ಶಿವನಿಂದ ಕಲಿಯಬಹುದಾದ 10 ಜೀವನಪಾಠಗಳು; ಕೋಪ ನಿಗ್ರಹದಿಂದ ಧ್ಯಾನದವರೆಗೆ ಪರಮೇಶ್ವರನಿಂದ ಕಲಿಯೋಣ
ಶಿವನನ್ನು ಗುರುಗಳ ಗುರು ಆದಿಗುರು ಎನ್ನುತ್ತಾರೆ. ಜೀವನದಲ್ಲಿ ಯಶಸ್ಸು ಪಡೆಯಲು ಬಯಸುವವರು, ತಮ್ಮ ಬದುಕಿನ ರೀತಿಗಳನ್ನು ಬದಲಾಯಿಸಿಕೊಳ್ಳಲು ಬಯಸುವವರು ಶಿವನಿಂದ ಕಲಿಯಬಹುದಾದ 10 ಜೀವನ ಪಾಠಗಳು ಇಲ್ಲಿವೆ.
ಶಿವನೆಂದರೆ ಮಂಗಳಕರನು, ಮಹಾದೇವ, ಅಂದರೆ ದೇವರುಗಳಿಗೆ ದೇವರು, ಗುರುಗಳಿಗೆ ಗುರು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಸರ್ವೋಚ್ಚನಾಗಿದ್ದಾನೆ. ಈ ಜಗತ್ತಿನ ರಕ್ಷಣೆ, ಸೃಷ್ಟಿ, ಪರಿವರ್ತನೆಯ ದೈವ ಎನ್ನಲಾಗುತ್ತದೆ. ಶಿವ ಶಾಂತ ಮತ್ತು ರೌದ್ರ ಸ್ವರೂಪಿ. ಶಾಂತ ಸ್ವರೂಪದಲ್ಲಿ ಯೋಗಿಯಾಗಿ ವೈರಾಗ್ಯ ಮತ್ತು ಸಂಸಾರಿ ಜೀವನ ನಡೆಸುತ್ತಾನೆ. ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುತ್ತಾನೆ. ಭೈರವ, ವೀರಭದ್ರ ಸೇರಿದಂತೆ ಹಲವು ರೂಪಗಳಲ್ಲಿ ಇರುತ್ತಾನೆ. ಯೋಗ, ಧ್ಯನ, ಕಲೆಯ ದೇವರಾಗಿ ನಟರಾಜ, ಆದಿಯೋಗಿ ಎಂದೂ ಕರೆಯಲ್ಪಡುತ್ತಾನೆ. ಶಿವನ ಕೊರಳಲ್ಲಿ ಸರ್ಪಗಳ ರಾಜ ವಾಸುಕಿ ಇದ್ದಾನೆ. ಕೇಶದಲ್ಲಿ ಅರ್ಧ ಚಂದ್ರ, ಗಂಗೆ, ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ, ಡಮರು ಹೊಂದಿದ್ದಾನೆ.
ಶಿವನಿಂದ ಕಲಿಯಬಹುದಾದ 10 ಜೀವನಪಾಠಗಳು
ಗುರುಗಳ ಗುರು ಆದಿಗುರು ಎಂದು ಕರೆಯಲ್ಪಡುವ ಶಿವನಿಂದ ನಾವು ಕಲಿಯಬಹುದಾದ 10 ಜೀವನ ಪಾಠಗಳ ವಿವರ ಇಲ್ಲಿ ನೀಡಲಾಗಿದೆ.
1. ದುಷ್ಟರನ್ನು ಸಹಿಸಬೇಡಿ: ಅನ್ಯಾಯವನ್ನು ಶಿವ ಎಂದಿಗೂ ಸಹಿಸಲಾರ. ದುಷ್ಟರ ನಾಶಕನಾಗಿ ಶಿವ ಜನಪ್ರಿಯ. ರಾಕ್ಷಸರನ್ನು ನಾಶಮಾಡುವಾಗಲೂ ಶಿವನ ನ್ಯಾಯಯುತನಾಗಿದ್ದನು. ನಾವು ಕೂಡ ನಮ್ಮ ಸುತ್ತಮುತ್ತಲಿನ ಅನ್ಯಾಯವನ್ನು ಕಂಡು ಮೌನವಾಗಿರಬಾರದು.
2. ಸ್ವಯಂ ನಿಯಂತ್ರಣ: ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಶಿವನು ಧ್ಯಾನ, ತಪಸ್ಸು, ಯೋಗದ ಮೂಲಕ ಸ್ವಯಂ ನಿಯಂತ್ರಣ ಶಕ್ತಿ ಹೊಂದಿದ್ದನು.
3. ಕೋಪ ನಿಯಂತ್ರಣ: ಶಿವನು ಕೋಪಗೊಂಡರೆ ರುದ್ರತಾಂಡವವಾಡುತ್ತಾನೆ. ತನ್ನ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಾಂತವಾಗಿರಲು ಶಿವನು ಬಯಸುತ್ತಾನೆ. ಶಿವನು ಹಲವು ಗಂಟೆಗಳ ಕಾಲ ಧ್ಯಾನ, ತಪಸ್ಸು ಮಾಡುತ್ತಿದ್ದನು. ಜೀವನದ ವಿವಿಧ ಸಂದರ್ಭಗಳಲ್ಲಿ ಕೋಪ ಎಲ್ಲದಕ್ಕೂ ಉತ್ತರವಲ್ಲ. ಶಾಂತವಾಗಿ ಬದುಕನ್ನು ಮುನ್ನಡೆಸುವುದು ಅತ್ಯಂತ ಅಗತ್ಯ.
4. ಹೆಜ್ಜೆ ಇಡಲು ಹಿಂಜರಿಯಬೇಡಿ: ದಾರಿಯಲ್ಲಿ ಸಾಗುತ್ತಿರುವಾಗ ಹಲವು ಸವಾಲುಗಳು ಎದುರಾಗಬಹುದು. ಯಾವುದೇ ಕಾರಣಕ್ಕೆ ಹಿಂದಡಿ ಇಡಬೇಡಿ.
5. ಸಂತೋಷ ಎನ್ನುವುದು ಭೌತಿಕ ಅಲ್ಲ: ಸಂಪತ್ತು ಎನ್ನುವುದು ದೈಹಿಕ, ಮಾನಸಿಕ, ಭಾವನಾತ್ಮಕ ಬಂಧನಕ್ಕೆ ಕಾರಣವಾಗುತ್ತದೆ. ಸಂಪೂರ್ಣವಾಗಿ ಸಂಪತ್ತಿನೆಡೆಗೆ ಬದುಕನ್ನು ಮೀಸಲಿರಿಸಬೇಡಿ. ಆದರೆ, ನಿಜವಾದ ಸಂತೋಷ ಎಲ್ಲಿ ಇರುವುದು ಕಂಡುಕೊಳ್ಳಿ.
6. ದುರಾಸೆ ಬೇಡ: ರಾವಣನ ಅಂತ್ಯಕ್ಕೆ ಆತನ ದುರಾಸೆ ಕಾರಣ. ಇದೇ ರೀತಿ ಹಲವು ರಾಕ್ಷಸರು ದುರಾಸೆಯಿಂದ ಎಲ್ಲವನ್ನೂ ಕಳೆದುಕೊಂಡರು. ಶಿವನಿಗೆ ಯಾವುದೇ ಆಸೆ, ದುರಾಸೆ ಇಲ್ಲ. ಆತ ಎಲ್ಲಾ ಆಸೆಗಳಿಂದ ಮುಕ್ತನಾಗಿದ್ದಾನೆ.
7. ಯಾವುದೂ ಶಾಶ್ವತವಲ್ಲ: ನಮ್ಮ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಆಸ್ತಿ, ಜನರು, ಸಂಬಂಧ, ಭಾವನೆಗಳು ಯಾವುವೂ ಶಾಶ್ವತವಲ್ಲ. ನಮ್ಮ ದಾರಿಗೆ ಬಂದದ್ದನ್ನು ಎದುರಿಸಲು ಸಿದ್ಧರಾಗಿರಬೇಕು.
8. ರಿಸರ್ಚ್ ಮಾಡಿ: ಹೊಸದನ್ನು ಆರಂಭಿಸುವ ಮೊದಲು ಯಾವಾಗಲೂ ರಿಸರ್ಚ್ ಮಾಡಿ. ಶಿವನ ಮುಡಿಯಲ್ಲಿರುವ ಗಂಗಾ ಮಾತೆಯು ಅಜ್ಞಾನದ ಅಂತ್ಯವನ್ನು ಪ್ರತಿನಿಧಿಸುತ್ತಾಳೆ. ಹೊಸದನ್ನು ಆರಂಭಿಸುವ ಮೊದಲು ಸಾಕಷ್ಟು ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿದೆ.
9. ಸಂಗಾತಿಯನ್ನು ಗೌರವಿಸಿ: ಶಿವನನ್ನು ಅರ್ಧನಾರೀಶ್ವರ ಎಂದು ಕರೆಯುತ್ತಾರೆ. ಶಿವನು ಪಾರ್ವತಿ ದೇವಿಯನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು.