಕೃಷ್ಣ ಜನ್ಮಾಷ್ಠಮಿ 2024: ವೃಷಭ ಸೇರಿದಂತೆ ಈ 4 ರಾಶಿಗಳೆಂದರೆ ಕೃಷ್ಣನಿಗೆ ಅಚ್ಚುಮೆಚ್ಚು, ನಿಮ್ಮದು ಯಾವ ರಾಶಿ?
ಕೃಷ್ಣ ಜನ್ಮಾಷ್ಠಮಿ 2024: ವೃಷಭ ಸೇರಿದಂತೆ ಈ 4 ರಾಶಿಗಳೆಂದರೆ ಕೃಷ್ಣನಿಗೆ ಅಚ್ಚುಮೆಚ್ಚು, ನಿಮ್ಮದು ಯಾವ ರಾಶಿ?

ಕೃಷ್ಣ ಜನ್ಮಾಷ್ಠಮಿಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈ ಬಾರಿ ಜನವರಿ 26, ಸೋಮವಾರ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ. ಹಿಂದೆಂದಿಗಿಂತ ಈ ಬಾರಿಯ ಗೋಕುಲಾಷ್ಠಮಿ ಬಹಳ ವಿಶೇಷ ಎನ್ನಲಾಗುತ್ತಿದೆ. ಈ ಬಾರಿ ದ್ವಾಪರಯುಗದ ಕಾಲದಂತೆ 4 ವಿಶೇಷ ಯೋಗಗಳು ರೂಪುಗೊಳ್ಳುತ್ತಿರುವುದೇ ಇದಕ್ಕೆ ಕಾರಣ.

ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು, ಅವನನ್ನು ಸಹಾನುಭೂತಿ, ಮತ್ತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆಧ್ಯಾತ್ಮಿಕ ಮಾರ್ಗವನ್ನು ಪ್ರಭಾವಿಸುವ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಯಾರು ಯಾವ ಕೆಲಸಗಳನ್ನು ಮಾಡುತ್ತಾರೆ, ಪಾಪ, ಕರ್ಮದ ಆಧಾರದ ಮೇಲೆ ದೇವರ ಆಶೀರ್ವಾದ ಪಡೆಯುತ್ತಾರೆ. ಕೆಲವೊಂದು ರಾಶಿಯವರು ಕೆಲವು ದೇವತೆಗಳಿಗೆ ಬಹಳ ಪ್ರಿಯ. ಅದೇ ರೀತಿ ಕೃಷ್ಣನಿಗೆ ಕೂಡಾ ಕೆಲವು ರಾಶಿಯವರು ಬಹಳ ಇಷ್ಟವಾಗುತ್ತಾರೆ. ಈ ರಾಶಿಯವರ ಮೇಲೆ ಅವನ ವಿಶೇಷ ಆಶೀರ್ವಾದವಿರುತ್ತದೆ.

ಹಾಗಾದರೆ ಕೃಷ್ಣನಿಗೆ ಇಷ್ಟವಾದ ರಾಶಿಗಳು ಯಾವುವು?

ವೃಷಭ ರಾಶಿ

ವೃಷಭ ರಾಶಿಯು ಶ್ರೀ ಕೃಷ್ಣನ ನೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಮೊದಲನೆಯದು. ಕೃಷ್ಣನ ಕೃಪೆಯಿಂದ ವೃಷಭ ರಾಶಿಯವರು ತಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಅದೃಷ್ಟವಂತರು ಉತ್ತಮ ಖ್ಯಾತಿ ಗಳಿಸುತ್ತಾರೆ. ಯಾವಾಗಲೂ ಇತರರಿಗೆ ಸಮರ್ಪಿತ ಮತ್ತು ಸಂಪೂರ್ಣ ನಂಬಿಕೆಯಿಂದ ಇರುತ್ತಾರೆ. ಇವರಿಗೆ ದೇವರ ಮೇಲೆ ಅಪಾರ ಭಕ್ತಿ ಇರುತ್ತದೆ. ವೃಷಭ ರಾಶಿಯ ಜನರು ತಮ್ಮ ಬುದ್ಧಿವಂತಿಕೆ ಮತ್ತು ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಶ್ರೀಕೃಷ್ಣನು ತನ್ನ ವಾಕ್ಚಾತುರ್ಯಕ್ಕೂ ಹೆಸರುವಾಸಿಯಾಗಿದ್ದಾನೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ತಮ್ಮ ರಕ್ಷಣಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರೀತಿ ಮತ್ತು ಕಾಳಜಿಯುಳ್ಳ ನಡವಳಿಕೆಗೆ ಇವರು ಇಷ್ಟವಾಗುತ್ತಾರೆ. ಈ ಚಿಹ್ನೆಯ ಜನರು ತಮ್ಮ ಪ್ರೀತಿಪಾತ್ರರ ಬಗ್ಗೆ ಆಳವಾಗಿ ಯೋಚಿಸುತ್ತಾರೆ. ಅವರ ಬಗ್ಗೆ ಬಹಳ ಕಾಳಜಿ ಮಾಡುತ್ತಾರೆ. ಅವರಲ್ಲಿ ಭಕ್ತಿ ಭಾವವೂ ಅಧಿಕವಾಗಿರುತ್ತದೆ. ಅದಕ್ಕಾಗಿಯೇ ಶ್ರೀಕೃಷ್ಣನನ್ನು ಮಹಾಪ್ರತಿ ಎಂದು ಕರೆಯಲಾಗುತ್ತದೆ. ತನ್ನ ಒಡಹುಟ್ಟಿದವರೊಂದಿಗೆ ತುಂಬಾ ಭಾವನಾತ್ಮಕವಾಗಿರುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರು ಯಾವಾಗಲೂ ಕೃಷ್ಣನ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಈ ರಾಶಿಯವರು ಕೆಲಸಗಳನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಅದಕ್ಕಾಗಿಯೇ ಕಠಿಣ ಪರಿಶ್ರಮಕ್ಕೆ ಯಾವಾಗಲೂ ಪ್ರತಿಫಲ ದೊರೆಯುತ್ತದೆ. ನಾಯಕತ್ವದ ಗುಣಗಳು ಮತ್ತು ಧೈರ್ಯದ ಸಹಕಾರ ಹೆಚ್ಚಾಗಿರುತ್ತದೆ. ಹಾಗಾಗಿ ಅವರಿಗೆ ಕನ್ನಯ್ಯನ ವಾತ್ಸಲ್ಯ ಸಿಗುತ್ತದೆ. ಸಿಂಹ ರಾಶಿಯವರು ಪ್ರಭಾವಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇತರರನ್ನು ಪ್ರೇರೇಪಿಸುವ ವಿಚಾರದಲ್ಲಿ ನಾಯಕತ್ವ ಹೊಂದಿರುತ್ತಾರೆ.

ತುಲಾ ರಾಶಿ

ಶ್ರೀಕೃಷ್ಣನ ಮತ್ತೊಂದು ನೆಚ್ಚಿನ ಚಿಹ್ನೆ ತುಲಾ. ಈ ರಾಶಿಯವರಿಗೆ ಕೂಡಾ ಕೃಷ್ಣನ ಆಶೀರ್ವಾದ ಇರುತ್ತದೆ. ಅವರಿಗೆ ಸಮಾಜದಲ್ಲಿ ಉತ್ತಮ ಗೌರವ ದೊರೆಯುತ್ತದೆ. ಕೃಷ್ಣನ ಅನುಗ್ರಹದಿಂದ, ಈ ರಾಶಿಯ ಜನರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿಯನ್ನು ಅನುಭವಿಸುತ್ತಾರೆ. ಕೃಷ್ಣನಿಗೆ ಸಂಬಂಧಿಸಿದ ಮಂತ್ರಗಳ ಪಠಣದಿಂದ ಇವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.