Vastu Shastra: ಮಲಗುವಾಗ ದಿಂಬಿನ ಪಕ್ಕ ಈ ವಸ್ತುಗಳನ್ನು ಎಂದಿಗೂ ಇಡಬೇಡಿ: ಹಣ, ನೆಮ್ಮದಿ, ನಿದ್ದೆಗೂ ಈ ವಿಚಾರಕ್ಕೂ ಇದೆ ಸಂಬಂಧ
Vastu Shastra: ವಾಸ್ತು ಸಲಹೆ ಪ್ರಕಾರ, ಮಲಗುವಾಗ ಕೆಲವು ವಸ್ತುಗಳನ್ನು ದಿಂಬಿನ ಬಳಿ ಇಡುವುದು ಒಳ್ಳೆಯದಲ್ಲ. ಹಣ, ನೆಮ್ಮದಿ ನಿದ್ದೆ ಹಾಗೂ ಕೆಲವು ವಸ್ತುಗಳನ್ನು ಇಡುವುದಕ್ಕೂ ಸಂಬಂಧವಿದೆ. ಅಲ್ಲದೆ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.
ಸನಾತನ ಧರ್ಮದಲ್ಲಿ, ಬದುಕಿನಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ವಾಸ್ತು (Vastu Shastra) ನಿಯಮಗಳನ್ನು ಅನುಸರಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮನೆ ಕಟ್ಟುವುದರಿಂದ ಹಿಡಿದು ಯಾವುದೇ ಶುಭಸಮಾರಂಭಗಳನ್ನು ಆರಂಭಿಸುವುದಕ್ಕೂ ಮುನ್ನ ವಾಸ್ತು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಬಳಿ ಇಡುವುದು ಒಳ್ಳೆಯದಲ್ಲ. ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ವಾಸ್ತು ಸಲಹೆಗಾರ ಆಚಾರ್ಯ ಮುಕುಲ್ ರಸ್ತೋಗಿ ಅವರ ಪ್ರಕಾರ, ಕೆಲವು ವಸ್ತುಗಳನ್ನು ತಲೆಯ ಬಳಿ ಇಡುವುದರಿಂದ ನಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲ. ಇದು ಹಣಕ್ಕೆ ಸಂಬಂಧಿಸಿದಂತೆ ಅದೃಷ್ಟದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ ಮತ್ತು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಹೀಗಾಗಿ ತಲೆಯ ಬಳಿ ಯಾವ ವಸ್ತುಗಳನ್ನು ತಪ್ಪಿಸಬೇಕು ಎಂದು ತಿಳಿಯೋಣ?
ತಲೆಯ ಬಳಿ ಏನನ್ನು ಇಡಬಾರದು?
- ತಲೆಯ ಬಳಿ ಪರ್ಸ್ ಇಟ್ಟುಕೊಂಡು ಮಲಗಬೇಡಿ. ಇದು ಮನೆಯಲ್ಲಿ ಹಣವನ್ನು ಉಳಿಸಿಕೊಳ್ಳುವುದಿಲ್ಲ ಎಂದು ನಂಬಲಾಗಿದೆ.
- ಪತ್ರಿಕೆಗಳು, ಪುಸ್ತಕ, ಚಿತ್ರಗಳನ್ನು ದಿಂಬಿನ ಕೆಳಗೆ ಇಡುವುದು ಕೂಡಾ ಒಳ್ಳೆಯದಲ್ಲ. ಇದು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
- ಇದೇ ವೇಳೆ, ರಾತ್ರಿ ಮಲಗುವಾಗ ನೀರಿನ ಬಾಟಲಿ ತಲೆ ಪಕ್ಕದಲ್ಲಿ ಇಟ್ಟು ಮಲಗುವುದು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
- ರಾತ್ರಿ ಮಲಗುವಾಗ ಮೊಬೈಲ್, ಐಪ್ಯಾಡ್, ವಾಚ್ ಇತ್ಯಾದಿಗಳನ್ನು ಕೂಡಾ ತಲೆಯ ಬಳಿ ಇಡಬೇಡಿ. ಇವು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಆರೋಗ್ಯದ ಮೇಲೂ ಪ್ರಭಾವ ಬೀಡುತ್ತದೆ.
- ರಾತ್ರಿ ಮಲಗುವಾಗ, ನಿಮ್ಮ ತಲೆಯ ಬಳಿ ಸರಪಳಿ ಅಥವಾ ಹಗ್ಗವನ್ನು ಇಡಬಾರದು. ಇದು ವೃತ್ತಿಜೀವನದಲ್ಲಿ ಕೆಲವು ತೊಂದರೆಗಳಿಗೆ ಕಾರಣವಾಗಬಹುದು.
- ಮಲಗುವಾಗ ಔಷಧಿಗಳನ್ನು ತಲೆಯ ಬಳಿ ಇಡಬಾರದು ಎಂದು ಹೇಳಲಾಗಿದೆ. ಇದು ಜೀವನದಲ್ಲಿ ವಾಸ್ತು ದೋಷಕ್ಕೆ ಕಾರಣವಾಗಬಹುದು.
- ವಾಸ್ತು ಪ್ರಕಾರ, ಮಲಗುವಾಗ ಶೂಗಳು ಮತ್ತು ಚಪ್ಪಲಿಗಳನ್ನು ತಲೆಯ ಸುತ್ತಲೂ ಅಥವಾ ಹಾಸಿಗೆಯ ಸುತ್ತಲೂ ಇಡಬಾರದು. ಇದು ಜೀವನದಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
- ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಲೆಯ ಬಳಿ ಇಡಬಾರದು ಎಂದು ಹೇಳಲಾಗುತ್ತದೆ. ಸನಾತನ ಧರ್ಮದಲ್ಲಿ ಇದನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ.
- ಈ ಎಲ್ಲಾ ವಸ್ತುಗಳನ್ನು ತಲೆಯ ಮೇಲೆ ಇಟ್ಟುಕೊಳ್ಳುವುದು ಪ್ರಗತಿಗೆ ಅಡ್ಡಿಯಾಗುತ್ತದೆ.
ಇದನ್ನೂ ಓದಿ | ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ
ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣ ಸತ್ಯ ಮತ್ತು ನಿಖರವಾಗಿದೆ ಎಂದು ನಾವು ಹೇಳುವುದಿಲ್ಲ. ಅವುಗಳನ್ನು ಅನುಸರಿಸುವ ಮೊದಲು, ದಯವಿಟ್ಟು ಸಂಬಂಧಪಟ್ಟ ವಾಸ್ತು ತಜ್ಞರನ್ನು ಸಂಪರ್ಕಿಸಿ.
ವಿಭಾಗ